ಮಕ್ಕಳನ್ನು ಮಾಡ್ಕೊಳ್ಳೋಕೆ ಭಯವಂತೆ ನಟಿ ತಮನ್ನಾಗೆ..ಕಾರಣ ಏನ್ ಗೊತ್ತಾ?

By Roopa Hegde  |  First Published Sep 12, 2024, 11:19 AM IST

ಸೌತ್ ಇಂಡಿಯಾ ಫೇಮಸ್ ನಟಿ ತಮನ್ನಾ ಭಾಟಿಯಾಗೆ ಮಕ್ಕಳನ್ನು ಹೆರೋಕೆ ಭಯವಂತೆ. ಇದಕ್ಕೆ ಕಾರಣವೇನು ಅನ್ನೋದನ್ನು ನಟಿ ಇಂಟರ್ವ್ಯೂ ಒಂದರಲ್ಲಿ ಹೇಳಿದ್ದಾರೆ. ಇದನ್ ಕೇಳಿದ ಫ್ಯಾನ್ಸ್, ಮದುವೆ ಆದ್ರೂ ತಮನ್ನಾ ಮಗು ನೋಡೋ ಭಾಗ್ಯ ಇಲ್ವಾ ಅಂತಿದ್ದಾರೆ. 


ಸ್ತ್ರೀ 2 ಚಿತ್ರ (Stree 2 movie) ದಲ್ಲಿ ಆಜ್ ಕಿ ರಾತ್ (Aaj Ki Raat) ಹಾಡಿನ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ದಕ್ಷಿಣ ಭಾರತ (South India) ದ ಪ್ರಸಿದ್ಧ ನಟಿ ತಮನ್ನಾ ಭಾಟಿಯಾ (actress Tamannaah Bhatia) . ತಮನ್ನಾ ಭಾಟಿಯಾ ಬ್ಯೂಟಿಗೆ ಬೀಳದ ಜನರಿಲ್ಲ. ಅವರ ನಟನೆ, ಡಾನ್ಸ್ ಎಲ್ಲವೂ ಪರ್ಫೆಕ್ಟ್. 34 ವರ್ಷದ ತಮನ್ನಾ ಯಾವಾಗ ಮದುವೆ ಆಗ್ತಾರೆ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡ್ತಿದೆ. ಈ ಮಧ್ಯೆ ತಮನ್ನಾ, ಮಕ್ಕಳ ಬಗ್ಗೆ ತಮ್ಮ ಒಪಿನಿಯನ್ ಹೇಳಿ ಫ್ಯಾನ್ಸ್ ಶಾಕ್ ಆಗುವಂತೆ ಮಾಡಿದ್ದಾರೆ.  ತಮನ್ನಾಗೆ ಮಕ್ಕಳನ್ನು ಮಾಡ್ಕೊಳ್ಳೋಕೆ ಭಯವಂತೆ. ಸಂದರ್ಶನವೊಂದರಲ್ಲಿ ಮಾತನಾಡಿದ ತಮನ್ನಾ ಭಾಟಿಯಾ, ಮಕ್ಕಳನ್ನು ಹಡೆಯೋಕೆ ಏಕೆ ಭಯ ಎಂಬುದನ್ನು ಕೂಡ ಹೇಳಿದ್ದಾರೆ. 

ಪಾಡ್ ಕಾಸ್ಟ್ (podcast) ಒಂದರಲ್ಲಿ ಮಾತನಾಡಿದ ತಮನ್ನಾ ಭಾಟಿಯಾ, ನನಗೆ ಅಮ್ಮನಾಗಲು ಭಯ. ತಾಯಂದಿರು, ತಮ್ಮ ಮಕ್ಕಳಿಗೆ ತಮ್ಮ ಸರ್ವಸ್ವವನ್ನೇ ನೀಡ್ತಾರೆ. ಮಕ್ಕಳಿಗೆ ಅಷ್ಟೊಂದು ಪ್ರೀತಿ, ಕಾಳಜಿ, ಆರೈಕೆ ಮಾಡಲು ನನ್ನಿಂದ ಸಾಧ್ಯವಿಲ್ಲ. ನನ್ನ ಪಾಲಕರು ನನಗೆ ಸಿಕ್ಕಾಪಟ್ಟೆ ಪ್ರೀತಿ ನೀಡಿದ್ದಾರೆ. ಅವರು ಕೇರ್ ಮಾಡ್ತಿರೋದನ್ನು ನೋಡಿದ್ರೆ, ಪೇರೆಂಟಿಂಗ್ ಡಿಗ್ರಿ ಪಡೆದಿದ್ದಾರೆ ಅನ್ನಿಸುತ್ತದೆ. ಆದ್ರೆ ನನ್ನಿಂದ ಇದೆಲ್ಲ ಸಾಧ್ಯವಿಲ್ಲ ಅನ್ನಿಸುತ್ತೆ. ಮಕ್ಕಳಿಗೆ ಜನ್ಮ ನೀಡಿದ ನಂತ್ರ ಏನಾಗ್ಬಹುದು ಎಂಬುದನ್ನು ಊಹಿಸಿಕೊಂಡ್ರೆ ನನಗೆ ಭಯವಾಗುತ್ತದೆ ಎಂದು ತಮನ್ನಾ ಭಾಟಿಯಾ ಹೇಳಿದ್ದಾರೆ. ನಟಿ ಮುಂದೆ ಮದುವೆ ಆದ್ರೂ ಮಕ್ಕಳನ್ನು ಮಾಡ್ಕೊಳ್ಳೋದಿಲ್ವಾ ಎನ್ನುವ ಪ್ರಶ್ನೆ, ಫ್ಯಾನ್ಸ್ ತಲೆಯಲ್ಲಿ ಕೊರೆಯೋಕೆ ಶುರುವಾಗಿದೆ.  

Tap to resize

Latest Videos

undefined

SSLC ರಿಸಲ್ಟ್ ಬಗ್ಗೆ ಅಮ್ಮನಿಗೆ ಸುಳ್ಳು : ಚಟ ಹತ್ತಿಸಿದ್ದು ರವಿ ಬೆಳಗೆರೆ ಎಂದ ಕಿರಿಕ್ ಕೀರ್ತಿ

ತಮನ್ನಾ ಭಾಟಿಯಾ, ಇಂಟರ್ವ್ಯೂನಲ್ಲಿ ಇನ್ನೂ ಅನೇಕ ವಿಷ್ಯಗಳ ಬಗ್ಗೆ ಮಾತನಾಡಿದ್ದಾರೆ. ಈಗ್ಲೂ ವಿಡಿಯೋ ಗೇಮ್ ಆಡಲು ಇಷ್ಟಪಡುವ ತಮನ್ನಾ, ಸ್ಕೂಲ್ ನಲ್ಲಿ ಪ್ರಾಮಾಣಿಕ ಹುಡುಗಿಯಾಗಿದ್ರು. ಓದೋದ್ರಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದ ತಮನ್ನಾ, ತಮ್ಮ ಕೆಲಸಕ್ಕೆ ಹೆಚ್ಚು ಆದ್ಯತೆ ನೀಡ್ತಾರೆ. ಸುತ್ತಮುತ್ತಲಿನವರು ಏನೇ ಹೇಳಿದ್ರೂ ಅದಕ್ಕೆ ಕ್ಯಾರೆ ಎನ್ನಲ್ಲವಂತೆ ತಮನ್ನಾ. 

ಮಹಿಳೆಯರು ಆರ್ಥಿಕವಾಗಿ ಸದೃಢರಾಗಿರ್ಬೇಕು ಎಂಬ ತಮನ್ನಾ, ಮಹಿಳೆ ಎಲ್ಲವನ್ನೂ ಮಾಡಬಲ್ಲಳು. ಬೇರೆಯವರು ಏನ್ ಯೋಚ್ನೆ ಮಾಡ್ತಾರೆ ಅನ್ನೋದನ್ನು ಬಿಟ್ಟು, ನಿಮಗೆ ಏನ್ ಬೇಕು ಎಂಬುದನ್ನು ಮೊದಲು ತಿಳಿದ್ಕೊಳ್ಳಿ ಎಂದಿದ್ದಾರೆ.  ರಿಲೇಶನ್ಶಿಪ್ ಚೆನ್ನಾಗಿರ್ಬೇಕು ಅಂದ್ರೆ ಏನ್ ಮಾಡ್ಬೇಕು ಎನ್ನುವ ಪ್ರಶ್ನೆಗೆ ಉತ್ತರ ನೀಡಿದ ತಮನ್ನಾ, ಕೇಳಿ ಎನ್ನುತ್ತಾರೆ. ನಿಮ್ಮ ಸಂಗಾತಿ ಮಾತನ್ನು ಶಾಂತವಾಗಿ ಕೇಳಿ. ಇದ್ರಿಂದ ಯಾವುದೇ ಸಮಸ್ಯೆಗೆ ಪರಿಹಾರ ಸಿಗ್ದೆ ಇರ್ಬಹುದು ಆದ್ರೆ ಅವರಿಗೆ ಧೈರ್ಯ ಸಿಗುತ್ತೆ. ನಾನು ನಿನ್ನ ಜೊತೆಗಿದ್ದೇನೆ, ನಿನ್ನ ಹೋರಾಟದಲ್ಲಿ ಭಾಗಿಯಾಗ್ತಿದ್ದೇನೆ, ನೀನು ಏನೇ ಮಾಡ್ತಿದ್ರೂ ನಾನಿದ್ದೇನೆ ಎಂಬ ಭರವಸೆ ಅವರಿಗೆ ಬರುತ್ತೆ ಎನ್ನುತ್ತಾರೆ ತಮನ್ನಾ ಭಾಟಿಯಾ. 

ರಿಯಲ್ ಎಸ್ಟೇಟ್, ಜ್ಯುವೆಲರಿ, ಷೇರು ಸೇರಿದಂತೆ ಎಲ್ಲ ಕಡೆ ಹೂಡಿಕೆ ಮಾಡೋಕೆ ಇಷ್ಪಪಡುವ ತಮನ್ನಾ, ಬಾಲಿವುಡ್ ನಟ ವಿಜಯ್ ವರ್ಮಾ ಅವರೊಂದಿಗೆ ಬಹಳ ಸಮಯದಿಂದ ಡೇಟಿಂಗ್ ಮಾಡುತ್ತಿದ್ದಾರೆ. ಇಬ್ಬರ ಮಧ್ಯೆ ಬಾಂಡಿಂಗ್ ಚೆನ್ನಾಗಿದೆ. ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಳ್ತಿದ್ದು, ಶೀಘ್ರವೇ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡ್ತಿದ್ದಾರೆ ಎನ್ನುವ ಸುದ್ದಿ ಇದೆ. 

ಬಾಲಿವುಡ್’ನ ಈ ಸ್ಟಾರ್ ನಟರಿಗಿಂತ ಅವರ ಹೆಂಡ್ತಿಯರೇ ಶ್ರೀಮಂತರು!

 ಬಾಹುಬಲಿ ಮತ್ತು  ಬಾಹುಬಲಿ-2  ಹೊರತುಪಡಿಸಿ, ತಮನ್ನಾ ಭಾಟಿಯಾ 100% ಲವ್,  ಪೈಯಾ  ಮತ್ತು  ಸಿರುತೈ ಚಿತ್ರಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ. ಸದ್ಯ ಐಟಂ ಸಾಂಗ್ ಗೆ ಹೆಜ್ಜೆ ಹಾಕ್ತಿರುವ ತಮನ್ನಾ ಭಾಟಿಯಾ, ಯಾವುದೇ ಬಾಲಿವುಡ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿಲ್ಲ. 

click me!