ಈ ನಟಿ ಒಂದು ಸಿನಿಮಾದಲ್ಲಿ ಇಂದಿರಾ ಗಾಂಧಿಯ ಪಾತ್ರ ಮಾಡಿದ್ದಾರೆ. ವಿಶೇಷ ಅಂದರೆ ಆಕೆಯ ತಂದೆ ವಾಯುಪಡೆಯ ವಿಂಗ್ ಕಮಾಂಡರ್ ಆಗಿದ್ದುದರ ಜೊತೆಗೆ ಇಂದಿರಾ ಗಾಂಧಿಯವರ ಪೈಲಟ್ ಆಗಿದ್ದವರು.
ಅಕ್ಷಯ್ ಕುಮಾರ್ ಹೀರೋ ಆಗಿ ನಟಿಸಿದ್ದ ಬೆಲ್ ಬಾಟಮ್ ಹಿಂದಿ ಸಿನಿಮಾ ನಿಮಗೆ ನೆನಪಿರಬಹುದು. ಅದು ಯುದ್ಧಗ್ರಸ್ತ ಪ್ರದೇಶದಲ್ಲಿ ಸಿಕ್ಕಿಬಿದ್ದ ಭಾರತೀಯರನ್ನು ರಕ್ಷಿಸಿ ಕರೆತಂದ ನೈಜ ಕತೆ ಅಧರಿಸಿದ ಸಿನಿಮಾ. ಇದರಲ್ಲಿ ಆಗಿನ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಪಾತ್ರ ಮಾಡಿದವರಯ ಲಾರಾ ದತ್ತಾ. ಈ ಪಾತ್ರ ಮಾಡಿದ ಬಳಿಕ ಲಾರಾ ದತ್ತಾ ಅವರು ಒಂದು ಸತ್ಯವನ್ನು ಹೊರಗೆಡಹಿದ್ದರು- ಅದೇನೆಂದರೆ ಲಾರಾ ದತ್ತಾಳ ತಂದೆ ಪ್ರಧಾನಿ ಇಂದಿರಾ ಅವರ ಪರ್ಸನಲ್ ಪೈಲಟ್ ಆಗಿದ್ದರಂತೆ.
ಲಾರಾ ತಂದೆ ಎಲ್.ಕೆ. ದತ್ತಾ ಯುದ್ಧವಿಮಾನ ಪಡೆಯ ವಿಂಗ್ ಕಮಾಂಡರ್ ಆಗಿದ್ದವರು ಹಾಗೂ ಇಂದಿರಾ ಗಾಂಧಿಯವರ ವಿಮಾನದ ವೈಯುಕ್ತಿಕ ಪೈಲೆಟ್ ಆಗಿದ್ದವರು. "ಹಲವು ಬಾರಿ ಇಂದಿರಾ ಅವರನ್ನು ಕೂರಿಸಿಕೊಂಡು ದತ್ತಾ ವಿಮಾನ ಹಾರಿಸಿದ್ದರು ಹಾಗೂ ಅವರಿಗೆ ಇಂದಿರಾರ ವೈಯಕ್ತಿಕ ಪರಿಚಯವಿತ್ತು. ಆಕೆಯ ಬಗ್ಗೆ ತಂದೆಯ ಬಾಯಿಯಿಂದ ಕತೆಗಳನ್ನು ಕೇಳುತ್ತ ನಾನು ಬೆಳೆದೆ" ಎಂದು ಲಾರಾ ಹೇಳಿದ್ದರು. ಹೀಗಾಗಿ ಇಂದಿರಾ ಪಾತ್ರ ಮಾಡುವುದು ಅವರಿಗೆ ತುಂಬಾ ಖಾಸ್ ಆಗಿತ್ತಂತೆ.
ಲಾರಾ ದತ್ತಾ ಬಾಲಿವುಡ್‌ನ ಪ್ರತಿಭಾನ್ವಿತ ನಟಿ. ಅನೇಕ ಚಿತ್ರಗಳಲ್ಲಿ ತಮ್ಮ ನಟನಾ ಕೌಶಲ್ಯವನ್ನು ಸಾಬೀತುಪಡಿಸಿದ್ದಾರೆ. ಮಿಸ್ ಯೂನಿವರ್ಸ್ 2000ರ ಸ್ಪರ್ಧೆಯ ಹೆಮ್ಮೆಯ ವಿಜೇತೆ. ಫೆಬ್ರವರಿ 16, 2011ರಂದು ಲಾರಾ ದತ್ತಾ ಅವರು ಏಸ್ ಟೆನಿಸ್ ಆಟಗಾರ ಮಹೇಶ್ ಭೂಪತಿ ಅವರನ್ನು ವಿವಾಹವಾದರು. ಜನವರಿ 20, 2012ರಂದು, ದಂಪತಿಗಳು ಪುಟ್ಟ ಮಗುವಿಗೆ ಜನ್ಮ ನೀಡಿದ್ದು, ಮಗಳಿಗೆ ಸೈರಾ ಭೂಪತಿ ಎಂದು ಹೆಸರಿಸಿದ್ದಾರೆ. ಸಿನಿ ಕೆರಿಯರ್ ವಿಚಾರಕ್ಕೆ ಬರುವುದಾದರೆ ಲಾರಾ ದತ್ತಾ ರಣ್‌ನೀತಿ ಮತ್ತು ಬಿಯಾಂಡ್ ವೆಬ್ ಸರಣಿಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸಕ್ರಿಯವಾಗಿಲ್ಲದಿದ್ದರೂ ಲಾರಾ ಆಗೀಗ ಕೆಲವು ಪೋಸ್ಟ್‌ಗಳನ್ನು ಹಾಕುವುದುಂಟು. ಅಂಥ ಒಂದು ತಮಾಷೆ ಪೋಸ್ಟನ್ನು ಕೆಲವು ವರ್ಷಗಳ ಹಿಂದೆ ಹಾಕಿದ್ದರು. ಆಗ ಮುಂಬಯಿಯಲ್ಲಿ ಜೋರು ಮಳೆ ಬಂದಿತ್ತು. ಲಾರಾ- ಭೂಪತಿ ಅಪಾರ್ಟ್‌ಮೆಂಟ್‌ಗೆ ಗಾಜಿನ ಕಿಟಕಿಯಿಂದ ಮಳೆ ನೀರು ನುಗ್ಗುವಂತಿತ್ತು. ಆಗ ಮಹೇಶ್ ಭೂಪತಿ ವಿಂಬಲ್ಡನ್, ಫ್ರೆಂಚ್ ಓಪನ್ ಮುಂತಾದ ಟೂರ್ನಮೆಂಟ್‌ಗಳಲ್ಲಿ ಗಳಿಸಿದ ಶಾಲುಗಳನ್ನು ಕಿಟಕಿಯ ಗಾಜಿಗೆ ಸಿಕ್ಕಿಸಿ ನೀರು ಒಳಬರದಂತೆ ತಡೆದು ಲಾರಾ ಅದರ ಫೋಟೋ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದರು. "ಶಾಲುಗಳು ಒಳ್ಳೆಯ ಬಳಕೆ" ಎಂದು ಬರೆದಿದ್ದರು. ಮಹೇಶ್ ಭೂಪತಿ ಇದರಿಂದ ಸಿಟ್ಟಿಗೆದ್ದು "ಆರ್ ಯು ಸೀರಿಯಸ್? ಅವೆಲ್ಲ ವರ್ಷಗಳ ಪರಿಶ್ರಮದ ಫಲ" ಎಂದು ಕಮೆಂಟ್ ಹಾಕಿದ್ದರು.
ಆನ್‌ಲೈನ್ ಟ್ರೋಲ್‌ಗಳೊಂದಿಗೆ ತಾನು ಹೇಗೆ ವ್ಯವಹರಿಸುತ್ತೇನೆ ಎಂದು ಲಾರಾ ದತ್ತಾ ಒಮ್ಮೆ ಬಹಿರಂಗಪಡಿಸಿದ್ದರು. 'ಸೆಲೆಬ್ರಿಟಿ ಸ್ಥಾನಮಾನದ ಜೊತೆಗೆ ಬರುವ ಎಲ್ಲವನ್ನೂ ಎದುರಿಸಲು ಅವಳು ಸಿದ್ಧವಾಗಿದ್ದೇನೆ. ನಾನು ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟಿವ್ ಆಗಿಲ್ಲ. ಹೀಗಾಗಿ ಹೆಚ್ಚಿನ ಸಂಖ್ಯೆಯ ಫಾಲೋವರ್‌ಗಳನ್ನು ಹೊಂದಿಲ್ಲ. ನಾನು ಅಲ್ಲಿ ಸಕ್ರಿಯವಾಗಲು ಬಯಸುವುದಾದರೆ ಜನರಿಂದ ಒಳ್ಳೆಯ ಕಾಮೆಂಟ್‌ಗಳನ್ನು ಪಡೆಯುವುದರ ಜೊತೆಗೆ ಕೆಟ್ಟ ಕಾಮೆಂಟ್‌ಗಳನ್ನು ಸಹ ಸ್ವೀಕರಿಸಲು ಸಿದ್ಧವಾಗಿರಬೇಕು' ಎಂದು ಹೇಳಿದ್ದರು.
ಪವನ್ ಕಲ್ಯಾಣ್ ಹೆಂಡತಿ ಮಾತ್ರ ಅಲ್ಲ, ಈ ನಟಿಯರೂ ತಲೆ ಬೋಳಿಸಿಕೊಂಡಿದ್ದಾರೆ; ಯಾರೆಲ್ಲಾ..!?
'ನನ್ನ ಸಾಮಾಜಿಕ ಮಾಧ್ಯಮ ಫೀಡ್ ನಿಜವಾಗಿಯೂ ನನಗೆ ವಿಶೇಷ. ನಾನು ನಿಜವಾಗಿಯೂ ನನ್ನನ್ನು ಅನುಸರಿಸುತ್ತಿರುವ ಜನರೊಂದಿಗೆ ನನ್ನ ಜೀವನದ ವಿಚಾರಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ. ಯಾಕೆಂದರೆ ನನ್ನನ್ನು ಪ್ರೀತಿಸುವವರು ಮಾತ್ರ ಅಲ್ಲಿದ್ದಾರೆ. ದ್ವೇಷಿಸುವವರು ಇಲ್ಲ' ಎಂದಿದ್ದರು. ಇತರ ಅನೇಕ ಸೆಲೆಬ್ರಿಟಿಗಳಂತೆ, ಲಾರಾ ದತ್ತಾ ತನ್ನ ನೋಟ ಮತ್ತು ದೇಹದ ಬಗ್ಗೆ ಅಸಹ್ಯಕರ ಕಾಮೆಂಟ್‌ಗಳನ್ನು ಎದುರಿಸಬೇಕಾಗಿ ಬಂದಿತ್ತು. ಕೆಲವೊಬ್ಬರು ನೀವು ಮುದುಕಿಯಾಗಿದ್ದೀರಿ ಎಂದು ಕಾಮೆಂಟ್ ಮಾಡಿದ್ದರು. 'ಯಾರಾದರೂ ಹೀಗೆ ಕಾಮೆಂಟ್ ಮಾಡಿದ ತಕ್ಷಣ ಇದು ನಿಜವಾಗಿಯೂ ನನ್ನ ಜೀವನದಲ್ಲಿ ಬದಲಾವಣೆಯನ್ನು ತರುತ್ತದೆಯೇ? ಹಾಗಾಗಿ ನಾನು ಅಂಥಾ ವಿಷಯಗಳ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ' ಎಂದಿದ್ದಾರೆ ಲಾರಾ.
ನಟ ಗೋವಿಂದ ಬಗ್ಗೆ ಕೇಳಿದ್ದಕ್ಕೆ ಹಲವು ಅನುಮಾನ ಹುಟ್ಟುಹಾಕಿದ ಸುನೀತಾ!