ಹೀಗ್ ಆಗಿತ್ತಾ ದೇವ್ರೇ..; ಕಿರಿಕ್ ಪಾರ್ಟಿ ಟೈಮ್‌ನಲ್ಲಿ ನಡೆದ ಸೀಕ್ರೆಟ್ ಘಟನೆ ಹಂಚಿಕೊಂಡ ರಿಷಬ್ ಶೆಟ್ಟಿ!

By Shriram Bhat  |  First Published Sep 12, 2024, 12:24 PM IST

ಅಯ್ಯಯ್ಯೋ, ಆದ್ರೆ ಶೂಟಿಂಗ್‌ ಎಲ್ಲಾನೂ ಆಗೋಗಿದ್ಯಲ್ಲಾ, ಏನ್ ಮಾಡೋದು ಅಂತ ಯೋಚ್ನೆ ಆಗಿತ್ತು.. ಆಗ ನಾನು ಮತ್ತೆ ರಕ್ಷಿತ್ ಬರ್ತಾ ಇದ್ವಿ.. ಒಂದ್ ಕೆಲಸ ಮಾಡೋಣ, ಬ್ಯಾಕ್‌ಗ್ರೌಂಡ್‌ನಲ್ಲಿ ಒಂದು ಒಳ್ಳೇ ಕ್ಯಾರೆಕ್ಟರ್ ತಗೊಂಡು ಹೋಗೋಣ..


ಪ್ರಮೋದ್ ಶೆಟ್ಟಿ ನಟನೆಯ 'ಲಾಫಿಂಗ್ ಬುದ್ಧ' ಸಿನಿಮಾ ಬಿಡುಗಡೆಯಾಗಿ ಯಶಸ್ವೀ ಪ್ರದರ್ಶನ ಕಾಣುತ್ತಿರುವುದು ಗೊತ್ತೇ ಇದೆ. ಈ ಚಿತ್ರವನ್ನು ನಿರ್ಮಿಸಿ ತೆರೆಗೆ ತಂದಿರುವುದು ಕಾಂತಾರ ಖ್ಯಾತಿಯ ನಟ-ನಿರ್ದೇಶಕ ರಿಷಬ್ ಶೆಟ್ಟಿ. ಈ ಚಿತ್ರದ ಪ್ರಮೋಶನ್‌ ವೇಳೆಯಲ್ಲಿ ರಿಷಬ್ ಶೆಟ್ಟಿ (Rishab Shetty) ಅವರು ಬಹಳಷ್ಟು ಸಂದರ್ಶನಗಳನ್ನು ನೀಡಿದ್ದಾರೆ. ಅದರಲ್ಲಿ, ಲಾಫಿಂಗ್ ಬುದ್ಧ ಸೇರಿದಂತೆ, ಸಿನಿಮಾ ಮಾಡುವ ಸಮಯದಲ್ಲಿ ನಡೆದ ಹಲವು ವಿಭಿನ್ನ-ವಿಶೇಷ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. 

ಬಹುತೇಕ ಎಲ್ಲರಿಗೂ ತಿಳಿದಿರುವಂತೆ, ಕಿರಿಕ್ ಪಾರ್ಟಿ (Kirik Party) ನಿರ್ದೇಶನ ಮಾಡಿದ್ದು ಇದೇ ರಿಷಬ್ ಶೆಟ್ಟಿಯವರು. ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಹಾಗು ರಶ್ಮಿಕಾ ಮಂದಣ್ಣ  ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದ ಶೂಟಿಂಗ್ ಮುಗಿದು, ಡಬ್ಬಿಂಗ್ ಸಮಯದಲ್ಲಿ ಆಕಸ್ಮಿಕವಾಗಿ ನಡೆದ ಘಟನೆಯೊಂದನ್ನು ರಿಷಬ್ ಶೆಟ್ಟಿ ಶೇರ್ ಮಾಡಿಕೊಂಡಿದ್ದಾರೆ. ತುಂಬಾ ಕುತೂಹಲಕಾರಿ ಎನ್ನಿಸುವ ಆ ಸಂಗತಿ ಇಲ್ಲಿದೆ ನೋಡಿ.. 

Tap to resize

Latest Videos

undefined

ಚೇತನ್ ಅಹಿಂಸಾ 'ಫೈರ್'ಗೆ ಉಗಿದು ಜನ್ಮ ಜಾಲಾಡಿ ಸಾರಾ ಗೋವಿಂದು ಏನ್ ಹೇಳ್ಬಿಟ್ರು ನೋಡಿ!

ಕಿರಿಕ್ ಪಾರ್ಟಿಲಿ ತ್ರೋಔಟ್ ಒಂದು ಕ್ಯಾರೆಕ್ಟರ್ ಇದೆ ಫಿಲಂನಲ್ಲಿ. ಎಲ್ಲೂ ಆನ್‌ಸ್ಕ್ರೀನ್ ಬರೋದೇ ಇಲ್ಲ ಅವ್ರು.. ಆದರೆ, ನಾರ್ತ್ ಕರ್ನಾಟಕ ಹುಡುಗಂದು ಡೈಲಾಗ್ ಕೇಳಿಸ್ತಾನೆ ಇರುತ್ತೆ ನಿಮ್ಗೆ.. ಡಬ್ಬಿಂಗ್‌ನಲ್ಲಿ ಹಾಕಿರೋ ಐಡಿಯಾ ಅದು.. ರೀಸನ್ ಏನು ಅಂದ್ರೆ, ಪ್ರೊಡ್ಯೂಸರ್-ಡಿಸ್ಟ್ರಿಬ್ಯೂಟರ್ ಜಯಣ್ಣ ಅವ್ರು ಒಂದ್‌ ಸಲ, 'ಅಪ್ಪಾಜೀ, ನಾರ್ತ್ ಕರ್ನಾಟಕ ಕ್ಯಾರೆಕ್ಟರ್ ಏನಾದ್ರೂ ಹಾಕ್ಬೇಕು ಅಪ್ಪಾಜಿ.. ಅಲ್ಲೆಲ್ಲ ನಮ್ ಜನ ಬಾಳ ಇಷ್ಟಪಡ್ತಾರೆ..' ಅಂತ ಹೇಳಿದ್ರು. 

ಅಯ್ಯಯ್ಯೋ, ಆದ್ರೆ ಶೂಟಿಂಗ್‌ ಎಲ್ಲಾನೂ ಆಗೋಗಿದ್ಯಲ್ಲಾ, ಏನ್ ಮಾಡೋದು ಅಂತ ಯೋಚ್ನೆ ಆಗಿತ್ತು.. ಆಗ ನಾನು ಮತ್ತೆ ರಕ್ಷಿತ್ ಬರ್ತಾ ಇದ್ವಿ.. ಒಂದ್ ಕೆಲಸ ಮಾಡೋಣ, ಬ್ಯಾಕ್‌ಗ್ರೌಂಡ್‌ನಲ್ಲಿ ಒಂದು ಒಳ್ಳೇ ಕ್ಯಾರೆಕ್ಟರ್ ತಗೊಂಡು ಹೋಗೋಣ, ಅಂತ ಅಭಿಜಿತ್ ಮಹೇಶ್‌ಗೆ ಹೇಳಿದ್ವಿ.. ಹಿಂದುಗಡೆ ಕೂತು ನಾವ್ ಯಾವಾಗ್ಲೂ ಡಬ್ಬಿಂಗ್ ಮಾಡ್ತೀವಿ.. ಸಾನ್ವಿ, ಕನ್ನಡ ಕ್ಲಾಸ್ ತಗೊಳ್ಳೊಕೆ ಬರ್ತಾಳೆ, ಇಲ್ಲಿ ಏನೋ ಒಂಚೂರು ಲೀಡ್ ಬೇಕಲ್ಲ ಅಂತ ಯೋಚ್ನೆ ಮಾಡ್ತಾ ಇದ್ವಿ.. 

ಅಣ್ಣಾವ್ರಿಗಿತ್ತು ಬಾಲಿವುಡ್ ನಂಟು, ಡಾ ರಾಜ್‌ ಚಿತ್ರಕ್ಕೆ ಕೆಲಸ ಮಾಡಿದ್ರು ಸಲ್ಲೂ ತಂದೆ ಸಲೀಮ್!

ಕರೆಕ್ಟ್ ಆಗಿ ಅಲ್ಲಿ ಒಂದು ಹುಡುಗ ಏನೋ ಮಾತಾಡ್ಕೊಂಡು ಹೋಗ್ಬಿಟ್ಟ..  ನಾವು ಅವ್ನನ್ನೇ ಫಾಲೊ ಮಾಡ್ಕೊಂಡು ಶೂಟ್ ಮಾಡ್ತಾ ಇದ್ವಿ.. ಅವ್ನು ಸಡನ್ನಾಗಿ ಆ ಕಡೆ ಪಾಸ್‌ ಆಗಿ ಹೋಗ್ಬಿಟ್ಟ.. ಅದು ಪ್ಲಾನ್ ಮಾಡಿ ಶೂಟಿಂಗ್ ಮಾಡಿದ್ಹಾಗೆ ಆಗೋಯ್ತು.. ಓವರ್ ಲ್ಯಾಪ್ ಆಗೋಯ್ತು.. ನ್ಯಾಚುರಲಿ, ಹಾಗೇ ಬಂತು ಅದು.. ಏ ಸಾನ್ವಿ, ಕ್ಲಾಸಸ್ ಇದೆ, ನನ್ ಬರ್ತೀನಿ ಕಣೇ..' ಅಂದ್ಕೊಂಡು ಓಡೋಗ್ಬಿಟ್ಟ.. 

 

 
 
 
 
 
 
 
 
 
 
 
 
 
 
 

A post shared by MetroSaga (@metrosaga_)

 

click me!