ಮುಂಬೈ(ಮಾ.16): ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಟಾಟಾ ಮೊದಲ ಸ್ಥಾನದಲ್ಲಿದೆ. ಟಾಟಾ ನೆಕ್ಸಾನ್ ಇವಿ ಹಾಗೂ ಟಾಟಾ ಟಿಗೋರ್ ಇವಿ ಮೂಲಕ ದೇಶದಲ್ಲೇ ಅತ್ಯಧಿಕ ಮಾರಾಟ ದಾಖಲೆಯನ್ನು ಬರೆದಿದೆ. ಕೈಗೆಟುಕುವ ದರದಲ್ಲಿ ಅತ್ಯುತ್ತಮ ಎಲೆಕ್ಟ್ರಿಕ್ ಕಾರುಗಳನ್ನು ಟಾಟಾ ನೀಡುತ್ತಿದೆ. ಇದೀಗ ಟಾಟಾ ಮೋಟಾರ್ಸ್ ತನ್ನ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಬೆಲೆ ಹೆಚ್ಚಳ ಮಾಡುತ್ತಿದೆ.
ಇದೇ ತಿಂಗಳನಿಂದ ಟಾಟಾ ನೆಕ್ಸಾನ್ ಇವಿ ಕಾರಿನ ಬೆಲೆ ಹೆಚ್ಚಳ ಮಾಡಲಾಗಿದೆ. ಎಲ್ಲಾ ವೇರಿಯೆಂಟ್ ಕಾರಿನ ಮೇಲೆ ಬೆಲೆ ಏರಿಕೆಯಾಗುತ್ತಿದೆ. ನೂತನ ಟಾಟಾ ನೆಕ್ಸಾನ್ ಇವಿ ಕಾರಿನ ಬೆಲೆ 25,000 ರೂಪಾಯಿ ಹೆಚ್ಚಾಗಿದೆ. XM, XZ ಪ್ಲಸ್, XZ ಪ್ಲಸ್ ಲಕ್ಸುರಿ, ಡಾರ್ಕ್XZ ಪ್ಲಸ್ ಹಾಗೂ ಡಾರ್ಕ್ XZ ಪ್ಲಸ್ ಲಕ್ಸುರಿ ಇವಿ ಕಾರಿನ ಬೆಲೆ ಹೆಚ್ಚಳವಾಗಿದೆ.
undefined
ಅತ್ಯುತ್ತಮ ಪರ್ಫಾಮೆನ್ಸ್, ಕೈಗೆಟುಕುವ ದರ, ಟಾಟಾ ಟಿಗೋರ್ ಇವಿ ಟೆಸ್ಟ್ ಡ್ರೈವ್ Review
ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಬೆಲೆ ಈ ಮೊದಲು 14.29 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದೆ(ಎಕ್ಸ್ ಶೋ ರೂಂ). ಆದರೆ ಪರಿಷ್ಕತ ದರದ ಬಳಿಕ ನೂತನ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರನ ಬೆಲೆ 14.54 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ಗೆ ಎರಿಕೆಯಾಗಿದೆ. ಟಾಪ್ ಮಾಡೆಲ್ ಕಾರಿನ ಬೆಲೆ 15.15 ಲಕ್ಷ ರೂಪಾಯಿಗೆ ಹೆಚ್ಚಳವಾಗಿದೆ.
ಕಚ್ಚಾವಸ್ತುಗಳ ಬೆಲೆ ಹೆಚ್ಚಳದಿಂದ ನೆಕ್ಸಾನ್ ಇವಿ ಕಾರಿನ ಉತ್ಪಾದನಾ ವೆಚ್ಚವೂ ಅಧಿಕವಾಗಿದೆ. ಹೀಗಾಗಿ ಕಾರಿನ ಬೆಲೆ ಹೆಚ್ಚಳ ಮಾಡಲಾಗುತ್ತಿದೆ ಎಂದು ಟಾಟಾ ಮೋಟಾರ್ಸ್ ಹೇಳಿದೆ. ಫೆಬ್ರವರಿ ತಿಂಗಳಲ್ಲಿ ಟಾಟಾ ನೆಕ್ಸಾನ್ 2,250 ಕಾರುಗಳು ಮಾರಾಟವಾಗಿದೆ. ಟಾಟಾ ನೆಕ್ಸಾನ್ ಇವಿ ಕಾರಿನಲ್ಲಿ 30.2kWH ಬ್ಯಾಟರಿ ಬಳಸಲಾಗಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 312 ಕಿ.ಮೀ ಮೈಲೇಜ್ ನೀಡಲಿದೆ ಎಂದು ಟಾಟಾ ಹೇಳಿದೆ.
Nexon EV sales ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿಗೆ ಭಾರಿ ಬೇಡಿಕೆ, ಕಳೆದ 10 ತಿಂಗಳಲ್ಲಿ 9 ಸಾವಿರ EV ಮಾರಾಟ!
ಫಾಸ್ಟ್ ಚಾರ್ಜಿಂಗ್ ಮೂಲಕ ಕಾರು ಚಾರ್ಜ್ ಮಾಡಲು 1 ಗಂಟೆ ಸಮಯ ತೆಗೆದುಕೊಳ್ಳಲಿದೆ. ಆದರೆ ಮನೆಯಲ್ಲಿ ಸಾಮಾನ್ಯ ಪ್ಲಗ್ ಪಾಯಿಂಟ್‌ನಲ್ಲಿ ಚಾರ್ಜಿಂಗ್ ಮಾಡುವುದಾದರೆ ಸಂಪೂರ್ಣ ಚಾರ್ಜ್‌ಗೆ 8 ಗಂಟೆ ಸಮಯ ತೆಗೆದುಕೊಳ್ಳಲಿದೆ. 127bhp ಪವರ್ ಹಾಗೂ 245 nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.
ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಕ್ಕೆ ಲೈಸೆನ್ಸ್ ಬೇಕಿಲ್ಲ
ನವದೆಹಲಿ: ವಿದ್ಯುತ್‌ಚಾಲಿತ ವಾಹನಗಳಿಗೆ ಉತ್ತೇಜನ ನೀಡುವ ಸಲುವಾಗಿ ಮಹತ್ವದ ನಿರ್ಧಾರ ಕೈಗೊಂಡಿರುವ ಕೇಂದ್ರ ಸರ್ಕಾರ, ಖಾಸಗಿ ಸಂಸ್ಥೆ ಅಥವಾ ವ್ಯಕ್ತಿಗಳು ಸಾರ್ವಜನಿಕ ಚಾರ್ಜಿಂಗ್ ಕೇಂದ್ರ ತೆರೆಯಲು ಯಾವುದೇ ಲೈಸೆನ್ಸ್ ಪಡೆಯಬೇಕಿಲ್ಲ ಎಂದು ಘೋಷಣೆ ಮಾಡಿದೆ. ಇದೇ ವೇಳೆ, ಗೃಹಬಳಕೆಯ ವಿದ್ಯುತ್ ದರದಲ್ಲೇ ಹಾಲಿ ಇರುವ ಸಂಪರ್ಕವನ್ನು ಬಳಸಿಕೊಂಡು ಮನೆ ಅಥವಾ ಕಚೇರಿಯಲ್ಲಿ ತಮ್ಮ ವಾಹನಗಳನ್ನು ಚಾಜ್‌ರ್ ಮಾಡಿಕೊಳ್ಳಲು ವಿದ್ಯುತ್‌ಚಾಲಿತ ವಾಹನಗಳ ಮಾಲಿಕರಿಗೆ ನಿಶಾನೆಯನ್ನೂ ತೋರಿದೆ. ಈ ಸಂಬಂಧ ವಿದ್ಯುತ್ ಸಚಿವಾಲಯ ಪರಿಷ್ಕೃತ ಮಾರ್ಗಸೂಚಿ ಹಾಗೂ ಮಾನದಂಡಗಳನ್ನು ಬಿಡುಗಡೆ ಮಾಡಿದೆ.
ಸರ್ಕಾರಿ ಸಂಸ್ಥೆ ಅಥವಾ ಖಾಸಗಿ ಸಂಸ್ಥೆ ಅಥವಾ ವ್ಯಕ್ತಿಗಳು ಆದಾಯ ಹಂಚಿಕೆಯ ಆಧಾರದಲ್ಲಿ ಸಾರ್ವಜನಿಕ ಚಾರ್ಜಿಂಗ್ ಕೇಂದ್ರ ಸ್ಥಾಪಿಸಲು ಮುಂದೆ ಬಂದರೆ ಸರ್ಕಾರದ ಜಾಗ ನೀಡಲಾಗುತ್ತದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುವುದರ ಜತೆಗೆ, ಪಂಕ್ಚರ್ ಅಂಗಡಿಯ ರೀತಿಯಲ್ಲಿ ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳು ತಲೆಎತ್ತಲಿವೆ. ವಿದ್ಯುತ್‌ಚಾಲಿತ ವಾಹನಗಳ ಮಾಲಿಕರಿಗೆ ಪ್ರಯಾಣ ಮಧ್ಯೆ ಚಾಜ್‌ರ್ ಖಾಲಿಯಾಗುವ ಆತಂಕ ದೂರವಾಗುತ್ತದೆ.