
ಜೋಹಾನ್ಸ್‌ಬರ್ಗ್(ಅ.27): ಭಾರತ ವಿರುದ್ದದ ಟೆಸ್ಟ್ ಸರಣಿ ಕೈಚೆಲ್ಲಿದ ಸೌತ್ ಆಫ್ರಿಕಾ ನಾಯಕ ಫಾಫ್ ಡುಪ್ಲೆಸಿಸ್ ವಿರುದ್ದ ಟೀಕೆಗಳು ಕೇಳಿ ಬರುತ್ತಿದೆ. ನಾಯಕತ್ವದ ಬದಲಾವಣೆಗೂ ಒತ್ತಡ ಬೀಳುತ್ತಿದೆ. ಇದರ ಬೆನ್ನಲ್ಲೇ ಫಾಫ್ ಡುಪ್ಲೆಸಿಸ್, ಭಾರತ ವಿರುದ್ದದ ಸೋಲಿಗೆ ಟಾಸ್ ಕಾರಣ, ಟೆಸ್ಟ್ ಪಂದ್ಯದಲ್ಲಿ ಟಾಸ್ ಇಲ್ಲದಿದ್ದರೆ ನಾವು ಗೆಲ್ಲುತ್ತಿದ್ದೇವು ಎಂದಿದ್ದಾರೆ. ಇದಕ್ಕೆ ಕ್ರಿಕೆಟ್ ಅಭಿಮಾನಿಗಳು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಹರಿಣಗಳ ಶಿಕಾರಿ: ಟೀಂ ಇಂಡಿಯಾಗೆ ಜೈ ಹೋ ಎಂದ ಕ್ರಿಕೆಟ್ ಲವರ್ಸ್!
ಭಾರತ ವಿರುದ್ದದ ಟೆಸ್ಟ್ ಸರಣಿಯನ್ನು 0-3 ಅಂತರಿಂದ ಸೋಲು ಕಂಡಿದೆ. ಸೋಲಿನ ಕುರಿತು ಮಾತನಾಡಿದ ಡುಪ್ಲೆಸಿಸ್, ಭಾರತ ವಿರುದ್ದವೂ ಟಾಸ್ ಗೆಲ್ಲಲು ವಿಫಲನಾದೆ. ಪ್ರವಾಸಿ ತಂಡಕ್ಕೆ ಟಾಸ್ ಇಲ್ಲದಿದ್ದರೆ, ದಿಟ್ಟ ಹೋರಾಟ ನೀಡಲು ಸಾಧ್ಯ ಎಂದಿದ್ದಾರೆ. ಸೋಲನ್ನು ಸ್ವೀಕರಿಸಿದ ನಾಯಕನಿಂದ ಮಾತ್ರ ಇಂತಹ ಹೇಳಿಕೆ ಬರಲು ಸಾಧ್ಯ. ಡುಪ್ಲೆಸಿಸ್‌ಗೆ ತಿರುಗೇಟು ನೀಡಲು ಮನಸ್ಸಾಗುತ್ತಿದೆ. ಆದರೆ ನಾನು ಸಿಎಸ್‌ಕೆ ಅಭಿಮಾನಿ ಹೀಗಾಗಿ ಸುಮ್ಮನಿದ್ದೇನೆ ಎಂದು ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.