ಮೌನವೇ ಆಭರಣ: ಸದ್ದಿಲ್ಲದ ತಂತ್ರಗಾರಿಕೆ, ಮೋದಿ ಎದೆಗಾರಿಕೆ!

By nikhil vkFirst Published Oct 13, 2018, 1:29 PM IST
Highlights

ತೈಲದರ ಏರಿಕೆ ಕುರಿತು ನರೇಂದ್ರ ಮೋದಿ ಏಕೆ ಮಾತಾಡ್ತಿಲ್ಲ?! ಪ್ರಧಾನಿ ಮೋದಿ ಉತ್ತರಕ್ಕೆ ಕಾದು ಕುಳಿತಿದೆ ಜಗತ್ತು! ನವೆಂಬರ್ 4 ನಂತರ ಭಾರತದ ತೈಲ ಭವಿಷ್ಯ ಏನಾಗಲಿದೆ?! ತೈಲ ಕಂಪನಿಗಳ ಜೊತೆ ಮೋದಿ ನಡೆಸಿದ ಮಾತುಕತೆ ವಿವರ ಇಲ್ಲಿದೆ! ತೈಲ ಕಂಪನಿಗಳಿಗೆ ಪ್ರಧಾನಿ ನೀಡಿದ ಟಾಸ್ಕ್ ಏನು?! ನೈಸರ್ಗಿಕ ಇಂಧನ ಉತ್ಪಾನೆ ಹೆಚ್ಚಳಕ್ಕೆ ಮೋದಿ ಒತ್ತು  

ನವದೆಹಲಿ(ಅ.13): ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದರ ಏರಿಕೆ, ದೇಶದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ, ನವೆಂಬರ್ 4 ರ ಬಳಿಕ ಇರಾನ್ ಮೇಲಿನ ಅಮೆರಿಕದ ನಿರ್ಬಂಧ, ನಂತರದ ಭಾರತದ ಪರಿಸ್ಥಿತಿ. ಇವುಗಳಿಗೆಲ್ಲಾ ಕೇವಲ ಪ್ರತಿಪಕ್ಷಗಳಷ್ಟೇ ಅಲ್ಲ ವಿಶ್ವವೇ ಪ್ರಧಾನಿ ನರೇಂದ್ರ ಮೋದಿ ಉತ್ತರದ ನಿರೀಕ್ಷೆಯಲ್ಲಿದೆ.

ಆದರೆ ಪ್ರಧಾನಿ ನರೇಂದ್ರ ಮೋದಿ ಮಾತ್ರ ಈ ಯಾವುದೇ ಪ್ರಶ್ನೆಗಳಿಗೆ ಉತ್ತರ ನೀಡುವ ಗೋಜಿಗೆ ಹೋಗದೆ ಮೌನಕ್ಕೆ ಶರಣಾಗಿದ್ದಾರೆ. ಆಗೊಮ್ಮೆ ಈಗೊಮ್ಮೆ ಸಂಬಂಧಪಟ್ಟ ಕೇಂದ್ರ ಸಚಿವರುಗಳು ಈ ಕುರಿತು ಪ್ರತಿಕ್ರಿಯೆ ನೀಡುತ್ತಾರಾದರೂ, ಮೋದಿ ಉತ್ತರಕ್ಕಾಗಿ ಎಲ್ಲರೂ ಎದುರು ನೋಡುತ್ತಿದ್ದಾರೆ.

ಹಾಗಂತ ಪ್ರಧಾನಿ ಮೋದಿ ಮೌನಕ್ಕೆ ಶರಣಾಗಿರುವುದು ಅವರ ಬಳಿ ಉತ್ತರ ಇಲ್ಲ ಎಂತಲೋ, ಅಥವಾ ಈ ಎಲ್ಲಾ ಪ್ರಶ್ನೆಗಳಿಗೆ ಜಬರದಸ್ತ್ ಉತ್ತರ ನೀಡಲು ಅವರು ರೂಪಿಸುತ್ತಿರುವ ನೀತಿ ನಿರೂಪಣೆಯಲ್ಲಿ ಮೋದಿ ಮಗ್ನರಾಗಿದ್ದಾರೋ.

ಮೋದಿ ಏಕೆ ಮೌನವಾಗಿದ್ದಾರೆ?:

ಇದಕ್ಕೆ ಉತ್ತರ ಇತ್ತೀಚಿಗೆ ಕೇಂದ್ರ ಸರ್ಕಾರ ತೆಗೆದಕೊಂಡಿರುವ ಕೆಲವು ನಿರ್ಧಾರಗಳನ್ನೇ ಗಮನಿಸಿದರ ಸಿಗುತ್ತದೆ. ಅಮೆರಿಕದ ನಿರ್ಬಂಧದ ಹೊರತಾಗಿಯೂ ಇರಾನ್ ನಿಂದ ತೈಲ ಖರೀದಿಗೆ ಮುಂದಾಗಿರುವುದು, ಸೌದಿಯಿಂದ ಹೆಚ್ಚುವರಿ 4 ಮಿಲಿಯನ್ ಬ್ಯಾರೆಲ್ ತೈಲ ಖರೀದಿಗೆ ಸಿದ್ಧವಾಗಿರುವುದರ ಹಿಂದೆ ಮೋದಿ ಮುಂದಾಲೋಚನೆ ಕೆಲಸ ಮಾಡಿದೆ.

ಸದ್ಯ ಭಾರತದ ತೈಲ ಕಂಪನಿಗಳ ಜೊತೆ ಮಾತುಕತೆಯಲ್ಲಿ ನಿರತರಾಗಿರುವ ಮೋದಿ, ನವೆಂಬರ್ 4 ಬಳಿಕ ಎದುರಾಗಬಹುದಾದ ಸವಾಲುಗಳನ್ನು ಸ್ವೀಕರಿಸಲು ಸಿದ್ಧತೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತದ ತೈಲ ಮತ್ತು ನೈಸರ್ಗಿಕ ಇಂಧನ ಉತ್ಪಾದನಾ ಸಂಸ್ಥೆಗಳ ಜೊತೆ ಮೋದಿ ಮಾತುಕತೆ ನಡೆಸಿದ್ದಾರೆ.

ತೈಲ ಮತ್ತು ನೈಸರ್ಗಿಕ ಇಂಧನ ಸಂಸ್ಥೆ(ONGC), ಆಯಿಲ್ ಇಂಡಿಯಾ ಲಿಮಿಟೆಡ್(OIL) ಸಂಸ್ಥೆಯ ಮುಖ್ಯಸ್ಥರುಗಳೊಂದಿಗೆ ಪ್ರಧಾನಿ ಮೋದಿ ಮಾತುಕತೆ ನಡೆಸಿದ್ದಾರೆ. ದೇಶದ ಸದ್ಯದ ತೈಲ ಪರಿಸ್ಥಿತಿ ಮತ್ತು ನೈಸರ್ಗಿಕ ಇಂಧನ ಉತ್ಪಾದನೆಯ ಕುರಿತಾದ ಮಾಹಿತಿಯನ್ನು ಮೋದಿ ಪಡೆದಿದ್ದಾರೆ.

ಮೋದಿ ಟಾಸ್ಕ್ ಏನು?:

2022 ರಲ್ಲಿ ಶೇ. 67 ರಷ್ಟು ತೈಲ ಆಮದನ್ನು ಕಡಿಗೊಳಿಸಲು ಪ್ರಧಾನಿ ಮೋದಿ ನಿರ್ಧರಿಸಿದ್ದು, ಅದರಂತೆ ನೈಸರ್ಗಿಕ ಇಂಧನದ ಉತ್ಪಾದನೆ ಮತ್ತು ಬಳಕೆಯನ್ನು ಹೆಚ್ಚಿಸಲು ಮೋದಿ ಚಿತ್ತ ಹರಿಸಿದ್ದಾರೆ. ಅಲ್ಲದೇ ದೇಶದ ನೈಸರ್ಗಿಕ ಇಂಧನ ಉತ್ಪಾದನೆ 24 ಬಿಲಿಯನ್ ಕ್ಯೂಬಿಕ್ ಮೀಟರ್ ನಿಂದ 42 ಬಿಲಿಯನ್ ಕ್ಯೂಬಿಕ್ ಮೀಟರ್ ಗೆ ಹೆಚ್ಚಾಗಿರುವುದು, ಭವಿಷ್ಯದ ಕುರಿತು ಆಶಾಭಾವನೆ ಹೊಂದುವಂತೆ ಮಾಡಿದೆ.

ಇದೇ ವೇಳೆ ಭಾರತದ ಕಚ್ಚಾ ತೈಲ ಆಮದು ಪ್ರಮಾಣ 2016-17 ರಲ್ಲಿ 36 ಮಿಲಿಯನ್ ಟನ್ ಇದ್ದು, 2017-18 ರಲ್ಲಿ 35.7 ಮಿಲಿಯನ್ ಟನ್ ಗೆ ಇಳಿಕೆಯಾಗಿದೆ. ಒಟ್ಟಿನಲ್ಲಿ ಈ ಎಲ್ಲಾ ಬೆಳವಣಿಗೆಗಳು ಮೋದಿ ಅವರ ದೂರಾಲೋಚನೆಯ ಪರಿಣಾಮ ಎನ್ನಲಾಗುತ್ತಿದ್ದು, ಅವರ ಮುಂದಿನ ನಡೆಗಳ ಕುರಿತು ಎಲ್ಲರಲ್ಲೂ ಕುತೂಹಲ ಮನೆ ಮಾಡಿದೆ.

click me!