Bengaluru: ಬಕ್ರೀದ್‌ ಹಬ್ಬಕ್ಕೆ ಕಾಲೇಜು ಹುಡುಗನ ಬಲಿಕೊಟ್ಟ ದುಷ್ಕರ್ಮಿಗಳು

By Sathish Kumar KHFirst Published Jul 3, 2023, 6:55 PM IST
Highlights

ಬಕ್ರೀದ್ ಹಬ್ಬದ ವೇಳೆ  ಡ್ಯಾನ್ಸ್ ಮಾಡುವ ವಿಚಾರಕ್ಕೆ ಕಿರಿಕ್‌ ಮಾಡಿಕೊಂಡ ಕಾಲೇಜು ಯುವಕನನ್ನು ಮೂರ್ನಾಲ್ಕು ದಿನ ಕಾದಿದ್ದು, ಸೋಮವಾರ ಕಾಲೇಜು ಮುಗಿಸಿಕೊಂಡು ಮನೆಯತ್ತ ಹೊರಟಿದ್ದ ವೇಳೆ ಚಾಕು ಇರಿದು ಕೊಲೆ ಮಾಡಲಾಗಿದೆ. 

ಬೆಂಗಳೂರು (ಜು.03):  ಮೊನ್ನೆ ಮೊನ್ನೆ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾಲೇಜು ವಿದ್ಯಾರ್ಥಿಯ ಮೇಲೆ‌ ಮಾರಕಾಸ್ತ್ರಗಳಿಂದ ಯುವಕರ ಗುಂಪೊಂದು ಹಲ್ಲೆ ಮಾಡಿದ್ರು.  ಆ ಪ್ರಕರಣ ಮಾಸುವ ಮುನ್ನವೇ ಇಂದು ಕಾಲೇಜು ಮುಗಿಸಿಕೊಂಡು ಹೊರ ಬರ್ತಿದ್ದ ವಿದ್ಯಾರ್ಥಿ ಮೇಲೆ ಅಟ್ಯಾಕ್ ಮಾಡಿದ ದುಷ್ಕರ್ಮಿಗಳು, ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಹತ್ಯೆಗೈದು ಎಸ್ಕೇಪ್ ಆಗಿದ್ದಾರೆ.

ಕಳೆದ ಇಪ್ಪತ್ತು ದಿನಗಳ ಹಿಂದೆ ಬೆಂಗಳೂರಿನ ನಾಗರಬಾವಿ ರಿಂಗ್ ರಸ್ತೆಯಲ್ಲಿ ಕಾಲೇಜು ಮುಗಿಸಿ ಮನೆಗೆ ಹೊರಟ್ಟಿದ್ದ ವಿದ್ಯಾರ್ಥಿ ಮೇಲೆ ಯುವಕರ ಗುಂಪೊಂದು ಅಟ್ಯಾಕ್ ಮಾಡಿತ್ತು. ಹೆಲ್ಮೆಟ್ ಧರಿಸಿ ಅಟ್ಯಾಕ್ ಮಾಡಿದ್ದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ‌ ಮಾಡಿ ಎಸ್ಕೇಪ್ ಆಗಿದ್ರು. ಅದೃಷ್ಟವಶಾತ್ ಹಲ್ಲೆಗೊಳಗಾದ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದ. ಆ ಪ್ರಕರಣ ಮಾಸುವ ಮುನ್ನವೇ ಅಂತಹದ್ದೇ ಒಂದ್ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಹಂತಕರು ಇರಿದ ಇರಿತಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಮೃತ ಯುವಕನನ್ನು ಸುಹೇಲ್‌ (17) ಎಂದು ಗುರುತಿಸಲಾಗಿದೆ.

Latest Videos

Bengaluru: ತಾನು ಸಾಕಿದ ನಾಯಿ ಬೆಲ್ಟ್‌ನಿಂದಲೇ ನೇಣು ಬಿಗಿದುಕೊಂಡ ಯುವಕ

ಬೇಕಂತಲೇ ಕಿರಿಕ್‌ ಶುರುಮಾಡಿ ಕೊಲೆ:  ಬಸವೇಶ್ವರನಗರದ ಮಂಜುನಾಥನಗರ ನಿವಾಸಿಯಾದ ಸುಹೇಲ್ ಮನೆ ಸಮೀಪದಲ್ಲೇ ಇರೋ ಗೌತಮ್ ಕಾಲೇಜ್ ನಲ್ಲಿ  ಪ್ರಥಮ ಪಿಯುಸಿ ಓದುತ್ತಿದ್ದ. ಇಂದು ಎಂದಿನಂತೆ ಕಾಲೇಜಿಗೆ ಬಂದಿದ್ದ ಸುಹೇಲ್ ಮಧ್ಯಾಹ್ನ ಎರಡೂವರೆ ಸುಮಾರಿಗೆ ಕಾಲೇಜು ಮುಗಿಸಿಕೊಂಡು ಮನೆಯತ್ತ ಹೊರಟಿದ್ದ. ಆ ವೇಳೆ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಸುಹೇಲ್ ಜೊತೆ ಕಿರಿಕ್ ಶುರುಮಾಡಿ, ಚಾಕುವಿನಿಂದ ಹೊಟ್ಟೆ ಹಾಗೂ ತೊಡೆ ಭಾಗಕ್ಕೆ ಬಲವಾಗಿ ಇರಿದು ಎಸ್ಕೇಪ್ ಆಗಿದ್ದಾರೆ. ಇತ್ತ ಇರಿತಕ್ಕೊಳಗಾದ ಸುಹೇಲ್ ತೀವ್ರ ರಕ್ತಸ್ರಾವಕ್ಕೊಳಗಾಗಿದ್ದು, ಅದನ್ನ ಕಂಡ ಸ್ಥಳೀಯರು ಹಾಗೂ ವಿದ್ಯಾರ್ಥಿಗಳು ಕೂಡ್ಲೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಸುಹೇಲ್‌ ಸಂಜೆ ನಾಲ್ಕು ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾನೆ.

ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ: ಇನ್ನು ಘಟನೆ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಬಸವೇಶ್ವರನಗರ ಪೊಲೀಸ್ರು, ಸ್ಥಳ ಪರಿಶೀಲನೆ ಮಾಡಿದ್ದು, ಬೈಕ್ ಗಳಲ್ಲಿ ಬಂದ ಹಂತಕರ ಬಗ್ಗೆ ಸ್ಥಳೀಯರು ಹಾಗೂ ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಕಲೆ ಹಾಕಿದ್ದಾರೆ. ಉಳಿದಂತೆ ಹಂತರಕರು ವಿದ್ಯಾರ್ಥಿ ಸುಹೇಲ್‌ ಮೇಲೆ ದಾಳಿ‌ಮಾಡಿದ ವಿಡಿಯೋ ಸಹ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಗಂಡ-ಹೆಂಡ್ತಿ ಇಬ್ರೂ ಪೊಲೀಸ್‌: ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಕ್ಕೆ ಬಲಿಯಾದ ಪತಿ

ಬಕ್ರೀದ್‌ ಹಬ್ಬದ ಡ್ಯಾನ್ಸ್‌ ವಿಚಾರಕ್ಕೆ ಕೊಲೆ: ಇನ್ನು ಸುಹೇಲ್ ಹತ್ಯೆಗೆ ಏರಿಯಾದಲ್ಲಿ ನಡೆದಿದ್ದ, ಗಲಾಟೆಯೊಂದು ಕಾರಣ ಅಂತ ಹೇಳಲಾಗ್ತಿದೆ. ಬಕ್ರೀದ್ ಹಬ್ಬದ ಪ್ರಯುಕ್ತ ನಡೆದ ಡ್ಯಾನ್ಸ್ ವೇಳೆ ಕೆಲ ಹುಡುಗರ ಜೊತೆ ಕಿರಿಕ್ ನಡೆದಿತ್ತಂತೆ. ಆ ವಿಚಾರಕ್ಕೆ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ.‌ಸದ್ಯ ಕೊಲೆ ಪ್ರಕರಣ ದಾಖಲಿಸಿಕೊಂಡಿರೋ ಬಸವೇಶ್ವರನಗರ ಪೊಲೀಸ್ರು ಸಿಕ್ಕಿರೋ ಸುಳಿವಿನ ಆಧಾರದ ಮೇಲೆ ಹಂತಕರ ಪತ್ತೆಗೆ ಶೋಧ ನಡೆಸ್ತಿದ್ದಾರೆ.

click me!