ಪ್ರಧಾನಿ ನರೇಂದ್ರ ಮೋದಿ ಸ್ವಚ್ಚ ಭಾರತ ಅಭಿಯಾನ ಆರಂಭಿಸಿದ ಬಳಿಕ ಸ್ವಚ್ಚತೆ ಜಾಗೃತಿ ಮೂಡತೊಡಗಿದೆ.ಆದರೂ ಭಾರತ ಸ್ವಚ್ಚತೆ ಕಡೆಗೆ ಮತ್ತಷ್ಟು ಗಮನಹರಿಸಬೇಕಿದೆ. ಸ್ವಚ್ಚ ಭಾರತ ಅಭಿಯಾನದ ಬಳಿಕ ಇದೀಗ ಪ್ರತಿ ವರ್ಷ ಭಾರತದ ಸ್ವಚ್ಚ ನಗರ ಯಾವುದು ಎಂದು ಸಮೀಕ್ಷೆ ನಡೆಸಿ ವರದಿ ಪ್ರಕಟಿಸಲಾಗುತ್ತದೆ. ಸ್ವಚ್ಚ ಸರ್ವೇಕ್ಷಣಾ ಪಟ್ಟಿಯಲ್ಲಿ ಮತ್ತೆ ಮಧ್ಯಪ್ರದೇಶದ ಇಂದೋರ್ ಮೊದಲ ಸ್ಥಾನ ಪಡೆದುಕೊಂಡಿದೆ. ಭಾರತದ ಅತ್ಯಂತ ಸ್ವಚ್ಚ ನಗರ ಅನ್ನೋ ಖ್ಯಾತಿಗೆ ಇಂದೋರ್ ಪಾತ್ರವಾಗಿದೆ. ಟಾಪ್ 10 ಪಟ್ಟಿಯಲ್ಲಿ ಕರ್ನಾಟಕದ ಒಂದು ನಗರ ಮಾತ್ರ ಸ್ಥಾನ ಪಡೆದುಕೊಂಡಿದೆ.
ಭಾರತದ ಸ್ವಚ್ಚ ನಗರ ಪಟ್ಟಿಯಲ್ಲಿ 2017ರಿಂದ ಇಂದೋರ್ ಮೊದಲ ಸ್ಥಾನದಲ್ಲಿದೆ. ಸತತವಾಗಿ ಇಂದೋರ್ ನಂಬರ್ 1 ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಗುಜರಾತ್‌ನ ಸೂರತ್ ನಗರ 2ನೇ ಸ್ಥಾನ ಪಡೆದುಕೊಂಡಿದೆ. ವಿಶೇಷ ಅಂದರೆ ನವಿ ಮುಂಬೈ 3ನೇ ಸ್ಥಾನ ಪಡೆದುಕೊಂಡಿದೆ. ಈ ಟಾಪ್ 10 ಪಟ್ಟಿಯಲ್ಲಿ ಆಂಧ್ರ ಪ್ರದೇಶದ 2 ನಗರಗಳು ಸ್ಥಾನ ಪಡೆದಿದೆ.
ಟಾಪ್ 10 ಪಟ್ಟಿಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರು
ಭಾರತದ ಸ್ವಚ್ಚ ನಗರಗಳ ಪಟ್ಟಿಯಲ್ಲಿ ಕೆಲ ರಾಜ್ಯಗಳ ಒಂದಕ್ಕಿಂತ ಹೆಚ್ಚು ನಗರಗಳು ಸ್ಥಾನ ಪಡೆದಿದೆ. ಆದರೆ ಕರ್ನಾಟಕದ ಏಕೈಕ ನಗರ ಸ್ಥಾನ ಪಡೆದಿದೆ. ಅದು ಮೈಸೂರು. ಭಾರತದ ಸ್ವಚ್ಚ ನಗರಗಳ ಪೈಕಿ ಮೈಸೂರು 8ನೇ ಸ್ಥಾನದಲ್ಲಿದೆ.ಮೈಸೂರು ಅರಮನೆ, ದಸರಾ ಸೇರಿದಂತೆ ಸಾಂಸ್ಕೃತಿಕ ನಗರಿಯಾಗಿ ಗುರುತಿಸಿಕೊಂಡಿರುವ ಮೈಸೂರಿಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಆದರೂ ನಗರವನ್ನು ಸ್ವಚ್ಚವಾಗಿಟ್ಟುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಇದರ ಫಲವಾಗಿ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ಭಾರತದ 10 ಸ್ವಚ್ಚ ನಗರ
ಭಾರತದ 10 ಸ್ವಚ್ಚ ನಗರ
1) ಇಂದೋರ್, ಮಧ್ಯಪ್ರದೇಶ
2) ಸೂರತ್, ಗುಜರಾತ್
3) ನವಿ ಮುಂಬೈ, ಮಹಾರಾಷ್ಟ್ರ
4) ವಿಶಾಖಪಟ್ಟಣಂ, ಆಂಧ್ರ ಪ್ರದೇಶ
5) ವಿಜಯವಾಡ, ಆಂಧ್ರ ಪ್ರದೇಶ
6) ಭೋಪಾಲ್, ಮಧ್ಯಪ್ರದೇಶ
7) ತಿರುಪತಿ, ಆಂಧ್ರ ಪ್ರದೇಶ
8) ಮೈಸೂರು, ಕರ್ನಾಟಕ
9) ನವ ದೆಹಲಿ, ದೆಹಲಿ
10) ಅಂಬಿಕಾಪುರ, ಚತ್ತೀಸಘಡ
ಆಂಧ್ರ ಪ್ರದೇಶದ 3 ನಗರಗಳು ಸ್ವಚ್ಚ ನಗರ ಪಟ್ಟಿಯಲ್ಲಿ ಸ್ಥಾನ ಪಡೆಯುವ ಮೂಲಕ ಅತೀ ಹೆಚ್ಚು ನಗರ ಸ್ಥಾನ ಪಡೆದ ರಾಜ್ಯ ಅನ್ನೋ ಖ್ಯಾತಿಗೆ ಪಾತ್ರವಾಗಿದೆ. ವಿಶಾಖಪಟ್ಟಣಂ, ವಿಜಯವಾಡ, ತಿರುಪತಿ ಮೂರು ನಗರಗಳು ಸ್ವಚ್ಚ ನಗರ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
10ನೇ ಸ್ಥಾನದಲ್ಲಿ ಚತ್ತೀಸಘಡದ ಅಂಬಿಕಾಪುರ ನಗರ ಸ್ಥಾನ ಪಡೆದಿದೆ. ಇನ್ನು 9ನೇ ಸ್ಥಾನವನ್ನು ನವ ದೆಹಲಿ ಅಲಂಕರಿಸಿದೆ. ಕೆಲ ಪ್ರಮುಖ ನಗರಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದೆ.