ಹಣಕ್ಕಾಗಿ ಸಾಮಿಲ್ ಒಂದರ ಕಾವಲುಗಾರ ಹಾಗೂ ಮಾನಸಿಕ ಅಸ್ವಸ್ಥನನ್ನು ಹತ್ಯೆ ಮಾಡಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಎಸ್.ಎಸ್. ಸಾಮಿಲ್ನಲ್ಲಿ ನಡೆದಿದೆ.
ಹುಣಸೂರು (ಜೂ.25): ಹಣಕ್ಕಾಗಿ ಸಾಮಿಲ್ ಒಂದರ ಕಾವಲುಗಾರ ಹಾಗೂ ಮಾನಸಿಕ ಅಸ್ವಸ್ಥನನ್ನು ಹತ್ಯೆ ಮಾಡಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಎಸ್.ಎಸ್. ಸಾಮಿಲ್ನಲ್ಲಿ ನಡೆದಿದೆ. ಮೃತರನ್ನು ವೆಂಕಟೇಶ್ (65), ಷಣ್ಮುಗಂ (60) ಎಂದು ಗುರತಿಸಲಾಗಿದ್ದು, ಪ್ರಕರಣ ಸಂಬಂಧ ಹುಣಸೂರು ಪೊಲೀಸರು ಮೂವರು ಆರೋಪಿಗಳ ಪೈಕಿ ಅಭಿಷೇಕ್ (23)ನನ್ನು ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳು ತಲೆಮಾರಿಸಿಕೊಂಡಿದ್ದು, ಬಂಧನಕ್ಕಾಗಿ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ಧಾರೆ.
ಏನಿದು ಘಟನೆ: ಜೂನ್ 22ರಂದು ಹಣದ ಆಸೆಗಾಗಿ ಮೂವರು ಆರೋಪಿಗಳು ಹುಣಸೂರಿನ ವಿಶ್ವೇಶ್ವರಯ್ಯ ಸರ್ಕಲ್ನಲ್ಲಿರುವ ಎಸ್.ಎಸ್. ಸಾಮಿಲ್ನ ಕಾವಲುಗಾರರಾದ ವೆಂಕಟೇಶ್ ಹಾಗೂ ಮಾನಸಿಕ ಅಸ್ವಸ್ಥ ಷಣ್ಮುಗಂನನ್ನು ಹತ್ಯೆ ಮಾಡಿದ್ದರು. ಹತ್ಯೆ ಬಳಿಕ ಮೃತರ ಜೇಬನ್ನು ಪರಿಶೀಲಿಸಿ ಅದರಲ್ಲಿ ಸಿಕ್ಕ 488 ರೂಪಾಯಿ ಹಣವನ್ನು ದೋಚಿ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿಗಳನ್ನು ಪರಿಶೀಲಿಸಿ ಘಟನೆ ನಡೆದ 36 ಘಂಟೆಗಳ ಒಳಗಾಗಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಅಭಿಷೇಕ್ ಈ ಹಿಂದೆ ಹುಣಸೂರು ಪೊಲೀಸ್ ಠಾಣಾ ವ್ಯಪ್ತಿಯಲ್ಲಿ ನಡೆದ ಹಲವು ಕಳವು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಸೇರಿ ಬಿಡುಗಡೆಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
undefined
ಶಿರಾಡಿ ಘಾಟಲ್ಲಿ ಸುರಂಗ ಮಾರ್ಗ ಯೋಜನೆಗೆ ಸರ್ಕಾರ ಮರುಜೀವ: ಸಚಿವ ಸತೀಶ್ ಜಾರಕಿಹೊಳಿ
ಮಾದಕದ್ರವ್ಯ ಸೇವನೆ ಪ್ರಕರಣ, ಮೂವರ ಬಂಧನ: ನಗರದ ಕೆ.ಎಸ್.ರಾವ್ ರಸ್ತೆಯ ಮಾಲ್ ಬಳಿ ಮತ್ತು ಲೇಡಿಗೋಷನ್ ಆಸ್ಪತ್ರೆ ಬಳಿಯ ಮಾರ್ಕೆಟ್ ರಸ್ತೆಯಲ್ಲಿ ಪತ್ತೆಯಾದ ಪ್ರತ್ಯೇಕ ಮಾದಕ ಸೇವನೆ ಪ್ರಕರಣದಲ್ಲಿ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಶಬೀಲ್ ಸುಲೈಮಾನ್ (27), ಅಬ್ದುಲ್ ಖಲೀಲ್ (28) ಮತ್ತು ಅಶ್ಬಕ್(29) ಬಂಧಿತ ಆರೋಪಿಗಳು. ಜೂ.23ರಂದು ನಗರದ ಸಿಸಿಬಿ ಪೊಲೀಸರು ರೌಂಡ್‌್ಸನಲ್ಲಿದ್ದಾಗ ನಗರದ ಮಾಲ್‌ವೊಂದರ ಬಳಿ ಆರೋಪಿಗಳಾದ ಶಬೀಲ್ ಸುಲೈಮಾನ್, ಅಬ್ದುಲ್ ಖಲೀಲ್ ಎಂಬವರು ಯಾವುದೋ ಮಾದಕ ವಸ್ತುವನ್ನು ಸೇವನೆ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯನ್ನು ಆಧರಿಸಿ ಸ್ಥಳಕ್ಕೆ ಹೋದಾಗ ಆರೋಪಿಗಳು ಪೊಲೀಸರನ್ನು ನೋಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ.
ಕೂಡಲೇ ಸಿಸಿಬಿ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಅವರನ್ನು ವಿಚಾರಣೆಗೊಳಪಡಿಸಿದಾಗ ತೊದಲುತ್ತಿದ್ದು ಅವರ ಬಾಯಿಯಿಂದ ಅಮಲು ಪದಾರ್ಥ ಸೇವನೆ ವಾಸನೆ ಬರುತ್ತಿದ್ದುದರಿಂದ ಅವರನ್ನು ಕೂಲಂಕಷವಾಗಿ ವಿಚಾರಿಸಿದಾಗ ಅವರು ಮಾದಕ ವಸ್ತುವನ್ನು ಸೇವನೆ ಮಾಡಿದ ಬಗ್ಗೆ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ನಗರದ ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಭಿಪ್ರಾಯ ವ್ಯಕ್ತಪಡಿಸಲು ಯಾರೂ ಹೆದರಬೇಕಿಲ್ಲ: ಸಾಹಿತಿಗಳ ಆತಂಕಕ್ಕೆ ಸಿಎಂ ಸಿದ್ದರಾಮಯ್ಯ ಭರವಸೆ
ಇನ್ನೊಂದು ಪ್ರಕರಣದಲ್ಲಿ ಜೂ.23ರಂದು ಸಿಸಿಬಿ ಪೊಲೀಸರು ರೌಂಡ್‌್ಸ ನಲ್ಲಿದ್ದಾಗ ಲೇಡಿಗೋಷನ್ ಬಳಿ ಮಾರ್ಕೆಟ್ ರಸ್ತೆಯಲ್ಲಿ ಆರೋಪಿ ಅಶ್ಬಕ್ ಎಂಬಾತ ಯಾವುದೋ ಮಾದಕ ವಸ್ತುವನ್ನು ಸೇವನೆ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿಯನ್ನು ಆಧರಿಸಿ ಸ್ಥಳಕ್ಕೆ ತೆರಳಿ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ತಪ್ಪನ್ನು ಒಪ್ಪಿಕೊಂಡ. ಆರೋಪಿಯನ್ನು ವೈದ್ಯಕೀಯ ತಪಾಸಣೆಗೊಳಪಡಿಸಿದಾಗ ಮಾದಕ ಸೇವನೆ ದೃಢಪಟ್ಟಿರುವುದರಿಂದ ಆರೋಪಿ ವಿರುದ್ಧ ಮಂಗಳೂರು ಉತ್ತರ ಠಾಣೆಯಲ್ಲಿ ಮಾದಕ ದ್ರವ್ಯ ಕಾಯ್ದೆ ಅಡಿ ದೂರು ದಾಖಲಿಸಲಾಗಿದೆ.