ನೀವು ರೆಡಿ ಇದ್ರೆ ದಿನಕ್ಕೆ 12 ಲಕ್ಷ ರೂ. ಸಂಬಳ! ಟಿ.ವಿ, ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಇದ್ಯಾವ ಕೆಲಸ ಅಂತೀರಾ?

By Suchethana DFirst Published Sep 8, 2024, 4:47 PM IST
Highlights

ಸಿನಿಮಾ, ಕಿರುತೆರೆ ಉದ್ಯಮದಲ್ಲಿ ಭಾರಿ ಬೇಡಿಕೆ ಇರುವ ಈ ಒಂದು ಕೆಲಸಕ್ಕೆ ಪ್ರತಿದಿನ 12 ಲಕ್ಷ ರೂಪಾಯಿ ಸಂಬಳವನ್ನೂ ಪಡೆಯಬಹುದಾಗಿದೆ. ಇಂಥ ಉದ್ಯೋಗ ಯಾವುದು ಅಂತೀರಾ? 
 

ಮೂರು ಬಿಟ್ಟವರು ದೇಶಕ್ಕೆ ದೊಡ್ಡವರು ಎನ್ನುವ ಮಾತಿರುವುದು ಗೊತ್ತೇ ಇದೆ ತಾನೆ? ರಾಜಕೀಯ ವ್ಯಕ್ತಿಗಳಿಗೆ ಈ ಮಾತನ್ನು ಹೇಳುವುದು ಮಾಮೂಲಾಗಿದ್ದರೂ, ಇಂದಿನ ಸಾಕಷ್ಟು ಚಲನಚಿತ್ರಗಳಲ್ಲಿ ನಟ-ನಟಿಯರು ನಡೆದುಕೊಳ್ಳುತ್ತಿರುವ ರೀತಿ, ಅದರಲ್ಲಿಯೂ ನಟಿಯರು ಯಾವುದಕ್ಕಾದರೂ ಸೈ ಎನಿಸುವಂಥ ಪಾತ್ರ ಮಾಡುತ್ತಿರುವುದನ್ನು ನೋಡಿದ ಮೇಲಂತೂ ಈ ಗಾದೆ ಮಾತನ್ನು ಆಡಿಕೊಳ್ಳುವವರೇ ಹೆಚ್ಚು. ಇಷ್ಟುವರ್ಷಗಳವರೆಗೆ ಅರೆಬೆತ್ತಲಾಗಿ ನಟಿಸುತ್ತಿದ್ದ ನಟಿಯರು ಈಗ ಪೂರ್ಣ ಬೆತ್ತಲಾಗಲೂ ಹಿಂಜರಿಯುತ್ತಿಲ್ಲ ಎನ್ನುವುದು ಇದಾಗಲೇ ಸಾಬೀತಾಗಿ ಹೋಗಿದೆ. ಇಂಥ ನಟಿಯರಿಗೆ ರಾತ್ರೋರಾತ್ರಿ ನ್ಯಾಷನಲ್​ ಕ್ರಷ್​ ಪಟ್ಟನೂ ಸಿಗುತ್ತಿದೆ. ಇಂಥ ಚಿತ್ರಗಳು ಸಾವಿರಾರು ಕೋಟಿ ರೂಪಾಯಿ ಕಮಾಯಿಯನ್ನೂ ಮಾಡುತ್ತಿದೆ. ಒಂದು ಕಡೆ ಕಾಸ್ಟಿಂಗ್​ ಕೌಚ್​, ಸಿನಿಮಾದಲ್ಲಿ ಲೈಂಗಿಕ ದೌರ್ಜನ್ಯ ಎಂದೆಲ್ಲಾ ನಟಿಯರು ಬೊಬ್ಬಿಡುತ್ತಿದ್ದರೆ, ಇನ್ನೊಂದೆ ಕಡೆಯಲ್ಲಿ ಇಂಥ ಅಶ್ಲೀಲ ದೃಶ್ಯಗಳನ್ನು ಮಾಡಲು ನಟಿಯರು ಹಿಂಜರಿಯುತ್ತಿಲ್ಲ ಎನ್ನುವುದೂ ಅಷ್ಟೇ ಸತ್ಯ ಬಿಡಿ. 

ಇದರ ಹೊರತಾಗಿಯೂ ದಿನಕ್ಕೆ ಕನಿಷ್ಠ 12 ಲಕ್ಷ ರೂಪಾಯಿ ಪಡೆಯಬಹುದಾದ ಒಂದು ಉದ್ಯೋಗ ಇದೆ. ಇದರಲ್ಲಿ ಏನಿಲ್ಲವೆಂದರೂ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗಿಗಳ ಇದ್ದಾರೆ. ಹೌದು.  ಈ ಹುದ್ದೆಯ ಹೆಸರು ಇಂಟಿಮಸಿ ಕೋ-ಆರ್ಡಿನೇಟರ್​ (Intimacy coordinators). ಚಲನಚಿತ್ರ ಮಾತ್ರವಲ್ಲದೇ ಕಿರುತೆರೆಗಳಲ್ಲಿಯೂ ಸೆಕ್ಸ್​, ಲೈಂಗಿಕ ದೃಶ್ಯಗಳು, ಬೆತ್ತಲಾಗುವುದು, ಲಿಪ್​ಲಾಕ್​ ಇಂಥ ದೃಶ್ಯಗಳು ಬಂದರೆ ಅವುಗಳನ್ನು ಮಾಡಲು ರೆಡಿ ಇರುವವರಿಗೆ ಈ ಉದ್ಯೋಗ. ಅದಕ್ಕೆ ಇಂಟಿಮಸಿ ಕೋ-ಆರ್ಡಿನೇಟರ್​ ಎಂದು ಹೆಸರು ಇದೆ. ಸದ್ಯ ಅಮೆರಿಕದಲ್ಲಿ ಈ ಉದ್ಯೋಗಕ್ಕೆ ಭಾರಿ ಡಿಮಾಂಡ್​ ಇದೆ. ಪರದೆಯ ಮೇಲೆ ಇಂಟಿಮೇಟ್​ ದೃಶ್ಯಗಳಿಗೆ ಜೀವ ತುಂಬಲು ಇವರು ಸಹಾಯಕರು ಆಗಿರುತ್ತಾರೆ! 

Latest Videos

ಪೂರ್ಣ ಬೆತ್ತಲಾಗೋಕೆ ರೆಡಿನಾ ಕೇಳಿದ... ಶಾಕಿಂಗ್​ ವಿಷ್ಯ ತಿಳಿಸಿದ ಬಿಗ್​ಬಾಸ್​ ತನಿಷಾ ಕುಪ್ಪಂಡ
 
ಈಗಿನ ನಟ-ನಟಿಯರೇ ಇದಕ್ಕೆಲ್ಲಾ ರೆಡಿ ಇರುವಾಗ ಇಂಥದ್ದೊಂದು ಉದ್ಯೋಗ ಬೇಕೆ ಎಂದು ಕೇಳಬಹುದು. ಆದರೆ ಚಿತ್ರರಂಗದಲ್ಲಿ ಇನ್ನೂ ಮರ್ಯಾದೆಯನ್ನು ಕಾಪಾಡಿಕೊಂಡಿರುವ ಕೆಲವು ತಾರೆಯರು ಇದ್ದಾರೆ. ಅವರು ನಟಿಸುವ ಚಿತ್ರಗಳಲ್ಲಿ ಇಂಥ ದೃಶ್ಯಗಳು ಬಂದಾಗ ಅವರಿಗೆ ಡ್ಯೂಪ್​ ಆಗಿ ನಟಿಸಲು ಜನರ ಅವಶ್ಯಕತೆ ಇರುತ್ತದೆ. ಸಾಹಸಮಯ ದೃಶ್ಯಗಳಲ್ಲಿ ನಟರು ಡ್ಯೂಪ್​ ಬಳಸುವುದು ಗೊತ್ತೇ ಇದೆ. ಆದರೆ ಇಂಥ ದೃಶ್ಯಗಳಲ್ಲಿಯೂ ಡ್ಯೂಪ್​ ಬಳಸುವುದಕ್ಕಾಗಿ ಉದ್ಯೋಗಿಗಳನ್ನು ಆಹ್ವಾನಿಸಲಾಗುತ್ತದೆ. ಈ ಕ್ಷೇತ್ರದಲ್ಲಿ ಇರುವವರಿಗೆ ಇದು ತೀರಾ ಚಿರಪರಿಚಿತವಾಗಿದ್ದರೂ ಭಾರತದಲ್ಲಿ ಇದರ ಬಗ್ಗೆ ಜನ ಸಾಮಾನ್ಯರಿಗೆ ಅಷ್ಟಾಗಿ ಗೊತ್ತಿಲ್ಲ. ಆದರೆ ಇದೀಗ ಬಗ್ಗೆ ಈಗ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. 

ಹಾಲಿವುಡ್​ ಮತ್ತು ಬಾಲಿವುಡ್​ಗಳಲ್ಲಿ ಇಂಥ ಉದ್ಯೋಗಕ್ಕೆ ಬಹಳ ಅವಕಾಶ ಇದೆ ಎನ್ನುತ್ತಾರೆ ಇಂಟಿಮಸಿ  ಸಂಯೋಜಕ ಆಮಿ ನಾರ್ಥ್ರಪ್. ಹಾಲಿವುಡ್​ನಲ್ಲಿ ಇದು ಕ್ಷಿಪ್ರಗತಿಯಲ್ಲಿ ಸಾಗುತ್ತದೆ.  ಜೇಮ್ಸ್ ಫ್ರಾಂಕೋ ಮತ್ತು ಮ್ಯಾಗಿ ಗಿಲೆನ್‌ಹಾಲ್ ನಟಿಸಿದ HBO ದ "ದಿ ಡ್ಯೂಸ್" ಎಂಬ ಚಿತ್ರದಲ್ಲಿ ಇಂಥವರನ್ನು ನೇಮಕ ಮಾಡಿಕೊಳ್ಳಲಾಗಿತ್ತು.  1970ರ ದಶಕದಲ್ಲಿಯೇ ಇಂಟಿಮಸಿ ಕೋ ಆರ್ಡಿನೇಟರ್​ ಹುದ್ದೆ ಸ್ಥಾಪನೆ ಮಾಡಲಾಗಿದೆ ಎಂಬ ಮಾಹಿತಿ ಅವರು ನೀಡುತ್ತಾರೆ. ಇದೀಗ ಅದು ಜಗತ್ತಿನ ಎಲ್ಲಾ ಕಡೆ ವ್ಯಾಪಿಸಿದೆ. ಇಂದು ಚಲನಚಿತ್ರ ಮತ್ತು ಟೆಲಿವಿಷನ್ ಸೆಟ್‌ಗಳಲ್ಲಿ ಸಾವಿರಾರು ಮಂದಿ ಈ ಉದ್ಯೋಗ ಮಾಡುತ್ತಿದ್ದಾರೆ. ಅವರ ವೇತನವು ಸ್ಟಂಟ್ ಕೋಆರ್ಡಿನೇಟರ್‌ಗಳಿಗೆ ಸರಿಸುಮಾರು ಸಾಲಿನಲ್ಲಿರುತ್ತದೆ, ಅವರ ಕನಿಷ್ಠ ದರಗಳು ದಿನಕ್ಕೆ ಸುಮಾರು $1,500 (ರೂಪಾಯಿ ಲೆಕ್ಕದಲ್ಲಿ 12 ಲಕ್ಷ ರೂಪಾಯಿ) ಅವರು ವರ್ಷಕ್ಕೆ ಸರಾಸರಿ $60,000 ರಿಂದ $90,000 ಗಳಿಸುತ್ತಾರೆ ಎಂಬ ಮಾಹಿತಿ ಅವರು ನೀಡುತ್ತಾರೆ. ಮೋಷನ್ ಪಿಕ್ಚರ್ ಅಸೋಸಿಯೇಷನ್ ​​ಪ್ರಕಾರ, ಚಲನಚಿತ್ರ ಮತ್ತು ಟಿವಿ ಉದ್ಯಮವು 2.74 ಮಿಲಿಯನ್ ಜನರನ್ನು ನೇಮಿಸಿಕೊಂಡಿದೆ ಮತ್ತು ದೇಶೀಯ ನಿರ್ಮಾಣಗಳಾದ್ಯಂತ ಸಾಹಸ ಪ್ರದರ್ಶನಕಾರರಿಂದ ಕೂದಲು ಮತ್ತು ಮೇಕಪ್ ಕಲಾವಿದರಿಗೆ ವಾರ್ಷಿಕವಾಗಿ $242 ಶತಕೋಟಿಗೂ ಹೆಚ್ಚು ವೇತನವನ್ನು ಪಾವತಿಸುತ್ತದೆ. ಅದರಲ್ಲಿ ಈ ಉದ್ಯೋಗವೂ ಎಂಬ ಮಾಹಿತಿ ಇದೆ. ಸದ್ಯ ಬೇರೆ ಚಿತ್ರೋದ್ಯಮದಲ್ಲಿ ಇದು ಬಂದಿಲ್ಲ, ಆದರೆ ಬರುವ ದಿನ ದೂರವೂ ಇಲ್ಲ ಎನ್ನಬಹುದೇನೋ! 

ದೀಪಿಕಾ ವಿಷ್ಯದಲ್ಲಿ ಸುಳ್ಳಾಯ್ತು ಸೆಲೆಬ್ರಿಟಿ ಜ್ಯೋತಿಷಿ ಭವಿಷ್ಯ! ರಾಜಯೋಗದ ಕಥೆಯೇನು ಕೇಳ್ತಿರೋ ಫ್ಯಾನ್ಸ್​...

click me!