Latest Videos

ಚಲಿಸುತ್ತಿರುವಾಗಲೇ ಕೆಎಸ್‌ಆರ್‌ಟಿಸಿ ಬಸ್ ಟೈರ್ ಬ್ಲಾಸ್ಟ್; ಮಹಿಳೆ ಕಾಲಿಗೆ ಗಂಭೀರ ಗಾಯ!

By Ravi JanekalFirst Published Jun 17, 2024, 7:02 PM IST
Highlights

ಹುಬ್ಬಳ್ಳಿ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿರುವಾಗಲೇ ಕೆಎಸ್‌ಆರ್‌ಟಿಸಿ ಬಸ್ ಟೈರ್ ಸ್ಫೋಟಿಸಿದ ಘಟನೆ ನಡೆದಿದ್ದು ಮಹಿಳೆಯೋರ್ವಳು ಗಂಭೀರ ಗಾಯಗೊಂಡಿದ್ದಾರೆ.

ಗದಗ (ಜೂ.17): ಹುಬ್ಬಳ್ಳಿ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿರುವಾಗಲೇ ಕೆಎಸ್‌ಆರ್‌ಟಿಸಿ ಬಸ್ ಟೈರ್ ಸ್ಫೋಟಿಸಿದ ಘಟನೆ ನಡೆದಿದ್ದು ಮಹಿಳೆಯೋರ್ವಳು ಗಂಭೀರ ಗಾಯಗೊಂಡಿದ್ದಾರೆ.

ಕೊಪ್ಪಳ ಡಿಪೋ ಗೆ ಸೇರಿದ KA 37 F0854 ಸಂಖ್ಯೆಯ ಸಾರಿಗೆ ಸಂಸ್ಥೆಯ ಬಸ್. ಗದಗ ನಗರದಿಂದ ಗಂಗಾವತಿ ಪಟ್ಟಣಕ್ಕೆ ತೆರಳುತ್ತಿದ್ದ ವೇಳೆ ಮುಂಡರಗಿ ತಾಲೂಕಿನ ಹಳ್ಳಿಗುಡಿ ಬಳಿ ಬರುತ್ತಿದ್ದಂತೆ ಟೈರ್ ಬ್ಲಾಸ್ಟ್ ಆಗಿದೆ. ವೇಗವಾಗಿ ಚಲಿಸುತ್ತಿರುವಾಗಲೇ ಬಸ್ಸಿನ ಹಿಂದಿನ ಚಕ್ರ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಬ್ಲಾಸ್ಟ್ ಆದ ರಭಸಕ್ಕೆ ಬಸ್‌ನ ಒಳಗಡೆ ಕುಳಿತಿದ್ದ ಮಹಿಳೆಯ ಕಾಲು ಅರ್ಧ ತುಂಡರಿಸಿ ಗಂಭೀರವಾಗಿ ಗಾಯವಾಗಿದೆ. 

 

ರಿವರ್ಸ್‌ ಗೇರ್ ಹಾಕಿದ ಮಹಿಳೆ; ಇಳಿಜಾರಿಗೆ ಹಿಂದಕ್ಕೆ ಚಲಿಸಿ ಕಿಯಾ ಕಾರು ಪಲ್ಟಿ!

ಸ್ವಲ್ಪದರಲ್ಲೇ ಭಾರೀ ಅನಾಹುತವೊಂದು ತಪ್ಪಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಗಾಯಗೊಂಡ ಮಹಿಳೆಯನ್ನ ಆಂಬುಲೆನ್ಸ್ ಮೂಲಕ ಜಿಮ್ಸ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ.

click me!