ತಾಳ್ಮೆ ಕೆಲವೊಮ್ಮೆ ಶಕ್ತಿ, ಇನ್ನೊಂದು ಪೋಸ್ಟ್; ಶೀತಲಯುದ್ಧ ಸಾರಿದ್ರಾ ಉಮಾಪತಿ ಗೌಡ..?

Published : Jun 17, 2024, 05:19 PM ISTUpdated : Jun 17, 2024, 05:35 PM IST
ತಾಳ್ಮೆ ಕೆಲವೊಮ್ಮೆ ಶಕ್ತಿ, ಇನ್ನೊಂದು ಪೋಸ್ಟ್; ಶೀತಲಯುದ್ಧ ಸಾರಿದ್ರಾ ಉಮಾಪತಿ ಗೌಡ..?

ಸಾರಾಂಶ

'ಹೌದು ನಾನು ತಗಡೆ, ಆದ್ರೆ ಚಿನ್ನದ ತಗಡಾಗೋ ಸಮಯಾನೂ ಬರುತ್ತೆ..'ಎಂದು ತಾಳ್ಮೆ ಕಳೆದುಕೊಳ್ಳದೆ ಮಾತನಾಡಿದ್ದ ಉಮಾಪತಿ, ಅವರು  ಮಾತಾಡಿ ದೊಡ್ಡವರಾಗಿದ್ದಾರೆ, ಆಗಲಿ' ಎಂದು ಹೇಳಿ ಸುಮ್ಮನಾಗಿದ್ದರು. ಉಮಾಪತಿ ಇದೀಗ..

ದರ್ಶನ್ ನಟನೆಯ 'ರಾಬರ್ಟ್' ಚಿತ್ರದ ಸಕ್ಸಸ್ ಬಳಿಕ ನಟ ದರ್ಶನ್ (Actor Darshan) ಹಾಗೂ ನಿರ್ಮಾಪಕ ಉಮಾಪತಿ ಗೌಡ (Umapathy Gowda) ನಡುವೆ ಕಥೆಯ ವಿಷಯಕ್ಕೆ ಜಟಾಪಟಿ ನಡೆದಿರುವುದು ಬಹುತೇಕರಿಗೆ ಗೊತ್ತಿದೆ. ಸದ್ಯ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಆರೋಪಿಯಾಗಿ ನಟ ದರ್ಶನ್ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಆರೋಪ ಸಾಬೀತಾದರೆ ನಟ ದರ್ಶನ್ ಕಾನೂನಿನ ಪ್ರಾಕರ ಕಠಿಣ ಶಿಕ್ಷೆ ಎದುರಿಸಲಿದ್ದಾರೆ. ಈ ವಿದ್ಯಮಾನ ಈಗ ರಾಜ್ಯವನ್ನೂ ಮೀರಿ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಸಮಯದಲ್ಲಿ ನಿರ್ಮಾಪಕ ಉಮಾಪತಿ ಗೌಡ ಅವರು ತಮ್ಮ ಸ್ಟೇಟಸ್‌ನಲ್ಲಿ, ಘಟನೆಗೆ ಪ್ರತಿಕ್ರಿಯೆ ಎಂಬಂತೆ ಸ್ಟೇಟಸ್ ಹಾಕಿಕೊಂಡಿದ್ದಾರೆ. 

ಈ ಬಗ್ಗೆ ಉಮಾಪತಿ ಗೌಡ 'ಅವತ್ತು ತಾಳ್ಮೆಯಿಂದ ಇದ್ದಿದ್ದಕ್ಕೆ ಇವತ್ತು ಉತ್ತರ ಸಿಕ್ಕಿದೆ' ಎಂದು ಬರೆದುಕೊಂಡಿದ್ದರು. ಇದೀಗ ಮತ್ತೊಂದು ಪೋಸ್ಟ್ ಹಾಕಿರುವ ಉಮಾಪತಿ ಗೌಡ 'ತಾಳ್ಮೆ ಕೆಲವೊಮ್ಮೆ ಶಕ್ತಿ'ಅಂತ ಬರೆದುಕೊಂಡಿದ್ದಾರೆ. ದರ್ಶನ್ ನಟನೆಯ ರಾಬರ್ಟ್ ಸಿನಿಮಾ (Robert Movie) ನಿರ್ಮಾಪಕ ಉಮಾಪತಿ ಗೌಡ ಇತ್ತೀಚೆಗೆ ಯಶಸ್ಸು ಕಂಡಿದ್ದ ದರ್ಶನ್ ನಟನೆಯ 'ಕಾಟೇರ' ಚಿತ್ರದ ಕಥೆಯ ಬಗ್ಗೆ ಮಾತನಾಡಿದ್ದರು. 'ಕಾಟೇರ ಕತೆ ಕತೆ ನನ್ನದು' ಎಂದಿದ್ದರು. 'ತಗಡೆ, ಯಾವಾಗ್ಲೂ ನನ್ ಹತ್ರಾನೆ ಯಾಕೆ ಗುಮ್ಮಿಸ್ಕೋತೀಯಾ' ಎಂದು ಕಾಟೇರ ಸಕ್ಸಸ್ ಮೀಟಲ್ಲಿ ದರ್ಶನ್ ಉಮಾಪತಿಗೆ ಮಾತನಾಡಿದ್ದರು.  

ಅವತ್ತು ತಾಳ್ಮೆಯಿಂದ ಇದ್ದಿದ್ದಕ್ಕೆ ಇವತ್ತು ಉತ್ತರ ಸಿಕ್ಕಿದೆ; ಉಮಾಪತಿ ಗೌಡ ಸ್ಟೇಟಸ್ ಏನ್ ಹೇಳ್ತಿದೆ..?

'ಹೌದು ನಾನು ತಗಡೆ, ಆದ್ರೆ ಚಿನ್ನದ ತಗಡಾಗೋ ಸಮಯಾನೂ ಬರುತ್ತೆ..'ಎಂದು ತಾಳ್ಮೆ ಕಳೆದುಕೊಳ್ಳದೆ ಮಾತನಾಡಿದ್ದ ಉಮಾಪತಿ,
ಅವರು  ಮಾತಾಡಿ ದೊಡ್ಡವರಾಗಿದ್ದಾರೆ, ಆಗಲಿ' ಎಂದು ಹೇಳಿ ಸುಮ್ಮನಾಗಿದ್ದರು. ಉಮಾಪತಿ ಇದೀಗ ತಮ್ಮ ಇನ್ಸ್ಟಾ ಸ್ಟೊರಿ ಮೂಲಕ ದರ್ಶನ್ ಅವರಿಗೆ ಪೋಸ್ಟ್ ಮೂಲಕ ಉತ್ತರ ಕೊಡತೊಡಗಿದ್ದಾರೆ. 'ವಿಷ್ಣುವಿನ ತಾಳ್ಮೆ ಇರಲಿ, ಆದ್ರೆ ನರಸಿಂಹನ ಕೋಪ ಮರೆಯಬೇಡ'  ಎಂದಿರವ ವೀಡಿಯೋವನ್ನು ಹಂಚಿಕೊಂಡಿದ್ದಾರೆ ನಿರ್ಮಾಪಕ ಉಮಾಪತಿ. ರಾಬರ್ಟ್ ಚಿತ್ರದ ನಂತರ ಕೆಲ ಘಟನೆಗಳಿಂದ  ದರ್ಶನ್ ಉಮಾಪತಿ ನಡುವೆ ವಿವಾದ ಸೃಷ್ಟಿಯಾಗಿ ದೂರವಾಗಿದ್ದರು.

ಒಬ್ಬ ನನ್‌ ಹಾರ್ಟ್‌ ಚೂರ್ ಮಾಡಿದ, ಇನ್ನೊಬ್ಬ ಬಂದು ಎಲ್ಲಾ ಸರಿ ಮಾಡಿದ: ದೀಪಿಕಾ ಪಡುಕೋಣೆ ಉವಾಚ!

ಇನ್ನು, ರೇಣುಕಾ ಸ್ವಾಮಿ ಹತ್ಯೆ ಆರೋಪ ಎದುರಿಸುತ್ತಿರುವ ನಟಿ ಪವಿತ್ರಾ ಗೌಡ ಹಾಗು ನಟ ದರ್ಶನ್ ಸೇರಿದಂತೆ ಹದಿನೇಳು ಜನರು ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಈ ಮೊದಲು ಐದು ದಿನಗಳ ಕಾಲ ವಿಚಾರಣೆ ನಡಸಲು ಹೇಳಿದ್ದ ನ್ಯಾಯಾಲಯ ಬಳಿಕ ಮತ್ತೆ ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿ ಮುಂದುವರೆಸಿದ್ದು, ಬಳಿಕ ಅಗತ್ಯವಿರುವ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು ಎನ್ನಲಾಗಿದೆ. 

ನನ್ನ ಹೆಸರಿಗೆ ತಾತನ ಹೆಸರು ಸೇರಿಸಿಕೊಂಡು ಈ ಲೆಗ್ಗಸಿಯನ್ನು ಗೌರವಿಸುತ್ತಿದ್ದೇನೆ: ಧೀರೆನ್ ಆರ್‌ ರಾಜ್‌ಕುಮಾರ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ರೀನಾ, ಕಿರಣ್ & ಲವರ್ ಗೌರಿ.. 'ನಾವೆಲ್ಲರೂ ಒಂದೇ ಫ್ಯಾಮಿಲಿ' ಎಂದ ಅಮೀರ್ ಖಾನ್; ಒಳಗೊಳಗೇ ನಕ್ಕ ನೆಟ್ಟಿಗರು!
ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!