LIVE NOW
Published : May 31, 2026, 07:03 AM ISTUpdated : May 31, 2026, 11:47 PM IST

IPL 2026 Final RCB vs GT Match Live: IPL Final - ಧೋನಿ, ರೋಹಿತ್‌ ಶರ್ಮ ಮೀರಿ ನಿಂತ ರಜತ್‌ ಪಟೀದಾರ್‌, ದಾಖಲೆಗಳೊಂದಿಗೆ 2ನೇ ಬಾರಿ ಚಾಂಪಿಯನ್‌ ಆದ ಆರ್‌ಸಿಬಿ!

ಸಾರಾಂಶ

19ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಇಂದು ನಿರ್ಣಾಯಕ ಘಟ್ಟಕ್ಕೆ ಬಂದು ನಿಂತಿದೆ. 2026 ಐಪಿಎಲ್ ಫೈನಲ್‌ನಲ್ಲಿಂದು ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವಿಂದು ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯ ವಹಿಸಿದೆ. ಈ ಪಂದ್ಯವು ಭಾರತೀಯ ಕಾಲಮಾನ ಸಂಜೆ 7.30ರಿಂದ ಆರಂಭವಾಗಲಿದ್ದು, ಜಿಯೋ ಹಾಟ್‌ಸ್ಟಾರ್, ಸ್ಟಾರ್‌ ಸ್ಪೋರ್ಟ್ಸ್‌ ವಾಹಿನಿಯಲ್ಲಿ ನೇರ ಪ್ರಸಾರವಾಗಲಿದೆ.

Virat Kohli

11:47 PM (IST) May 31

IPL Final - ಧೋನಿ, ರೋಹಿತ್‌ ಶರ್ಮ ಮೀರಿ ನಿಂತ ರಜತ್‌ ಪಟೀದಾರ್‌, ದಾಖಲೆಗಳೊಂದಿಗೆ 2ನೇ ಬಾರಿ ಚಾಂಪಿಯನ್‌ ಆದ ಆರ್‌ಸಿಬಿ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿದೆ. ಈ ಗೆಲುವಿನೊಂದಿಗೆ, ನಾಯಕ ರಜತ್ ಪಟೀದಾರ್ ಮತ್ತು ವಿರಾಟ್ ಕೊಹ್ಲಿ ಸೇರಿದಂತೆ ತಂಡವು ಹಲವು ಹೊಸ ದಾಖಲೆಗಳನ್ನು ತಮ್ಮದಾಗಿಸಿಕೊಂಡಿದೆ.
Read Full Story

11:27 PM (IST) May 31

Breaking - ಇತಿಹಾಸ ಸೃಷ್ಟಿಸಿದ ರಾಯಲ್ ಚಾಲೆಂಜರ್ಸ್ - ಈ ಸಲನೂ ಕಪ್ ನಮ್ದೆ ಎಂದ RCB; ಸತತ 2ನೇ ಬಾರಿ ಬೆಂಗ್ಳೂರಿಗೆ ಐಪಿಎಲ್ ಟ್ರೋಫಿ

2026ರ ಐಪಿಎಲ್‌ ಫೈನಲ್‌ನಲ್ಲಿ ಗುಜರಾತ್‌ ಟೈಟಾನ್ಸ್‌ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿದ ಆರ್‌ಸಿಬಿ, ಸತತ ಎರಡನೇ ಬಾರಿಗೆ ಚಾಂಪಿಯನ್‌ ಪಟ್ಟ ಅಲಂಕರಿಸಿದೆ. ವಿರಾಟ್‌ ಕೊಹ್ಲಿಯವರ ಸ್ಮರಣೀಯ ಅರ್ಧಶತಕ ಹಾಗೂ ಬೌಲರ್‌ಗಳ ಶಿಸ್ತಿನ ದಾಳಿಯು ಆರ್‌ಸಿಬಿಯ ಈ ಐತಿಹಾಸಿಕ ಗೆಲುವಿಗೆ ಕಾರಣವಾಯಿತು.
Read Full Story

09:37 PM (IST) May 31

ಸತತ 2ನೇ ಐಪಿಎಲ್ ಟ್ರೋಫಿ ಮೇಲೆ ಆರ್‌ಸಿಬಿ ಕಣ್ಣು - 155 ರನ್‌ಗೆ ಟೈಟಾನ್ಸ್‌ ಕಟ್ಟಿಹಾಕಿದ ಬೆಂಗಳೂರು ಬೌಲರ್ಸ್!

IPL ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವು ಆರ್‌ಸಿಬಿ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ 8 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿದೆ. ವಾಷಿಂಗ್ಟನ್ ಸುಂದರ್ ಅವರ ಅರ್ಧಶತಕದ ನೆರವಿನಿಂದ ಗುಜರಾತ್ ಸ್ಪರ್ಧಾತ್ಮಕ ಮೊತ್ತ ಪೇರಿಸಿದರೆ, ಆರ್‌ಸಿಬಿ ಪರ ರಸಿಖ್ ಸಲಾಮ್ ದಾರ್ 3 ವಿಕೆಟ್ ಪಡೆದು ಮಿಂಚಿದರು.

Read Full Story

09:27 PM (IST) May 31

IPL 2026 Winner Money - ಐಪಿಎಲ್‌ನಲ್ಲಿ ಟ್ರೋಫಿ ಪಡೆದವ್ರಿಗೆ, ಉಳಿದವ್ರಿಗೆ ಸಿಗಲಿದೆ ಭರ್ಜರಿ ಹಣ! ಎಷ್ಟು?

IPL 2026 Winner: ಅಹಮದಾಬಾದ್‌ನಲ್ಲಿ ಗುಜರಾತ್‌ ಟೈಟನ್ಸ್‌, ಆರ್‌ಸಿಬಿ ನಡುವೆ ಮ್ಯಾಚ್‌ ನಡೆಯಲಿದೆ. ಗೆದ್ದವರಿಗೆ ಏನು ಸಿಗಲಿದೆ? ಇಂಡಿಯನ್ ಪ್ರೀಮಿಯರ್ ಲೀಗ್ (IPL) ಪ್ರೈಜ್‌ ಮನಿ ಕೂಡ ಹೆಚ್ಚಾಗಿದೆ. ಈ ಬಾರಿ ಟ್ರೋಫಿ ಗೆದ್ದವರಿಗೆ, ರನ್ನರ್‌ ಅಪ್, ಉಳಿದವರಿಗೆ ಎಷ್ಟು ಪ್ರೈಜ್‌ ಸಿಗುತ್ತೆ?

Read Full Story

08:58 PM (IST) May 31

ಗುಜರಾತ್ ಟೈಟಾನ್ಸ್ ತವರಾದ್ರೂ ಸ್ಡೇಡಿಯಂನಲ್ಲಿ ಫುಲ್ ಆರ್‌ಸಿಬಿ ಫ್ಯಾನ್ಸ್, ಹುಡುಕಿದ್ರೂ ಕಾಣ್ತಿಲ್ಲ ಜಿಟಿ ಜರ್ಸಿ

ಐಪಿಎಲ್ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ವಿಕೆಟ್ ವಿಕೆಟ್ ಕಬಳಿಸಿ ಮೇಲುಗೈ ಸಾಧಿಸಿದೆ. ಇತ್ತ ಕ್ರೀಡಾಂಗಣ ಗುಜರಾತ್ ಟೈಟಾನ್ಸ್ ತವರಾಗಿದ್ದರೂ ಕ್ರೀಡಾಂಗಣಧಲ್ಲಿ ಸಂಪೂರ್ಣ ಆರ್‌ಸಿಬಿ ಫ್ಯಾನ್ಸ್ ತುಂಬಿದ್ದಾರೆ. ಇಲ್ಲಿದೆ ವಿಡಿಯೋ

Read Full Story

08:15 PM (IST) May 31

ಮೋದಿ ಕೋಟೆಯಲ್ಲೇ ರಾರಾಜಿಸಿತು ಹೊಸ ಪಾರ್ಟಿ KJP - ಅಹಮದಾಬಾದ್ ಸ್ಟೇಡಿಯಂನಲ್ಲಿ ಗಮನ ಸೆಳೆದ RCB ಫ್ಯಾನ್ ಬ್ಯಾನರ್!

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ ಫೈನಲ್ ಪಂದ್ಯದಲ್ಲಿ, ಆರ್‌ಸಿಬಿ ಅಭಿಮಾನಿಯೊಬ್ಬರು ಹಿಡಿದ 'ಕೊಹ್ಲಿ ಜನತಾ ಪಾರ್ಟಿ' (KJP) ಬ್ಯಾನರ್ ವೈರಲ್ ಆಗಿದೆ. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಆರ್‌ಸಿಬಿ, ಗುಜರಾತ್ ಟೈಟಾನ್ಸ್ ವಿರುದ್ಧ ಆರಂಭಿಕ ಯಶಸ್ಸು ಸಾಧಿಸಿದೆ.
Read Full Story

07:17 PM (IST) May 31

ಐಪಿಎಲ್ ಫೈನಲ್‌ಗೂ ಮುನ್ನ ಅಹಮ್ಮದಾಬಾದ್‌ನಲ್ಲಿ ಯೆಲ್ಲೋ ಅಲರ್ಟ್ ಘೋಷಣೆ, ಅಡ್ಡಿಯಾಗುತ್ತಾ ಮಳೆ?

ಐಪಿಎಲ್ ಫೈನಲ್ ಪಂದ್ಯಕ್ಕೆ ಕೆಲವೇ ಕ್ಷಣಗಳು ಬಾಕಿ. ಈಗಾಗಲೇ ಟಾಸ್ ಗೆದ್ದ ಆರ್‌ಸಿಬಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಆದರೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದ್ದು, ಆತಂಕ ಎದುರಾಗಿದೆ.

 

Read Full Story

07:08 PM (IST) May 31

Breaking - ಫೈನಲ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದ RCB, ಟೀಮ್‌ನಲ್ಲಿ ಬದಲಾವಣೆ ಆಗಿದ್ಯಾ?

ಐಪಿಎಲ್ ಫೈನಲ್‌ನಲ್ಲಿ ಆರ್‌ಸಿಬಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದೆ. ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಪಿಚ್, ಗುಜರಾತ್ ತಂಡದ ಪ್ರಯಾಣದ ಆಯಾಸ ಮತ್ತು ಅಭಿಮಾನಿಗಳ ಬೃಹತ್ ಬೆಂಬಲ ಆರ್‌ಸಿಬಿಗೆ ಮಾನಸಿಕ ಬಲ ತಂದಿದೆ. 

Read Full Story

06:04 PM (IST) May 31

Vaibhav Suryavanshi... ಸಿಕ್ಸ್‌ ಮಳೆ ಸುರಿಸೋದು ಓಕೆ! ಹುಡುಗಿಯರಿಗೆ ಹೀಗೆ ಮಾಡೋದು ನಾಟ್‌ ಓಕೆ ಬೇಬಿ!

Vaibhav Suryavanshi Instagram: ಈಗ IPL ಮ್ಯಾಚ್‌ ನಡೆಯುತ್ತಿದೆ. ಸದ್ಯ ಕ್ರಿಕೆಟ್‌ ಲೋಕದಲ್ಲಿ 15 ವರ್ಷದ ವೈಭವ್‌ ಸೂರ್ಯವಂಶಿ ಹೆಸರು ಭಾರೀ ಸೌಂಡ್‌ ಮಾಡ್ತಿದೆ. ಜಸ್ಪ್ರೀತ್‌ ಬೂಮ್ರಾ ಬೌಲಿಂಗ್‌ ಹಾಕಿದರೂ, ಈ ಹುಡುಗ ಸಿಕ್ಸ್‌ ಬಾರಿಸಿಯೇ ಬಾರಿಸುತ್ತಾನೆ. ಈಗ ಇವನ ಒಂದು ನಡೆ ಚರ್ಚೆ ಹುಟ್ಟು ಹಾಕಿದೆ.

 

Read Full Story

05:03 PM (IST) May 31

RCB ಅಂದ್ರೆ ಬರೀ ಟೀಮ್ ಅಲ್ಲ, ಅದು ಎಮೋಷನ್ - ವೈರಲ್ ಆಯ್ತು ಬೆಂಗಳೂರು ಹುಡುಗಿಯ ‘RCB ಥೀಮ್’ ಸೀರೆ-ಬ್ಲೌಸ್ ಕ್ರೇಜ್!

RCB ತಂಡದ ಮೇಲಿನ ತಮ್ಮ ಅಭಿಮಾನವನ್ನು ವಿಶಿಷ್ಟವಾಗಿ ಪ್ರದರ್ಶಿಸಿದ್ದಾರೆ. ಅವರು ಧರಿಸಿರುವ ಕಸ್ಟಮೈಸ್ಡ್ ರೇಷ್ಮೆ ಸೀರೆ ಮತ್ತು ಬ್ಲೌಸ್ ವೈರಲ್ ಆಗಿದ್ದು, ಬ್ಲೌಸ್‌ನ ಹಿಂಭಾಗದಲ್ಲಿ ಕರ್ನಾಟಕ ನಕ್ಷೆಯೊಳಗೆ ಐಪಿಎಲ್ ಟ್ರೋಫಿ ಮತ್ತು ತೋಳಿನ ಮೇಲೆ ಕೊಹ್ಲಿಯ ಜರ್ಸಿ ಸಂಖ್ಯೆಯನ್ನು ಕಸೂತಿ ಮಾಡಲಾಗಿದೆ. 

Read Full Story

04:26 PM (IST) May 31

IPL 2026 ಫೈನಲ್‌ಗೆ ಮಳೆಯಿಂದ ಪಂದ್ಯ ರದ್ದಾದ್ರೆ ಕಪ್ ಯಾರಿಗೆ? ಆರ್‌ಸಿಬಿ vs ಗುಜರಾತ್ ಪಂದ್ಯದ ರೂಲ್ಸ್ ಏನು?

ಐಪಿಎಲ್ 2026ರ ಫೈನಲ್‌ನಲ್ಲಿ ಆರ್‌ಸಿಬಿ ಮತ್ತು ಗುಜರಾತ್ ಟೈಟನ್ಸ್ ಸೆಣಸುತ್ತಿವೆ. ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಆತಂಕವಿದ್ದರೂ, ಮೀಸಲು ದಿನದ ವ್ಯವಸ್ಥೆ ಇದೆ. ಒಂದು ವೇಳೆ ಎರಡೂ ದಿನ ಆಟ ರದ್ದಾದರೆ, ಲೀಗ್ ಹಂತದ ಪ್ರದರ್ಶನದ ಆಧಾರದ ಮೇಲೆ ಆರ್‌ಸಿಬಿ ಚಾಂಪಿಯನ್ ಆಗಲಿದೆ.
Read Full Story

04:17 PM (IST) May 31

ಆರ್‌ಸಿಬಿ vs ಗುಜರಾತ್ ಐಪಿಎಲ್ ಫೈನಲ್ ಜೊತೆಗೆ ಮ್ಯಾನ್ ಆಪ್ ದಿ ಮ್ಯಾಚ್ ಭವಿಷ್ಯ ನುಡಿದ ಎಬಿಡಿ

ಐಪಿಎಲ್ ಫೈನಲ್ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂದು ಕೆಲವರು ಭವಿಷ್ಯ ನುಡಿದರೆ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಮೂರು ಭವಿಷ್ಯ ನುಡಿದಿದ್ದಾರೆ. ವಿಶೇಷ ಅಂದರೆ ಮ್ಯಾನ್ ಆಪ್ ದಿ ಮ್ಯಾಚ್ ಯಾರು ಅನ್ನೋದು ಹೇಳಿದ್ದಾರೆ.

 

Read Full Story

03:49 PM (IST) May 31

IPL ಫೈನಲ್‌ಗೂ ಮುನ್ನ ಹಾಲಿ ಚಾಂಪಿಯನ್‌ RCB ತಂಡಕ್ಕೆ ಶುಭಕೋರಿದ ಭಾವಿ ಸಿಎಂ ಡಿಕೆ ಶಿವಕುಮಾರ್!

ಬೆಂಗಳೂರು: 2026ರ ಐಪಿಎಲ್ ಟೂರ್ನಿಯ ಫೈನಲ್‌ ಪಂದ್ಯದಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಕರ್ನಾಟಕದ ಭಾವಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಮ್ಮ ಬೆಂಗಳೂರು ತಂಡಕ್ಕೆ ಶುಭಹಾರೈಸಿದ್ದಾರೆ.

Read Full Story

03:19 PM (IST) May 31

IPL Final ಆರ್‌ಸಿಬಿ ಗುಜರಾತ್ ಹೋರಾಟದಲ್ಲಿ ಗೆಲ್ಲೋದು ಯಾರು? ಗಿಣಿ ನುಡಿದ ಭವಿಷ್ಯ

ಐಪಿಎಲ್ ಪೈನಲ್ ಪಂದ್ಯ ಇನ್ನುಕೆಲವೆ ಗಂಟೆಗಳಲ್ಲಿ ಆರಂಭಗೊಳ್ಳಲಿದೆ. ಈ ಬಾರಿ ಟ್ರೋಫಿ ಗೆಲ್ಲೋದು ಯಾರು ಎಂದು ಹಲವರು ಭವಿಷ್ಯ ನುಡಿದಿದ್ದಾರೆ. ಇದೀಗ ಗಿಣಿ ಶಾಸ್ತ್ರದ ಮೂಲಕ ವಿನ್ನರ್ ತಿಳಿದುಕೊಳ್ಳುವ ಪ್ರಯತ್ನ ಮಾಡಲಾಗಿದೆ.

Read Full Story

03:07 PM (IST) May 31

ಅವನು 3 ಓವರ್ ಬೌಲ್ ಮಾಡಿದ್ರೆ RCB ಕಥೆ ಮುಗೀತು; ಫೈನಲ್‌ಗೂ ಮುನ್ನ ಬೆಂಗಳೂರು ಆಟಗಾರನನ್ನೇ ಗೇಲಿ ಮಾಡಿದ ಕೃಷ್ಣಮಾಚಾರಿ ಶ್ರೀಕಾಂತ್!

ಐಪಿಎಲ್ ಫೈನಲ್ ಪಂದ್ಯಕ್ಕೂ ಮುನ್ನ, ಟೀಂ ಇಂಡಿಯಾದ ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್, ಆರ್‌ಸಿಬಿ ತಂಡಕ್ಕೆ ರೊಮಾರಿಯೋ ಶೆಪರ್ಡ್ ಅವರನ್ನು ಆಡಿಸದಂತೆ ಗಂಭೀರ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಗುಜರಾತ್ ಟೈಟಾನ್ಸ್ ಗೆಲ್ಲಬೇಕಾದರೆ ಆರ್‌ಸಿಬಿಯ ಅಗ್ರ ಕ್ರಮಾಂಕವನ್ನು ಬೇಗನೆ ಔಟ್ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
Read Full Story

01:15 PM (IST) May 31

RCB ಫೈನಲ್​ಗೆ ಬರಲು ಗೇಟ್​ ನಂಬರ್​ 5 ಕಾರಣ - ಕಪ್​ ಈ ಬಾರಿ ಯಾರದ್ದು? ರೋಚಕ ಭವಿಷ್ಯ ಇಲ್ಲಿದೆ

ಇಂದು ನಡೆಯಲಿರುವ ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಫೈನಲ್ ಪಂದ್ಯದ ಕುರಿತು ಖ್ಯಾತ ಸಂಖ್ಯಾಶಾಸ್ತ್ರಜ್ಞರೊಬ್ಬರು ಭವಿಷ್ಯ ನುಡಿದಿದ್ದಾರೆ. ಆರ್‌ಸಿಬಿಯ ಗೆಲುವಿಗೆ '5'ನೇ ಸಂಖ್ಯೆ ಕಾರಣವಾಗಲಿದೆ ಎಂದಿರುವ ಅವರು, ಈ ಬಾರಿಯ ದಿನಾಂಕ ಮತ್ತು ವರ್ಷದ ಲೆಕ್ಕಾಚಾರದ ಪ್ರಕಾರ ಭವಿಷ್ಯ ನುಡಿದಿದ್ದಾರೆ.

Read Full Story

12:25 PM (IST) May 31

IPL 2026 - ಫೈನಲ್‌ನಲ್ಲಿ ಬದಲಾಗುತ್ತಾ ಆರ್‌ಸಿಬಿ ಆಡುವ ಹನ್ನೊಂದರ ಬಳಗ? ಇಲ್ಲಿದೆ ನೋಡಿ ಬಲಿಷ್ಠ ಬೆಂಗಳೂರು ತಂಡ

ಅಹಮದಾಬಾದ್: ರಜತ್ ಪಾಟೀದಾರ್ ನೇತೃತ್ವದ RCB ತಂಡವು ಸತತ ಎರಡನೇ ಐಪಿಎಲ್ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಇದೀಗ ಇಂದು ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಾಜಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ತಂಡದ ಆಡುವ ಹನ್ನೊಂದರ ಬಳಗ ಹೇಗಿರಲಿದೆ ನೋಡೋಣ.

 

Read Full Story

11:34 AM (IST) May 31

IPL 2026 Final - ಫಿಲ್ ಸಾಲ್ಟ್ RCB ತಂಡದೊಳಗೆ ಬಂದ್ರೆ ಹೊರಗೆ ಉಳಿಯೋರು ಯಾರು?

2026ರ ಐಪಿಎಲ್ ಫೈನಲ್‌ನಲ್ಲಿ ರಜತ್ ಪಾಟೀದಾರ್ ನೇತೃತ್ವದ ಆರ್‌ಸಿಬಿ, ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಈ ಮಹತ್ವದ ಪಂದ್ಯಕ್ಕಾಗಿ ಆರ್‌ಸಿಬಿ ರಣತಂತ್ರ ರೂಪಿಸಿದ್ದು, ಗಾಯದಿಂದ ಚೇತರಿಸಿಕೊಂಡಿರುವ ಫಿಲ್ ಸಾಲ್ಟ್ ತಂಡಕ್ಕೆ ಮರಳುವ ಸಾಧ್ಯತೆಯಿದೆ. ಸಾಲ್ಟ್ ಆಡಿದರೆ ತಂಡದಿಂದ ಯಾರು ಹೊರಗುಳಿಯುತ್ತಾರೆ ಎಂಬ ಚರ್ಚೆ ಜೋರಾಗಿದೆ.
Read Full Story

10:49 AM (IST) May 31

ಐಪಿಎಲ್ ಫೈನಲ್ ಚಾಂಪಿಯನ್ಸ್ ಯಾರು? ವಿರೇಂದ್ರ ಸೆಹ್ವಾಗ್ ಆಯ್ಕೆ ಮಾಡಿದ ತಂಡ ಇದೇ!

ಬೆಂಗಳೂರು: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಹೀಗಾಗಿರುವಾಗಲೇ ಈ ಬಾರಿಯ ಚಾಂಪಿಯನ್ ಯಾರಾಗಬಹುದು ಎನ್ನುವ ಪ್ರಶ್ನೆಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಕಾರಣ ನೀಡಿ ಅಚ್ಚರಿ ಭವಿಷ್ಯ ನುಡಿದಿದ್ದಾರೆ. ವೀರೂ ಏನಂದ್ರು? ನೀವೇ ನೋಡಿ.

Read Full Story

10:04 AM (IST) May 31

RCB vs GT - ಹಲವು ಇತಿಹಾಸಗಳಿಗೆ ಸಾಕ್ಷಿಯಾಗಲಿದೆ ಇಂದಿನ ಐಪಿಎಲ್ 2026 ಫೈನಲ್‌..!

19ನೇ ಆವೃತ್ತಿಯ ಐಪಿಎಲ್ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮಾಜಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡಗಳು ಅಹಮದಾಬಾದ್‌ನಲ್ಲಿ ಸೆಣಸಲಿವೆ. ಈ ಹಿಂದೆ ತವರಿನಲ್ಲಿ ಗೆದ್ದಿರುವ ಗುಜರಾತ್ ಆತ್ಮವಿಶ್ವಾಸದಲ್ಲಿದ್ದರೆ, ಸತತ ಎರಡನೇ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸುವ ತವಕದಲ್ಲಿ ಆರ್‌ಸಿಬಿ ಇದೆ.
Read Full Story

More Trending News