ಎಲೆಕ್ಟ್ರಿಕ್ ಕಾರುಗಳಿಗಾಗಿ ಟೆಸ್ಲಾ ತಂತ್ರಜ್ಞಾನ ಅಳವಡಿಸಿಕೊಳ್ಳಲಿದೆ ವೋಲ್ವೋ!

By Suvarna NewsFirst Published Feb 9, 2022, 1:21 PM IST
Highlights
  • ಟೆಸ್ಲಾದ ಪ್ಲೇಬುಕ್‌ನ ಪುಟ ಬಳಸಿಕೊಳ್ಳಲಿರುವ ವೋಲ್ವಾ
  • ಟೆಸ್ಲಾ ಕಂಪನಿಯ ಮೆಗಾಕಾಸ್ಟಿಂಗ್‌ ತಂತ್ರಜ್ಞಾನದ ಬಳಕೆ
  • ಕಾರು ತಯಾರಿಯಲ್ಲಿ ಅಲ್ಯುಮಿನಿಯಂ ಬಳಕೆ ಹೆಚ್ಚಳ

Auto Desk: ಐಷಾರಾಮಿ ಕಾರು ತಯಾರಕ ಕಂಪನಿ ವೋಲ್ವೋ (Volvo), ಎಲೆಕ್ಟ್ರಿಕ್ ವಾಹನಗಳ ವಲಯದಲ್ಲಿ ತನ್ನ ಹೆಜ್ಜೆಗಳನ್ನು ವಿಸ್ತರಿಸಲು ಮುಂದಾಗಿದ್ದು, ಅದಕ್ಕಾಗಿ ಈಗಾಗಲೇ ಇವಿ (EV) ಕಾರುಗಳಿಂದ ಜನಪ್ರಿಯಗೊಂಡಿರುವ ಟೆಸ್ಲಾ ಕಂಪನಿಯ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಮುಂದಾಗಿದೆ. ಇದು ಟೆಸ್ಲಾದ ಪ್ಲೇಬುಕ್ನ (Tesla Playbook) ಪುಟವನ್ನು ತೆಗೆದುಕೊಂಡು ಹೊಸ ಬ್ಯಾಟರಿ ಚಾಲಿತ ಮಾದರಿಗಳನ್ನು ತಯಾರಿಸಲಿದೆ.ಸ್ವೀಡನ್ ಮೂಲದ ಈ ಕಂಪನಿ, ವಿದ್ಯುತ್ ಕಾರುಗಳಾಗಿ ಪರಿವರ್ತಿಸುವ ಭಾಗವಾಗಿ, ತನ್ನ ಆಟೋ ಸ್ಥಾವರವನ್ನು ನವೀಕರಿಸಲು 1.1 ಬಿಲಿಯನ್  ಡಾಲರ್ ಖರ್ಚು ಮಾಡಲು ಯೋಜನೆ ನಡೆಸುತ್ತಿರುವುದಾಗಿ ಕಂಪನಿ ಮಂಗಳವಾರ ತಿಳಿಸಿದೆ. ವೋಲ್ವೋ ಹೊಸ ಉತ್ಪಾದನಾ ಪ್ರಕ್ರಿಯೆಗಳನ್ನು ಪರಿಚಯಿಸುತ್ತಿದೆ. ಇದರಲ್ಲಿ ಟೆಸ್ಲಾ ಕಂಪನಿ ಬಳಸಿರುವ ಮೆಗಾಕಾಸ್ಟಿಂಗ್ (Mega casting) ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಿದೆ.

ಕಾರಿನ ಬಹುತೇಕ ಭಾಗಗಳನ್ನು ಅಲ್ಯುಮಿನಿಯಂನಿಂದ ತಯಾರಿಸುವುದರಿಂದ ಅದರ ಉತ್ಪಾದನಾ ವೆಚ್ಚ ಕಡಿಮೆಯಾಗುತ್ತದೆ. ಉತ್ಪಾದನಾ ಪ್ರಕ್ರಿಯೆ ಕೂಡ ಸುಲಭವಾಗುತ್ತದೆ. ಇದರರ್ಥ ವಾಹನದ ಕೆಳಭಾಗದ ಭಾಗಗಳಲ್ಲಿ ಅಲ್ಯುಮಿನಿಯಂನ ಬಹುದೊಡ್ಡ ತುಂಡುಗಳನ್ನು ಅಳವಡಿಸಿಬಹುದು. ಸಾಮಾನ್ಯವಾಗಿ, ಇದನ್ನು ಸಣ್ಣ ತುಂಡುಗಳಾಗಿ ಇರಿಸಿ ನಂತರ ಒಟ್ಟಾಗಿ ವೆಲ್ಡ್ ಮಾಡಲಾಗುತ್ತದೆ. ಟೆಸ್ಲಾ ತನ್ನ ಮಾದರಿ ವೈ ಎಸ್ಯುವಿ (Y SUV) ಒಳಭಾಗಗಳನ್ನು ತಯಾರಿಸಲು ಬೃಹತ್ ಗಾತ್ರದ ಅಲ್ಯುಮಿನಿಯಂ ಅನ್ನು ಬಳಸುತ್ತದೆ.

ಇದನ್ನೂ ಓದಿ: ಭಾರತದಲ್ಲಿ ವ್ಯಾಪಾರ, ಚೀನಾದಲ್ಲಿ ಉದ್ಯೋಗ ಸೃಷ್ಟಿ? ಎಲಾನ್‌ ಮಸ್ಕ್‌ ಟೆಸ್ಲಾಗೆ ಕೇಂದ್ರ ಸರ್ಕಾರ ಟಾಂಗ್!

ಟೆಸ್ಲಾ ಸಂಸ್ಥಾಪಕ ಎಲೋನ್ ಮಸ್ಕ್, ಮುಂದಿನ ದಿನಗಳಲ್ಲಿ, ಈ ಅಲ್ಯುಮಿನಿಯಂ ಬಳಕೆಯನ್ನು ವಿಸ್ತರಿಸಲು ಯೋಜಿಸಿದ್ದು, ಅಂತಿಮವಾಗಿ ವೈ( Y) ಮಾದರಿಯ ಮುಂಭಾಗ ಮತ್ತು ಹಿಂಭಾಗದ ಒಳಭಾಗಗಳನ್ನು ಅಲ್ಯೂಮಿನಿಯಂನ ಪ್ರತ್ಯೇಕ ತುಣುಕುಗಳಿಂದ ಮಾಡಲು ಚಿಂತನೆ ನಡೆಸಿದ್ದಾರೆ.. ಮಸ್ಕ್ ಪ್ರಕಾರ, ಟೆಸ್ಲಾದ ಶಾಂಘೈ ಸ್ಥಾವರದಲ್ಲಿನ ಎರಕದ ಯಂತ್ರವು ಇದುವರೆಗೆ ತಯಾರಿಸಿದ ಅತಿದೊಡ್ಡ ಮತ್ತು ಅತ್ಯಾಧುನಿಕ ಎರಕದ ಯಂತ್ರವಾಗಿದೆ. ಟೆಸ್ಲಾ ಬಹುನಿರೀಕ್ಷಿತ ಸೈಬರ್ಟ್ರಕ್ ಪಿಕಪ್ ಟ್ರಕ್ನ ಹಿಂಭಾಗದ ಭಾಗಗಳನ್ನು ತಯಾರಿಸಲು ಇನ್ನೂ ದೊಡ್ಡದಾದ ಉಪಕರಣವನ್ನು ಬಳಸಲು ಯೋಜಿಸಿದೆ.

ವೋಲ್ವೋದ ಮುಂದಿನ ಪೀಳಿಗೆಯ ಎಲೆಕ್ಟ್ರಿಕ್ ವಾಹನಗಳಿಗೆ ವಿಶೇಷವಾಗಿ ಕಾರಿನ ಕೆಳಭಾಗದ ರಚನೆಗೆ ಮೆಗಾಕ್ಯಾಸ್ಟಿಂಗ್ ಅನ್ನು ಬಳಸುವುದು ಅದರ ತೂಕವನ್ನು ಕಡಿಮೆ ಮಾಡಲು, ದಕ್ಷತೆಯನ್ನು ಸುಧಾರಿಸಲು ಮತ್ತು ಚಾಲನಾ ಶ್ರೇಣಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಕಂಪನಿ ಹೇಳಿದೆ.

ಇದನ್ನೂ ಓದಿ: ಹಿಂದೆ ಪ್ರಪಾತ ಮುಂದೆ ಬೆಟ್ಟ, ಕಡಿದಾದ ರಸ್ತೆಯಲ್ಲಿ ಚಾಲಕನ ಸಾಹಸ... ವಿಡಿಯೋ ವೈರಲ್‌

"ಇದು ನಾವು ಮರದ ವಸ್ತುಗಳ ಬಳಕೆಯನ್ನು ಉಕ್ಕಿಗೆ ಬದಲಾಯಿಸಿದ ನಂತರ ಅಳವಡಿಸಿಕೊಳ್ಳುತ್ತಿರುವ ಅತಿದೊಡ್ಡ ತಂತ್ರಜ್ಞಾನ ಬದಲಾವಣೆಯಾಗಿದೆ" ಎಂದು ವೋಲ್ವೋ ಎಂಜಿನಿಯರ್ ಆಟೋಮೋಟಿವ್ ನ್ಯೂಸ್ ಯುರೋಪ್ಗೆ ತಿಳಿಸಿದ್ದಾರೆ. ಹೊಸ ತಂತ್ರಜ್ಞಾನ ಅಳವಡಿಕೆಯಿಂದ,  ದೊಡ್ಡ ಅಲ್ಯೂಮಿನಿಯಂ ಭಾಗಗಳನ್ನು ಜೋಡಿಸಲು ಸಾಮಾನ್ಯವಾಗಿ ತೆಗೆದುಕೊಳ್ಳುವ ಸಮಯವನ್ನು ಶೇ.75ರಷ್ಟು ಕಡಿತಗೊಳಿಸುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

1 ಶತಕೋಟಿ ಡಾಲರ್ ಹೂಡಿಕೆಯಿಂದ ವೋಲ್ವೋ, ಟಾರ್ಸ್ಲ್ಯಾಂಡಾ ಸ್ಥಾವರದ ಬಣ್ಣ ಮತ್ತು ಅಂತಿಮ ಜೋಡಣೆ ಪ್ರದೇಶಗಳನ್ನು ನವೀಕರಿಸಲು ಮತ್ತು ಬ್ಯಾಟರಿ ಜೋಡಣೆ ಘಟಕವನ್ನು ನಿರ್ಮಿಸಲಿದೆ. ವೋಲ್ವೋ ಇತ್ತೀಚೆಗೆ ಬ್ಯಾಟರಿ ಪ್ಯಾಕ್ಗಳನ್ನು ಅಭಿವೃದ್ಧಿಪಡಿಸಲು ಮತ್ತು ತಯಾರಿಸಲು,  ಬ್ಯಾಟರಿ ತಯಾರಕ ಕಂಪನಿ ನಾರ್ತ್ವೋಲ್ಟ್ನೊಂದಿಗೆ ಸರಿಸುಮಾರು 3 ಬಿಲಿಯನ್ ಡಾಲರ್ ಹೂಡಿಕೆಯನ್ನು ಘೋಷಿಸಿತ್ತು. ವೋಲ್ವೋ 2030 ರ ವೇಳೆಗೆ ಸಂಪೂರ್ಣ ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸುವ ಗುರಿ ಹೊಂದಿದೆ.

ಭಾರತದಲ್ಲಿ ಕಡಿಮೆ ಬೆಲೆಯ ವೋಲ್ವೋ ಕಾರಾದ ಎಕ್ಸ್ (ಸಿXC40) ಮಾದರಿ 43.20 ಲಕ್ಷ  ರೂ.ಗಳಿಂದ ಪ್ರಾರಂಭವಾಗುತ್ತದೆ ಮತ್ತು ಅತ್ಯಂತ ದುಬಾರಿ ಮಾದರಿಯಾದ XC90ನ ಬೆಲೆ 90.90 ಲಕ್ಷದಿಂದ ಪ್ರಾರಂಭವಾಗುತ್ತದೆ. ಭಾರತದಲ್ಲಿ ಎಸ್ಯುವಿ ವಿಭಾಗದಲ್ಲಿ 3,  2 ಸೆಡಾನ್ ಸೇರಿದಂತೆ ವೋಲ್ವೋ 5 ಕಾರು ಮಾದರಿಗಳನ್ನು ನೀಡುತ್ತದೆ. ವೋಲ್ವೋ ಭಾರತದಲ್ಲಿ ಈ ವರ್ಷ XC40 ರೀಚಾರ್ಜ್ ಕಾರನ್ನು ಬಿಡುಗಡೆಗೊಳಿಸಲಿದೆ. 

click me!