Latest Videos

ಜನಪ್ರಿಯ ರೂಪದರ್ಶಿಯ ಕಾಲುಗಳು ಫ್ರಿಡ್ಜ್‌ ನಲ್ಲಿ ಪತ್ತೆ, ಶ್ರದ್ಧಾ ವಾಲ್ಕರ್‌ ಹತ್ಯೆಯನ್ನು ಹೋಲುತ್ತೆ ಈ ಕೊಲೆ!

By Gowthami KFirst Published Feb 26, 2023, 9:35 PM IST
Highlights

ಹಾಂಗ್ ಕಾಂಗ್ ನ ಖ್ಯಾತ ರೂಪದರ್ಶಿಯ  ಶವದ ಭಾಗಗಳು ಫ್ರಿಡ್ಜ್‌ ನಲ್ಲಿ ಕಂಡುಬಂದಿದೆ. ಮಾಡೆಲ್ ಭೀಕರವಾಗಿ ಕೊಲೆಯಾಗಿದ್ದು, ಆಕೆಯ ತಲೆ, ಮುಂಡ ಮತ್ತು ಕೈಗಳು ಕೂಡ  ಪತ್ತೆಯಾಗಿಲ್ಲ.

ಖ್ಯಾತ ಮಾಡೆಲ್ ಹಾಗೂ ತನ್ನ ಸೌಂದರ್ಯದ ಮೂಲಕ ಜನಪ್ರಿಯತೆ ಪಡೆದಿರುವ ಯುವತಿಯೊಬ್ಬಳನ್ನು  ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಹಾಂಗ್ ಕಾಂಗ್ ನ ಖ್ಯಾತ ರೂಪದರ್ಶಿ ಅಬ್ಬಿ ಚೋಯ್ (​​​28) ಎಂಬಾಕೆಯ ಶವದ ಭಾಗಗಳು ಫ್ರಿಡ್ಜ್‌ ನಲ್ಲಿ ಕಂಡಬಂದಿದೆ. ಈಕೆ ಕೆಲವು ದಿನಗಳಿಂದ ಕಾಣೆಯಾಗಿದ್ದಾರೆ ಎಂದು ಸುದ್ದಿ ಹಬ್ಬಿತ್ತು. ಆದರೆ ಇದೀಗ ಭೀಕರವಾಗಿ ಕೊಲೆಯಾಗಿದ್ದಾಳೆ.   ಅಬ್ಬಿ ಚೋಯ್ ಅವರ ಕತ್ತರಿಸಿದ ಕಾಲುಗಳು ಶುಕ್ರವಾರ ಫ್ರಿಡ್ಜ್‌ನಲ್ಲಿ ಪತ್ತೆಯಾದ ನಂತರ ಘಟನೆಗೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ. 28 ವರ್ಷದ ಮಾಡೆಲ್‌ನ ದೇಹ, ಮಾಂಸದ ಸ್ಲೈಸರ್, ಎಲೆಕ್ಟ್ರಿಕ್ ಗರಗಸ, ಉದ್ದನೆಯ ರೇನ್‌ಕೋಟ್‌ಗಳು, ಕೈಗವಸುಗಳು ಮತ್ತು ಮುಖವಾಡಗಳು ತೈ ಪೊ ಜಿಲ್ಲೆಯ ಬಾಡಿಗೆ ಮನೆಯಲ್ಲಿ ಪತ್ತೆಯಾಗಿವೆ ಎಂದು ಹಾಂಗ್ ಕಾಂಗ್ ಪೊಲೀಸ್ ಅಧಿಕಾರಿಗಳನ್ನು ಮಾಹಿತಿ ನೀಡಿದ್ದಾರೆ. ಆದರೆ  ಆಕೆಯ ತಲೆ, ಮುಂಡ ಮತ್ತು ಕೈಗಳು ಕೂಡ  ಪತ್ತೆಯಾಗಿಲ್ಲ.

ಜೈಲಲ್ಲೇ ಗ್ಯಾಂಗ್‌ವಾರ್‌, ಗಾಯಕ ಸಿಧು ಮೂಸೆವಾಲಾ ಕೊಲೆ ಆರೋಪ ಹೊತ್ತಿದ್ದ ಇಬ್ಬರ ಕಥೆ ಫಿನಿಶ್‌!

ಮಂಗಳವಾರ ಕಾಣೆಯಾಗಿದ್ದ ರೂಪದರ್ಶಿ ಅಬ್ಬಿ ಚೋಯ್, L'Officiel Monaco ನಿಯತಕಾಲಿಕದ ಇತ್ತೀಚಿನ ಆವೃತ್ತಿಯ ಮುಖಪುಟದಲ್ಲಿ ಕಾಣಿಸಿಕೊಂಡಿದ್ದರು. ಅಧಿಕಾರಿಗಳು ಡ್ರೋನ್‌ಗಳು ಮತ್ತು ಅಬ್ಸೈಲಿಂಗ್ ತಂಡ ಸೇರಿದಂತೆ ಆಕೆಯ ದೇಹದ ಉಳಿದ ಭಾಗಗಳನ್ನು ಹುಡುಕುತ್ತಿದ್ದಾರೆ. ಕೊಲೆಗೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕೊನೆಯದಾಗಿ ರೂಪದರ್ಶಿ ಅಬ್ಬಿ ಚೋಯ್  ತೈ ಪೊ ಜಿಲ್ಲೆಯಲ್ಲಿ ಕಾಣಿಸಿಕೊಂಡಿರುವುದು ಸಿಸಿಟಿವಿ ಮೂಲಕ ತಿಳಿದುಬಂದಿದೆ. ಈ ಕೊಲೆ ಬಳಿಕ ಚೋಯ್ ಅವರ ಮಾಜಿ ಪತಿ ಅಲೆಕ್ಸ್ ಕ್ವಾಂಗ್  ಮೇಲೆ ಪೊಲೀಸರಿಗೆ ಅನುಮಾನ ಹೆಚ್ಚಿದ್ದು, ಆತನನ್ನು ಬಂಧಿಸಲಾಗಿದೆ. ಜೊತೆಗೆ  ಆಕೆಯ ಮಾಜಿ ಗಂಡನ ಸಹೋದರ, ತಂದೆ , ತಾಯಿಯನ್ನು ಕೂಡ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಕಳ್ಳತನ ಮಾಡಿ ಎಸ್ಕೇಪ್ ಆದವ ಗಿರವಿ ಅಂಗಡಿಯಲ್ಲಿ ಸಿಕ್ಕಿ ಬಿದ್ದ, ಆರೋಪಿಗಾಗಿ 150 ಸಿಸಿಟಿವಿ ಚೆಕ್!

ದೆಹಲಿಯಲ್ಲಿ ಕಳೆದ ವರ್ಷ ಮೇ ತಿಂಗಳಿನಲ್ಲಿ ನಡೆದ  ಶ್ರದ್ಧಾ ವಾಲ್ಕರ್‌ ಕೊಲೆಗೆ ಸಂಬಂಧಿಸಿದಂತೆ ಈ ರೂಪದರ್ಶಿ ಕೊಲೆ ಕೂಡ ವಿಲಕ್ಷಣ ಹೋಲಿಕೆಗಳನ್ನು ಹೊಂದಿದೆ. ದೆಹಲಿ ಪೊಲೀಸರು ಕೂಡ ಇನ್ನೂ ಶ್ರದ್ದಾ ತಲೆಯನ್ನು ಪತ್ತೆ ಹಚ್ಚಿಲ್ಲ. ಪಾತಕಿ ಅಫ್ತಾಬ್ ಪೂನಾವಾಲಾ ತನ್ನ ಲಿವ್ ಇನ್ ಸಂಗಾತಿ ಶ್ರದ್ಧಾ ವಾಲ್ಕರ್‌ಳನ್ನು ಕೊಂದು, ಆಕೆಯ ದೇಹವನ್ನು 35 ತುಂಡುಗಳನ್ನಾಗಿ ಕತ್ತರಿಸಿ ಬಳಿಕ ನಗರದ ಅನೇಕ ಭಾಗಗಳಲ್ಲಿ ಎಸೆದಿದ್ದ.  ದೆಹಲಿಯ ಮೆಹ್ರೌಲಿ ಪ್ರದೇಶದಲ್ಲಿರುವ ಬಾಡಿಗೆ ಫ್ಲ್ಯಾಟ್‌ನಲ್ಲಿ ಬರ್ಬರವಾಗಿ ಕೊಲೆ ಮಾಡಿದ್ದ.   ನಂತರ 300 ಲೀಟರ್ ಸಾಮರ್ಥ್ಯದ ಬೃಹತ್ ಫ್ರಿಡ್ಜ್ ಖರೀದಿಸಿದ್ದ ಅಫ್ತಾಬ್, ಶ್ರದ್ಧಾಳ ದೇಹವನ್ನು 35 ತುಂಡುಗಳನ್ನಾಗಿ ಕತ್ತರಿಸಿ, ಅದರೊಳಗೆ ಇರಿಸಿದ್ದ. ಆಕೆಯ ದೇಹ ಕತ್ತರಿಸಲು ಗರಗಸ ಹಾಗೂ ಕತ್ತಿಯನ್ನು ಬಳಸಿದ್ದ.  

click me!