ದುಬೈನಿಂದ ಚಿನ್ನ ಕಳ್ಳ ಸಾಗಣೆ ವೇಳೆ ಸಿಕ್ಕಿಬಿದ್ದಿರುವ ನಟಿ ರನ್ಯಾ ರಾವ್ ಅಕ್ರಮವಾಗಿ ಗಳಿಸಿದ ಹಣವನ್ನು ಸಕ್ರಮಗೊಳಿಸಲು ನಗರದಲ್ಲಿ ತನ್ನ ಒಡೆತನದ ಕಂಪನಿಗಳನ್ನೇ ಬಳಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ರನ್ಯಾ ಒಡೆತನದ ಕಂಪನಿಗಳ ಹಣಕಾಸು ವಹಿವಾಟು ಬಗ್ಗೆ ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆ. ಆರೋಪಿ ರನ್ಯಾ ರಾವ್ ‘ವೈರಾ ಡೈಮಂಡ್ಸ್ ಟ್ರೇಡಿಂಗ್’ ಹೆಸರಿನಲ್ಲಿ ಅಧಿಕೃತವಾಗಿ ದುಬೈನಲ್ಲಿ ಕಂಪನಿ ತೆರೆದಿರುವುದು ಇ.ಡಿ ಅಧಿಕಾರಿಗಳ ತನಿಖೆಯಲ್ಲಿ ಬೆಳಕಿಗೆ ಬಂದಿದೆ. 2023ರಲ್ಲಿ ದುಬೈನಲ್ಲಿ ‘ವೈರಾ ಡೈಮಂಡ್ಸ್ ಟ್ರೇಡಿಂಗ್’ ಹೆಸರಿನಲ್ಲಿ ಕಂಪನಿ ತೆರೆದು ಆ ಕಂಪನಿಯನ್ನು ನೋಂದಣಿ ಸಹ ಮಾಡಿದ್ದಾರೆ. ಈ ಕಂಪನಿ ನೋಂದಣಿಯ ದಾಖಲೆಗಳನ್ನೂ ಸಂಗ್ರಹಿಸಿರುವ ಇ.ಡಿ ಅಧಿಕಾರಿಗಳು ಕಂಪನಿಯ ಹಣಕಾಸು ವಹಿವಾಟಿನ ಬಗ್ಗೆಯೂ ಶೋಧಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರನ್ಯಾ ರಾವ್ 2022ರಲ್ಲಿ ಬೆಂಗಳೂರಿನಲ್ಲಿ ‘ಬಯೋ ಎನ್ಝೋ ಇಂಡಿಯಾ ಪ್ರೈವೇಟ್ ಲಿಮಿಟೆಡ್’ ಕಂಪನಿ ತೆರೆದಿದ್ದರು. ಬಳಿಕ ಆ ಕಂಪನಿಯ ಹೆಸರನ್ನು ‘ಕ್ಸಿರೋದಾ ಇಂಡಿಯಾ ಪ್ರೈವೇಟ್ ಲಿಮಿಟೆಡ್’ ಎಂದು ಬದಲಿಸಿದ್ದರು. ಈ ಕಂಪನಿ ಖಾತೆಗೆ ಸಹಕಾರಿ ಬ್ಯಾಂಕ್‌ವೊಂದರಿಂದ 10 ಲಕ್ಷ ರು. ವರ್ಗಾವಣೆಯಾಗಿದೆ. ಇದಕ್ಕೂ ಮುನ್ನ ರನ್ಯಾ ವೈಲ್ಡ್‌ಲೈಫ್ ಹೆಸರಿನಲ್ಲಿ ಕಂಪನಿಯೊಂದನ್ನು ಆರಂಭಿಸಿದ್ದರು. ಈ ಕಂಪನಿಗಳ ಮುಖಾಂತರ ರನ್ಯಾ ಅನಧಿಕೃತ ಹಣ ಸಕ್ರಮಗೊಳಿಸಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಇ.ಡಿ ಅಧಿಕಾರಿಗಳು ಈ ಕಂಪನಿಗಳ ಹಣಕಾಸು ವ್ಯವಹಾರದ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಮತ್ತೊಂದೆಡೆ ನಟಿ ರನ್ಯಾ ರಾವ್ ಚಿನ್ನ ಸ್ಮಗ್ಲಿಂಗ್ ಪ್ರಕರಣದಲ್ಲಿ ರಾಜ್ಯದ ಇಬ್ಬರು ಸಚಿವರು ಭಾಗಿಯಾಗಿದ್ದಾರೆ. ಅವರು ಯಾರು ಎನ್ನುವುದು ನನಗೆ ಗೊತ್ತಿದೆ. ವಿಧಾನಸಭೆಯ ಅಧಿವೇಶನದಲ್ಲಿ ಆ ಸಚಿವರ ಹೆಸರನ್ನು ಪ್ರಸ್ತಾಪಿಸುವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ರನ್ಯಾ ಜೊತೆಗೆ ಸಂಬಂಧ ಹೊಂದಿದವರು, ಆಕೆಗೆ ಪ್ರೋಟೋಕಾಲ್ ಕೊಟ್ಟವರ ಮಾಹಿತಿ ಸಂಗ್ರಹ ಮಾಡಿದ್ದೇವೆ. ಚಿನ್ನವನ್ನು ತಂದಿದ್ದು ಎಲ್ಲಿಂದ? ಎಂಬುದೂ ನನಗೆ ಗೊತ್ತಿದೆ ಎಂದರು. ರನ್ಯಾ ಪ್ರಕರಣದಲ್ಲಿ ಕೇಂದ್ರದವರ ತಪ್ಪೂ ಇದೆ ಎಂಬ ಸಚಿವ ಸಂತೋಷ್ ಲಾಡ್ ಆರೋಪ ಕುರಿತು ಪ್ರತಿಕ್ರಿಯಿಸಿ, ಯಾರು ತಪ್ಪು ಮಾಡಿದರೂ ಅದು ತಪ್ಪೇ. ನಾವು ಬಿಜೆಪಿಯವರು ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ಕೇಂದ್ರದ ಅಧಿಕಾರಿಗಳ ತಪ್ಪಿದ್ದರೂ ತಪ್ಪೆ. ಆದರೆ, ನಮ್ಮ ಕೇಂದ್ರದ ಯಾವ ಸಚಿವರೂ ಇದರಲ್ಲಿ ಭಾಗಿಯಾಗಿಲ್ಲ ಎಂದರು.
09:27 PM (IST) Mar 17
ಆಮಿರ್ ಖಾನ್ ಹೊಸ ಗೆಳತಿಯ ಬಗ್ಗೆ ಹೇಳಿದ ನಂತರ ಇರಾ ಗಂಭೀರವಾಗಿ ಕಾಣಿಸಿಕೊಂಡಿದ್ದಾರೆ. ಆಮಿರ್ ಖಾನ್ ಮತ್ತು ಇರಾ ಒಟ್ಟಿಗೆ ಕಾಣಿಸಿಕೊಂಡಾಗ ಇರಾ ಶಾಕ್ ಆದಂತೆ ಕಂಡುಬಂದರು. ಆಮಿರ್ ಖಾನ್ ಮಗಳಿಗೆ ಸಮಾಧಾನ ಮಾಡುತ್ತಿರುವಂತೆ ಕಾಣುತ್ತಿತ್ತು.
ಪೂರ್ತಿ ಓದಿ07:58 PM (IST) Mar 17
ಈ ಹಿಂದೆ ಬಿಡುಗಡೆಯಾಗಿ ಸೂಪರ್ ಹಿಟ್ ಎನಿಸಿಕೊಂಡಿದ್ದ ಚಿತ್ರಗಳು, ಈಗ ಹೊಸ ತಲೆಮಾರಿನ ಪ್ರೇಕ್ಷಕರಿಗೆ ಪರಿಚಯವಾಗುತ್ತಿವೆ. ಅಲ್ಲದೆ, ಹಳೆಯ ನೆನಪುಗಳನ್ನು ಮೆಲುಕು ಹಾಕಲು ಹಿರಿಯ ಪ್ರೇಕ್ಷಕರಿಗೆ ಇದು ಸುವರ್ಣಾವಕಾಶ. ಇದರಿಂದಾಗಿ..
ಪೂರ್ತಿ ಓದಿ07:28 PM (IST) Mar 17
ಕಳೆದ ಕೆಲವು ತಿಂಗಳುಗಳಲ್ಲಿ, ಹಲವು ಕ್ಲಾಸಿಕ್ ಚಿತ್ರಗಳು ಡಿಜಿಟಲ್ ಮಾದರಿಯಲ್ಲಿ ನವೀಕರಿಸಲ್ಪಟ್ಟು ಮತ್ತೆ ಬಿಡುಗಡೆಯಾಗಿವೆ. ಪ್ರೇಕ್ಷಕರು, ಅದರಲ್ಲೂ ಹಳೆಯ ಚಿತ್ರಗಳನ್ನು ಮೆಚ್ಚುವವರು, ಈ ಪ್ರಯತ್ನವನ್ನು ಕೈಮುಗಿದು ಸ್ವಾಗತಿಸಿದ್ದಾರೆ. ಈ ಚಿತ್ರಗಳು..
ಪೂರ್ತಿ ಓದಿ07:15 PM (IST) Mar 17
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ, ಜಯಂತ್‌ನನ್ನು ಜಾನು ನಿಯಂತ್ರಿಸುತ್ತಿದ್ದಾಳೆ. ಅಜ್ಜಿಯ ಆರೋಗ್ಯ ಸುಧಾರಿಸುತ್ತಿದ್ದಂತೆ, ಜಯಂತ್ ಆತಂಕಿತನಾಗಿದ್ದಾನೆ. ಜಾನು ಆತನಿಗೆ ಸಿಹಿ ತಿನ್ನಿಸಿ, ಮಾತಿನಿಂದ ನೋಯಿಸುತ್ತಿದ್ದಾಳೆ.
ಪೂರ್ತಿ ಓದಿ06:31 PM (IST) Mar 17
ಜಾಕ್ವೆಲಿನ್ ಫರ್ನಾಂಡಿಸ್ ಮೇಕಪ್ ಇಲ್ಲದೆ ಮುಂಬೈನಲ್ಲಿ ಕಾಣಿಸಿಕೊಂಡರು. ಕಪ್ಪು ಟಿ-ಶರ್ಟ್ ಮತ್ತು ಕಾರ್ಗೋ ಪ್ಯಾಂಟ್‌ನಲ್ಲಿ ಜಾಕ್ವೆಲಿನ್ ಅವರ ಫೋಟೋಗಳು ವೈರಲ್ ಆಗುತ್ತಿವೆ, ಜನರು ಕಾಮೆಂಟ್ ಮಾಡುತ್ತಿದ್ದಾರೆ.
ಪೂರ್ತಿ ಓದಿ06:00 PM (IST) Mar 17
ಪುನೀತ್ ರಾಜ್‌ಕುಮಾರ್ ಅವರು ಒಮ್ಮೆ, ಡಾ.ರಾಜ್‌ಕುಮಾರ್ ಅವರ ಸಮಾಧಿಗೆ ತೆರಳಿ ಅಲ್ಲಿ ಯಾರೋ ಒಬ್ಬರು ಇಟ್ಟಿದ್ದ ಹಿಂದಿನ ದಿನದ ಆಹಾರವನ್ನು ತಿಂದಿದ್ದರು. ಆ ಘಟನೆ ನೆನಪಿಸಿಕೊಂಡಿದ್ದಾರೆ ಆ್ಯಂಕರ್ ಅನುಶ್ರೀ.
05:59 PM (IST) Mar 17
ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಅವರ ಅಭಿನಯ ಮತ್ತೊಮ್ಮೆ ಪ್ರೇಕ್ಷಕರನ್ನು ಮೋಡಿ ಮಾಡಲಿದೆ. ನಿರ್ದೇಶಕರು ಈಗಾಗಲೇ ಕಥಾವಸ್ತುವನ್ನು ಇನ್ನಷ್ಟು ರೋಚಕಗೊಳಿಸುವಲ್ಲಿ ನಿರತರಾಗಿದ್ದಾರೆ. 'ಪುಷ್ಪ 3' ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಲು ಸಿದ್ಧವಾಗಿ..
ಪೂರ್ತಿ ಓದಿ05:13 PM (IST) Mar 17
ಸಿನಿಮಾ ನಿರ್ಮಾಪಕರು, ಕಲಾವಿದರು ಸೇರಿದಂತೆ, ಚಿತ್ರರಂಗ ಹಾಗೂ ಸಿನಿಪ್ರಿಯ ಪ್ರೇಕ್ಷಕರು ತುಂಬಾ ತಲೆ ಕೆಡಿಸಿಕೊಂಡಿದ್ದರು. ಆಗ ಆ ಸಂಗತಿ ಡಾ ರಾಜ್‌ಕುಮಾರ್ ಗಮನಕ್ಕೂ ಬಂದಿತ್ತು. ಆಗ ಮೇರುನಟ ಈ ಬಗ್ಗೆ..
ಪೂರ್ತಿ ಓದಿ04:40 PM (IST) Mar 17
ಅಭಿಷೇಕ್ ಬಚ್ಚನ್ ನಟನೆ ಬಿಡಲು ಬಯಸಿದ್ದರು: ಒಂದು ಕಾಲದಲ್ಲಿ ನಟನೆ ಬಿಡಲು ಅಭಿಷೇಕ್ ಬಚ್ಚನ್ ನಿರ್ಧರಿಸಿದ್ದರು. ಆಗ ಅಮಿತಾಭ್ ಬಚ್ಚನ್ ಧೈರ್ಯ ತುಂಬಿ ಸಲಹೆ ನೀಡಿದ್ದರಿಂದ ಅವರ ನಿರ್ಧಾರ ಬದಲಾಯಿತು.
ಪೂರ್ತಿ ಓದಿ04:21 PM (IST) Mar 17
ಈ ನಟಿಯನನ್ನು ಶಂಕರ್ ನಾಗ್ ತಮ್ಮ ಸಿನಿಮಾಗೆ ಬೇಡ ಎಂದಿದ್ದರು. ಯಾರು ಆ ನಟಿ? ಸದ್ಯ ಧಾರಾವಾಹಿಯಲ್ಲಿ ಬ್ಯುಸಿಯಾಗಿರುವ ನಟಿ ಈ ಬಗ್ಗೆ ಹೇಳಿದ್ದೇನು?
ಪೂರ್ತಿ ಓದಿ04:00 PM (IST) Mar 17
ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿಯಲ್ಲಿ ಏಕಕಾಲಕ್ಕೆ ಮೂರು ಮದುವೆ ಆಗುವ ಹಾಗೆ ಕಾಣ್ತಿದೆ. ಹಾಗಾದರೆ ಏನಾಗಬಹುದು?
ಪೂರ್ತಿ ಓದಿ03:32 PM (IST) Mar 17
ಬಿಗ್ ಬಾಸ್ ಮಾಜಿ ಸ್ಪರ್ಧಿ ಕಿಶನ್ ಬಿಳಗಲಿ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ್ದಾರೆ. ಅವರ ಸ್ಟೈಲ್ ನೋಡಿದ ಫ್ಯಾನ್ಸ್ ಮದುವೆ ಯಾವಾಗ ಅಂತ ಪ್ರಶ್ನೆ ಕೇಳಿದ್ದಾರೆ. ಅಷ್ಟಕ್ಕೂ ಕಿಶನ್ ನೀಡಿದ ಗುಡ್ ನ್ಯೂಸ್ ಏನು ಗೊತ್ತಾ?
03:10 PM (IST) Mar 17
ನಟ ಪುನೀತ್ ರಾಜ್‌ಕುಮಾರ್ ಅವರು 'ಗಂಧದ ಗುಡಿ' ಎಂಬ 'ಸಾಕ್ಷ್ಯಚಿತ್ರ' ನಿರ್ಮಿಸಿ ಅದನ್ನು ಜನರಿಗೆ ಬಿಟ್ಟು ಹೋಗಿದ್ದಾರೆ. ಅದನ್ನು ಅಷ್ಟೊಂದು ತರಾತುರಿಯಲ್ಲಿ ನಿರ್ಮಿಸಿ ನಟಿಸಿ ಹೋಗಿದ್ದೇಕೆ ನಟ ಪುನೀತ್ ಎಂಬ ರಹಸ್ಯವನ್ನು..
ಪೂರ್ತಿ ಓದಿ03:08 PM (IST) Mar 17
ಅಪ್ಪು ಇಷ್ಟ ಪಡುತ್ತಿದ್ದ ತಿಂಡಿ ಯಾವುದು? ಯಾವ ರೀತಿಯು ಗಿಫ್ಟ್ ಇಷ್ಟ ಪಡುತ್ತಿದ್ದರು ಎಂದು ಸಹೋದರಿ ಲಕ್ಷ್ಮಿ ಹಂಚಿಕೊಂಡಿದ್ದಾರೆ.
ಪೂರ್ತಿ ಓದಿ02:47 PM (IST) Mar 17
ಸಾಮಾಜಿಕ ಜಾಲತಾಣದಲ್ಲಿ ಓಳ್ಳೆ ಹುಡುಗ ಪ್ರಥಮ್ ಕೊಟ್ಟ ವಾರ್ನಿಂಗ್ ದೊಡ್ಡ ಚರ್ಚೆ ಸೃಷ್ಟಿ ಮಾಡಿದ. ಹಾಸ್ಯ ಹೋಗಿ ಎಡಬಟ್ಟು ಆಗುತ್ತಾ?
ಪೂರ್ತಿ ಓದಿ02:24 PM (IST) Mar 17
73 ವರ್ಷದ ನಟ ಮಮ್ಮುಟ್ಟಿ ಅವರಿಗೆ ಕ್ಯಾನ್ಸರ್ ಎಂಬ ಮಾತು ಹರಡಿತ್ತು. ಈ ಬಗ್ಗೆ ಅವರ ಪಿಆರ್ ಟೀಂ ಸ್ಪಷ್ಟನೆ ನೀಡಿದೆ.
ಪೂರ್ತಿ ಓದಿ02:19 PM (IST) Mar 17
ಯಾಕೆ ಮೃಣಾಲ್ ಕಡಿಮೆ ಸಿನಿಮಾಗಳಿಗೆ ಸಹಿ ಹಾಕುತ್ತಿದ್ದಾರೆ? ಈ ದೃಶ್ಯಗಳಿಗೆ ನೋ ಎನ್ನುತ್ತಿದ್ದವರು ಇದ್ದಕ್ಕಿದ್ದಂತೆ ಓಕೆ ಅಂದಿದ್ದು ಯಾಕೆ?
ಪೂರ್ತಿ ಓದಿ02:01 PM (IST) Mar 17
ಡಾ.ರಾಜ್‌ಕುಮಾರ್ ಅವರ ಕೊನೆಕ್ಷಣಗಳ ಬಗ್ಗೆ ಮಗಳು ಪೂರ್ಣಿಮಾ ರಾಮ್‌ಕುಮಾರ್ ಮಾತನಾಡಿದ್ದಾರೆ. ಅಂದು ಮನೆಯಲ್ಲಿ ನಡೆದ ಘಟನೆಗಳು ಮತ್ತು ರಾಜ್‌ಕುಮಾರ್ ಅವರ ಕೊನೆಯ ಮಾತುಗಳನ್ನು ಅವರು ವಿವರಿಸಿದ್ದಾರೆ.
ಪೂರ್ತಿ ಓದಿ01:51 PM (IST) Mar 17
ದಬಾಂಗ್ 3 ಚಿತ್ರೀಕರಣ ಮತ್ತು ಅವರ ಫಾರ್ಮ್‌ಹೌಸ್‌ನಲ್ಲಿ ತಂಗಿದ್ದ ಸಮಯದಲ್ಲಿ ಕಿಚ್ಚ ಸುದೀಪ್ ಅವರ ಪುತ್ರಿ ಸಾನ್ವಿ, ಸಲ್ಮಾನ್ ಖಾನ್ ಅವರೊಂದಿಗಿನ ಅನುಭವಗಳನ್ನು ನೆನಪಿಸಿಕೊಂಡಿದ್ದಾರೆ.
01:02 PM (IST) Mar 17
ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿದೆ ರಶ್ಮಿಕಾ - ವಿಜಯ್ ಸ್ನೇಹ. ಇಬ್ಬರ ನಡುವೆ ಇನ್ನೂ ಪ್ರೀತಿ ಹುಟ್ಟಿಲ್ವಾ?
ಪೂರ್ತಿ ಓದಿ12:54 PM (IST) Mar 17
ಕನ್ನಡ ಸಿನಿಮಾರಂಗದಲ್ಲಿ ಡಾ ರಾಜ್‌ಕುಮಾರ್, ವಿಷ್ಣುವರ್ಧನ್ ಸೇರಿದಂತೆ ಹಲವು ಸ್ಟಾರ್ಸ್ ಆಗಿಹೋಗಿದ್ದಾರೆ. ಈಗಲೂ ಇದ್ದಾರೆ, ಮುಂದೆಯೂ ಇರುತ್ತಾರೆ. ಆದರೆ, ಕೆಲವರು ಸ್ಯಾಂಡಲ್‌ವುಡ್ ಉದ್ಯಮಕ್ಕೆ ಯಾವಾಗ ಕಾಲಿಟ್ಟಿದ್ದು, ಯಾವಾಗ ಹೀರೋ ಆಗಿದ್ದು ಎಂಬ..
ಪೂರ್ತಿ ಓದಿ12:48 PM (IST) Mar 17
ನಟ ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನಕ್ಕೆ ಇಂಡಿಯಾ ಪೋಸ್ಟ್ ವಿಶೇಷ ಫೋಟೋಗಳನ್ನು ಲಾಂಚ್ ಮಾಡಿದೆ.
ಪೂರ್ತಿ ಓದಿ12:00 PM (IST) Mar 17
ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಸಖತ್ ಸ್ಟೈಲಿಶ್ ಡ್ರೆಸ್ ಧರಿಸಿ ಶಿಲ್ಪಾ ಶೆಟ್ಟಿ ರೆಸ್ಟೋರೆಂಟ್‌ಗೆ ತೆರಳಿದ್ದಾರೆ. ಆ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
11:57 AM (IST) Mar 17
ಮನೆಯಲ್ಲಿ ಮಾಡಿಕೊಳ್ಳಿ ಈ ಸಿಂಪಲ್ ಎಣ್ಣೆ. ವಾರಕ್ಕೆ ಎರಡು ಮೂರು ದಿನ ಹಚ್ಚಿದ್ರೂ ಕೂದಲು ಚೆನ್ನಾಗಿ ಬೆಳೆಯುತ್ತದೆ ಅಂತಿದ್ದಾರೆ ಜಯಾ.
ಪೂರ್ತಿ ಓದಿ11:10 AM (IST) Mar 17
ಗೆಳತಿ ಹೇಳಿದ ಪ್ರಶ್ನೆಗೆ ಕೋಪಿಸಿಕೊಳ್ಳದೆ ಸಖತ್ ತಾಳ್ಮೆಯಿಂದ ನಗು ನಗುತ್ತಲೇ ಉತ್ತರ ಕೊಟ್ಟ ಐಶ್ವರ್ಯ ರೈ. ತಾಯಿತನವನ್ನು ಹೊರ ತೆಗೆಯಲು ಸಾಧ್ಯವೇ?
ಪೂರ್ತಿ ಓದಿ11:04 AM (IST) Mar 17
'ಸೀತಾರಾಮʼ ಧಾರಾವಾಹಿ ನಟ ಕಲಾಗಂಗೋತ್ರಿ ಮಂಜು ಅವರ ಮಗಳು ಪದ್ಮಿನಿ ದೇವನಹಳ್ಳಿ ಕೂಡ ನಟಿ. ಇವರೀಗ ಸೀಮಂತದ ಖುಷಿಯಲ್ಲಿದ್ದಾರೆ.
ಪೂರ್ತಿ ಓದಿ10:31 AM (IST) Mar 17
ಟೆಂಟ್‌ನಲ್ಲಿ ಅಪ್ಪು ಸಿನಿಮಾ ನೋಡಿದ ಅನುಶ್ರೀ ಮತ್ತು ಕಿಶೋರ್. ಫ್ಯಾನ್ಸ್ ರೀತಿ ಸಿನಿಮಾ ಎಂಜಾಯ್ ಮಾಡಿದ ಕ್ಷಣ ಹಂಚಿಕೊಂಡಿದ್ದಾರೆ.
ಪೂರ್ತಿ ಓದಿ10:22 AM (IST) Mar 17
ʼಲಕ್ಷ್ಮೀ ಬಾರಮ್ಮʼ ಧಾರಾವಾಹಿ ಲಕ್ಷ್ಮೀ ಪಾತ್ರಧಾರಿ ನಟಿ ಭೂಮಿಕಾ ರಮೇಶ್ ಅವರು ಅಭಿನವ್ ವಿಶ್ವನಾಥ್ ಅವರನ್ನು ಪ್ರೀತಿ ಮಾಡ್ತಿದ್ದಾರಾ ಎಂಬ ಪ್ರಶ್ನೆ ಎದ್ದಿತ್ತು, ಇದಕ್ಕೆ ಈ ಜೋಡಿಯೇ ಸ್ಪಷ್ಟ ಉತ್ತರ ನೀಡಿದೆ.
ಪೂರ್ತಿ ಓದಿ09:55 AM (IST) Mar 17
ʼದೃಷ್ಟಿಬೊಟ್ಟುʼ ಧಾರಾವಾಹಿ ನಟಿ ಗೌತಮಿ ಜಯರಾಮ್ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಪೂರ್ತಿ ಓದಿ09:06 AM (IST) Mar 17
'ರಾಮಾಚಾರಿ' ಧಾರಾವಾಹಿ ನಟಿ ಶೀಲಾ ಎಚ್ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಪೂರ್ತಿ ಓದಿ08:28 AM (IST) Mar 17
ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದಂದು ಪತ್ರ ಬರೆದ ಶ್ರೀದೇವಿ. ಕೊನೆ ಸಂದರ್ಶನದ ಬಗ್ಗೆ ಬರೆದಿದ್ದು ನೋಡಿ ಜನರು ಶಾಕ್ ಆಗಿದ್ದಾರೆ.
ಪೂರ್ತಿ ಓದಿ