Asianet Suvarna News Asianet Suvarna News

Rival to Visa and Mastercard: ವೀಸಾ, ಮಾಸ್ಟರ್ ಕಾರ್ಡ್ಗೆ ಇಂಗ್ಲೆಂಡ್ ನಲ್ಲಿ ಪ್ರತಿಸ್ಪರ್ಧಿ, ಭಾರತದಲ್ಲೂ ಟಾಂಗ್ ನೀಡಿದ ರುಪೇ

ಭಾರತದಲ್ಲಿ ರುಪೇ( Rupay)ಕಾರ್ಡ್ ಬಳಕೆಗೆ ಸರ್ಕಾರ ನೀಡುತ್ತಿರೋ ಉತ್ತೇಜನದಿಂದ ಕಂಗೆಟ್ಟಿರೋ ಅಮೆರಿಕ ಮೂಲದ ಪಾವತಿ ನೆಟ್ ವರ್ಕ್ ಗಳಾದ ವೀಸಾ (Visa) ಹಾಗೂ ಮಾಸ್ಟರ್ ಕಾರ್ಡ್ಗೆ (Master card) ಈಗ ಇಂಗ್ಲೆಂಡ್ ನಲ್ಲೂಹೊಡೆತ ಬಿದ್ದಿದೆ. ಯುರೋಪ್ ರಾಷ್ಟ್ರಗಳಲ್ಲಿ EPI ಎಂಬ ಪಾವತಿ ನೆಟ್ ವರ್ಕ್ ತನ್ನ ವ್ಯವಹಾರವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಮುಂದಾಗಿದೆ.

US based Visa Mastercard facing challenges from local rivals in India Europe anu
Author
business, First Published Nov 30, 2021, 2:55 PM IST

ಲಂಡನ್ (ನ.30): ಭಾರತದಲ್ಲಿ ಬ್ಯಾಂಕ್ ಗಳು ಮಾಸ್ಟರ್ ಕಾರ್ಡ್ ಅಡಿಯಲ್ಲಿಬರೋ ಡೆಬಿಟ್, ಕ್ರೆಡಿಟ್ ಹಾಗೂ ಪ್ರೀಪೇಯ್ಡ್ ಕಾರ್ಡ್ ಈ ಮೂರಕ್ಕೂ ಹೊಸದಾಗಿ ಗ್ರಾಹಕರನ್ನುಸೇರ್ಪಡೆ ಮಾಡಿಕೊಳ್ಳುವಂತಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (Reserve bank of India) ಜುಲೈನಲ್ಲಿ ಬ್ಯಾಂಕ್ ಗಳಿಗೆ ಸೂಚನೆ ನೀಡಿತ್ತು.ಈಗ ಯುರೋಪ್ ರಾಷ್ಟ್ರಗಳಲ್ಲಿ ಕೂಡ ಅಮೆರಿಕ ಮೂಲದ ಪಾವತಿ ನೆಟ್ ವರ್ಕ್ ವ್ಯವಸ್ಥೆಗಳಾದ ಮಾಸ್ಟರ್ ಕಾರ್ಡ್ ಹಾಗೂ ವೀಸಾಕ್ಕೆ ಪರ್ಯಾಯವಾಗಿ ತಮ್ಮದೇ ಹೊಸ ಪಾವತಿ ನೆಟ್ ವರ್ಕ್ ಪ್ರಬಲಗೊಳಿಸಲು ಮುಂದಾಗಿವೆ. ಇದಕ್ಕೆ ಪೂರಕವೆಂಬಂತೆ ಕಳೆದ ವರ್ಷ ಪ್ರಾರಂಭಗೊಂಡ  European Payments Initiative (EPI) ಎಂಬ ಪಾವತಿ ನೆಟ್ ವರ್ಕ್ ತನ್ನ ಬಲವರ್ಧನೆಗೆ ಸಾವರ್ಜನಿಕರಿಂದ ಆರ್ಥಿಕ ನೆರವು ಕೋರಿದೆ. 22 ಬ್ಯಾಂಕ್ ಗಳ ಬೆಂಬಲ ಹೊಂದಿರೋ EPI ಮಾಸ್ಟರ್ ಕಾರ್ಡ್ ಹಾಗೂ ವೀಸಾಕ್ಕೆ ಸ್ಪರ್ಧೆ ನೀಡಲು ಮುಂದಾಗಿದ್ದು, ಖಾಸಗಿ ಬ್ಯಾಂಕ್ ಗಳು ಒದಗಿಸುತ್ತಿರೋ ಆರ್ಥಿಕ ಬೆಂಬಲ ಸಾಲದ ಹಿನ್ನೆಲೆಯಲ್ಲಿ ಸಾವರ್ಜನಿಕರ ನೆರವು ಕೋರಿರೋದಾಗಿ ಹೇಳಿದೆ.

ಬಿಟ್‌ಕಾಯಿನ್‌ಗೆ ಕರೆನ್ಸಿ ಮಾನ್ಯತೆ ನೀಡಲ್ಲ: ಕೇಂದ್ರ

ಡಿಸೆಂಬರ್ ಅಂತ್ಯದೊಳಗೆ ಮತ್ತಷ್ಟು ಬ್ಯಾಂಕ್ ಗಳು ಹಾಗೂ ಪಾವತಿದಾರರನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳಲು  EPI ಯೋಜನೆ ಸಿದ್ಧಪಡಿಸಿದ್ದು, ಆ ಮೂಲಕ ತನ್ನ ಕಾರ್ಡ್ ಪಾವತಿ ನೆಟ್ ವರ್ಕ್ ಬಲಗೊಳಿಸಲು ನಿರ್ಧರಿಸಿದೆ.' ಸಾವರ್ಜನಿಕ ಹೂಡಿಕೆ ಸಿಕ್ಕಿದ್ರೆ ತುಂಬಾ ಉತ್ತಮ. ನಾವು ಏನನ್ನೂ ಬಚ್ಚಿಡೋದಿಲ್ಲ. ಸಂಸ್ಥೆಯ ಬಲವರ್ಧನೆಗೆ ದೊಡ್ಡ ಮಟ್ಟದ ಹೂಡಿಕೆಗೆ ನಾವು ಮುಂದಾಗಿದ್ದೇವೆ' ಎಂದು  ಯುರೋಪಿಯನ್ ಪಾವತಿ ಸಂಸ್ಥೆಗಳ ಒಕ್ಕೂಟ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ EPI  ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾರ್ಟಿನ್ ವಿಮಾರ್ಟ್ (Martina Weimert ) ಮಾಹಿತಿ ನೀಡಿದ್ದಾರೆ. ಆದ್ರೆ ಎಷ್ಟು ಹೂಡಿಕೆ ಅಗತ್ಯ ಎಂಬ ಮಾಹಿತಿಯನ್ನು ಅವರು ಬಿಟ್ಟುಕೊಟ್ಟಿಲ್ಲ. ಡೌಸಿ ಬ್ಯಾಂಕ್ (Deutsche Bank), ಯುನಿಕ್ರೆಡಿಟ್ (UniCredit ), ಬಿಎನ್ಪಿ ಪರಿಬಸ್ (BNP Paribas), ಐಎನ್ ಜಿ ( ING), ಸೊಸೈಟಿ ಜನೆರಲೆ (Societe Generale) ಹಾಗೂ ಸಬಡೆಲ್ (Sabadell ) ಸೇರಿದಂತೆ ಯುರೋಪಿಯನ್ ಒಕ್ಕೂಟದ 7 ರಾಷ್ಟ್ರಗಳ 22 ಬ್ಯಾಂಕ್ ಗಳು EPIಗೆ ಬೆಂಬಲ ನೀಡುತ್ತಿವೆ. ಈ ರಾಷ್ಟ್ರಗಳಲ್ಲಿ ಫ್ರಾನ್ಸ್, ಜರ್ಮನಿ ಹಾಗೂ ಸ್ಪೇನ್ ಕೂಡ ಸೇರಿವೆ. ಒಂದು ಕಡೆ ಸಗಟು ವ್ಯಾಪಾರಿಗಳು ಪಾವತಿಗೆ ಸಿದ್ಧರಿಲ್ಲ, ಇನ್ನೊಂದು ಕಡೆ ಬ್ಯಾಂಕ್ ಗಳು ಹಾಗೂ ಇತರ EPI ಷೇರುದಾರರು ಈಗಿರುವುದಕ್ಕಿಂತ ಹೆಚ್ಚಿನ ನೆರವು ಅಂದ್ರೆ ಮಾಸ್ಟರ್ ಕಾರ್ಡ್ ಹಾಗೂ ವೀಸಾದಂತಹ ವಿದೇಶಿ ಕಾರ್ಡ್ ನೆಟ್ ವರ್ಕ್ ಗಳ ಮೇಲಿನ ಅವಲಂಬನೆ ತಗ್ಗಿಸಲು ಸಿದ್ಧರಿಲ್ಲ.ಹೀಗಾಗಿ EPI ಮುಂದಿನ ಕೆಲವು ವಾರಗಳಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಿದೆ ಎಂದು ವಿಮಾರ್ಟ್ ತಿಳಿಸಿದ್ದಾರೆ. 2022ರಲ್ಲಿಪಾವತಿ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರೋ ಮೂಲಕ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಲು ಯೋಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Tips to Manage Credit Cards:ಮಾಡಬೇಕಾದ್ದೇನು? ಮಾಡಬಾರದ್ದೇನು?

ಭಾರತದ ವಿರುದ್ಧ ವೀಸಾ (Visa Inc) ದೂರು
ಭಾರತದ ದೇಶೀಯ ಪಾವತಿ ವ್ಯವಸ್ಥೆ ರುಪೇ ( RuPay) ಅಮೆರಿಕ ಮೂಲದ ಪಾವತಿ ನೆಟ್ ವರ್ಕ್ ಸಂಸ್ಥೆ ವೀಸಾ ಇಂಕ್ ವ್ಯವಹಾರಕ್ಕೆ ದೊಡ್ಡ ಹೊಡೆತ ನೀಡಿದೆ. ಈ ಬಗ್ಗೆ ಸ್ವತಃ ವೀಸಾ ಇಂಕ್ ಅಮೆರಿಕ ಸರ್ಕಾರಕ್ಕೆ ದೂರು ನೀಡಿದೆ. ಭಾರತ ಸರ್ಕಾರ ರುಪೇ ಪಾವತಿ ವ್ಯವಸ್ಥೆಗೆ ಉತ್ತೇಜನ ನೀಡುತ್ತಿರೋದು ತನ್ನ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ ಎಂದು ವೀಸಾ ಇಂಕ್ ತಿಳಿಸಿರೋದಾಗಿ ರಾಯ್ಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಅಮೆರಿಕದ ವ್ಯಾಪಾರ ಪ್ರತಿನಿಧಿ (USTR) ಕ್ಯಾಥೆರಿನ್ ತಾಜ್ (Katherine Tai ) ಹಾಗೂ ವೀಸಾ ಇಂಕ್ ಸಿಇಒ ಆಲ್ಫ್ರೆಡ್ ಕೆಲ್ಲೆ(Alfred Kelly) ಸೇರಿದಂತೆ ಕಂಪನಿ ಪ್ರತಿನಿಧಿಗಳ ಜೊತೆಗಿನ ಸಭೆಗೆ ಸಂಬಂಧಿಸಿ ಸಿದ್ಧಪಡಿಸಿದ ಜ್ಞಾಪನ ಪತ್ರ ( memo)ದಲ್ಲಿ ಈ ಮಾಹಿತಿಯಿರೋದನ್ನು ರಾಯ್ಟರ್ಸ್ ಬಹಿರಂಗಪಡಿಸಿದೆ.ಭಾರತದ ಪ್ರಧಾನಿ ನರೇಂದ್ರ ಮೋದಿ ಸ್ವದೇಶಿ ವ್ಯವಸ್ಥೆಗೆ ಪ್ರೋತ್ಸಾಹ ನೀಡೋ ಉದ್ದೇಶದಿಂದ ಸಾರ್ವಜನಿಕವಾಗಿ ರುಪೇ ಕಾರ್ಡ್ ಬಳಕೆಗೆ ಉತ್ತೇಜನ ನೀಡುತ್ತಿರೋದು ವೀಸಾ ವ್ಯವಹಾರಕ್ಕೆ ಹೊಡೆತ ನೀಡಿದೆ. 2018ರಲ್ಲಿ ಕೂಡ ವೀಸಾ ಸಂಸ್ಥೆ USTR ಜೊತೆ ಇದೇ ವಿಷಯ ಪ್ರಸ್ತಾಪಿಸೋ ಜೊತೆ ಇದಕ್ಕೆ ವಿರೋಧ ಕೂಡ ವ್ಯಕ್ತಪಡಿಸಿತ್ತು. ಸ್ದಳೀಯ ಪಾವತಿ ನೆಟ್ ವರ್ಕ್ ಅಭಿವೃದ್ಧಿಗೆ ಮೋದಿ ರಾಷ್ಟ್ರವಾದವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ವೀಸಾ ವಿರುದ್ಧ ವ್ಯಕ್ತಪಡಿಸಿತ್ತು. ರುಪೇ ವ್ಯವಸ್ಥೆಯನ್ನು ನಿರ್ವಹಿಸುತ್ತಿರೋ ಭಾರತೀಯ ರಾಷ್ಟ್ರೀಯ ಪಾವತಿಗಳ ನಿಗಮಕ್ಕೆ (NPCI) ಪೂರಕವಾಗಿ ಭಾರತ ಸರ್ಕಾರ ನೀತಿಗಳನ್ನು ರೂಪಿಸುತ್ತಿದೆ ಎಂದು ವೀಸಾ ಆರೋಪಿಸಿದೆ. ಆದ್ರೆ ಈ ಬಗ್ಗೆ ವೀಸಾ, ಯುಎಸ್ಟಿಆರ್,  ಪ್ರಧಾನಿ ಕಚೇರಿ ಹಾಗೂ ಎನ್ ಪಿ ಸಿಐ ಯಾವುದೇ ಹೇಳಿಕೆಗಳನ್ನು ನೀಡಿಲ್ಲ. ಕಳೆದ ಕೆಲವು ವರ್ಷಗಳಿಂದ ಪ್ರಧಾನಿ ಮೋದಿ ರುಪೇ ಕಾರ್ಡ್ ಬಳಕೆಗೆ ಉತ್ತೇಜನ ನೀಡುತ್ತಿದ್ದು, 2020 ನವೆಂಬರ್ ನಲ್ಲಿ ಭಾರತದ 952 ಮಿಲಿಯನ್ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಗಳಲ್ಲಿ ಶೇ.63 ರುಪೇಯದ್ದಾಗಿವೆ. 

Follow Us:
Download App:
  • android
  • ios