Savings: 10ಲಕ್ಷಕ್ಕಿಂತ ಕಡಿಮೆ ವೇತನ ಹೊಂದಿದ್ದೀರಾ? ಮಾಸಿಕ ಕೇವಲ 3,306ರೂ.ಉಳಿಸಿ 9 ಕೋಟಿ ಒಡೆಯರಾಗೋದು ಹೇಗೆ ಗೊತ್ತಾ?

By Suvarna NewsFirst Published Nov 30, 2021, 4:36 PM IST
Highlights

ವಾರ್ಷಿಕ 10ಲಕ್ಷ ರೂ.ಗಿಂತ ಕಡಿಮೆ ವೇತನ ಹೊಂದಿರೋರಿಗೆ ಉಳಿತಾಯ ಮಾಡಬೇಕೆಂಬ ಮನಸ್ಸಿದ್ರೂ ಸಾಧ್ಯವಾಗೋದಿಲ್ಲ.ನೀವೂ ಇದೇ ಸಾಲಿಗೆ ಸೇರಿದ್ರೆ ಮಾಸಿಕ ಕೇವಲ 3,306ರೂ.ಉಳಿಸಿ 9 ಕೋಟಿ ಒಡೆಯರಾಗಲು ಸಾಧ್ಯವಿದೆ. ಅದು ಹೇಗೆ ಅಂತೀರಾ? ಈ ಲೇಖನ ಓದಿ.

ನವದೆಹಲಿ (ನ.30): ನಿಮ್ಮ ವೇತನ 10 ಲಕ್ಷ ರೂ.ಗಿಂತ ಕಡಿಮೆಯಿದ್ರೆ ಆದಾಯ ತೆರಿಗೆ ಕಾಯ್ದೆ (Income Tax Act) ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ಕಡಿತಕ್ಕೊಳಪಡೋ(Tax deduction) ಯೋಜನೆಗಳಲ್ಲಿ ಹೂಡಿಕೆ (Invest) ಮಾಡೋದು ಎಷ್ಟು ಕಷ್ಟ ಎಂಬುದು ಅರಿವಿಗೆ ಬಂದಿರುತ್ತದೆ. 10ಲಕ್ಷ ರೂ.ಗಿಂತ ಕಡಿಮೆ ವೇತನ(Salary) ಪಡೆಯೋ ಬಹುತೇಕರು ಇಂಥದೊಂದು ಸಮಸ್ಯೆ ಅನುಭವಿಸುತ್ತಾರೆ.ಉಳಿತಾಯ(Saving) ಮಾಡಬೇಕೆಂಬ ಮನಸ್ಸಿದ್ದರೂ ಸಾಧ್ಯವಾಗೋದಿಲ್ಲ. ವರ್ಷದ ಕೊನೆಯಲ್ಲಂತೂ ಇನ್ಯುರೆನ್ಸ್(Insurance) ಪ್ರೀಮಿಯಂ(Premium) ಕಟ್ಟಲು ಕೂಡ ಪರದಾಡುತ್ತಾರೆ. ಹೀಗೇಕೆ ಆಗುತ್ತದೆ? ಇದಕ್ಕೇನು ಕಾರಣ? ಉಳಿತಾಯಕ್ಕೆ ಸಂಬಂಧಿಸಿ ಆರ್ಥಿಕ ಶಿಸ್ತು(discipline) ಅಳವಡಿಸಿಕೊಳ್ಳದಿರೋದೇ ಇದಕ್ಕೆ ಕಾರಣ. ಈ ವೇತನ ಶ್ರೇಣಿಯಲ್ಲಿ ಬರೋ ಬಹುತೇಕರು ಮಾಡೋ ದೊಡ್ಡ ತಪ್ಪೆಂದ್ರೆ ಬಾಡಿಗೆ, ಇಂಧನ, ಸಾರಿಗೆ, ಟೆಲಿಕಾಮ್ ಹಾಗೂ ಜೀವನಶೈಲಿ ಸೇರಿದಂತೆ ನಿತ್ಯ ಹಾಗೂ ಅಗತ್ಯ ವೆಚ್ಚಗಳನ್ನೆಲ್ಲ ತೂಗಿಸಿಕೊಂಡು ಆ ಬಳಿಕ ಉಳಿತಾಯ ಮಾಡೋಣ ಎಂದು ಭಾವಿಸೋದು. ಆದ್ರೆ ಇದು ತಪ್ಪು, ಖರ್ಚು ಮಾಡಿ ಉಳಿದ ಹಣವನ್ನು ಉಳಿತಾಯ ಮಾಡೋ ಯೋಚನೆಯಿಂದ ಖರ್ಚು ಹೆಚ್ಚಾಗೋ ಸಾಧ್ಯತೆಯಿರುತ್ತದೆ. ಆರ್ಥಿಕ ತಜ್ಞರ ಪ್ರಕಾರ ಯುವ ಉದ್ಯೋಗಿಗಳು, ವೇತನ ಕಡಿಮೆಯಿರೋ ಸಂದರ್ಭದಲ್ಲಿಉಳಿತಾಯದ ಕುರಿತ ಪರಿಕಲ್ಪನೆಯನ್ನು ಬದಲಾಯಿಸಿಕೊಳ್ಳಬೇಕಾದ ಅಗತ್ಯವಿದೆ. ಏಕೆಂದ್ರೆ ಕಡಿಮೆ ಆದಾಯ ಹೊಂದಿರೋ ಯುವಜನತೆ ಉಳಿತಾಯಕ್ಕಿಂತ ಮೊದಲು ಖರ್ಚು ಮಾಡಲು ಬಯಸುತ್ತಾರೆ. ಇದು ತಪ್ಪು. ನೀವು ನಿಮ್ಮ ಆದಾಯದ ಶೇ.20ರಷ್ಟನ್ನು ಉಳಿತಾಯ ಮಾಡಲು ಯೋಜನೆ ರೂಪಿಸಬೇಕು. ಈ ಯೋಜನೆ ನಿರಂತರವಾಗಿರಬೇಕು ಕೂಡ.

ಶೇ.20 ಉಳಿತಾಯದ ಟಾರ್ಗೆಟ್ ತಲುಪೋದು ಹೇಗೆ?
ನಿಮ್ಮ ವೇತನ ಕ್ರೆಡಿಟ್ ಆಗೋ ಬ್ಯಾಂಕ್ ಖಾತೆಯಿಂದ ಪ್ರತಿ ತಿಂಗಳು ನಿಮ್ಮ ಟೇಕ್ ಹೋಮ್ ವೇತನದ ಶೇ.20ರಷ್ಟು ಹಣ ಅದೇ ಬ್ಯಾಂಕ್ನಲ್ಲಿ ನೀವು ಒಂದು ವರ್ಷಗಳ ಅವಧಿಗೆ ತೆರೆದಿರೋ ಆರ್ ಡಿ (RD) ಖಾತೆಗೆ ವರ್ಗಾವಣೆಯಾಗುವಂತೆ ಎಲೆಕ್ಟ್ರಾನಿಕ್ ಕ್ಲಿಯರಿಂಗ್ ಸರ್ವೀಸ್ (ECS) ಅಳವಡಿಸಿಕೊಳ್ಳಿ. ನಿಮ್ಮ ಬಳಿ ಉಳಿಯೋ ಶೇ.80ರಷ್ಟು ಆದಾಯದಲ್ಲಿ ವೆಚ್ಚಗಳನ್ನು ಸರಿದೂಗಿಸಲು ಪ್ರಯತ್ನಿಸಿ. ಪ್ರಾರಂಭದಲ್ಲಿ ಇದು ನಿಮಗೆ ಕಷ್ಟವೆನಿಸಬಹುದು. ಆದ್ರೆ ದೀರ್ಘಾವಧಿಯಲ್ಲಿ ನೀವು ಇದಕ್ಕೆ ಹೊಂದಿಕೊಳ್ಳೋ ಜೊತೆ ಉಳಿತಾಯದ ಶಿಸ್ತನ್ನು ಕೂಡ ಅಳವಡಿಸಿಕೊಳ್ಳುತ್ತೀರಿ. ಉಳಿತಾಯ ಅನ್ನೋದು ಅದರಷ್ಟಕ್ಕೆ ಆಗೋ ಕಾರ್ಯವಲ್ಲ. ಅದಕ್ಕೆ ದೃಢಸಂಕಲ್ಪದ ಜೊತೆ ಮನೋಬಲವೂ ಬೇಕು. ದುಬಾರಿ ಗಜೆಟ್ ಖರೀದಿ, ಅನಗತ್ಯ ವಸ್ತುಗಳಿಗೆ ದುಂದುವೆಚ್ಚ, ಪ್ರವಾಸಗಳಿಗೆ ತೆರಳೋದು ಇತ್ಯಾದಿಗೆ ಬ್ರೇಕ್ ಹಾಕಿದ್ರೆ ಮಾತ್ರ ಉಳಿತಾಯ ಮಾಡಲು ಸಾಧ್ಯವಾಗುತ್ತದೆ.

ವೀಸಾ, ಮಾಸ್ಟರ್ ಕಾರ್ಡ್ಗೆ ಇಂಗ್ಲೆಂಡ್ ನಲ್ಲಿ ಪ್ರತಿಸ್ಪರ್ಧಿ, ಭಾರತದಲ್ಲೂ ಟಾಂಗ್ ನೀಡಿದ ರುಪೇ

ಒಂದು ವರ್ಷದ ಆರ್ ಡಿ ಅವಧಿ ಮುಗಿದ ಬಳಿಕ ಆ ಹಣವನ್ನು ನಿಮ್ಮ ಟರ್ಮ್ ಇನ್ಯುರೆನ್ಸ್ ಪಾಲಿಸಿ ಪ್ರೀಮಿಯಂ ಕಟ್ಟಲು, ಸಾರ್ವಜನಿಕ ಪಿಂಚಣಿ ನಿಧಿಯಲ್ಲಿ (PPF) ಉಳಿತಾಯ ಮಾಡಲು ಹಾಗೂ ಇಕ್ವಿಟಿ ಲಿಂಕ್ ಆಗಿರೋ ಉಳಿತಾಯ ಯೋಜನೆಗಳಲ್ಲಿ (ELSS) ಹೂಡಿಕೆ ಮಾಡಲು ಬಳಸಿಕೊಳ್ಳಿ. ಇದ್ರಿಂದ ನಿಮಗೆ ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ಪ್ರಯೋಜನ ಸಿಗುತ್ತದೆ. ನಿವೃತ್ತಿ ನಂತರದ ಜೀವನಕ್ಕೆ ಕೂಡ ಒಂದಿಷ್ಟು ಉಳಿತಾಯ ಮಾಡಲು ಉದ್ಯೋಗ ದೊರೆತ ತಕ್ಷಣವೇ ಪ್ರಾರಂಭಿಸಿ. ಇದು ದೀರ್ಘಾವಧಿಯಲ್ಲಿ ಉತ್ತಮ ರಿಟರ್ನ್ಸ್ ನೀಡುತ್ತದೆ. ನಿಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ PPF ಗಿಂತ ELSS ಯೋಜನೆಗಳಲ್ಲಿ ಹೆಚ್ಚಿನ ಹೂಡಿಕೆ ಮಾಡಿ. ಇದ್ರಿಂದ ದೀರ್ಘಾವಧಿಯಲ್ಲಿ ಉತ್ತಮ ರಿಟರ್ನ್ಸ್ ಸಿಗುತ್ತದೆ. 20-30 ವರ್ಷಗಳ ಅವಧಿಯಲ್ಲಿ ELSS ಯೋಜನೆಗಳು ಶೇ.12-15ರಷ್ಟು ರಿಟರ್ನ್ಸ್ ನೀಡಬಲ್ಲವು. ಅದೇ PPF ನಲ್ಲಿ ಹೂಡಿಕೆ ಮಾಡಿದ್ರೆ ಶೇ.7-8ರಷ್ಟು ರಿಟರ್ನ್ಸ್ ಮಾತ್ರ ಸಿಗುತ್ತದೆ.

ಬಿಟ್‌ಕಾಯಿನ್‌ಗೆ ಕರೆನ್ಸಿ ಮಾನ್ಯತೆ ನೀಡಲ್ಲ: ಕೇಂದ್ರ

ELSS ಮೂಲಕ ಎಷ್ಟು ಹಣ ಸಂಗ್ರಹಿಸಬಹುದು?
ನೀವು ಪ್ರತಿ ತಿಂಗಳು ಎಸ್ಐಪಿ (SIP) ಮೂಲಕ ELSS ಫಂಡ್ಸ್ ನಲ್ಲಿ 3,000 ರೂ. ಹೂಡಿಕೆ ಮಾಡಿದ್ರೆ ನಿವೃತ್ತಿ ವೇಳೆಗೆ ನೀವು ದೊಡ್ಡ ಮೊತ್ತದ ಹಣವನ್ನುಗಳಿಸಬಹುದು. ಉದಾಹರಣೆಗೆ ನಿಮ್ಮ ವಯಸ್ಸು ಈಗ 25 ಎಂದು ಭಾವಿಸೋಣ. ನೀವು ELSS ಯೋಜನೆಯಲ್ಲಿ 3,172ರೂ. ಮೊತ್ತದ ಎಸ್ಐಪಿ ಪ್ರಾರಂಭಿಸಿದ್ದೀರಿ ಎಂದು ಭಾವಿಸೋಣ. ಪ್ರತಿ ವರ್ಷ ನಿಮ್ಮ ವೇತನದಲ್ಲಿ ಹೆಚ್ಚಳವಾದಂತೆ ನೀವು SIP ಮೊತ್ತವನ್ನು ಶೇ.10ರಷ್ಟು ಹೆಚ್ಚಿಸುತ್ತೀರಿ, ನಿಮಗೆ 60 ವರ್ಷವಾಗೋವಾಗ ನೀವು 5ಕೋಟಿ ರೂ. ಒಡೆಯರಾಗಿರುತ್ತೀರಿ. 35 ವರ್ಷಗಳ ಹೂಡಿಕೆ ಅವಧಿಯಲ್ಲಿ ಶೇ.12 ಬಡ್ಡಿದರದಲ್ಲಿ ಇಷ್ಟು ಹಣ ಸಿಗುತ್ತದೆ. ಒಂದು ವೇಳೆ ನೀವು ಶೇ.15ರಷ್ಟು ರಿಟರ್ನ್ಸ್ ನಿರೀಕ್ಷಿಸುತ್ತಿದ್ರೆ ಮಾಸಿಕ 3,306ರೂ. ಎಸ್ ಐಪಿ ಪ್ರಾರಂಭಿಸಿ, 60 ವರ್ಷವಾಗೋ ತನಕ ಇದ್ರಲ್ಲಿ ಪ್ರತಿವರ್ಷ ಶೇ.10 ಹೆಚ್ಚಿಸಿ ಆಗ ನಿಮ್ಮ ನಿವೃತ್ತಿ ನಿಧಿ 9 ಕೋಟಿ ರೂ. ಆಗಿರುತ್ತದೆ.

 

click me!