ಕಬ್ಬಿನ ಹೊಲದಲ್ಲಿ 3 ವರ್ಷದ ಬಾಲಕಿ ಶವ, ರೇಪ್ ಆಂಡ್ ಮರ್ಡರ್

By Suvarna NewsFirst Published Sep 4, 2020, 4:28 PM IST
Highlights

ಮೂರು ವರ್ಷದ ಬಾಲಕಿ ಅತ್ಯಾಚಾರ-ಕೊಲೆ/ ಉತ್ತರ ಪ್ರದೇಶದಲ್ಲಿ ಮೀತಿಮೀರಿದ ಅಪರಾಧ ಕೃತ್ಯ/ ಕಬ್ಬಿನ ಹೊಲದಲ್ಲಿ ಪತ್ತೆಯಾದ ಬಾಲಕಿ ಶವ/ ತಿಂಗಳ ಅಂತರದಲ್ಲಿ ಮೂರನೇ ಪ್ರಕರಣ

ಲಕ್ನೋ(ಸೆ. 04) ಉತ್ತರ ಪ್ರದೇಶದಲ್ಲಿ ಮಾತ್ರ ಕಾಮಪಿಶಾಚಿಗಳ ಕ್ರೌರ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕಬ್ಬಿನ ಹೊಲದಲ್ಲಿ ಮೂರು ವರ್ಷದ ಬಾಲಕಿಯ ಶವ ಪತ್ತೆಯಾಗಿದೆ. 

ಉತ್ತರ ಪ್ರದೇಶದ ಲಖಿಮ್ ಫುರ್ ಖೇರಿ ಜಿಲ್ಲೆಯಲ್ಲಿ ನಡೆದನ ಘಟನೆ ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿದೆ.  ಬೂದವಾರ ನಾಪತ್ತೆಯಾಗಿದ್ದ ಬಾಲಕಿ ಶವವವಾಗಿ ಪತ್ತೆಯಾಗಿದ್ದಾಳೆ. 

ಲಕೀಮ್ ಪುರ್ ಖೇರಿ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಇದು ರೇಪ್ ಮತ್ತು ಮರ್ಡರ್ ನ ಮೂರನೇ ಪ್ರಕರಣ!  ಹಳೆಯ ದ್ವೇಷ್ದ ಕಾರಣಕ್ಕೆ ಬಾಲಕಿಯನ್ನು ಕಿಡ್ನಾಪ್ ಮಾಡಲಾಗಿದೆ ಎಂದು ಪೋಷಕರು ದೂರಿನಲ್ಲಿ ಹೇಳಿದ್ದಾರೆ. 

ಅತ್ಯಾಚಾರ ಮಾಡಿ ಪ್ರಿಯಕರನಿಗೆ ಪೋಟೋ ಕಳಿಸಿದ ಮಾಜಿ ಯೋಧ

ಮೊದಲಿಗೆ ಇದನ್ನು ಕೊಲೆ ಎಂದು ಭಾವಿಸಲಾಗಿತ್ತಾದರೂ ವೈದ್ಯಕೀಯ ಪರೀಕ್ಷೆ ನಂತರ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂಬುದು ಸಾಬೀತಾಗಿದೆ. 

ಮರಣೋತ್ತರ ಪರೀಕ್ಷೆಯಲ್ಲಿ ಅತ್ಯಾಚಾರ ಎನ್ನುವುದು ಗೊತ್ತಾಗಿದೆ. ನಾವು ಕುಟುಂಬ ಸದಸ್ಯರಿಗೆ ಸಮಾಧಾನ ಹೇಳಿದ್ದೇವೆ. ಏಳು ಜನ ಪೊಲೀಸ್ ಅಧಿಕಾರಿಗಳ ತಂಡ ಆರೋಪಿಗಳ ಮೇಲೆ ಬಲೆ ಬೀಸಿದೆ ಎಂದು ಎಸ್‌ಪಿ ಸತ್ಯೇಂದ್ರ ಕುಮಾರ್ ತಿಳಿಸಿದ್ದಾರೆ.

ಆಗಸ್ಟ್  14 ಇಸಾನಗರದಲ್ಲಿ  13 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿತ್ತು.  ನಂತರ ಆಗಸ್ಟ್  24 ರಂದು ಸ್ಕಾಲರ್ ಶಿಪ್ ಅರ್ಜಿ ತುಂಬಲು ಹೋಗಿದ್ದ 17  ವರ್ಷದ ಬಾಲಿಕಯನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಲಾಗಿತ್ತು.

ಈ ಪ್ರಕರಣ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದ್ದು ವಿರೋಧ ಪಕ್ಷಗಳು ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿವೆ. 

click me!