ನವದೆಹಲಿ(ಸೆ. 03)   ಮಾಜಿ ಯೋಧನೊಬ್ಬ 27  ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.  ಆರೋಪಿಯನ್ನು ಬಂಧಿಸಿದ ನಂತರ 2018 ರ  ಪ್ರಕರಣ ಇದೀಗ ಬೆಳಕಿಗೆ  ಬಂದಿದೆ.

ನಾಗರಿಕ ಸೇವಾ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಯುವತಿ ಮೇಲೆ ಅತ್ಯಾಚಾರ ಮಾಡಿದ್ದು ಅಲ್ಲದೇ ವಿಡಿಯೋ ಮಾಡಿ ಅದನ್ನು ಆಕೆಯನ್ನು ಮದುವೆಯಾಗುವನಿಗೆ ಆರೋಪಿ ಕಳಿಸಿದ್ದ. ಈ ಕಾರಣಕ್ಕೆ ಮದುವೆಯೂ ಮುರಿದು ಬಿದ್ದಿತ್ತು.

ಹಾಸನದಲ್ಲೊಬ್ಬ ಶವ ಸಂಭೋಗಿ

ಆರೋಪಿಯನ್ನು ಸಬರ್ಜಿತ್  ಎಂದು ಗುರುತಿಸಲಾಗಿದೆ. ಮೊಹಾಲಿಯ ಹಸಾನ್‌ಪುರ್ ಹಳ್ಳಿಯ ನಿವಾಸಿ ಮಾಜಿ ಯೋಧ ಅತ್ಯಾಚಾರ ಎಸಗಿದ್ದ. ಚಂಡಿಘಡದಲ್ಲಿ ಯುವತಿ ಟ್ರೇನಿಂಗ್ ಪಡೆದುಕೊಳ್ಳುತ್ತಿದ್ದರು.  ಸೋಶಿಯಲ್ ನೆಟ್ ವರ್ಕಿಂಗ್ ಸೈಟ್ ನಲ್ಲಿ ಮಾಜಿ ಸೈನಿಕ ಕೆಲಸ ಮಾಡುತ್ತಿದ್ದ.

ಯುವತಿಗೆ ಹಣಕಾಸಿನ ಮುಗ್ಗಟ್ಟು ಎದುರಾಗಿ ಆರೋಪಿಯ ಧನ ಸಹಾಯ ಮಾಡುವಂತೆ ಕೇಳಿದ್ದಳು.  ಇದಕ್ಕೆ ಪ್ರತಿಕ್ರಿಯೆ ನೀಡಿದ ಮಾಜಿ ಸೈನಿಕ ಸೆಕ್ಟರ್ 17 ಬಸ್ ನಿಲ್ದಾಣದಲ್ಲಿ ರಲ್ಲಿ ತನ್ನನ್ನು ಮೀಟ್ ಮಾಡುವಂತೆ ಕರೆದಿದ್ದ.  ಯುವತಿ ಮಾತು ನಂಬಿ ಅಲ್ಲಿಗೆ ಹೋದಾಗ ಹೋಟೆಲ್ ಗೆ ಕರೆದುಕೊಂಡು ಹೋಗಿ ಮತ್ತು ಬರುವ ಪಾನೀಯ ಕುಡಿಸಿ ಅತ್ಯಾಚಾರ ಎಸಗಿದ್ದ. ಈ ವೇಳೆ ಪೋಟೋಗಳನ್ನು ತೆಗೆದುಕೊಂಡಿದ್ದ.

ಪೋಟೋ ಇಟ್ಟುಕೊಂಡು ಪದೇ ಪದೇ ಬೆದರಿಕೆ ಹಾಕುತ್ತ ಸಹಕಾರ ನೀಡುವಂತೆ ಬ್ಲಾಕ್ ಮೇಲ್ ಮಾಡಲು ಆರಂಭಿಸಿದ್ದ.  ಇಷ್ಟೆ ಅಲ್ಲದೆ ಯುವತಿಯ ಪ್ರಿಯಕಲರನಿಗೆ ಈ  ಪೋಟೋ ಕಳಿಸಿ ಮದುವೆ ಮುರಿದು ಬೀಳುವಂತೆ ಮಾಡಿದ್ದ.