ಕೊಲೆ ಆರೋಪಿ ನಟ ದರ್ಶನ್, ರೇಣುಕಾಸ್ವಾಮಿಯನ್ನು ಹತ್ಯೆ ನಡೆಸಿದ ದಿನ ಧರಿಸಿದ್ದ ಬಟ್ಟೆಗಳನ್ನು ಈಗ ಕಲೆ ಹಾಕಲಾಗಿದೆ. ಆಶ್ಚರ್ಯವೆಂದರೆ ಬಟ್ಟೆಗಳು ಪತ್ತೆಯಾಗಿದ್ದು ಪತ್ನಿ ವಿಜಯಲಕ್ಷ್ಮಿ ಫ್ಲಾಟ್ ನಲ್ಲಿ
ಬೆಂಗಳೂರು (ಜೂ.17): ಬೆಂಗಳೂರಿನಲ್ಲಿ ಚಿತ್ರದುರ್ಗದ ರೇಣುಕಾ ಸ್ವಾಮಿ (RenukaSwamy) ಕೊಲೆ ಪ್ರಕರಣ ಆರೋಪದ ಹಿನ್ನೆಲೆ ನಟ ದರ್ಶನ್ (Actor Darshan), ಆತನ ಎರಡನೇ ಪತ್ನಿ ಪವಿತ್ರಾ ಗೌಡ (Darshan Second Wife Pavithra Gowda) ಸೇರಿ ಒಟ್ಟು 19 ಮಂದಿಯನ್ನು ಈವರೆಗೆ ಬಂಧಿಸಲಾಗಿದ್ದು, ಜೂನ್ 21ರವರೆಗೆ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಆದರೆ ಈಗ ಈ ಕೊಲೆ ಪ್ರಕರಣದಲ್ಲಿ ಸಾಕ್ಷಿಗಳ ಕಲೆ ಹಾಕುವ ಪ್ರಕ್ರಿಯೆ ನಡೆಯುತ್ತಿದೆ.
ಸೀರಿಯಲ್‌ನಲ್ಲಿ ಗೌರಮ್ಮ, ಆನ್‌ಲೈನ್‌ನಲ್ಲಿ ಬಿಚ್ಚಮ್ಮ; ಸೀತಾ ಹಾಟ್ ಫೋಟೋಗೆ ನೆಟ್ಟಿಗರು ಗರಂ!
ಮುಖ್ಯವಾಗಿ ಕೊಲೆ ಆರೋಪಿ ನಟ ದರ್ಶನ್, ರೇಣುಕಾಸ್ವಾಮಿಯನ್ನು ಹತ್ಯೆ ನಡೆಸಿದ ದಿನ ಧರಿಸಿದ್ದ ಬಟ್ಟೆಗಳನ್ನು ಈಗ ಕಲೆ ಹಾಕಲಾಗಿದೆ. ಆಶ್ಚರ್ಯವೆಂದರೆ ಬಟ್ಟೆಗಳು ಪತ್ತೆಯಾಗಿದ್ದು ಪತ್ನಿ ವಿಜಯಲಕ್ಷ್ಮಿ ಫ್ಲಾಟ್ ನಲ್ಲಿ, ಕೃತ್ಯ ನಡೆದ ಬಳಿಕ ದರ್ಶನ್ ತನ್ನ ಮನೆಯಲ್ಲಿ ಬಟ್ಟೆ ಬಿಚ್ಚಿಟ್ಟಿದ್ದ. ಈ ಬಟ್ಟೆಗಳನ್ನು ದರ್ಶನ್ ಕಾಸ್ಟ್ಯೂಮ್ ಡಿಸೈನರ್ ಆಗಿರುವಾತ ಪತ್ನಿ ವಿಜಯಲಕ್ಷ್ಮಿ ಮನೆಗೆ ತಗೊಂಡು ಹೋಗಿ ಇಟ್ಟಿದ್ದ. ಪೊಲೀಸರ ವಿಚಾರಣೆ ವೇಳೆ ದರ್ಶನ್ ಬಟ್ಟೆ ಮನೆಯಲ್ಲಿ ಇದೆ ಎಂದಿದ್ದ. ಆದರೆ ಸ್ಥಳ ಮಹಜರು ಮಾಡಲು ಮನೆಗೆ ಹೋಗಿ ಬಟ್ಟೆ ಹುಡುಕಿದಾಗ ಸಿಕ್ಕಿರಲಿಲ್ಲ.
ಹೀಗಾಗಿ ಕಾಸ್ಟ್ಯೂಮರ್ ಡಿಸೈನರ್ ಗೆ ಕೇಳಿದಾಗ ತಾನೇ ವಿಜಯಲಕ್ಷ್ಮಿ ಮನೆಗೆ ತೆಗೆದುಕೊಂಡು ಹೋಗಿ ಇಟ್ಟಿದ್ದೆ ಎಂದಿದ್ದ. ಈ ವಿಚಾರ ದರ್ಶನ್ ಗೆ ಗೊತ್ತಿರಲಿಲ್ಲ. ಕೊನೆಗೆ ವಿಜಯಲಕ್ಷ್ಮಿ ಮನೆಗೆ ಹೋಗಿ ಬಟ್ಟೆ ಜಪ್ತಿ ಮಾಡಿ ಬರಲಾಗಿತ್ತು.
ಹುಟ್ಟೂರು ಪೊನ್ನಂಪೇಟೆಯಲ್ಲಿ ನಟ ದರ್ಶನ್ ಕ್ರೌರ್ಯ, ಹೋಂ ಸ್ಟೇಯಲ್ಲಿ ಕೆಲಸದಾಕೆಗೆ ಸಿಗರೇಟ್‌ನಿಂದ ಸುಟ್ಟು ಹಲ್ಲೆ!
ಕಳ್ಳತನವಾಗಿದ್ದ ರೇಣುಕಾಸ್ವಾಮಿ ಒಡವೆ ಆರೋಪಿ ಮನೆಯಲ್ಲಿ ಪತ್ತೆ!:
ರೇಣುಕಾಸ್ವಾಮಿ ಧರಿಸಿದ್ದ ಒಡೆವೆಗಳನ್ನು ಆರೋಪಿ ರಾಘವೇಂದ್ರ ಕಳ್ಳತನ ಮಾಡಿದ್ದ. ಇದೀಗ ರಾಘವೇಂದ್ರ ಮನೆಯಲ್ಲಿ ರೇಣುಕಾಸ್ವಾಮಿ ಉಂಗುರ, ಚೈನ್ ವಶಕ್ಕೆ ಪಡೆಯಲಾಗಿದೆ. ರಾಘವೇಂದ್ರ ಪತ್ನಿ ಬಳಿ ಇದ್ದ ಜುವೆಲ್ಲರಿಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಭಾನುವಾರ ಮಹಜರು ಸಮಯದಲ್ಲಿ 4.5 ಲಕ್ಷ ಕ್ಯಾಷ್, ಒಡವೆಗಳು ಹಾಗೂ ಬಟ್ಟೆಗಳನ್ನು ಸೀಜ್ ಮಾಡಲಾಗಿದೆ. ರೇಣುಕಾಸ್ವಾಮಿ ಶೆಡ್ ಒಳಗೆ ಹೋಗುವ ಮುನ್ನ ಕಾರಿನಲ್ಲಿ ಒಡೆವೆ ಬಿಚ್ಚಿಟ್ಟಿದ್ದ. ತನ್ನ ಮೇಲೆ ಹಲ್ಲೆ ಮಾಡಬಹುದು ಎಂದು ಮೊದಲೇ ಊಹಿಸಿದ್ದ ರೇಣುಕಾಸ್ವಾಮಿ, ಹಲ್ಲೆ ವೇಳೆ ಒಡೆವಗಳನ್ನ ಕಿತ್ತುಕೊಳ್ಳಬಹುದು ಎಂದು ಊಹಿಸಿದ್ದ, ಹೀಗಾಗಿ ಶೆಡ್ ಒಳಗೆ ಹೋಗುವ ಮುನ್ನ ಉಂಗುರ ಹಾಗೂ ಚೈನ್ ಬಿಚ್ಚಿಟ್ಟಿದ್ದ. ಕಾರಿನಲ್ಲಿ ಚಿತ್ರದುರ್ಗಕ್ಕೆ ಹೋದ ಬಳಿಕ ರಾಘವೇಂದ್ರ ಪತ್ನಿಗೆ ಜಗ್ಗ ಹಾಗೂ ಅನುಕುಮಾರ್ ಒಡವೆ ನೀಡಿದ್ದರು.
ಚರಂಡಿಯಲ್ಲಿ ಮೊಬೈಲ್ ಹುಡುಕಿದ ಪೊಲೀಸರು: ಕೊಲೆಯಾದ ರೇಣುಕಾಸ್ವಾಮಿ ಮೃತದೇಹ ಸಿಕ್ಕಿದ್ದ ಸುಮನ್ನಹಳ್ಳಿ ರಾಜಕಾಲುವೆ ಬಳಿ ರೇಣುಕಾಸ್ವಾಮಿಯ ಮೊಬೈಲ್ ಅನ್ನು ಎಸೆದಿರುವುದು ತನಿಖೆ ವೇಳೆ ತಿಳಿದು ಬಂದಿತ್ತು. ಹೀಗಾಗಿ ಮೊಬೈಲ್ ಹುಡುಕಲು ಆರೋಪಿ ಪ್ರದೋಶ್ ನನ್ನು ಪೊಲೀಸರು ಕರೆದೊಯ್ದು ಸುಮಾರು 1 ಗಂಟೆಗಳ ಕಾಲ ಸುಮ್ಮನಹಳ್ಳಿ ಬಳಿಯ ಚರಂಡಿಯಲ್ಲಿ ಹುಡುಕಿದರು. ಆದರೆ ಮೊಬೈಲ್ ಸಿಗಲಿಲ್ಲ ಹೀಗಾಗಿ ಬಂದ ದಾರಿಗೆ ಸುಂಕವಿಲ್ಲದೆ ಹೊರಟು ಹೋದರು.