ಮಲತಂದೆಯಿಂದಲೇ ಬಾಲಿವುಡ್ ನಟಿ ಕೊಲೆ: 14 ವರ್ಷಗಳ ಬಳಿಕ ಮುಂಬೈ ಕೋರ್ಟ್ ತೀರ್ಪು

By Anusha KbFirst Published May 10, 2024, 1:26 PM IST
Highlights

ಬಾಲಿವುಡ್ ನಟಿ ಲೈಲಾ ಖಾನ್ ಹತ್ಯೆ ಪ್ರಕರಣದಲ್ಲಿ ಮಲತಂದೆ ಪರ್ವೀನ್ ತಾಕ್ ದೋಷಿ ಎಂದು ಮುಂಬೈ ಸೆಷನ್ ಕೋರ್ಟ್ ಘಟನೆ ನಡೆದು 14 ವರ್ಷಗಳ ಬಳಿಕ ತೀರ್ಪು ನೀಡಿದೆ.

ಮುಂಬೈ: ಬಾಲಿವುಡ್ ನಟಿ ಲೈಲಾ ಖಾನ್ ಹತ್ಯೆ ಪ್ರಕರಣದಲ್ಲಿ ಮಲತಂದೆ ಪರ್ವೀನ್ ತಾಕ್ ದೋಷಿ ಎಂದು ಮುಂಬೈ ಸೆಷನ್ ಕೋರ್ಟ್ ಘಟನೆ ನಡೆದು 14 ವರ್ಷಗಳ ಬಳಿಕ ತೀರ್ಪು ನೀಡಿದೆ. 2011ರ ಫೆಬ್ರವರಿಯಲ್ಲಿ ಮುಂಬೈನ ಇಗ್ತಪುರಿಯಲ್ಲಿರುವ ಬಂಗ್ಲೆಯಲ್ಲಿ ನಟಿ ಲೈಲಾ ಖಾನ್ ಹಾಗೂ ಆಕೆಯ ತಾಯಿ ಸೆಲೀನಾ ಹಾಗೂ ನಾಲ್ವರು ಒಡಹುಟ್ಟಿದವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.  ಲೈಲಾ ಖಾನ್ ತಾಯಿ ಸೆಲೀನಾ ಹೆಸರಿನಲ್ಲಿರುವ ಭೂಮಿಗೆ ಸಂಬಂಧಿಸಿದಂತೆ ಗಂಡ ಪರ್ವೀನ್ ತಾಕ್ ಹಾಗೂ ಹೆಂಡತಿ ಸೆಲೀನಾ ಮಧ್ಯೆ ಜಗಳ ನಡೆದಿತ್ತು. ಜಗಳ ವಿಕೋಪಕ್ಕೆ ತಿರುಗಿದ್ದು, ಮೊದಲು ಪರ್ವೀನ್ ತಾಕ್ ಹೆಂಡತಿ ಸೆಲೀನಾಳನ್ನು ಕೊಲೆ ಮಾಡಿದ್ದ ಬಳಿಕ ಮನೆಯಲ್ಲಿದ್ದ ಸೆಲೀನಾ ಹಾಗೂ ಆಕೆಯ ನಾಲ್ವರು ಒಡಹುಟ್ಟಿದವರ ಹತ್ಯೆ ಮಾಡಿದ್ದ. 

ಸೆಲೀನಾ ಕುಟುಂಬ ತನ್ನನ್ನು ಸೇವಕನಂತೆ ನಡೆಸಿಕೊಳ್ಳುತ್ತಿದೆ ಎಂದು ಭಾವಿಸಿದ್ದ ಪರ್ವೀನ್ ತಾಕ್‌ಗೆ ಸೆಲೀನಾ ಕುಟುಂಬ ದುಬೈನಲ್ಲಿ ಹೋಗಿ ನೆಲೆ ನಿಲ್ಲುತ್ತದೆ ಎಂಬ ವಿಚಾರ ತಿಳಿದಿತ್ತು. ಅವರು ದುಬೈಗೆ ಹೋದರೆ ತನ್ನನ್ನು ಭಾರತದಲ್ಲಿ ಬಿಟ್ಟು ಹೋಗುತ್ತಾರೆ ಎಂದು ಪರ್ವೀನ್ ತಾಕ್ ಭಯಗೊಂಡಿದ್ದ. ಇದೆಲ್ಲ ಯೋಚನೆಗಳು ಜೊತೆಯಾಗಿ ನಂತರ ಆಸ್ತಿಯ ವಿಚಾರವೂ ಇದರೊಂದಿಗೆ ಸೇರಿಕೊಂಡು ಅಭದ್ರತೆಯ ಕಾರಣದಿಂದಲೇ ಆತ ಇಡೀ ಕುಟುಂಬವನ್ನೇ ಹತ್ಯೆ ಮಾಡಿದ್ದ ಎಂದು ವಿಚಾರಣೆ ವೇಳೆ ತಿಳಿದು ಬಂದಿತ್ತು. 

ಮಗಳ ಅತ್ಯಾಚಾರಕ್ಕೆ ಮಲತಂದೆಗೆ ಅವಕಾಶ, ತಾಯ್ತನಕ್ಕೆ ಕಳಂಕ ಎಂದು ಜಾಮೀನು ನಿರಾಕರಿಸಿದ ಕೋರ್ಟ್!

ಕೊಲೆ ನಡೆದು ಹಲವು ತಿಂಗಳುಗಳ ನಂತರ ಈ ಪ್ರಕರಣ ಬೆಳಕಿಗೆ ಬಂದಿತ್ತು. ಈ ಪ್ರಕರಣವಲ್ಲದೇ ಪರ್ವೀನ್ ತಾಕ್ ವಿರುದ್ಧ ಬೇರೆ ಕ್ರಿಮಿನಲ್ ಪ್ರಕರಣಗಳಿದ್ದ ಹಿನ್ನೆಲೆಯಲ್ಲಿ ಆತನನ್ನು ಜಮ್ಮು ಕಾಶ್ಮೀರದಲ್ಲಿ ಪೊಲೀಸರು ಬಂಧಿಸಿದಾಗ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು. ನಂತರ ಇಗತ್‌ಪುರಿಯಲ್ಲಿದ್ದ ಲೈಲಾ ಖಾನ್ ಕುಟುಂಬಕ್ಕೆ ಸೇರಿದ್ದ ಬಂಗಲೆಯಿಂದ ಪೊಲೀಸರು ಕೊಳೆತ ಸ್ಥಿತಿಯಲ್ಲಿದ್ದ ಶವಗಳನ್ನು ಮಹಜರು ಮಾಡಿದ್ದರು. ಇಷ್ಟು ವರ್ಷಗಳ ಕಾಲ ನಡೆದ ವಿಚಾರಣೆಯಲ್ಲಿ ನ್ಯಾಯಾಲಯವೂ ಪರ್ವೀನ್ ತಾಕ್ ವಿರುದ್ಧದ 40 ಸಾಕ್ಷಿಗಳನ್ನು ವಿಚಾರಣೆ ನಡೆಸಿತ್ತು. ಕೊಲೆ ಮಾಡಿ ಸಾಕ್ಷಿ ನಾಶ ಮಾಡಿದ ಪ್ರಕರಣದಲ್ಲಿ ಪರ್ವೀನ್ ತಾಕ್ ದೋಷಿ ಎಂದು ನ್ಯಾಯಾಲಯ ಹೇಳಿದ್ದು, ಆರೋಪಿಗೆ ಮೇ 14 ರಂದು ಶಿಕ್ಷೆ ಪ್ರಕಟಿಸಲಿದೆ.

ಮಲತಂದೆಯಿಂದ ಹತ್ಯೆಯಾದ ಲೈಲಾ ಖಾನ್ ಮೂಲ ಹೆಸರು ರೇಷ್ಮಾ ಪಟೇಲ್, ಇವರು ಕೊನೆಯದಾಗಿ 2008ರ 'ವಫಾ ಎ ಡೆಡ್ಲಿ ಲವ್‌ಸ್ಟೋರಿ' ಎಂಬ ಸಿನಿಮಾದಲ್ಲಿ ರಾಜೇಶ್ ಖನ್ನಾ ಕಾಣಿಸಿಕೊಂಡಿದ್ದರು. ಅದಕ್ಕೂ ಮೊದಲು 2002ರಲ್ಲಿ ಕನ್ನಡದ ಮೇಕಪ್ ಸಿನಿಮಾದಲ್ಲಿ ಜಗ್ಗೇಶ್ ಜೊತೆ ನಟಿಸಿದ್ದರು. ಈ ಸಿನಿಮಾ ಅಷ್ಟೊಂದು ಹಿಟ್ ಆಗಿರಲಿಲ್ಲ, ಕೊಲೆ ಮಾಡಿದ ಈಕೆಯ ಮಲತಂದೆ ಮೂಲತಃ ಕಾಶ್ಮೀರದವನಾಗಿದ್ದು, 2012ರಿಂದಲೂ ಈತ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿದ್ದಾನೆ. ಲೈಲಾ ತಾಯಿ ಸೆಲೀನಾ, ಲೈಲಾ ಒಡಹುಟ್ಟಿದವರಾದ ಅಜ್ಮೀನಾ, ಇಮ್ರಾನ್, ಝರಾ, ಹಾಗೂ ಸೊಸೆ ರೇಷ್ಮಾ ಫೆಬ್ರವರಿ 2011ರಿಂದ ನಾಪತ್ತೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಲೈಲಾಳ ಸ್ವಂತ ತಂದೆ ಹಾಗೂ ಸೆಲೀನಾ ಮೊದಲ ಪತಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.  ಇತ್ತ ಲೈಲಾ ತಾಯಿ ಸೆಲೀನಾಗೆ ಪರ್ವೀನ್ ತಾಕ್ ಮೂರನೇ ಗಂಡನಾಗಿದ್ದ, ಈತ ಜಮ್ಮು ಕಾಶ್ಮೀರ ಮೂಲದ ರೋಡ್ ಕಂಡಕ್ಟರ್ ಆಗಿದ್ದ. ಲೈಲಾಗೆ ಸೇರಿದ ಎರಡು ವಾಹನಗಳು ಕಾಶ್ಮೀರದಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಈತನ ವಿರುದ್ಧ ಪೊಲೀಸರಿಗೆ ಸಂಶಯ ಹುಟ್ಟಿತ್ತು. 

ಇವಳೆಂಥಾ ತಾಯಿ: ಗೆಳೆಯನ ಜೊತೆ ಸೇರಿ 9 ವರ್ಷದ ಕಂದನ ಭೀಕರ ಹತ್ಯೆ

ಮತ್ತೊಂದೆಡೆ ಸೆಲೀನಾ ಶೀಲದ ಬಗ್ಗೆ ಆತನಿಗೆ ಶಂಕೆ ಇತ್ತು. ಕುಟುಂಬದ ವ್ಯವಹಾರದಲ್ಲಿ ಸಿಕ್ಕ ಹಣದಲ್ಲಿ ತನಗೆ ಪಾಲು ನೀಡುತ್ತಿಲ್ಲ ಎಂದು ಪರ್ವೀನ್ ತಾಕ್‌ಗೆ ಸಿಟ್ಟಿತ್ತು, ಇದೆಲ್ಲದರಿಂದ ಸಿಟ್ಟುಗೊಂಡ ಆತ ಇಡೀ ಕುಟುಂಬವನ್ನು ಕೊಲೆ ಮಾಡಿದ್ದ.

click me!