IT layoff 2025: ಮತ್ತೊಂದು ಹಂತದ ಲೇಆಫ್ ಶುರುವಾಗಿದೆ. ಈಗಾಗಲೇ ಸಾಕಷ್ಟು ಕಂಪೆನಿಗಳು ಉದ್ಯೋಗಿಗಳನ್ನು ಹೊರಗಡೆ ಕಳಿಸಿದ್ದು, ಈಗ ಇನ್ನೊಂದು ಹಂತ ಶುರುವಾಗಿದೆ.
ಈಗಂತೂ ಎಲ್ಲೆಡೆ ಲೇಆಫ್, ಕಾಸ್ಟ್ ಕಟಿಂಗ್ ವಿಚಾರಗಳೇ ಹೆಚ್ಚಾಗುತ್ತಿವೆ. ಒಂದು ಕಡೆ ನಿರುದ್ಯೋಗ ತಾಂಡವವಾಡುತ್ತಿದ್ದರೆ, ಇನ್ನೊಂದು ಕಡೆ ಕೆಲಸ ಇದ್ದವರು ಕೂಡ ಕೆಲಸ ಕಳೆದುಕೊಳ್ಳುತ್ತಿದ್ದಾರೆ. 2025ರಲ್ಲಿ ಟೆಕ್ ಉದ್ಯಮದಲ್ಲಿ ಉದ್ಯೋಗ ಕಡಿತಗಳು ನಿಲ್ಲುವ ಯಾವುದೇ ಸೂಚನೆಗಳು ಕಾಣುತ್ತಿಲ್ಲ. ಗೂಗಲ್, ಮೈಕ್ರೋಸಾಫ್ಟ್ ಸೇರಿದಂತೆ ಇತರ ಪ್ರಮುಖ ಕಂಪನಿಗಳು ತಮ್ಮಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತಿವೆ. 2022-2023ರ ನಡುವೆ ನಡೆದ ದೊಡ್ಡ ಪ್ರಮಾಣದಲ್ಲಿ ಲೇ ಆಫ್ ಆಗುತ್ತದೆ. ಹೀಗಿದ್ದರೂ ಕೂಡ ಇನ್ನೊಂದಿಷ್ಟು ಹಣ ಉಳಿಸಬೇಕು ಎಂದು ಎಐ, ಟೆಕ್ನೋಲಜಿ ಮೊರೆ ಹೋಗಿರುವ ಅವರು ಇನ್ನೊಂದಿಷ್ಟು ಲೇಆಫ್ ಮಾಡುವ ಆಲೋಚನೆ ಹೊಂದಿದ್ದಾರೆ.
ಹೊಸ ಲೇಆಫ್ ಶುರು!
ಈ ವರ್ಷ 93 ಕಂಪನಿಗಳಲ್ಲಿ 23,500 ಕ್ಕೂ ಹೆಚ್ಚು ಟೆಕ್ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಈಗ ಈ ಸಂಖ್ಯೆ ಹೆಚ್ಚಲಿವೆ. ಗೂಗಲ್, ಮೈಕ್ರೋಸಾಫ್ಟ್ ಎರಡೂ ಕಂಪನಿಗಳು ಹೊಸ ಸುತ್ತಿನ ಉದ್ಯೋಗ ಕಡಿತ ಮಾಡಲು ಯೋಜನೆ ಹಾಕುತ್ತಿವೆ. ಇದರಿಂದ ಕೆಲಸವು ಇನ್ನಷ್ಟು ಚೆನ್ನಾಗಿ ಆಗುವುದು, ಎಐ ಬಳಕೆ ಮಾಡಿಕೊಂಡು ಕಾರ್ಯಕ್ಷಮತೆ ಹೆಚ್ಚುವುದು.
ಒಪ್ಪಂದ ಮುರಿದ ಅಮೆರಿಕಾ; ಭಾರತದಲ್ಲಿರೋ ಹಲವು MNC ಗಳಲ್ಲಿ ಭಾರೀ ಉದ್ಯೋಗ ಕಡಿತ?
ಎಲ್ಲೆಲ್ಲಿ ಲೇಆಫ್ ಆಗಿದೆ?
ಇತ್ತೀಚಿನ ವರದಿಯ ಪ್ರಕಾರ, ಗೂಗಲ್, ತನ್ನ ಮೂಲ ಕಂಪನಿಯಾದ ಆಲ್ಫಾಬೆಟ್ ಅಡಿಯಲ್ಲಿ, ಪ್ಲಾಟ್‌ಫಾರ್ಮ್, ಡಿವೈಸಸ್ ವಿಭಾಗದಲ್ಲಿ ನೂರಾರು ಕೆಲಸಗಾರರನ್ನು ವಜಾಗೊಳಿಸಿದೆ. ಇದು ಆಂಡ್ರಾಯ್ಡ್, ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳು, ಕ್ರೋಮ್ ಬ್ರೌಸರ್‌ನಂತಹ ಪ್ರಮುಖ ಉತ್ಪನ್ನಗಳನ್ನು ನೋಡಿಕೊಳ್ಳುವುದು. ಉತ್ತಮ ಕೆಲಸ ಮಾಡಲು ಲೇಆಫ್ ಕೂಡ ಒಂದು ಪ್ರಭಾವ ಬೀರುವುದು. ಕಳೆದ 2025ರ ಫೆಬ್ರವರಿಯಲ್ಲಿ ಕೂಡ ಲೇಆಫ್ ಆಗಿತ್ತು. ಕ್ಲೌಡ್, ಎಚ್‌ಆರ್ ಡಿಪಾರ್ಟ್‌ಮೆಂಟ್‌ನಲ್ಲೂ ಕೂಡ ಉದ್ಯೋಗಿಗಳನ್ನು ತೆಗೆದು ಹಾಕಲಾಗಿದೆ.
ಯಾರು ಲೇಆಫ್ ಆಗ್ತಾರೆ?
ಮೈಕ್ರೋಸಾಫ್ಟ್ ಅವರು 2025ರ ಮೇ ತಿಂಗಳ ಮೊದಲೇ ಮತ್ತೆ ಲೇಆಫ್ ಮಾಡಲು ತಯಾರಿ ಮಾಡ್ತಿದೆ. ತಯಾರಿಯಾಗುತ್ತಿರುವುದಾಗಿ ವರದಿಯಾಗಿದೆ. ಮಿಡಲ್ ಮ್ಯಾನೇಜ್‌ಮೆಂಟ್ ಹುದ್ದೆಗಳನ್ನು ಕಡಿತ ಮಾಡೇಕು, ಇಂಜಿನಿಯರ್‌ಗಳಿಂದ ತಾಂತ್ರಿಕೇತರ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕು ಎಂದು ಕೂಡ ಚರ್ಚೆ ನಡೆಯುತ್ತಿದೆ. ಮೈಕ್ರೋಸಾಫ್ಟ್ನ ಸೆಕ್ಯೂರಿಟಿ ವಿಭಾಗದಲ್ಲಿ, ಚಾರ್ಲಿ ಬೆಲ್ ಅವರ ನೇತೃತ್ವದಲ್ಲಿ ಕೂಡ ಲೇಆಫ್ ಮಾಡಲಾಗುವುದು. ಕಡಿಮೆ ಕೆಲಸ ಮಾಡುವವರಿಗೆ ಲೇಆಫ್ ಸಮಸ್ಯೆ ಬೆನ್ನೇರುವುದು.
ನೇಮಕಾತಿ ಮಾಡಿಕೊಂಡ ಒಂದೇ ವರ್ಷಕ್ಕೆ 600 ಉದ್ಯೋಗಿಗಳು ವಜಾ, ಟಿಶ್ಯೂ ರೀತಿ ಬಳಸಿಕೊಂಡಿತಾ ಝೊಮೆಟೊ!
ವರ್ಡ್‌ಪ್ರೆಸ್ ಕಂಪೆನಿಯು 16% ಲೇಆಫ್ ಮಾಡಲಿದ್ದು, 270 ಉದ್ಯೋಗಿಗಳು ಹೊರಬೀಳಲಿದ್ದಾರೆ. ಎಐನಿಂದ Canva ಕೂಡ ಒಂದಷ್ಟು ಉದ್ಯೋಗಿಗಳನ್ನು ತೆಗೆಯಲಿದೆ. ಟಿಕ್ ಟಾಪ್ ಈಗಾಗಲೇ ಡುಬ್ಲಿನ್ ಆಫೀಸ್‌ನಲ್ಲಿ 300 ಉದ್ಯೋಗಿಗಳು ಹೊರಗಡೆ ಬಂದಿದ್ದಾರೆ. ಇನ್ನು ಒಲಾ ಎಲೆಕ್ಟ್ರಿಕ್ ಕಂಪೆನಿಯು ಐದು ತಿಂಗಳಲ್ಲಿ ಸಾವಿರ ಉದ್ಯೋಗಿಗಳನ್ನು ಹೊರಗಡೆ ಕಳಿಸಿದೆ. ಇನ್ನು ಕೆಲ ಎಲೆಕ್ಡ್ರಿಕ್ ಕಂಪೆನಿಗಳು 5600 ಉದ್ಯೋಗಿಗಳನ್ನು ತೆಗೆದು ಹಾಕಿವೆ. ಏರೋ ಸ್ಪೇಸ್ ಕಂಪೆನಿಯು 1000 ಉದ್ಯೋಗಿಗಳನ್ನು ಹೊರಗಡೆ ಕಳಿಸಿದ್ದು, ಸೇಲ್ಸ್‌ಫೋರ್ಸ್ ಸಾವಿರ ಉದ್ಯೋಗಿಗಳನ್ನು ಹೊರಗಡೆ ಕಳಿಸಿದೆ. ಮೆಟಾ ಕೂಡ ಕಡಿಮೆ ಕೆಲಸ ಮಾಡಿದ 3600 ಉದ್ಯೋಗಿಗಳನ್ನು ತೆಗೆದು ಹಾಕಿದೆ. ಅಮೆಜಾನ್ ಕೂಡ ಒಂದಷ್ಟು ಉದ್ಯೋಗಿಗಳ ಕಡಿತ ಮಾಡಿದೆ. ನೂರು ಜನರ ಕೆಲಸವನ್ನು ಎಐ ತಂತ್ರಜ್ಞಾನ ಮಾಡುತ್ತಿರೋದರಿಂದ ಲೇಆಫ್ ಮಾಡಲಾಗುತ್ತಿದೆ. ಎಐ ಸಂಬಂಧಿತ ಹುದ್ದೆಗಳನ್ನು ಕಂಪೆನಿಗಳು ನೇಮಕ ಮಾಡಿಕೊಳ್ಳುತ್ತಿವೆ.
ಏನು ಮಾಡಬೇಕು?
ಎಐ ತಂತ್ರಜ್ಞಾನಕ್ಕೆ ಸೆಡ್ಡು ಹೊಡೆಯುವಂತೆ ವ್ಯಕ್ತಿ ವಿವಿಧ ರೀತಿಯ ಕೌಶಲಗಳನ್ನು ಕಲಿಯಬೇಕು, ಇನ್ನಷ್ಟು ವೃತ್ತಿಪರವಾಗಿ ಕೆಲಸ ಮಾಡಿಕೊಳ್ಳಬೇಕು, ಒಂದು ಉದ್ಯೋಗದ ಜೊತೆಯಲ್ಲಿ ಇನ್ನೊಂದು ಸೈಡ್ ಉದ್ಯಮ ಇಟ್ಟುಕೊಳ್ಳಬೇಕು.