ದೊಡ್ಡಪ್ಪನ ಮಗಳನ್ನು ಪ್ರೀತಿ ಮಾಡಿದ್ದಕ್ಕೆ ಸಂಬಂಧಿಕರೇ ಯುವಕನಿಗೆ ಬೆಂಕಿ ಹಚ್ಚಿದ್ದ ಪ್ರಕರಣದಲ್ಲಿ ಶೇ.80 ಸುಟ್ಟ ಗಾಯಗಳಾಗಿದ್ದ ಯುವಕ 3 ದಿನದ ಬಳಿಕ ಸಾವನ್ನಪ್ಪಿದ್ದಾನೆ.
ಬೆಂಗಳೂರು (ಜು.18): ಚಾಮರಾಜನಗರ ಮೂಲದ ದೊಡ್ಡಪ್ಪನ ಮಗಳನ್ನು ಪ್ರೀತಿಸುತ್ತಿದ್ದ ಕಾರಣಕ್ಕೆ ಸ್ವತಃ ದೊಡ್ಡಪ್ಪನ ಕುಟುಂಬಸ್ಥರು ಯುವಕನನ್ನು ಕಿಡ್ನಾಪ್ ಮಾಡಿ ಬೆಂಕಿ ಹಚ್ಚಿದ್ದರು. ಬೆಂಕಿ ಹಚ್ಚಿದ ಬೆನ್ನಲ್ಲೇ ಶೇ.80 ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಯವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ 19 ವರ್ಷದ ಯುವಕ ಶಶಾಂಕ್ ಇಂದು ಸಾವನ್ನಪ್ಪಿದ್ದಾನೆ.
ಬೆಂಗಳೂರಿನ ಆರ್.ಆರ್.ನಗರದ 12ನೇ ಕ್ರಾಸ್ ನಿವಾಸಿ ರಂಗನಾಥ್ ಮತ್ತು ಪ್ರೇಮಾ ದಂಪತಿ ಪುತ್ರ ಶಶಾಂಕ್ ಎಂಬಾತನೇ ತನ್ನ ದೊಡ್ಡಪ್ಪನಿಂದ ದುಷ್ಕೃತ್ಯಕ್ಕೆ ಒಳಗಾದ ಯುವಕ. ಈತ ಎಸಿಎಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಈತನ ದೊಡ್ಡಪ್ಪ ಚಾಮರಾಜನಗರ ಜಿಲ್ಲೆ ಹರದನಹಳ್ಳಿ ನಿವಾಸಿ ಮನು (ಮಹೇಶ್) ಎಂಬಾತನೇ ಈ ದುಷ್ಕೃತ್ಯ ಎಸಗಿದ್ದು, ಆತ ಹಾಗೂ 6 ಮಂದಿಯ ವಿರುದ್ಧ ಕುಂಬಳಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯಲ್ಲಿ ಶಶಾಂಕ್‌ನಿಗೆ ಶೇ.80ರಷ್ಟು ಸುಟ್ಟಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮೂರು ದಿನಗಳ ಬಳಿಕ ಸಾವನ್ನಪ್ಪಿದ್ದಾನೆ.
undefined
Bengaluru: ಮಗಳನ್ನು ಪ್ರೀತಿಸಿದ ಯುವಕನ ಕಿಡ್ನಾಪ್ ಮಾಡಿ ಬೆಂಕಿ ಇಟ್ಟ ಪ್ರಕರಣ, ಕುಟುಂಬ ಸಮೇತ ಊರು ಬಿಟ್ಟ ಆರೋಪಿ
ಘಟನೆ ವಿವರ: ಶಶಾಂಕ್ ತನ್ನ ದೊಡ್ಡಪ್ಪ ಮನು ಅವರ ಪುತ್ರಿ ಲಹರಿಯನ್ನು ಪ್ರೀತಿಸುತ್ತಿದ್ದ. ಇವರಿಬ್ಬರ ಪ್ರೀತಿಗೆ ಯುವತಿಯ ಪೋಷಕರ ವಿರೋಧವಿತ್ತು. ಅಲ್ಲದೆ, ಈ ವಿಚಾರವಾಗಿ ಶಶಾಂಕ್‌ಗೆ ಮನು ಹಲವಾರು ಬಾರಿ ಬುದ್ಧಿ ಮಾತು ಕೂಡ ಹೇಳಿದ್ದರು. ಆದರೆ, ಬುದ್ಧಿಮಾತಿಗೆ ಶಶಾಂಕ್ ಬೆಲೆ ಕೊಟ್ಟಿರಲಿಲ್ಲ. ಈ ಮಧ್ಯೆ, ಜುಲೈ 3ರಂದು ಮೈಸೂರಿನಿಂದ ಬೆಂಗಳೂರಿಗೆ ಬಂದಿದ್ದ ಲಹರಿಯನ್ನು ತನ್ನ ಮನೆಗೆ ಶಶಾಂಕ್ ಕರೆದೊಯ್ದಿದ್ದ. ಈ ವಿಷಯ ತಿಳಿದು ಆಕ್ರೋಶಗೊಂಡ ಮನು, ಮನೆಗೇ ನುಗ್ಗಿ ಶಶಾಂಕ್ ಮೇಲೆ ಹಲ್ಲೆ ನಡೆಸಿ, ಪುತ್ರಿಯನ್ನು ಕರೆದೊಯ್ದಿದ್ದರು.
ಕೋಪದಿಂದ ಕಿಡ್ನಾಪ್ ಮಾಡಿ ಬೆಂಕಿ ಹಚ್ಚಿದರು: ಈ ಮಧ್ಯೆ, ಜುಲೈ 15ರಂದು ಬೆಳಗ್ಗೆ 8 ಗಂಟೆಗೆ ಶಶಾಂಕ್ ಎಂದಿನಂತೆ ಕಾಲೇಜಿಗೆ ತೆರಳಿದ್ದ. ತರಗತಿ ಇಲ್ಲದ ಕಾರಣ ಬೆಳಗ್ಗೆ 9.30ರ ವೇಳೆ ಮನೆಗೆ ವಾಪಸ್ಸಾಗುತ್ತಿದ್ದ. ಈ ವೇಳೆ, ಆರ್.ಆರ್.ಮೆಡಿಕಲ್ ಕಾಲೇಜು ಬಳಿ ಇನೋವಾ ಕಾರಿನಲ್ಲಿ ಬಂದ ಮನು ಬಲವಂತವಾಗಿ ಎಳೆದು ಶಶಾಂಕ್‌ನನ್ನು ಕಾರಿನಲ್ಲಿ ಕೂರಿಸಿಕೊಂಡರು. ಈ ವೇಳೆ, ಕಾರಿನಲ್ಲಿದ್ದ ಇನ್ನು 6 ಮಂದಿ ಆತನ ಕಣ್ಣಿಗೆ ಬಟ್ಟೆಕಟ್ಟಿ, ಬಾಯಿಗೆ ಬಟ್ಟೆತುರುಕಿ, ಬಲವಂತವಾಗಿ ಕಣಿಮಿಣಿಕೆ ಟೋಲ್ ಬಳಿಯಿರುವ ಖಾಲಿ ಜಾಗಕ್ಕೆ ಕರೆದೊಯ್ದರು. ‘ಲಹರಿಯನ್ನು ಪ್ರೀತಿ ಮಾಡುತ್ತೀಯಾ? ನಿನಗೆ ಎಷ್ಟುಬಾರಿ ಹೇಳುವುದು’ ಎಂದು ಕೋಪದಿಂದ ಶಶಾಂಕ್‌ನ ಮೇಲೆ ಹಲ್ಲೆ ನಡೆಸಿದರು. ಕಾರಿನಿಂದ ಕೆಳಗಿಳಿಸಿ, ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿ, ಆತನನ್ನು ಅಲ್ಲಿಯೇ ಬಿಟ್ಟು ಕಾರಿನಲ್ಲಿ ಪರಾರಿಯಾದರು.
Bengaluru PES College: ಪರೀಕ್ಷೆಯಲ್ಲಿ ಕಾಪಿ ಮಾಡ್ತಿದ್ದ ವಿದ್ಯಾರ್ಥಿಗೆ ಅವಮಾನ: 14ನೇ ಮಹಡಿಯಿಂದ ಬಿದ್ದು ಸಾವು
ಸಂಬಂಧಿಕರಿಕೆ ಕರೆ ಮಾಡಿ ಆಸ್ಪತ್ರೆ ಸೇರಿದ್ದ: ಇಷ್ಟಾದರೂ ತಾನು ಹೇಗಾದರೂ ಮಾಡಿ ಬದುಕಲೇಬೇಕು ಎಂದು ನಿರ್ಧರಿಸಿದ ಶಶಾಂಕ್ ಅಲ್ಲಿಯೇ ನೆಲದ ಮೇಲೆ ಹೊರಳಾಡಿ, ಬೆಂಕಿ ಆರಿಸಿಕೊಂಡಿದ್ದಾನೆ. ಮೈಎಲ್ಲಾ ಸುಟ್ಟಗಾಯಗಳಿಂದ ನರಳುತ್ತಿದ್ದರೂ, ಆ ನೋವಿನಲ್ಲಿಯೇ ತನ್ನ ಸಂಬಂಧಿ ಹೀರಾ ಎಂಬುವರಿಗೆ ವಿಷಯ ತಿಳಿಸಿದ್ದಾನೆ. ತಕ್ಷಣ ಸ್ಥಳಕ್ಕೆ ಬಂದ ಹೀರಾ ಮತ್ತು ಶಶಾಂಕನ ಕುಟುಂಬ ಸದಸ್ಯರು ಆ್ಯಂಬುಲೆನ್ಸ್‌ನಲ್ಲಿ ಕರೆದೊಯ್ದು ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಿದರು. ನಂತರ ಅವನಿಗೆ ಪ್ರಥಮ ಚಿಕಿತ್ಸೆ ನೀಡಿದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಇನ್ನು ಶಶಾಂಕ್ ಅವರ ದೇಹದ ಶೇ.80ರಷ್ಟು ಭಾಗ ಸುಟ್ಟು ಹೋಗಿದ್ದರಿಂದ ಬದುಕುಳಿಯದೇ ಮಂಗಳವಾರ ಪ್ರಾಣವನ್ನೇ ಬಿಟ್ಟಿದ್ದಾನೆ.