ಒಮ್ಮೆಈ ಬ್ಯುಸಿನೆಸ್ ಸೆಟ್ಅಪ್ ಆದ್ರೆ ಪ್ರತಿ ತಿಂಗಳು 4 ಲಕ್ಷ ರೂಪಾಯಿ ಆದಾಯ- ಇದು ಸದ್ಯದ ಟ್ರೆಂಡಿಂಗ್ ಸ್ಟಾರ್ಟಪ್

By Mahmad Rafik  |  First Published Nov 14, 2024, 12:44 PM IST

ಒಮ್ಮೆ ಸೆಟಪ್ ಆದರೆ ತಿಂಗಳಿಗೆ 4 ಲಕ್ಷ ರೂ. ಆದಾಯ ತರುವ ಟ್ರೆಂಡಿಂಗ್ ಸ್ಟಾರ್ಟ್‌ಅಪ್ ಬಗ್ಗೆ ತಿಳಿಯಿರಿ. ನಗರ ಮತ್ತು ಅರೆ-ನಗರ ಪ್ರದೇಶಗಳಲ್ಲಿ ಈ ವ್ಯವಹಾರ ಯಶಸ್ವಿಯಾಗಲಿದೆ. ಮಕ್ಕಳು ಮತ್ತು ಯುವಕರೇ ಗ್ರಾಹಕರಾಗಿರುತ್ತಾರೆ.


ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗಿನ ಸರ್ಕಾರಿ ಕೆಲಸ ಮಾಡಬೇಕು ಅಂತ ಎಲ್ಲರೂ ಕನಸು ಕಾಣುತ್ತಾರೆ. ಸರ್ಕಾರಿ ಉದ್ಯೋಗ ಸಿಗದಿದ್ದಾಗ, ಖಾಸಗಿ ಕಂಪನಿಗಳತ್ತ ಯುವ ಸಮುದಾಯ ಮುಖ ಮಾಡುತ್ತದೆ. ಆದ್ರೆ ಬಹುತೇಕರು ಇಲ್ಲಿಯ ಕೆಲಸ ಒತ್ತಡದಿಂದ ಹೊರ ಬಂದು ತಮ್ಮದೇ ಆದ ಸ್ವಂತ ಉದ್ಯೋಗ ಆರಂಭಿಸಬೇಕು ಎಂದು ಪ್ಲಾನ್ ಮಾಡಿಕೊಳ್ಳುತ್ತಾರೆ. ಕೆಲ ಉದ್ಯೋಗ ಅಥವಾ ಸ್ಟಾರ್ಟ್‌ಅಪ್ ಹೇಗೆ ಆದಾಯ ನೀಡುತ್ತೆ? ಇಡೀ ವರ್ಷ ಇದರಿಂದ ಆದಾಯ ನಿರೀಕ್ಷೆ ಮಾಡಬಹುದಾ ಎಂಬಿತ್ಯಾದಿ ವಿಷಯಗಳ ಬಗ್ಗೆ ತಿಳಿದುಕೊಳ್ಳಬೇಕು. ಒಂದು ಕಾಲದಲ್ಲಿ ಎಸ್‌ಟಿಡಿ ಬೂತ್ ಉತ್ತಮ ಸ್ಟಾರ್ಟ್‌ಅಪ್ ಆಗಿತ್ತು. ಆದ್ರೆ ಇಂದು ಈ ಬ್ಯುಸಿನೆಸ್ ಮಾಡೋಕೆ ಯಾರೂ ಮುಂದಾಗಲ್ಲ. ಹಾಗೆ ಕಾಲ ಬದಲಾದಂತೆ ಒಂದಿಷ್ಟು ವ್ಯವಹಾರಗಳು ವ್ಯಾಲಿಡಿಟಿಯನ್ನು ಕಳೆದುಕೊಳ್ಳುತ್ತವೆ. ಹಾಗಾಗಿ ಟ್ರೆಂಡಿಂಗ್‌ ಮತ್ತು ಬಹುವರ್ಷ ಆದಾಯ ತಂದುಕೊಡಬಲ್ಲ ವ್ಯವಹಾರಗಳನ್ನು ಆರಂಭಿಸಬೇಕು. ಇಂದು ನಾವು ನಿಮಗೆ ಸದ್ಯದ ಟ್ರೆಂಡಿಂಗ್ ಸ್ಟಾರ್ಟ್‌ಅಪ್ ಬಗ್ಗೆ ಹೇಳುತ್ತಿದ್ದೇವೆ. 

ಈ ಟ್ರೆಂಡಿಂಗ್ ಬ್ಯುಸಿನೆಸ್ ಒಮ್ಮೆ ಸೆಟ್‌ಅಪ್ ಮಾಡಿಕೊಂಡ್ರೆ ಪ್ರತಿ ತಿಂಗಳು 4 ಲಕ್ಷ ರೂಪಾಯಿ ಆದಾಯ ಗಳಿಸಬಹುದು. ತಿಂಗಳ ವೆಚ್ಚಗಳನ್ನು ತೆಗೆದರೂ ನಿಮಗೆ ದ್ವಿಗುಣ ಲಾಭ ಸಿಗುತ್ತದೆ. ನಗರ ಅಥವಾ ಅರೆ-ನಗರ ಪ್ರದೇಶಗಳಲ್ಲಿ ಈ ವ್ಯವಹಾರ ಆರಂಭಿಸಬಹುದು. ಮಕ್ಕಳು ಮತ್ತು ಯುವ ಸಮುದಾಯವೇ ನಿಮ್ಮ ಗ್ರಾಹಕರಾಗಿರುತ್ತಾರೆ. ರಜಾದಿನಗಳಲ್ಲಿ ಹೆಚ್ಚು ವ್ಯವಹಾರವಾಗುತ್ತದೆ. ಗಂಟೆಗಳ ಲೆಕ್ಕದಲ್ಲಿ ಗ್ರಾಹಕರಿಗೆ ಚಾರ್ಜ್ ಮಾಡಬಹುದು. 

Latest Videos

undefined

ವಿಆರ್ ಕೆಫೆ ಬ್ಯುಸಿನೆಸ್?
ಸದ್ಯ ಟ್ರೆಂಡಿಂಗ್ ಬ್ಯುಸಿನೆಸ್ ಅಂದ್ರೆ ಅದು ವಿಆರ್ ಕೆಫೆ. ಈ ಬ್ಯುಸಿನೆಸ್ ಆರಂಭಿಸಲು ಕನಿಷ್ಠ ಎರಡು ಕೋಣೆಗಳ ಅವಶ್ಯಕತೆ ಇರುತ್ತದೆ. ವಿಆರ್ (virtual reality) ಕೆಫೆ ಮೂಲಕ ಗ್ರಾಹಕರಿಗೆ ವರ್ಚುವಲ್ ಅನುಭವ ನೀಡುವದಾಗಿದೆ. ಒಂದು ಕೋಣೆಯಲ್ಲಿ ಕಾಶ್ಮೀರದಲ್ಲಿನ ತಾಪಮಾನ ನಿರ್ಮಿಸಬೇಕು. ಇದಕ್ಕಾಗಿ ಸ್ಪೆಷಲ್ ಪೀಠೋಪಕರಣ, ಸುಧಾರಿತ ತಂತ್ರಜ್ಞಾನದ ಬಳಕೆ ಮಾಡಬೇಕಾಗುತ್ತದೆ. ಕೋಣೆಯೊಳಗೆ ಬರುತ್ತಿದ್ದಂತೆ ಗ್ರಾಹಕರಿಗೆ ಕಾಶ್ಮೀರಕ್ಕೆ ಬಂದಂತ ಅನುಭವ ಬರಬೇಕು. ನಂತರ VR Headset ಕಣ್ಣಿಗೆ ಕಟ್ಟಿಕೊಳ್ಳುವಂತೆ ಹೇಳಬೇಕು. ನಂತರ ಕಾಶ್ಮೀರದ ಪ್ರವಾಸಿ ತಾಣಗಳ ಹೈಕ್ವಾಲಿಟಿ ವಿಡಿಯೋ ಪ್ಲೇ ಮಾಡಬೇಕು.

ಇದನ್ನೂ ಓದಿ: 1500 ರೂಪಾಯಿಯಿಂದ ಆರಂಭಿಸಿ ಇಂದು 3 ಕೋಟಿ ಕಂಪನಿಯ ಒಡತಿಯಾದ ಗೃಹಿಣಿ

ಈ ಸಂದರ್ಭದಲ್ಲಿ ಕೋಣೆಯ ತಾಪಮಾನ ಅಲ್ಲಿ ಪ್ಲೇ ಆಗುತ್ತಿರುವ ದೃಶ್ಯದ ರೀತಿಯಲ್ಲಿ ಬದಲಾಯಿಸುತ್ತಿರಬೇಕು. ಇದರಿಂದ ಗ್ರಾಹಕರಿಗೆ ಕಾಶ್ಮೀರಕ್ಕೆ ತೆರಳಿ ಅಲ್ಲಿ ಪ್ರವಾಸಿ ತಾಣ ನೋಡಿದಂತೆ ಆಗಬೇಕು. ಹಾಗಾದಾಗ ಮಾತ್ರ ನಿಮ್ಮ ವಿಆರ್ ಕೆಫೆ ಬ್ಯುಸಿನೆಸ್ ಯಶಸ್ವಿಯಾಗುತ್ತದೆ. 

ಕಾಶ್ಮೀರ ಜೊತೆಗೆ ದೇಶದ ಪ್ರಮುಖ ಸ್ಥಳಗಳ ಆಫರ್ ನೀಡುವ ಮೂಲಕ ಗ್ರಾಹಕರನ್ನು ಆಕರ್ಷಿಸಬಹುದು. ಸದ್ಯ ವಿಆರ್ ಕೆಫೆಗಳು ಒಂದು ಗಂಟೆಗೆ 300 ರಿಂದ 500 ರೂ. ಶುಲ್ಕ ವಿಧಿಸುತ್ತಿವೆ. ಅಡ್ವಾನ್ಸ್‌ಡ್ ಟೆಕ್ನಾಲಜಿ ವಿಆರ್ ಕೆಫೆ ನಿರ್ಮಾಣಕ್ಕೆ ಆರಂಭದಲ್ಲಿ 15 ಲಕ್ಷ ರೂ.ವರೆಗೆ ಬಂಡವಾಳ ಹೂಡಿಕೆ ಮಾಡಬೇಕಾಗುತ್ತದೆ. ಮೂರರಿಂದ ನಾಲ್ಕು ಗ್ರಾಹಕರ ಬ್ಯಾಚ್‌ನಂತೆ ದಿನಕ್ಕೆ  10-12 ಶೋ ಮಾಡಬಹುದು. ದಿನಕ್ಕೆ 50 ಗ್ರಾಹಕರು ಬಂದರೂ 15,000 ರೂಪಾಯಿ ಸಂಪಾದಿಸಬಹುದು. ಅಂದ್ರೆ ತಿಂಗಳಿಗೆ 4,50,000 ರೂಪಾಯಿ ಆಗುತ್ತದೆ. ತಿಂಗಳ ಖರ್ಚು ಅಂತ 2 ಲಕ್ಷ ತೆಗೆದರೂ ನಿಮಗೆ 2.5 ಲಕ್ಷ ರೂಪಾಯಿ ಲಾಭವಾಗುತ್ತದೆ.

ಇದನ್ನೂ ಓದಿ: ಈ ಯಂತ್ರ ಅಳವಡಿಸಿ ಬ್ಯುಸಿನೆಸ್ ಆರಂಭಿಸಿದ್ರೆ ಪ್ರತಿ ತಿಂಗಳು 2 ಲಕ್ಷ ರೂಪಾಯಿ ಲಾಭ

click me!