ಪಿಎಂ ಉಜ್ವಲ ಯೋಜನೆಯಡಿ ಪ್ರತಿ ಮನೆಗೆ ಪೈಪ್ ಮುಖಾಂತರ ಅಡುಗೆ ಅನಿಲ; 2030ರೊಳಗೆ 125 ಕೋಟಿ ಸಂಪರ್ಕದ ಗುರಿ

By Suvarna News  |  First Published Apr 23, 2024, 4:33 PM IST

ಪಿಎಂ ಉಜ್ವಲ ಯೋಜನೆಯಡಿ ಪ್ರತಿ ಮನೆಗೆ ಪೈಪ್ ಮುಖಾಂತರ ಅಡುಗೆ ಅನಿಲ ಪೂರೈಕೆಗೆ ಯೋಜನೆ ರೂಪಿಸಲಾಗಿದೆ. 2030ರೊಳಗೆ 125 ಕೋಟಿ ಸಂಪರ್ಕದ ಗುರಿಯನ್ನು ಈ ಯೋಜನೆ ಹೊಂದಿದೆ. 


ನವದೆಹಲಿ (ಏ.23): ಪಿಎಂ ಉಜ್ವಲ ಯೋಜನೆಯಡಿ ಪ್ರತಿ ಮನೆಗೆ ಪೈಪ್ ಮುಖಾಂತರ ಅಡುಗೆ ಅನಿಲ ಪೂರೈಕೆ ಮಾಡಲು ನಿರ್ಧರಿಸಲಾಗಿದೆ. ಇದರ ಭಾಗವಾಗಿ 2030ರೊಳಗೆ 12.5 ಕೋಟಿ ಮನೆಗಳಿಗೆ ಪೈಪ್ ಮುಖಾಂತರ ಅಡುಗೆ ಅನಿಲ ಪೂರೈಕೆ ಮಾಡುವ ಗುರಿ ನಿಗದಿಪಡಿಸಲಾಗಿದೆ. ಪಿಎ ಉಜ್ವಲ ಯೋಜನೆಯನ್ನು ಕೇಂದ್ರ ಸರ್ಕಾರ 2016ರಲ್ಲಿ ಪ್ರಾರಂಭಿಸಿತ್ತು. ಗ್ರಾಮೀಣ ಭಾಗದ ಹಾಗೂ ಬಡಜನರ ಮನೆಗಳಿಗೆ ಶುದ್ಧವಾದ ಅಡುಗೆ ಅನಿಲ ಸೌಲಭ್ಯ ಕಲ್ಪಿಸೋದು ಈ ಯೋಜನೆ ಉದ್ದೇಶವಾಗಿತ್ತು. ಈ ಯೋಜನೆಯಡಿ ಈಗಾಗಲೇ ದೇಶಾದ್ಯಂತ  10.27 ಕೋಟಿ ಫಲಾನುಭವಿಗಳಿಗೆ ಅಡುಗೆ ಅನಿಲದ ಸಂಪರ್ಕ ನೀಡಲಾಗಿದೆ. ಈಗ ಈ ಯೋಜನೆಯಡಿ ಪೈಪ್ ಮೂಲಕ ಅಡುಗೆ ಅನಿಲ ಪೂರೈಕೆ ಮಾಡಲು ನಿರ್ಧರಿಸಲಾಗಿದ್ದು, ಗ್ರಾಮೀಣ ಹಾಗೂ ನಗರ ಭಾಗದ ಮನೆಗಳಿಗೆ ನಿರಂತರ ಶುದ್ಧ ಅಡುಗೆ ಅನಿಲ ಸಿಗುವಂತೆ ಮಾಡುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.

2024ರ ಮಾರ್ಚ್ ತನಕ ಲಭ್ಯವಿರುವ ಅಧಿಕೃತ ಮಾಹಿತಿ ಪ್ರಕಾರ ದೇಶಾದ್ಯಂತ ಒಟ್ಟು 1.21 ಕೋಟಿ ಗೃಹ ಬಳಕೆ ಪಿಎನ್ ಜಿ ಸಂಪರ್ಕ ನೀಡಲಾಗಿದೆ. 2024ರ ಜನವರಿಯೊಳಗೆ ಅಂದಾಜು  10,000 ಕಿ.ಮೀ. ಗ್ಯಾಸ್ ಪೈಪ್ ಲೈನ್ ಹಾಕಲಾಗಿದೆ. 2014ಕ್ಕೆ ಹೋಲಿಸಿದರೆ ಪೈಪ್ ಮುಖಾಂತರ ಅಡುಗೆ ಅನಿಲ ಪೂರೈಕೆಯಲ್ಲಿ ಗಮನಾರ್ಹ ಪ್ರಗತಿ ಕಂಡುಬಂದಿದೆ. 2014ರಲ್ಲಿ ಅಂದಾಜು 25 ಲಕ್ಷ ಮನೆಗಳಿಗೆ ಮಾತ್ರ ಪೈಪ್ ಮುಖಾಂತರ ಅಡುಗೆ ಅನಿಲ ಪೂರೈಕೆಯಿತ್ತು. ಅದರಲ್ಲೂ ಪಟ್ಟಣ ಪ್ರದೇಶದಲ್ಲಿ ಮಾತ್ರ.

Tap to resize

Latest Videos

LPG Price:ಉಜ್ವಲ ಯೋಜನೆ ಎಲ್ಪಿಜಿ ಸಬ್ಸಿಡಿ 300ರೂ.ಗೆ ಹೆಚ್ಚಳ; 603ರೂ.ಗೆ ಸಿಗಲಿದೆ ಅಡುಗೆ ಅನಿಲ ಸಿಲಿಂಡರ್

ಭಾರತದಲ್ಲಿ ಶುದ್ಧ ಅಡುಗೆ ಅನಿಲ ಸಂಪರ್ಕ ಬಡವರ್ಗದ ಜನರಿಗೆ ಕಡಿಮೆ ಪ್ರಮಾಣದಲ್ಲಿತ್ತು. ಗ್ರಾಮೀಣ ಭಾಗದ ಬಡ ಜನರು ಅಡುಗೆಗೆ ಇದ್ದಲು, ಕಟ್ಟಿಗೆ ಹಾಗೂ ಸೆಗಣಿಯಿಂದ ಮಾಡಿದ ಇಂಧನ ಬಳಸುತ್ತಿದ್ದರು. ಇವುಗಳಿಂದ ದೊಡ್ಡ ಪ್ರಮಾಣದಲ್ಲಿ ಹೊಗೆ ಉತ್ಪತ್ತಿಯಾಗುತ್ತಿದ್ದು, ಆರೋಗ್ಯಕ್ಕೆ ಅಪಾಯಕಾರಿಯಾಗಿತ್ತು. ಇನ್ನು ಆ ಸಮಯದಲ್ಲಿ ಎಲ್ ಪಿಜಿ ಸಿಲಿಂಡರ್ ಗಳು ನಗರ ಹಾಗೂ ಅರೆಪಟ್ಟಣ ಪ್ರದೇಶ ಹೆಚ್ಚಿನ ಆದಾಯ ಹೊಂದಿರುವ ಜನರಿಗೆ ಮಾತ್ರ ಲಭಿಸುತ್ತಿತ್ತು.

ಪೈಪ್ ಮುಖಾಂತರ ಅಡುಗೆ ಅನಿಲ ಪೂರೈಕೆ ಸಿಲಿಂಡರ್ ಸಾಗಣೆ, ರಿಫಿಲ್ಲಿಂಗ್ ಮುಂತಾದ ಕಾರ್ಯಗಳನ್ನು ತಪ್ಪಿಸುವ ಮೂಲಕ ಬಳಕೆದಾರರಿಗೆ ಅನುಕೂಲ ಒದಗಿಸುತ್ತಿತ್ತು. ಅಲ್ಲದೆ, ಸಾಗಣೆ ವೆಚ್ಚ ತಗ್ಗಿಸುವ ಹಾಗೂ ಸುರಕ್ಷತೆ ಹೆಚ್ಚಿಸುವ ಮೂಲಕ ಇದು ಹೆಚ್ಚು ಪರಿಣಾಮಕಾರಿಯಾಗಿದೆ. ಅಲ್ಲದೆ, ಇದು ನಿರತರ ಅಡುಗೆ ಅನಿಲ ಪೂರೈಕೆ ಮಾಡೋದ್ರಿಂದ ಗ್ಯಾಸ್ ಖಾಲಿಯಾಗುವ ಭಯವಿಲ್ಲ. 

ಪೈಪ್ ಮುಖಾಂತರ ಅಡುಗೆ ಅನಿಲ ಪೂರೈಕೆಯನ್ನು ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ (PNGRB)ನಿರ್ವಹಣೆ ಮಾಡುತ್ತಿದೆ. 2023ರ ಮೇ ತನಕ ಅಂದಾಜು 300 ಪ್ರದೇಶಗಳ ಅಂದಾಜು ಶೇ.98ರಷ್ಟು ಜನಸಂಖ್ಯೆಗೆ ಪೈಪ್ ಮುಖಾಂತರ ಅಡುಗೆ ಅನಿಲ ಸಂಪರ್ಕ ನೀಡಲು ಪಿಎನ್ ಜಿಆರ್ ಬಿಗೆ ಅನುಮತಿ ನೀಡಲಾಗಿದೆ. ಇದರಲ್ಲಿ 28 ಜಿಲ್ಲೆಗಳು ಹಾಗೂ ಕೇಂದ್ರಾಡಳಿತ ಪ್ರದೆಶದ 630 ಜಿಲ್ಲೆಗಳು ಸೇರಿವೆ. PNGRBಗೆ 2030ರೊಳಗೆ ಅಂದಾಜು 12.5  ಕೋಟಿ ಪಿಎನ್ ಜಿ ಸಂಪರ್ಕ ನೀಡುವ ಕಾರ್ಯವನ್ನು ವಹಿಸಲಾಗಿದೆ. 

ಹೊಸ ಹಣಕಾಸು ವರ್ಷದ ಮೊದಲ ದಿನವೇ ಗ್ರಾಹಕರಿಗೆ ಗುಡ್ ನ್ಯೂಸ್ ; ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ 30.50ರೂ. ಇಳಿಕೆ

2016ರಿಂದ 2019ರ ವರೆಗಿನ ಮೊದಲ ಹಂತದ ಉಜ್ವಲ ಯೋಜನೆಯಲ್ಲಿ ಕೇಂದ್ರ ಸರ್ಕಾರ 8 ಕೋಟಿ ಅಡುಗೆ ಅನಿಲ ಸಂಪರ್ಕ ನೀಡಿದೆ. ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯದ ಸಹಯೋಗದಲ್ಲಿ ಜಾರಿಗೆ ತಂದಿರುವ ಈ ಯೋಜನೆಯಡಿ ಬಡ ಕುಟುಂಬಗಳಿಗೆ ತ್ವರಿತವಾಗಿ ಗ್ಯಾಸ್ ಸಂಪರ್ಕ ನೀಡಲಾಗುತ್ತದೆ. ಮೊದಲು ಸಂಪರ್ಕ ಪಡೆಯಲು 10 ದಿನ ಕಾಯಬೇಕಿದ್ದರೆ, ಇದೀಗ ತಕ್ಷಣವೇ ನೀಡಲಾಗುತ್ತದೆ.

click me!