ಮಕ್ಕಳ ಅಶ್ಲೀಲ ವೀಡಿಯೋ ನೋಡಿದರೆ, ಡೌನ್‌ಲೋಡ್‌ ಮಾಡಿದರೆ ಜೈಲು ಗ್ಯಾರಂಟಿ

By Sathish Kumar KHFirst Published Dec 15, 2022, 8:19 PM IST
Highlights

• ಚೈಲ್ಡ್‌ ಪೋರ್ನ್ ವಿಡಿಯೋ ಡೌನ್‌ಲೋಡ್‌ ಮಾಡಿದ್ರೆ ಜೈಲೂಟ ಗ್ಯಾರಂಟಿ
• ಮಕ್ಕಳ ಅಶ್ಲೀಲ ದೃಶ್ಯ ಹಂಚಿದ ಗುಮ್ಮಟನಗರಿಯ 7 ಜನರ ಮೇಲೆ ಕೇಸ್.
• ಮಕ್ಕಳ ನಗ್ನ ಚಿತ್ರ ವೀಕ್ಷಿಸಿರುವವರ ಮೇಲೆ ಎನ್.ಸಿ.ಆರ್.ಬಿ  ಹದ್ದಿನ ಕಣ್ಣು

ವರದಿ - ಷಡಕ್ಷರಿ ಕಂಪೂನವರ್‌ ಏಷ್ಯಾನೆಟ್‌ ಸುವರ್ಣ ನ್ಯೂಸ್‌ 

ವಿಜಯಪುರ (ಡಿ. 15) : ಅಶ್ಲೀಲ ವೆಬ್‌ ಸೈಟ್‌ ಗಳಲ್ಲಿ ನಗ್ನ ಚಿತ್ರಗಳನ್ನ ನೋಡುವುದು ಕಾನೂನು ಪ್ರಕಾರ ತಪ್ಪಲ್ಲವಾದರೂ, ಅದು ಸರಿಯಾದ ಅಭ್ಯಾಸವಲ್ಲ. ಆದರೆ ವೆಬ್‌ ಸೈಟ್‌ ಗಳಲ್ಲಿ ಮಕ್ಕಳ ಪೋರ್ನ್‌ ವಿಡಿಯೋ ವೀಕ್ಷಣೆ ಹಾಗೂ ಡೌನಲೋಡ್‌ ಮಾಡುವುದು ಶಿಕ್ಷಾರ್ಹ ಅಪರಾಧ. ಮಕ್ಕಳ ಪೋರ್ನ್‌ ವಿಡಿಯೋ ಡೌನ್‌ ಲೋಡ್‌ ಮಾಡಿದರೆ ಅಂಥವರು ಕಂಬಿ ಎಣಿಸೋದು ಗ್ಯಾರಂಟಿ. ಮಕ್ಕಳ ಅಶ್ಲೀಲ ವಿಡಿಯೋಗಳನ್ನ ಡೌನ್‌ಲೋಡ್‌ ಮಾಡಿ ಶೇರ್‌ ಮಾಡಿದರೆ ಅಂಥವರಿಗೆ ಜೈಲು ದರ್ಶನ ಮಾಡಿಸುತ್ತಿದೆ ನ್ಯಾಶನಲ್‌ ಕ್ರೈಂ ರೆಕಾರ್ಡ್‌ ಬ್ಯೂರೋ. ವಿಜಯಪುರದಲ್ಲಿ ಚೈಲ್ಡ್‌ ಪೋರ್ನ್ ವಿಡಿಯೋ ಡೌನ್‌ಲೋಡ್ ಮಾಡಿದ್ದ 7 ಜನ ಹೈ ಪ್ರೋಪೈಲ್‌ ವ್ಯಕ್ತಿಗಳ ಮಕ್ಕಳ ಮೇಲೆ ಪ್ರಕರಣ ದಾಖಲಾಗಿದೆ.

ಮಕ್ಕಳ ಅಶ್ಲೀಲ ಚಿತ್ರಗಳನ್ನ ಡೌನ್‌ಲೋಡ್‌ ಮಾಡಿ ಶೇರ್ ಮಾಡಿದರೆ ಅದು ಅತ್ಯಾಚಾರಕ್ಕಿಂತಲು ದೊಡ್ಡ ಹೇಯಕೃತ್ಯ. ವೆಬ್‌ ಸೈಟ್‌ ಗಳಲ್ಲಿ ಹೀಗೆ ವಿಡಿಯೋ ಡೌನ್‌ ಲೋಡ್‌ ಮಾಡಿ ಶೇರ್ ಮಾಡುವವರ ಮೇಲೆ ರಾಷ್ಟೀಯ ಕ್ರೈಂ ರೆಕಾರ್ಡ್‌ ಬ್ಯೂರೋ (National Crime Record beuro) ಹದ್ದಿನ ಕಣ್ಣು ಇಟ್ಟಿರುತ್ತದೆ. ಇವರು ತಗಲಾಕಿಕೊಂಡ್ರೆ ಜೈಲೂಟ ಪಿಕ್ಸ್ ಆಗಲಿದೆ. ಚೈಲ್ಡ್‌ ಪೋರ್ನ್‌ ವಿಡಿಯೋಗಳನ್ನ (children Porn videos) ವೆಬ್‌ ಸೈಟ್‌ ಗಳಲ್ಲಿ ಸರ್ಚ್‌ ಮಾಡುವುದು, ಅವುಗಳನ್ನ ನೋಡುವುದು ಜೊತೆಗೆ ಅವುಗಳನ್ನ ಡೌನ್‌ ಲೋಡ್‌ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದರೆ ನಿಮ್ಮ ವಿರುದ್ಧ ಕಠಿಣ ಕ್ರಮ ಜರುಗೋದು ಗ್ಯಾರಂಟಿಯಾಗಿದೆ.

ಮಕ್ಕಳ ಅಶ್ಲೀಲ ಚಿತ್ರ ಹುಡುಕುವವರ ಮೇಲೆ ಹದ್ದಿನ ಕಣ್ಣು: ನ್ಯಾಶನಲ್‌ ಕ್ರೈಂ ರೆಕಾರ್ಡ್‌ ಬ್ಯೂರೋ (NCRB) ಮಕ್ಕಳ ಅಶ್ಲೀಲ ಚಿತ್ರಗಳನ್ನ ವೆಬ್‌ ಸೈಟ್‌ ಗಳಲ್ಲಿ ಹುಡುಕಿ ಡೌನ್‌ ಲೋಡ್‌ ಮಾರುವವರ ಮೇಲೆ ನಿಗಾ ಇಟ್ಟಿರುತ್ತದೆ. ಅದರಂತೆ ಯಾರು ವೆಬ್‌ ಸೈಟ್‌ ಗಳನ್ನ ಮಕ್ಕಳ ನಗ್ನ ದೃಶ್ಯಗಳಿಗಾಗಿ ತಡಕಾಡುತ್ತಾರೆ ಅಂಥವರ ಮೇಲೆ ಹದ್ದಿನ ಕಣ್ಣು ಇಟ್ಟಿರುತ್ತದೆ. ವಿಡಿಯೋಗಳನ್ನ ನೋಡುವುದರ ಜೊತೆಗೆ ಅವುಗಳನ್ನ ಡೌನ್‌ ಲೋಡ್‌ ಮಾಡಿದರೆ ನ್ಯಾಶನಲ್‌ ಕ್ರೈಂ ರೆಕಾರ್ಡ್‌ ಬ್ಯೂರೋ ಅಂಥವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುತ್ತದೆ.

7 ವರ್ಷದ ಮಗಳ ಕೈಗೆ ಮೊಬೈಲ್‌ ಕೊಟ್ಟ ಸುಂದರಿ, ಲೀಕ್‌ ಆಯ್ತು ಕಾಂಗ್ರೆಸ್‌ ಸಚಿವನ ಅಶ್ಲೀಲ ಎಂಎಂಎಸ್!

ಆಯಾ ರಾಜ್ಯಗಳ ಪೊಲೀಸರಿಗೆ ದೂರು ಸಲ್ಲಿಕೆ: ಮಕ್ಕಳ ನಗ್ನ ಚಿತ್ರಗಳನ್ನ ಡೌನೋಡ್‌ ಮಾಡಿ ಹಂಚುವವರ ವಿರುದ್ಧ ಆಯಾ ರಾಜ್ಯಗಳ ಪೊಲೀಸರಿಗೆ ಪ್ರಕರಣವನ್ನ ಹಸ್ತಾಂತರ ಮಾಡಲಾಗುತ್ತದೆ. ಅದರಲ್ಲಿಯೂ ಬೆಂಗಳೂರು ಸಿಐಡಿ ಕಚೇರಿಗೆ ಈ ದೂರುಗಳು ಸಲ್ಲಿಕೆಯಾಗುತ್ತವೆ. ಬಳಿಕ ಇದು ಯಾವ ಜಿಲ್ಲೆ ಏನು ಅನ್ನೋದರ ಬಗ್ಗೆ ಪರಿಶೀಲನೆ ನಡೆಸಿ ಸಿಐಡಿ ಅಧಿಕಾರಿಗಳು ಆಯಾ ಜಿಲ್ಲೆಗಳ ಸಿಇಎನ್‌ ಪೊಲೀಸರಿಗೆ ಪ್ರಕರಣದ ಎಲ್ಲ ವಿವರಗಳನ್ನ ನೀಡಲಾಗುತ್ತದೆ. ಬಳಿಕ ಮಕ್ಕಳ ಅಶ್ಲೀಲ ದೃಶ್ಯಾವಳಿಗಳನ್ನ ಡೌನ್‌ ಲೋಡ್‌ ಮಾಡಿರುವವರನ್ನ ಪತ್ತೆ ಮಾಡಿ ಬಂಧಿಸಲಾಗುತ್ತದೆ.

ಅಮೆರಿಕಾ ಸಂಸ್ಥೆಯಿಂದ ರಿಪೋರ್ಟ್: ಮಕ್ಕಳ ಅಶ್ಲೀಲ ವೀಡಿಯೋಗಳನ್ನ ವೆಬ್‌ ಸೈಟ್‌ ಗಳಿಗೆ ಅಪ್ಲೋಡ್‌ ಮಾಡುವ ಹಾಗೂ ಅವುಗಳನ್ನ ಡೌನ್‌ಲೋಡ್‌ ಮಾಡುವ ವಿಕೃತ ಕಾಮಿಗಳ ವಿರುದ್ಧ ಅಮೇರಿಕದ ಎನ್‌ಸಿಎಂಇಸಿ ಸಂಸ್ಥೆ ನಮ್ಮ ನ್ಯಾಶನಲ್‌ ಕ್ರೈಂ ರೆಕಾರ್ಡ್‌ ಬ್ಯೂರೋಗೆ ಟಿಪ್‌ ಲೈನ್‌ ರಿಪೋರ್ಟ್‌ ಮಾಡುತ್ತದೆ. ಇದರ ಆಧಾರದಲ್ಲಿ ಎನ್‌ಸಿಆರ್‌ಬಿ ಪ್ರಕರಣ ದಾಖಲಿಸಿಕೊಂಡು ಆಯಾ ರಾಜ್ಯಗಳ ಸಿಐಡಿ ಮಾಹಿತಿ ನೀಡುತ್ತದೆ. ಈ ಮೂಲಕ ವಿಕೃತ ಕಾಮಿಗಳ ವಿರುದ್ಧ ಕಾನೂನು ಕ್ರಮ ಜರುಗುತ್ತದೆ.

ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ನಡವಳಿಕೆ; ಉರ್ಫಿ ಜಾವೇದ್ ವಿರುದ್ಧ ದೂರು ದಾಖಲು

ವಿಜಯಪುರ 7 ಜನರ ವಿರುದ್ಧವು ಪ್ರಕರಣ: ವಿಜಯಪುರ ಜಿಲ್ಲೆಯ 7 ಜನರ ವಿರುದ್ಧವು ಇಂಥದ್ದೆ ಪ್ರಕರಣ ದಾಖಲಾಗಿದೆ. ಚೈಲ್ಡ್‌ ಪೋರ್ನ್ ವಿಡಿಯೋ ಡೌನ್‌ಲೋಡ್‌ ಮಾಡಿ ಶೇರ್‌ ಮಾಡಿದ್ದ 7 ಜನರ ವಿರುದ್ಧ ಟಿಪ್‌ ಲೈನ್‌ ರಿಪೋರ್ಟ್‌ ಆಗಿದೆ. ಪ್ರಕರಣ ಸಿಇಎಸ್‌ ಪೊಲೀಸರ ಅಂಗಳದಲ್ಲಿದೆ. ಇವರಲ್ಲಿ ಬಹುತೇಕರು ವಿಜಯಪುರದ ಸರ್ಕಾರಿ ಅಧಿಕಾರಿಗಳ ಮಕ್ಕಳು ಆಗಿದ್ದಾರೆ. ಅಂದರೆ ಜಿಲ್ಲೆಯಲ್ಲಿನ ಹೈಪ್ರೊಪೈಲ್‌ ವ್ಯಕ್ತಿಗಳ ಮಕ್ಕಳು ಎನ್ನಲಾಗಿದೆ. ಈ ಬಗ್ಗೆ ಪ್ರಕರಣ ಸ್ವೀಕರಿಸಿರುವ ಸಿಇಎನ್‌ ಪೊಲೀಸರು ಬಂಧನಕ್ಕೆ ಕಾಮುಕರಿಗೆ ಬಲೆ ಬೀಸಿದ್ದಾರೆ.

ಪುಣೆಯಲ್ಲಿ 552 ಜನರ ವಿರುದ್ಧ ಪ್ರಕರಣ: ಮಹಾರಾಷ್ಟ್ರದ ಪುಣೆ ನಗರದಲ್ಲಿ ಮಕ್ಕಳ ಅಶ್ಲೀಲ ವಿಡಿಯೋಗಳನ್ನು ವೆಬ್‌ಸೈಟ್‌ಗಳಿಂದ ಡೌನ್‌ಲೋಡ್‌ ಮಾಡಿದ ಹಿನ್ನೆಲೆಯಲ್ಲಿ 552 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಮಕ್ಕಳ ನಗ್ನ ವಿಡಿಯೋಗಳನ್ನ ವೀಕ್ಷಿಸಿದ್ದಲ್ಲದೆ, ಅವುಗಳನ್ನ ವೆಬ್‌ ಸೈಟ್‌ ಗಳಿಂದ ಡೌನ್‌ಲೋಡ್‌ ಮಾಡಿ ಅವುಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ್ದರು. ಇನ್ನು ಕೆಲವರು ಮಕ್ಕಳ ಅಶ್ಲೀಲ ವಿಡಿಯೊಗಳನ್ನ ವೆಬ್‌ ಸೈಟ್‌ ಗಳಿಗೆ ಅಪ್ಲೋಡ್‌ ಮಾಡಿದ್ದರು ಎನ್ನಲಾಗಿದೆ.

click me!