ಟಿಯಾಗೋ ಸೇರಿ ಟಾಟಾ ಕಾರುಗಳ ಮೇಲೆ ಬರೋಬ್ಬರಿ 2.5 ಲಕ್ಷ ರೂ ಡಿಸ್ಕೌಂಟ್!

By Chethan Kumar  |  First Published Nov 18, 2024, 3:39 PM IST

ಟಾಟಾ ಟಿಯಾಗೋ, ಅಲ್ಟ್ರೋಜ್ ಸೇರಿದಂತೆ ಟಾಟಾ ಕಾರುಗಳ ಮೇಲೆ ಬರೋಬ್ಬರಿ 2.5 ಲಕ್ಷ ರೂಪಾಯಿ ಡಿಸ್ಕೌಂಟ್ ಘೋಷಿಸಲಾಗಿದೆ. ಇದು ನವೆಂಬರ್ ತಿಂಗಳ ಆಫರ್. 


ನವದೆಹಲ(ನ.18) ಕೈಗೆಟುಕುವ ದರದಲ್ಲಿ ಅತ್ಯುತ್ತಮ ಸೇಫ್ಟಿ ಕಾರು ಖರೀದಿಸಲು ಪ್ಲಾನ್ ಮಾಡಿದ್ದರೆ ಇದೀಗ ಕೆಲ ಬ್ರ್ಯಾಂಡ್‌ಗಳು ಉತ್ತಮ ಆಫರ್ ನೀಡುತ್ತಿದೆ. ಈ ಪೈಕಿ 5 ಸ್ಟಾರ್ ಸುರಕ್ಷತೆ, ಆಕರ್ಷಕ ವಿನ್ಯಾಸ, ಪರ್ಫಾಮೆನ್ಸ್ ಮೂಲಕ ಸದ್ದು ಮಾಡುತ್ತಿರುವ ಟಾಟಾ ಮೋಟಾರ್ಸ್ ಕಾರು ಸೂಕ್ತ ಆಯ್ಕೆಯಾಗಿದೆ. ಕಾರಣ ಟಾಟಾ ಕಾರುಳ ಮೇಲೆ ಬರೋಬ್ಬರಿ 2.5 ಲಕ್ಷ ರೂಪಾಯಿ ಡಿಸ್ಕೌಂಟ್ ಆಫರ್ ಘೋಷಿಸಲಾಗಿದೆ. ಟಿಯಾಗೋ ಕಾರಿನ ಬೆಲೆ 4.99 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ಇದೀಗ ಟಿಯಾಗೋ ಕಾರಿನ ಮೇಲೆ ಒಟ್ಟು 1 ಲಕ್ಷ ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಹೀಗಾಗಿ ಅತೀ ಕಡಿಮೆ ದರದಲ್ಲಿ ಟಾಟಾ ಕಾರುಗಳನ್ನು ಖರೀದಿಸಲು ಸಾಧ್ಯ.

ಟಾಟಾ ಮೋಟಾರ್ಸ್ ತನ್ನ ಆಯ್ದ ಕಾರುಗಳ ಮೇಲೆ ಡಿಸ್ಕೌಂಟ್ ಘೋಷಿಸಿದೆ. MY2023 ಹಾಗೂ MY2024 ಮಾಡೆಲ್ ಕಾರುಗಳ ಮೇಲೆ ಡಿಸ್ಕೌಂಟ್ ನೀಡಲಾಗಿದೆ. ಡಿಸ್ಕೌಂಟ್ ಆಫರ್ 40,000 ರೂಪಾಯಿಂದ 2.5 ಲಕ್ಷ ರೂಪಾಯಿವರೆಗೆ ನೀಡಲಾಗಿದೆ. MY2023 ಉತ್ಪಾದನಾ ವರ್ಷದ ಟಾಟಾ ಟಿಯಾಗೋ ಕಾರಿನ ಮೇಲೆ 1 ಲಕ್ಷ ರೂಪಾಯಿ ಒಟ್ಟು ಡಿಸ್ಕೌಂಟ್ ಘೋಷಿಸಲಾಗಿದೆ. MY2024 ಮಾಡೆಲ್ ಟಿಯಾಗೋ ಎಲ್ಲಾ ಕಾರುಗಳಿಗೆ 10,000 ರೂಪಾಯಿ ಡಿಸ್ಕೌಂಟ್, 15,000 ರೂಪಾಯಿ ಎಕ್ಸ್‌ಚೇಂಜ್ ಆಫರ್ ಮೂಲಕ ಒಟ್ಟು 25,000 ರೂಪಾಯಿ ನೀಡಲಾಗಿದೆ. 

Tap to resize

Latest Videos

undefined

ಭಾರತದ ಈ ಕಾರು ರೋಲ್ಸ್ ರಾಯ್ಸ್ ಕಾರಿನಷ್ಟೇ ಸುರಕ್ಷಿತ, ಕೈಗೆಟುಕುವ ದರದಲ್ಲಿ ಲಭ್ಯ!

ಟಾಟಾ ಟಿಗೋರ್  MY2023  ಉತ್ಪಾದನಾ ಕಾರುಗಲಿಗೆ ಸ್ಟಾಕ್ ಕ್ಲಿಯರೆನ್ಸ್‌ಗಾಗಿ ಒಟ್ಟು 1 ಲಕ್ಷ ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ.  MY2024 ಮಾಡೆಲ್ ಕಾರುಗಳ ಪೈಕಿ ಎಕ್ಸ್‌ಇ ವೇರಿಯೆಂಟ್ ಹೊರತುಡಿಸಿ ಇನ್ನುಳಿದ ಎಲ್ಲಾ ಪೆಟ್ರೋಲ್ ವೇರಿಯೆಂಟ್ ಹಾಗೂ ಸಿಎನ್‌ಜಿ ವೇರಿಯೆಂಟ್ ಕಾರುಗಳಿಗೆ 10,000 ರೂಪಾಯಿ ಕಸ್ಟಮರ್ ಬೆನಿಫಿಟ್, 15,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್ ಸೇರಿದಂತೆ ಒಟ್ಟು 25,000 ರೂಪಾಯಿ ಆಫರ್ ನೀಡಲಾಗಿದೆ. ಇನ್ನು ಎಕ್ಸ್‌ಐ ಟ್ರಿಮ್ ವೇರಿಯೆಂಟ್ ಟಿಯಾಗೋ ಕಾರುಗಳಿಗೆ ಒಟ್ಟು 45,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ.

MY2023  ಉತ್ಪಾದನಾ ವರ್ಷದ ಕಾರುಗಳಾದ ಟಾಟಾ ಅಲ್ಟ್ರೋಜ್ ಪೆಟ್ರೋಲ್, ಡೀಸೆಲ್ ಹಾಗೂ ಸಿಎನ್‌ಜಿ ಕಾರುಗಳಿಗೆ 90,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ.  MY2024  ಮಾಡೆಲ್ ಅಲ್ಟ್ರೋಜ್ ಕಾರಿನ ಡಿಸ್ಕೌಂಟ್ ಬೆಲೆ ವ್ಯತ್ಯಾಸವಾಗಲಿದೆ. ಆಯ್ದ ಮಾಡೆಲ್ ಕಾರುಗಳಿಗೆ ಒಟ್ಟು 25,000 ರೂಪಾಯಿಯಿಂದ 30,000 ರೂಪಾಯಿ ವರೆಗೆ ಡಿಸ್ಕೌಂಟ್ ಆಫರ್ ನೀಡಲಾಗಿದೆ.

ಅಕ್ಟೋಬರ್ ತಿಂಗಳಲ್ಲಿ ಗರಿಷ್ಠ ಮಾರಾಟ ದಾಖಲೆ ಪಡೆದಿರುವ ಟಾಟಾ ಪಂಚ್ ಕಾರಿಗೆ ಭರ್ಜರಿ ಡಿಸ್ಕೌಂಟ್ ನೀಡಲಾಗಿದೆ. MY2023 ಮಾಡೆಲ್ ಎಲ್ಲಾ ಪಂಚ್ ವೇರಿಯೆಂಟ್ ಕಾರಿಗೆ ಒಟ್ಟು 40,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. MY2024  ಮಾಡೆಲ್ ಆಯ್ದ ಕಾರುಗಳಿಗೆ ಕನ್ಸೂಮರ್ ಡಿಸ್ಕೌಂಟ್ 70,000 ರೂಪಾಯಿ ನೀಡಲಾಗಿದೆ. ಇನ್ನು ಎಕ್ಸ್‌ಜೇಂಬ್ ಬೆನಿಫಿಟ್ 15,000 ರೂಪಾಯಿ ನೀಡಲಾಗಿದೆ.

 MY2023 ಮಾಡೆಲ್ ನೆಕ್ಸಾನ್ ಕಾರಿಗೆ ಗರಿಷ್ಠ 1.25 ಲಕ್ಷ ರೂಪಾಯಿ ಡಿಸ್ಕೌಂಟ್ ಘೋಷಿಸಲಾಗಿದೆ. ಇನ್ನು  MY2024  ಮಾಡೆಲ್ ಕಾರುಗಳಿಗೆ ಒಟ್ಟು 30,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಹ್ಯಾರಿಯರ್ ಹಾಗೂ ಸಫಾರಿ  MY2023  ಮಾಡೆಲ್ ಕಾರುಗಳಿಗೆ 1.5 ಲಕ್ಷ ರೂಪಾಯಿಂದ 2.5 ಲಕ್ಷ ರೂಪಾಯಿ ಡಿಸ್ಕೌಂಟ್ ಘೋಷಿಸಲಾಗಿದೆ.

ಒಬೆನ್‌ನ ಅತೀ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಬೈಕ್ ಲಾಂಚ್, ಕೇವಲ 2,200ರೂಗೆ ಮನೆಗೆ ತನ್ನಿ ಇವಿ!

ವಿಶೇಷ ಸೂಚನೆ: ಪ್ರತಿ ಡಿಸ್ಕೌಂಟ್ ಆಫರ್, ಬೆಲೆ ಕಡಿತಗಳು ರಾಜ್ಯದಿಂದ ರಾಜ್ಯಕ್ಕೆ, ಡೀಲರ್‌ನಿಂದ ಡೀಲರ್‌ಗೆ ವ್ಯತ್ಯಾಸವಾಗಲಿದೆ. ಖರೀದಿಸುವ ಮುನ್ನ ಗ್ರಾಹಕರು ಹತ್ತಿರದ ಡೀಲರ್‌ ಬಳಿ ಡಿಸ್ಕೌಂಟ್ ಆಫರ್ ಖಚಿತಪಡಿಸಿಕೊಳ್ಳಿ. 

click me!