ಒಪ್ಪಂದ ಮುರಿದ ಅಮೆರಿಕಾ;‌ ಭಾರತದಲ್ಲಿರೋ ಹಲವು MNC ಗಳಲ್ಲಿ ಭಾರೀ ಉದ್ಯೋಗ ಕಡಿತ?

Published : Apr 14, 2025, 03:26 PM ISTUpdated : Apr 14, 2025, 03:50 PM IST
ಒಪ್ಪಂದ ಮುರಿದ ಅಮೆರಿಕಾ;‌ ಭಾರತದಲ್ಲಿರೋ ಹಲವು MNC ಗಳಲ್ಲಿ ಭಾರೀ ಉದ್ಯೋಗ ಕಡಿತ?

ಸಾರಾಂಶ

ಯುಎಸ್ ಡಿಫೆನ್ಸ್‌ ಸೆಕ್ರೆಟರಿ ಪೀಟ್ ಹೆಗ್ಸೆತ್‌ ಆದೇಶದ ಪ್ರಕಾರ, ಕೆಲ ಕಂಪೆನಿಗಳ ಜೊತೆಗಿನ ಒಪ್ಪಂದವನ್ನು ಕಡಿತಗೊಳಿಸಲಿದ್ದು, ಒಂದಷ್ಟು ಕಂಪೆನಿಗಳ ಲೇಆಫ್‌ ಆಗಲಿದೆಯಾ? 

ಯುಎಸ್ ಡಿಫೆನ್ಸ್‌ ಸೆಕ್ರೆಟರಿ ಪೀಟ್ ಹೆಗ್ಸೆತ್ ಅವರು, ಪೆಂಟಗನ್ ಮೆಮೊ ಪ್ರಕಾರ, ಅಕ್ಸೆಂಚರ್, ಬೂಜ್ ಅಲೆನ್ ಹ್ಯಾಮಿಲ್ಟನ್, ಡೆಲಾಯ್ಟ್‌ನಂತಹ ಕಂಪನಿಗಳ $5.1 ಬಿಲಿಯನ್ ಮೌಲ್ಯದ ಹಲವಾರು ಮಾಹಿತಿ ತಂತ್ರಜ್ಞಾನ ಸೇವೆಗಳ ಒಪ್ಪಂದಗಳನ್ನು ಮುಕ್ತಾಯಗೊಳಿಸಲು ಆದೇಶಿಸಿದ್ದಾರೆ.

ಯಾಕೆ ಈ ನಿರ್ಧಾರ ತಗೊಂಡ್ರು?
“ಪೆಂಟಗನ್ ಉದ್ಯೋಗಿಗಳೇ ಈ ಕೆಲಸಗಳನ್ನು ಮಾಡಬಹುದು, ಸುಮ್ಮನೆ ಥರ್ಡ್‌ ಪಾರ್ಟಿಗೆ ಕೆಲಸ ಕೊಟ್ಟು, ಇನ್ನಷ್ಟು ವೆಚ್ಚ ಆಗುವುದು" ಎಂದು ಹೆಗ್ಸೆತ್ ಹೇಳಿದ್ದಾರೆ. 

ಕಲಬುರಗಿಯಲ್ಲಿ ಏಪ್ರಿಲ್ 16th ಬೃಹತ್ ಉದ್ಯೋಗ ಮೇಳ:ಸಾರಿಗೆ ವ್ಯವಸ್ಥೆ!

ಎಷ್ಟು ಹಣ ಉಳಿಯುತ್ತದೆ?
ಟೆರ್ಮಿನೇಶನ್ ಮೊತ್ತವೇ $5.1 ಬಿಲಿಯನ್ ಆಗುವುದು.‌ ಇದರ ಪರಿಮಾಣ $4 ಬಿಲಿಯನ್‌ ಉಳಿತಾಯ ಆಗುವುದು. ಬೆಳಗ್ಗೆ ವಹಿವಾಟಿನ ಸಮಯದಲ್ಲಿ ನ್ಯೂಯಾರ್ಕ್‌ನಲ್ಲಿ ಬೂಜ್ ಅಲೆನ್ ಹ್ಯಾಮಿಲ್ಟನ್‌ನ ಷೇರುಗಳು 2.4% ರಷ್ಟು ಕುಸಿದು $106.30 ಕ್ಕೆ ತಲುಪಿದವು. ಆಕ್ಸೆಂಚರ್ ಷೇರುಗಳು 2% ರಷ್ಟು ಕುಸಿದು $279.52 ಕ್ಕೆ ತಲುಪಿದವು.

ಉತ್ತರ ಕೊಡಲಿಲ್ಲ!
ಅಕ್ಸೆಂಚರ್, ಡೆಲಾಯ್ಟ್, ಬೂಜ್ ಅಲೆನ್ ಹ್ಯಾಮಿಲ್ಟನ್‌ನ ಪ್ರತಿನಿಧಿಗಳು ಇದಕ್ಕೆ ತಕ್ಷಣ ಪ್ರತಿಕ್ರಿಯಿಸಲಿಲ್ಲ. ನೌಕಾಪಡೆ, ವಾಯುಪಡೆ, ರಕ್ಷಣಾ ಸುಧಾರಿತ ಸಂಶೋಧನಾ ಯೋಜನೆಗಳ ಸಂಸ್ಥೆ (DARPA), ರಕ್ಷಣಾ ಆರೋಗ್ಯ ಸಂಸ್ಥೆಗೆ ಸಲಹಾ ಸೇವೆಗಳಿಗೆ ವ್ಯಾಪಕ ಶ್ರೇಣಿಯ ಕಡಿತ ಆಗುವ ಸಾಧ್ಯತೆ ಇದೆ.

ಬ್ಯಾಂಕ್ ಆಫ್ ಬರೋಡಾದಲ್ಲಿ ದೇಶದಾದ್ಯಂತ ಉದ್ಯೋಗಾವಕಾಶ!

ಯಾವ ರೀತಿ ಕೆಲಸ ಮಾಡಲಾಗುತ್ತದೆ?
X ನಲ್ಲಿ ಪೋಸ್ಟ್ ಮಾಡಲಾದ ವಿಡಿಯೋದಲ್ಲಿ, ಹೆಗ್ಸೆತ್ ಅವರು ಈ ಬಗ್ಗೆ ಹೇಳಿಕೊಂಡಿದ್ದಾರೆ. "ಇತರ ಅನಿವಾರ್ಯವಲ್ಲದ ಸೇವೆಗಳನ್ನು ಆಂತರಿಕವಾಗಿ ತರಲಾಗುವುದು” ಎಂದು ಅವರು ಹೇಳಿದ್ದಾರೆ. ರಕ್ಷಣಾ ಇಲಾಖೆಯ ಮಾಹಿತಿ ತಂತ್ರಜ್ಞಾನ ಸಲಹೆ, ನಿರ್ವಹಣಾ ಸೇವೆಗಳನ್ನು ಕಡಿತಗೊಳಿಸುವ ಯೋಜನೆಯನ್ನು ಸಿದ್ಧಪಡಿಸಲು, ಎಲೋನ್ ಮಸ್ಕ್ ಅವರ ಸರ್ಕಾರಿ ದಕ್ಷತೆ ಇಲಾಖೆಯೊಂದಿಗೆ ಕೆಲಸ ಮಾಡಲು ಪೆಂಟಗನ್‌ನ ಮುಖ್ಯ ಮಾಹಿತಿ ಅಧಿಕಾರಿಗೆ ನಿರ್ದೇಶನ ನೀಡುತ್ತಿರುವುದಾಗಿ ಹೆಗ್ಸೆತ್ ಜ್ಞಾಪಕ ಪತ್ರದಲ್ಲಿ ತಿಳಿಸಿದ್ದಾರೆ. ಇದಕ್ಕೆ 30 ದಿನ ಬೇಕಾಗುವುದು ಎಂದು ಹೇಳಿದ್ದಾರೆ. 
ಜ್ಞಾಪಕ ಪತ್ರದಲ್ಲಿ  ಪೆಂಟಗನ್ ಹೆಚ್ಚುವರಿಯಾಗಿ, ಕ್ಲೌಡ್ ಕಂಪ್ಯೂಟಿಂಗ್ ಸೇವೆಗಳಿಗೆ "ಅತ್ಯಂತ ಅನುಕೂಲಕರ ದರಗಳನ್ನು" ನಿಗದಿಸುತ್ತದೆ ಎಂದು ತಿಳಿಸಲಾಗಿದೆ.

ಉದ್ಯೋಗಗಳಲ್ಲಿ ಕಡಿತ! 
ಅಕ್ಸೆಂಚರ್, ಬೂಜ್ ಅಲೆನ್ ಹ್ಯಾಮಿಲ್ಟನ್, ಡೆಲಾಯ್ಟ್‌ ಕಂಪೆನಿಗಳಿಗೆ ಹೊಡೆತ ಬಿದ್ದಿರೋದರಿಂದ ಇಲ್ಲಿ ಕೂಡ ಲೇ ಆಫ್‌ ಮಾಡಬಹುದಾ ಎಂಬ ಅನುಮಾನ ಶುರುವಾಗಿದೆ. ಅಕ್ಸೆಂಚರ್‌ ಕಂಪೆನಿಯಲ್ಲಿ ಸಾಕಷ್ಟು ಜನರು ಕೆಲಸ ಮಾಡುತ್ತಿದ್ದು, ಇವರ ಉದ್ಯೋಗಗಳು ಏನಾಗಲಿವೆಯೋ ಏನೋ! 

ಐಐಎಂ ಪದವಿಯೂ ಕೆಲಸಕ್ಕೆ ಸಾಕಾಗಲಿಲ್ಲ: ಅನುಭವ ಹಂಚಿಕೊಂಡ ಹಳೆ ವಿದ್ಯಾರ್ಥಿನಿ!

ಉದ್ಯೋಗದಲ್ಲಿ ಸಾಕಷ್ಟು ಸಮಸ್ಯೆ! 
ಈಗಾಗಲೇ ಅನೇಕ ಐಟಿ ಕಂಪೆನಿಗಳಲ್ಲಿ ಉದ್ಯೋಗ ಕಡಿತ ಮಾಡಲಾಗುತ್ತಿದೆ. ಇನ್ನೂ ಕೆಲ ಕಂಪೆನಿಗಳು ಕಾಸ್ಟ್‌ ಕಟಿಂಗ್‌ ಮಾಡಿ, ಉದ್ಯೋಗಿಗಳನ್ನು ಹೊರಗಡೆ ಕಳಿಸಿವೆ. ಒಂದು ಕಂಪೆನಿಯಿಂದ ಕೆಲಸ ಕಳೆದುಕೊಂಡ ಓರ್ವ ಉದ್ಯೋಗಿ, ಇನ್ನೊಂದು ಕಡೆ ಹೋಗೋದು ಕೂಡ ಕಷ್ಟ ಆಗಿದೆ. ಒಟ್ಟಿನಲ್ಲಿ ಕೆಲವರಿಗೆ ಕೆಲಸವೇ ಇಲ್ಲದಂತಾಗಿದೆ, ಇನ್ನೂ ಕೆಲವರಿಗೆ ಕೆಲಸಕ್ಕೆ ತಕ್ಕಂತೆ ಸಂಬಳ ಇಲ್ಲದಂತಾಗಿದೆ. 

ಇಂಥ ಸಿಇಒ ಕೂಡ ಇರ್ತಾರಾ? 
ಬೆಂಗಳೂರಿನಲ್ಲಿ KCredit CEO, ಸ್ಥಾಪಕ ಹರ್ಷ್‌ ಪೊಖರ್ನ ಅವರು ತಮ್ಮ ಕಂಪೆನಿಯ 70 ಉದ್ಯೋಗಿಗಳನ್ನು ತೆಗೆದು ಹಾಕಿದ್ರೂ ಕೂಡ, 67 ಉದ್ಯೋಗಿಗಳಿಗೆ ಬೇರೆ ಕಡೆ ಹೊರಗಡೆ ಕೆಲಸ ಕೊಡಿಸಿದ್ದರು. ಉದ್ಯೋಗಿಗಳಿಗೆ ಎರಡು ತಿಂಗಳ ಸಂಬಳ ಕೊಡುವುದರ ಜೊತೆಗೆ ನೋಟೀಸ್‌ ಕೂಡ ನೀಡಿದ್ದರು. ಅಷ್ಟೇ ಅಲ್ಲದೆ ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇವರ ನಡೆಗೆ ಸಾಕಷ್ಟು ಮೆಚ್ಚುಗೆ ಸಿಕ್ಕಿತ್ತು. 
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!
100 ವರ್ಷ ಹಳೇ ಕುಂದನ್ ಪೊಲ್ಕಿ ಕಿವಿಯೋಲೆ, ತಾಯಿಯ ಆಭರಣ ಧರಿಸಿದ ನೀತಾ ಅಂಬಾನಿ