Chitradurga : ಇಬ್ಬರ ನಡುವಿನ ಜಗಳ ಬಿಡಿಸಲು ಹೋದವ ಹೆಣವಾದ, ಯಾರದ್ದೋ ಕೋಪಕ್ಕೆ ಅಮಾಯಕ ಬಲಿ!

By Suvarna News  |  First Published Mar 1, 2023, 5:36 PM IST

 ಪ್ರೇಮಿಗಳ ಮದುವೆಗೆ ಸಪೋರ್ಟ್ ಮಾಡಿದ್ದಾನೆಂದು ತಪ್ಪು ಭಾವಿಸಿ ಹುಡುಗಿ ಕಡೆಯವರಿಂದ ಹಲ್ಲೆ‌. ಚಿತ್ರದುರ್ಗದಲ್ಲಿ ಅಮಾಯಕ ಬಲಿ.


ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಫೆ.1): ವಯಸ್ಸಿಗೆ ಬಂದವರು  ಇಷ್ಟ ಪಟ್ಟು ಲವ್ ಮ್ಯಾರೇಜ್ ಆದಾಗ ಹುಡುಗ, ಹುಡುಗಿ ಕಡೆಯವರು ಸಹಿಸಿಕೊಳ್ಳಲಾಗದೇ ಗಲಾಟೆ ಮಾಡ್ಕೊಳೋದು ಸರ್ವೇ ಸಾಮಾನ್ಯ. ಆದ್ರೆ ಅವರ ಜಗಳ ಬಿಡಿಸಲಿಕ್ಕೆ ಹೋದ ಅಮಾಯಕನೋರ್ವ ಬಲಿಯಾಗಿರುವ ಘಟನೆ ಜೋಡಿ ಚಿಕ್ಕೇನಹಳ್ಳಿ ಗ್ರಾಮ್ಮಿ ಬೆಳಕಿಗೆ ಬಂದಿದೆ. ನೋಡಿ ಹೀಗೆ ಮೃತನಾಗಿರೋ ಈತ ಬೊಮ್ಮಲಿಂಗಪ್ಪ ಅಂತ. ಕೇವಲ, 30 ವರ್ಷದ ಯುವಕ. ಬಾಳಿ ಬದುಕ ಬೇಕಾಗಿದ್ದವನು.

Latest Videos

undefined

ಆದ್ರೆ ಚಿತ್ರದುರ್ಗ ತಾಲೂಕಿನ ಜೋಡಿ ಚಿಕ್ಕೇನಹಳ್ಳಿ ಗೊಲ್ಲರಹಟ್ಟಿಯ ಪ್ರೇಮಿಗಳಿಬ್ಬರು ಮನೆ ಬಿಟ್ಟೋಗಿದ್ದ ಹಿನ್ನಲೆಯಲ್ಲಿ  ಲವರ್ ಬಾಯ್ ಸಿದ್ದೇಶ್ ಹಾಗೂ ಹುಡುಗಿಯ ತಂದೆ ತಿಪ್ಪಯ್ಯನ ಕುಟುಂಬಗಳ ಮಧ್ಯೆ ಗಲಭೆ ನಡೆಯುತ್ತಿತ್ತು. ಆಗ ಜಗಳವನ್ನು ‌ಬಿಡಿಸಲು ಮಧ್ಯೆ ಪ್ರವೇಶಿಸಿದ ಬೊಮ್ಮಲಿಂಗಪ್ಪ(30)ನ ಮೇಲೆಯೇ ತಿಪ್ಪಯ್ಯ ಮತ್ತು ಇತರರು ಸೇರಿ ಮನ ಬಂದಂತೆ ಎದೆ ಹಾಗೂ ತಲೆಗೆ ಬಲವಾಗಿ ಹಲ್ಲೆ‌ ನಡೆಸಿದ‌ ಪರಿಣಾಮ ಅಮಾಯಕ ಬೊಮ್ಮಲಿಂಗಪ್ಪ ಸಾವನ್ನಪ್ಪಿದ್ದಾನೆ.

ಹೀಗಾಗಿ ಏನು ತಪ್ಪು ಮಾಡದ ಬೊಮ್ಮಲಿಂಗನ  ಒಂದು ವರ್ಷದ ಹಸು ಗೂಸು ಹಾಗು ಆತನ ಪತ್ನಿ ಅನಾಥರಾಗಿದ್ದಾರೆ. ಹೀಗಾಗಿ ತಪ್ಪಿತಸ್ತರನ್ನು ಬಂಧಿಸಿ, ಅವರಿಗೆ ಉಗ್ರ ಶಿಕ್ಷೆ ವಿಧಿಸುವಂತೆ ಬೊಮ್ಮಲಿಂಗನ ಬಾಮೈದ ಪಾಪಣ್ಣ ಆಗ್ರಹಿಸಿದ್ದಾರೆ.

ಅಯ್ಯೋ.. ಕಂದಮ್ಮ! ಆಸ್ಪತ್ರೆಯಲ್ಲಿ ತಾಯಿ ಪಕ್ಕ ಮಲಗಿದ್ದ ಶಿಶು ಕೊಂದ ಬೀದಿ ನಾಯಿಗಳು

ಇನ್ನು ಗಲಾಟೆ ಬಿಡಿಸಲು ತೆರಳಿದ್ದ ಬೊಮ್ಮಲಿಂಗನು ಹುಡುಗನ ಕಡೆಯವರಿಗೆ ಸಪೋರ್ಟ್‌‌ ಮಾಡ್ತಿದ್ದಾನೆಂದು ಭಾವಿಸಿ, ಈ ಹಲ್ಲೆ‌ ನಡೆಸಲಾಗಿದೆ. ಈ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೀಗಾಗಿ ಚಿತ್ರದುರ್ಗ ಎಸ್ಪಿ ಪರಶುರಾಮ್ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ‌ ನಡೆಸಿದ್ದು, ಆರೋಪಿಗಳಿಗೆ ಬಲೆ‌ ಬೀಸಿದ್ದಾರೆ. ಪಕ್ಕದ ಮನೆಯಲ್ಲಿ ಆಗ್ತಿದ್ದ ಜಗಳ ಬಿಡಿಸಲು ಹೋಗಿದ್ದಕ್ಕೆ ಆರೋಪಿಗಳು ಥಳಿಸಿದ್ದಾರೆ. ಈ ಪರಿಣಾಮ ಯುವಕ ಬೊಮ್ಮಲಿಂಗ ಮೃತಪಟ್ಟಿದ್ದು ಕೂಡಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಎಸ್ಪಿ ತಿಳಿಸಿದರು.

43 ವರ್ಷದ ವ್ಯಕ್ತಿಯಿಂದ ಒಂದೇ ಮನೆಯ ಮೂವರು ಅಪ್ರಾಪ್ತ ಸಹೋದರಿಯರ ಮೇಲೆ ಅತ್ಯಾಚಾರ!

ಒಟ್ಟಾರೆ ಪ್ರೇಮಿಗಳ ಎಸ್ಕೇಪ್ ನಿಂದಾಗಿ ಗ್ರಾಮದ ವಾತಾವರಣವೇ ಕಲುಷಿತವಾಗಿದೆ. ಹೀಗಾಗಿ ಅವರ ಮೇಲಿನ ಕೋಪ ಅಮಾಯಕನೋರ್ವನನ್ನು ಬಲಿ ಪಡೆದಿದ್ದು, ಏನು ತಪ್ಪು ಮಾಡದ ಬೊಮ್ಮಲಿಂಗನ ಕುಟುಂಬ  ಅನಾಥವಾಗಿದ್ದು, ಮಾತ್ರ ವಿಪರ್ಯಾಸವೇ ಸರಿ.

click me!