ಕೇರಳದ ಯುವತಿ ಗ್ರೀಷ್ಮಾಗೆ ಗಲ್ಲು ಶಿಕ್ಷೆ ಬರೆದ ಬಳಿಕ ಜಡ್ಜ್ ಪೆನ್ನಿನ ನಿಬ್ ಮುರಿದದ್ದೇಕೆ?

Published : Jan 23, 2025, 09:59 PM ISTUpdated : Jan 24, 2025, 04:04 PM IST
 ಕೇರಳದ ಯುವತಿ ಗ್ರೀಷ್ಮಾಗೆ ಗಲ್ಲು ಶಿಕ್ಷೆ ಬರೆದ ಬಳಿಕ ಜಡ್ಜ್ ಪೆನ್ನಿನ ನಿಬ್ ಮುರಿದದ್ದೇಕೆ?

ಸಾರಾಂಶ

ಪ್ರಿಯಕರನಿಗೆ ವಿಷವಿಕ್ಕಿ ಕೊಂದ ಕೇರಳದ 24 ವರ್ಷದ ಯುವತಿ ಗ್ರೀಷ್ಮಾ ಎಂಬಾಕೆಗೆ ನ್ಯಾಯಾಧೀಶರು ಮರಣದಂಡನೆ ವಿಧಿಸಿದರು. ಮಂರಣದಂಡನೆಯ ಶಿಕ್ಷೆ ಬರೆದ ನಂತರ ತಮ್ಮ ಪೆನ್ನಿನ ನಿಬ್‌ ಅನ್ನು ಮುರಿದುಹಾಕಿದರು. ಹೀಗೇಕೆ ಮಾಡುತ್ತಾರೆ?

ಇದೊಂದು ಕುತೂಹಲಕಾರಿ ಸಂಗತಿ. ಭಾರತದಲ್ಲಿ ಯಾರಾದರೂ ನ್ಯಾಯಾಧೀಶರು ಅಪರಾಧಿಗೆ ಮರಣದಂಡನೆ ಶಿಕ್ಷೆ ವಿಧಿಸಿದರೆ ಬಳಿಕ ತಮ್ಮ ಪೆನ್ನಿನ ನಿಬ್ಬನ್ನು ಅಲ್ಲಿಯೇ ಮುರಿದುಹಾಕುತ್ತಾರೆ. ಮೊನ್ನೆ ಹೀಗೇ ಆಯ್ತು. ಕೇರಳದ ಯುವತಿ ಗ್ರೀಷ್ಮಾ ಹಾಗೂ ಆಕೆಯ ಚಿಕ್ಕಪ್ಪನಿಗೆ ನ್ಯಾಯಾಧೀಶರು ಗಲ್ಲು ಶಿಕ್ಷೆ ವಿಧಿಸಿದರು. 2 ವರ್ಷದ ಹಿಂದೆ ಗ್ರೀಷ್ಮಾ ತನ್ನ ಪ್ರಿಯಕರ 23 ವರ್ಷದ ಶರೋನ್‌ ರಾಜ್‌ಗೆ ವಿಷವುಣಿಸಿದ್ದಳು. ಅದಕ್ಕೆ ಕಾರಣ ಇಷ್ಟೆ- ಗ್ರೀಷ್ಮಾ ಮತ್ತು ಶರೋನ್ ರಾಜ್ ಎರಡು ವರ್ಷ ಪರಸ್ಪರ ಪ್ರೀತಿಸಿದ್ದರು. ಆದರೆ ಗ್ರೀಷ್ಮಾಗೆ ತಮಿಳುನಾಡಿನ ಸೇನಾಧಿಕಾರಿಯೊಬ್ಬರ ಜೊತೆ ಮದುವೆ ನಿಶ್ಚಯವಾಗಿದ್ದರಿಂದ ಆಕೆ ರಾಜ್‌ ಜೊತೆ ಸಂಬಂಧವನ್ನು ಕಡಿದುಕೊಳ್ಳಲು ಮುಂದಾಗಿದ್ದಳು. ಆದರೆ ಪ್ರಿಯಕರ ಇದಕ್ಕೆ ಒಪ್ಪದೇ ಇದ್ದಾಗ ಕೊಲೆಗೆ ಸಂಚು ರೂಪಿಸಿದ್ದಳು.

ಶರೋನ್ ರಾಜ್‌ಗೆ ಕಳೆನಾಶಕವನ್ನು ಆಯುರ್ವೇದ ಟಾನಿಕ್‌ಗೆ ಸೇರಿಸಿ ಸೇವಿಸುವಂತೆ ಮಾಡಿದ್ದಳು. ಅದಾದ 11 ದಿನಗಳ ನಂತರ ರಾಜ್ ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದ. ಇದಕ್ಕೂ ಮುನ್ನ ಗ್ರೀಷ್ಮಾ ಒಂದು ಬಾರಿ ಹಣ್ಣಿನ ರಸದಲ್ಲಿ ಪ್ಯಾರಸಿಟಮಾಲ್ ಮಾತ್ರೆಗಳನ್ನು ಬೆರೆಸಿ ರಾಜ್‌ಗೆ ವಿಷ ನೀಡಲು ಪ್ರಯತ್ನಿಸಿದ್ದರು, ಆದರೆ ಅದು ಕಹಿ ಇದ್ದ ಕಾರಣ ರಾಜ್ ಅದನ್ನು ಕುಡಿಯಲು ನಿರಾಕರಿಸಿದ್ದರು ಎಂದು ಆರೋಪಿಸಿದ್ದಾರೆ. ರಾಜ್ ತಿರುವನಂತಪುರಂ ಜಿಲ್ಲೆಯ ಪರಸ್ಸಲ ಮೂಲದವರಾಗಿದ್ದು ಬಿಎಸ್‌ಸಿ ರೇಡಿಯಾಲಜಿ ಓದುತ್ತಿದ್ದರು. ಗ್ರೀಷ್ಮಾ ಜೊತೆಗಿನ ಪ್ರೀತಿ ಆತನ ಜೀವಕ್ಕೆ ಮಾರಕವಾಯಿತು.

ಅದೆಲ್ಲ ಸರಿ, ಆದರೆ ಗಲ್ಲು ಶಿಕ್ಷೆ ಬರೆದ ಬಳಿಕ ಪೆನ್ನಿನ ನಿಬ್‌ ಮುರಿದದ್ದೇಕೆ? ಅದಕ್ಕೆ ಕಾರಣವಿದೆ. ನ್ಯಾಯಾಂಗದಲ್ಲಿ ಎಲ್ಲರೂ ಒಪ್ಪಿಕೊಂಡಿರುವಂತೆ ಇದೊಂದು ಸಾಂಕೇತಿಕ ಕ್ರಿಯೆ. ಅಂದರೆ ಮರಣದಂಡನೆಗೆ ಗುರಿಯಾಗುವಂತಹ ಅಪರಾಧವನ್ನು ಆರೋಪಿ ಮಾಡಿದ್ದು ಸಾಬೀತಾಗಿದ್ದು ಇಂತಹ ಕೃತ್ಯವನ್ನು ಬೇರೆ ಯಾರೂ ನಡೆಸಬಾರದು. ಅಲ್ಲದೇ ಈ ಪೆನ್ನನ್ನು ಮತ್ತೆ ಬಳಸಲು ಸಾಧ್ಯವಾಗಬಾರದು. ಅಂದರೆ ಈ ಕೃತ್ಯ ಮತ್ತೊಮ್ಮೆ ನಡೆಯಬಾರದು ಎಂಬುದೇ ಈ ಸಂಕೇತ. 

ಮರಣದಂಡನೆಯ ತೀರ್ಪು ನೀಡುವ ಕಾಗದಪತ್ರಗಳಿಗೆ ಸಹಿ ಹಾಕುವ ಈ ಪೆನ್ನು ಒಂದು ಜೀವವನ್ನು ಕೊನೆಗೊಳಿಸುವ ಅತಿ ಸೂಕ್ಷ್ಮ ಮತ್ತು ಅನಿವಾರ್ಯವಾದ ಕಾನೂನಿನ ಪಾಲನೆಯ ಪ್ರತ್ಯಕ್ಷ ಪಾಲುದಾರನಾಗಿದ್ದು ಓರ್ವ ವ್ಯಕ್ತಿಯ ಜೀವವನ್ನು ಕಳೆಯುವ 'ಕಳಂಕ' ಹೊತ್ತಿರುತ್ತದೆ. ಅಂತೆಯೇ ಈ ಪೆನ್ನಿಗೆ 'ಕಳಂಕಿತ' ಅಥವಾ "Tainted" ಎಂದು ಕರೆಯುತ್ತಾರೆ. ಇನ್ನೊಂದು ಅರ್ಥದಲ್ಲಿ ಕಳಂಕಿತ ವ್ಯಕ್ತಿಗೆ ಕಳಂಕಿತ ಪೆನ್ನಿನಿಂದ ಶಿಕ್ಷೆ ನೀಡಿ ಈ ಕಳಂಕಗಳನ್ನು ನಿವಾರಿಸುವ ಮೂಲಕ ನ್ಯಾಯಾಧೀಶರು ತಮ್ಮ ಪಾಲಿನ ತೀರ್ಪನ್ನು ಒದಗಿಸುವ ಸಂಕೇತವೂ ಆಗಿದೆ. 

ಮರಣದಂಡನೆಯಂತಹ ತೀರ್ಪನ್ನು ನೀಡಲು ನ್ಯಾಯಾಧೀಶರು ಎಲ್ಲಾ ಸಾಕ್ಷಿಗಳನ್ನು, ವಿವರಗಳನ್ನು, ಆಧಾರಗಳನ್ನು ಅತಿ ಸೂಕ್ಷ್ಮವಾಗಿ ಪರಿಶೀಲಿಸಿ ನ್ಯಾಯಾಂಗದ ಕಾಯ್ದೆಗಳನ್ನು ಸೂಕ್ತವಾಗಿ ಒರೆಹಚ್ಚಿ ಅಂತಿಮವಾಗಿ ತಮ್ಮ ತೀರ್ಮಾನವನ್ನು ಮಂಡಿಸಿರುತ್ತಾರೆ. ಈ ತೀರ್ಮಾನವನ್ನು ನೀಡಿದ ಬಳಿಕ ಬೇರೆ ಯಾರೂ ಇದನ್ನು ಬದಲಿಸದಂತೆ, ಸ್ವತಃ ತೀರ್ಪು ನೀಡಿದ ನ್ಯಾಯಾಧೀಶರೇ ಬದಲಿಸದಂತೆ ತೀರ್ಪಿಗೆ ಸಹಿ ಹಾಕಿದ ಪೆನ್ನಿನ ನಿಬ್ಬನ್ನು ಮುರಿಯಲಾಗುತ್ತದೆ. 

ಮದುವೆ ಮನೆಗೆ ಅತಿಥಿಯಂತೆ ಬಂದು 7 ವರ್ಷದ ಬಾಲಕಿಯನ್ನ ಹೊತ್ತೊಯ್ದ ಪಾತಕಿ!

ಮರಣದಂಡನೆಯಂತಹ ಶಿಕ್ಷೆ ಪಡೆದಿರಬೇಕಾದರೆ ಆರೋಪಿ ನಡೆಸಿದ ಕೃತ್ಯ ಅಕ್ಷಮ್ಯವಾಗಿದ್ದು ಇದನ್ನು ಇನ್ನಾರೂ ಮತ್ತೊಮ್ಮೆ ನಡೆಸದಂತೆ ಸೂಚಿಸಲು ಕೂಡ ನಿಬ್ಬನ್ನು ಮುರಿಯಲಾಗುತ್ತದೆ. ಅಂದರೆ ಈ ಕೃತ್ಯ ಮುಂದೆಂದೂ ಯಾರಿಂದಲೂ ನಡೆಯಬಾರದು ಎಂಬುದೇ ನ್ಯಾಯಾಧೀಶರ ಆಶಯ. ಮರಣದಂಡನೆ ವಿಧಿಸುವುದು ನ್ಯಾಯಾಲಯಕ್ಕೂ ಇಷ್ಟವಿಲ್ಲದ, ಆದರೆ ಕಾನೂನಿಗೆ ತಲೆಬಾಗಬೇಕಾದಾಗ ಅನಿವಾರ್ಯತೆಯ ದುಃಖಕರ ವಿಷಯವಾಗಿದ್ದು ಪೆನ್ನಿನ ನಿಬ್ಬನ್ನು ಮುರಿಯುವ ಮೂಲಕ ಈ ದುಃಖವನ್ನು ತೋರ್ಪಡಿಸುವ ಕ್ರಮವೂ ಆಗಿದೆ.

ಹೆಂಡತಿಯ ಕೊಲೆಗೈದು ದೇಹವನ್ನು ಕತ್ತರಿಸಿ ಕುಕ್ಕರ್‌ನಲ್ಲಿ ಬೇಯಿಸಿದ ಮಾಜಿ ಯೋಧ
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ