ವಾರದಲ್ಲಿ 70 ಗಂಟೆ ಕೆಲಸ ಅಂದ್ರೆ ಮಕ್ಳು ಮಾಡ್ಕೋಬೇಡಿ, ಮೂರ್ತಿ-ಸುಬ್ರಹ್ಮಣ್ಯನ್‌ಗೆ ನಮಿತಾ ಠಕ್ಕರ್

Published : Apr 07, 2025, 08:30 PM ISTUpdated : Apr 07, 2025, 08:38 PM IST
ವಾರದಲ್ಲಿ 70 ಗಂಟೆ ಕೆಲಸ ಅಂದ್ರೆ ಮಕ್ಳು ಮಾಡ್ಕೋಬೇಡಿ, ಮೂರ್ತಿ-ಸುಬ್ರಹ್ಮಣ್ಯನ್‌ಗೆ ನಮಿತಾ ಠಕ್ಕರ್

ಸಾರಾಂಶ

ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕು ಎಂದಾದರೆ ಮಕ್ಕಳು ಮಾಡಿಕೊಳ್ಳಬೇಡಿ ಎಂದು ಯುವ ಉದ್ಯಮಿ ನಮಿತಾ ಥಾಪರ್, ನಾರಾಯಣಮೂರ್ತಿ ಹಾಗೂ ಎಸ್ಎನ್ ಸುಬ್ರಹ್ಮಣ್ಯನ್‌ಗೆ ಟಾಂಗ್ ಕೊಟ್ಟಿದ್ದಾರೆ. ಅಷ್ಟಕ್ಕೂ ನಮಿತಾ ಥಾಪರ್ ಹೇಳಿದ್ದೇನು? 

ನವದೆಹಲಿ(ಏ.07) ಭಾರತದಲ್ಲಿ ಕೆಲಸದ ಸಮಯದ ಕುರಿತು ಭಾರಿ ಚರ್ಚೆ ನಡೆದಿದೆ. ಪರ ವಿರೋಧಗಳು ವ್ಯಕ್ತವಾಗಿದೆ. ಇನ್ಫೋಸಿಸ್ ನಾರಾಯಣ ಮೂರ್ತಿ ಹೇಳಿದ ವಾರದಲ್ಲಿ 70 ಗಂಟೆ ಕೆಲಸ, ಎಲ್ ಆ್ಯಂಡ್ ಟಿ ಮುಖ್ಯಸ್ಥ ಸೂಚಿಸಿದ ವಾರದಲ್ಲಿ 90 ಗಂಟೆ ಕೆಲಸದ ಮಾತುಗಳಿಗೆ ಭಾರಿ ವಿರೋಧಗಳು ವ್ಯಕ್ತವಾಗಿದೆ. ಹಲವು ಉದ್ಯಮಿಗಳು ಈ ಮಾತುಗಳಿಗೆ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಉದ್ಯಮಿ, ಶಾರ್ಕ್ ಟ್ಯಾಂಕ್ ಜಡ್ಜ್ ನಮಿತಾ ಥಾಪರ್ ಈ ಕುರಿತು ಮಾತನಾಡಿದ್ದಾರೆ. ಇದೇ ವೇಳೆ ನಾರಾಯಣ ಮೂರ್ತಿ ಹಾಗೂ ಎಸ್ಎನ್ ಸುಬ್ರಹ್ಮಣ್ಯನ್‌ಗೆ ಟಾಂಗ್ ಕೊಟ್ಟಿದ್ದಾರೆ. ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕು ಅಂದರೆ ನೀವು ಮಕ್ಕಳು ಮಾಡಿಕೊಳ್ಳಲು ಹೋಗಬೇಡಿ ಎಂದು ಸಲಹೆ ನೀಡಿದ್ದಾರೆ.

ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿರುವ ಬ್ರಿಟಿಷ್ ಮಿನಿಸೀರಿಸ್‌ ಎಂಡೋಲ್‌ಸೀನ್‌ನಲ್ಲಿ ಮಾತನಾಡಿರುವ ನಮಿತಾ ಥಾಪರ್ ವರ್ಕ್ ಲೈಫ್ ಬ್ಯಾಲೆನ್ಸ್ ಕುರಿತು ಮಾತನಾಡಿದ್ದಾರೆ. ನಿಮ್ಮ ಮಕ್ಕಳನ್ನು ಈ ಜಗತ್ತಿಗೆ ತಂದಾಗ ಅವರೊಂದಿಗೆ ಸಮಯ ಕಳೆಯಿರಿ. ಅವರಿಗೆ ಸಮಯ ಕೊಡಿ. ಗುಣಮಟ್ಟದ ಸಮಯದ ಅವಶ್ಯಕತೆ ಇದೆ. ನೀವು 70 ಗಂಟೆ, 90 ಗಂಟೆ ಕೆಲಸ ಮಾಡಿದರೆ ಮಕ್ಕಳನ್ನು ಸರಿಯಾಗಿ ಬೆಳೆಸಲು  ಸಾಧ್ಯವಾಗುವುದಿಲ್ಲ. ನಿಮ್ಮ ಪ್ರಾಮುಖ್ಯತೆ ಅಥವಾ ಆದ್ಯತೆ 70 ಅಥವಾ 90 ಗಂಟೆ ಕೆಲಸವಾಗಿದ್ದರೆ, ಪೋಷಕರಾಗಬೇಡಿ. ಕಾರಣ ವಾರದಲ್ಲಿ 70 ಅಥವಾ 90 ಗಂಟೆ ಕೆಲಸ ಮಾಡಿದರೆ ಮಕ್ಕಳಿಗೆ, ಕುಟುಂಬಕ್ಕೆ ಸಮಯ ಕೊಡಲು ಸಾಧ್ಯವಿಲ್ಲ ಎಂದು ನಮಿತಾ ಥಾಪರ್ ಹೇಳಿದ್ದಾರೆ.

ಆರೋಗ್ಯ ಮೊದಲೋ, ಕೆಲಸ ಮೊದಲೋ? ಆಸ್ಪತ್ರೆ ಐಸಿಯುನಿಂದ ಬೆಂಗಳೂರಿನ ಸಿಇಒ ಸಂದೇಶ

ನಮತಿ ಥಾಪರ್ ಮಾತುಗಳಿಂದ ಮತ್ತೆ ಭಾರತದಲ್ಲಿ ಕೆಲಸದ ಸಮಯದ ಕುರಿತು ಚರ್ಚೆ ಆರಂಭಗೊಂಡಿದೆ. ಹಲವರು ಸದ್ಯ ಇರುವ ಕೆಲಸದ ಸಮಯ ಸಾಲುತ್ತಿಲ್ಲ. ಭಾರತ ಮತ್ತಷ್ಟು ಅಭಿವೃದ್ಧಿಯಾಗಲು ಕೆಲಸದ ಸಮಯ ಹೆಚ್ಚಿಸುವ ಅಗತ್ಯವಿದೆ ಅನ್ನೋ ವಾದವೂ ಇದೆ. ಆದರೆ ವರ್ಕ್ ಲೈಫ್ ಬ್ಯಾಲೆನ್ಸ್ ವಿಚಾರವೂ ಚರ್ಚೆಯಾಗುತ್ತಿದೆ. ಇದರ ನಡುವೆ ನಮಿತಾ ಥಾಪರ್ ಮಾತುಗಳು ಭಾರಿ ಸಂಚಲನ ಸೃಷ್ಟಿಸಿದೆ.

ನಮಿತಾ ಥಾಪರ್ ಈ ಮಾತುಕತೆಯಲ್ಲಿ ತಮ್ಮ ಇಬ್ಬರು ಮಕ್ಕಳ ಕುರಿತು ಹೇಳಿಕೊಂಡಿದ್ದಾರೆ. ಮಕ್ಕಳು ಪೋಷಕರನ್ನು ಮಾದರಿಯಾಗಿಟ್ಟುಕೊಳ್ಳುತ್ತಾರೆ. ಮಕ್ಕಳಿಗೆ ಪೋಷಕರೇ ಎಲ್ಲವೂ ಆಗಿರುತ್ತಾರೆ. ಪೋಷಕರು ಗುಣಮಟ್ಟದ ಸಮಯ ನೀಡಲು ವಿಫಲರಾದರೆ, ಅವರ ಮಾತುಗಳನ್ನು ಕೇಳಲು ಸಮಯ ನೀಡದಿದ್ದರೆ ಅದು ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಮಕ್ಕಳ ಮೇಲೆ ಬೇಗ ನೆಗೆಟಿವಿಟಿ ಶುರುವಾಗುತ್ತದೆ. ಇದು ಒಂದು ದಿನ ಸ್ಫೋಟಗೊಳ್ಳುವ ಸಾಧ್ಯತೆಯೂ ಇದೆ ಎಂದಿದ್ದಾರೆ.

ಮಕ್ಕಳಿಗೆ ನೀವು ಸಮಯ ನೀಡಿದರೆ ಮಾತ್ರ ಅವರ ಆಸಕ್ತಿಯನ್ನು ಪತ್ತೆ ಹಚ್ಚಲು ಸಾಧ್ಯ. ಮಕ್ಕಳ ಆಸಕ್ತಿಯನ್ನು ಗಮನಿಸಿ ಅವರನ್ನು ಸರಿಯಾದ ದಿಕ್ಕಿನಲ್ಲಿ ತರಬೇತಿಗೊಳಿಸುವುದು ಅಗತ್ಯ. ಇದರಿಂದ ಮಕ್ಕಳು ತಮ್ಮ ತಮ್ಮ ಆಸಕ್ತಿ ಕ್ಷೇತ್ರದಲ್ಲಿ ಸಾಧನೆ ಮಾಡಲು ಅಥವಾ ಪ್ರೀತಿಯಿಂದ ತಮ್ಮ ಕ್ಷೇತ್ರವನ್ನು ಆರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದಿದ್ದಾರೆ.

70, 90 ಗಂಟೆ ಕೆಲಸಕ್ಕೆ ಪರಿಹಾರ ಕೊಟ್ಟ ಬೆಂಗಳೂರಿಗ, ಈತನ ಐಡಿಯಾಗೆ ದಿಗ್ಗಜರೆ ಕಕ್ಕಾಬಿಕ್ಕಿ
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Vastu Tips: ಮನೆಯಲ್ಲಿ 'ಓಡುತ್ತಿರುವ ಏಳು ಕುದುರೆ' ಫೋಟೋ ಯಾಕೆ ಹಾಕ್ತಾರೆ? ಸೀಕ್ರೆಟ್ ಗೊತ್ತಾದ್ರೆ ಈಗ್ಲೇ ಹಾಕ್ತೀರಾ..
ಸಂಖ್ಯಾಶಾಸ್ತ್ರದ ಪ್ರಕಾರ ಈ ದಿನಾಂಕಗಳಲ್ಲಿ ಜನಿಸಿದವರು ಉತ್ತಮ ಉದ್ಯಮಿಗಳಾಗುವುದು ಖಚಿತ