ಎಲಾನ್ ಮಸ್ಕ್ ಸ್ಪೆಸ್ ಎಕ್ಸ್ ಹೂಡಿಕೆದಾರನಿಂದ 5,160 ಕೋಟಿಗೆ ಹಲ್ದಿರಾಮ್ ಪಾಲು ಖರೀದಿ

ಎಲಾನ್ ಮಸ್ಕ್ ಸ್ಪೇಸ್ ಎಕ್ಸ್ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ ಹೂಡಿಕೆದಾರನಿಂದ ಇದೀಗ ಭಾರತದ ಜನಪ್ರಿಯ ಬ್ರ್ಯಾಂಡ್ ಹಲ್ದಿರಾಮ್‌ನ ಶೇಕಡಾ 6ರಷ್ಟು ಪಾಲು ಖರೀದಿಸಿದೆ. 
 


ನವದೆಹಲಿ(ಏ.01) ಮಹತ್ವದ ಬೆಳವಣಿಗೆಯಲ್ಲಿ ಭಾರತದ ಜನಪ್ರಿಯ ಬ್ರ್ಯಾಂಡ್ ಹಲ್ದಿರಾಮ್‌ನ ಶೇಕಡಾ 6ರಷ್ಟು ಪಾಲನ್ನು  ಅಲ್ಫಾ ವೇವ್ ಗ್ಲೋಬಲ್ ಸಂಸ್ಥೆ ಖರೀದಿಸಿದೆ. ವಿಶೇಷ ಅಂದರೆ ಈ ಸಂಸ್ಥೆ ವಿಶ್ವದ ಶ್ರೀಮಂತ ಉದ್ಯಮಿ, ಅಮರಿಕದ ಡೋನಾಲ್ಡ್ ಟ್ರಂಪ್ ಸರ್ಕಾರದ ಭಾಗವಾಗಿರುವ ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಸಂಸ್ಥೆಯಲ್ಲಿ ಹೂಡಿಕೆ ಮಾಡಿರುವ ಸಂಸ್ಥೆಯಾಗಿದೆ. ಹಲ್ದಿರಾಮ್ಸ್ ಕಂಪನಿಯ ಶೇಕಡಾ 6 ರಷ್ಟು ಪಾಲನ್ನು ಬರೋಬ್ಬರಿ 5,160 ಕೋಟಿ ರೂಪಾಯಿಗೆ ಖರೀದಿಸಿದೆ. ಈ ಮೂಲಕ ಅಮೆರಿಕ ಸಂಸ್ಥೆಯೊಂದು ಭಾರತದ ಆಹಾರ ತಿನಿಸು ಬ್ರ್ಯಾಂಡ್‌ನಲ್ಲಿ ಪ್ರಮುಖ ಪಾಲು ಹೊಂದಿದಂತಾಗಿದೆ.

ಆಲ್ಫಾ ವೇವ್ ಗ್ಲೋಬಲ್ ಹಾಗೂ ಹಲ್ದಿರಾಮ್ಸ್ ನಡುವಿನ ಈ ಒಪ್ಪಂದ ಕುರಿತು ಎಕನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ. ಇದೀಗ ಎರಡನೇ ಭಾರಿಗೆ ಹಲ್ದಿರಾಮ್ಸ್ ತನ್ನ ಪಾಲು ಮಾರಾಟ ಮಾಡಿದೆ. ಇದಕ್ಕೂ ಮೊದಲು ಸಿಂಗಾಪುರ ಮೂಲದ ಟೆಮಾಸೆಕ್ ಕಂಪನಿಗೆ ಮಾರಾಟ ಮಾಡಿತ್ತು. ಸಿಂಗಾಪೂರ ಮೂಲದ ಕಂಪನಿ ಹಲ್ದಿರಾಮ್ಸ್‌ನಲ್ಲಿ ಶೇಕಡಾ 9ರಷ್ಟು ಪಾಲು ಹೊಂದಿದೆ ಎನ್ನಲಾಗಿದೆ. ಇದೀಗ ಆಲ್ಫಾ ವೇವ್ ಗ್ಲೋಬರ್ ಕಂಪನಿಗೆ ಪಾಲು ಮಾರಾಟ ಮಾಡಿದೆ.  

Latest Videos

ಎಲಾನ್ ಮಸ್ಕ್ ಗೂಗ್ಲಿ, $ 12 ಬಿಲಿಯನ್ ನಷ್ಟದಲ್ಲಿ ಎಕ್ಸ್ (ಟ್ವಿಟರ್) ಮಾರಾಟ

ಐದು ಸಾವಿರ ಕೋಟಿ ರೂಪಾಯಿಗೆ ಹಲ್ದಿರಾಮ್ಸ್ ಪಾಲು ಖರೀದಿಸಿದರೂ ಆಲ್ಫಾ ವೇವ್ ಗ್ಲೋಬಲ್ ಕಂಪನಿಗೆ ಹಲ್ದಿರಾಮ್ಸ್ ಬೋರ್ಡ್ ಸದಸ್ಯತ್ವದಲ್ಲಿ ಯಾವುದೇ ಪಾಲಿಲ್ಲ. ಆದರೆ ಹಲ್ದಿರಾಮ್ಸ್ ಬೋರ್ಡ್ ಮೆಂಬರ್‌ಶಿಪ್‌ನಲ್ಲಿ ಒಂದು ಸ್ಥಾನ ಪಡೆಯಲಿದೆ. ಹಲ್ದಿರಾಮ್ಸ್ ತನ್ನ ಪಾಲು ಮಾರಾಟವನ್ನು ಖಚಿತಪಡಿಸಿದೆ. ಆದರೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಎರಡು ಕಂಪನಿಗಳಿಗೆ ಮಾರಾಟ  ಮಾಡಿರುವ ಪಾಲು ಕುರಿತು ಸ್ಪಷ್ಟ ಮಾಹಿತಿ ನೀಡಿಲ್ಲ.

ಹಲ್ದಿರಾಮ್ಸ್ ವಿಶ್ವ ಮಾರುಕಟ್ಟೆಯಲ್ಲಿ ಇದೀಗ ಭಾರಿ ಸಂಚಲನ ಮೂಡಿಸಲಿದೆ. ಕಾರಣ ಇದೀಗ ಅಮೆರಿಕ ಸಂಸ್ಥೆ ಹಾಗೂ ಸಿಂಗಾಪೂರ ಸಂಸ್ಥೆಯಿಂದ ಪಾಲು ಖರೀದಿಯಿಂದ ಇದೀಗ ಹಲ್ದಿರಾಮ್ಸ್ ಗ್ಲೋಬಲ್ ಮಾರುಕಟ್ಟೆಯಲ್ಲಿ ಮುನ್ನುಗ್ಗಲಿದೆ. ಅಮೆರಿಕ, ಮಧ್ಯಪ್ರಾಚ್ಯ ದೇಶಗಳಲ್ಲ ಇನ್ನು ಮುಂದೆ ಹಲ್ದಿರಾಮ್ಸ್ ಉತ್ಪನ್ನಗಳು ಲಭ್ಯವಾಗಲಿದೆ. 

ಹಲ್ದಿರಾಮ್ಸ್ ಮೌಲ್ಯ
ಹಲ್ದಿರಾಮ್ಸ್ ಭಾರತದ ಅತ್ಯುತ್ತಮ ಹಾಗೂ ಜನಪ್ರಿಯ ಸ್ನಾಕ್ಸ್ ಬ್ರ್ಯಾಂಡ್. ಆಹಾರ ತಿನಿಸುಗಳ ಈ ಬ್ರ್ಯಾಂಡ್ ಭಾರತದ ಮೂಲೆ ಮೂಲೆಯಲ್ಲಿ ಜನಪ್ರಿಯವಾಗಿದೆ. ಹಲ್ದಿರಾಮ್ಸ್ ಒಟ್ಟು ಮೌಲ್ಯ ಬರೋಬ್ಬರಿ 85,000 ಕೋಟಿ ರೂಪಾಯಿ. ಭಾರತದ ಪ್ಯಾಕಿಂಗ್ ಫುಡ್ ಇಂಡಸ್ಟ್ರಿಯಲ್ಲಿ ಹಲ್ದಿರಾಮ್ಸ್ ಅತೀ ದೊಡ್ಡ ಸಂಸ್ಥೆ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮುಕೇಶ್ ಅಂಬಾನಿಗೆ ಜಾಕ್‌ಪಾಟ್, ಒಂದೂವರೆ ತಿಂಗಳಲ್ಲಿ 100 ಮಿಲಿಯನ್ ಬಂಪರ್

 

click me!