ಡಾ ರಾಜ್‌ಕುಮಾರ್ ಹಾಗೂ ವಿಷ್ಣುವರ್ಧನ್ ರಿಜೆಕ್ಟ್ ಮಾಡಿದ್ದ ಕಥೆಯನ್ನು ನಾನು ಮಾಡಿದೆ. ಆ ಕಥೆಯನ್ನು ಡಾ ರಾಜ್‌ಕುಮಾರ್ ಹಾಗೂ ವಿಷ್ಣುವರ್ಧನ್ ಮಾತ್ರವಲ್ಲ, ಕನ್ನಡದ ಆ ಕಾಲದ ಬಹುತೇಕ ಎಲ್ಲಾ ಹೀರೋಗಳೂ ಕೂಡ ರಿಜೆಕ್ಟ್ ಮಾಡಿದ್ದಾರೆ. ಆದರೆ, ಆ ಕಥೆ ನನಗೆ ಯಾಕೋ ತುಂಬಾ..
ಸದ್ಯಕ್ಕೆ ಕನ್ನಡದ ನಟ-ನಿರ್ದೇಶಕ ರವಿಚಂದ್ರನ್ (Crazy Star Ravichandran) ಅವರು ಸಂಕಷ್ಟದಲ್ಲಿ ಸಿಲುಕಿದ್ದಾರೆ ಎನ್ನಲಾಗುತ್ತಿದೆ. ಬೇರೆಯವರ ಜೀವನಕ್ಕೆ ಅವರದನ್ನು ಹೋಲಿಕೆ ಮಾಡಿ ನೋಡಿ, ಕ್ರೇಜಿ ಸ್ಟಾರ್ ಸ್ವಲ್ಪ ಕಷ್ಟದಲ್ಲಿದ್ದಾರೆ ಎನ್ನವ ಬದಲು ಸಂಕಷ್ಟದಲ್ಲಿ ಇದ್ದಾರೆ ಎನ್ನಬುಹದಾ? ಗೊತ್ತಿಲ್ಲ. ಆದರೆ, ನಟ ರವಿಚಂದ್ರನ್ ಅವರು ಸ್ವಂತ ಮನೆಯಿಂದ ಬಾಡಿಗೆ ಮನೆಗೆ ಹೋಗಿದ್ದಾರೆ. ಅವರಿಗೆ ಈಗ ಸರಿಯಾಗಿ ಇನ್‌ಕಂ ಇಲ್ಲ, ಹಾಗೆ ಹೀಗೆ ಎಂದು ಪ್ರಚಾರ ಆಗುತ್ತಿದೆ. ಆದರೆ, ಸ್ವತಃ ರವಿಚಂದ್ರನ್ ಅವರು ಈ ಬಗ್ಗೆ ಅಷ್ಟೇನೂ ಹೇಳಿಕೊಳ್ಳದಿದ್ದರೂ ತಮ್ಮ ಹಳೆಯ ಕಥೆಗಳನ್ನು ಹಲವು ವೇದಿಕೆಗಳಲ್ಲಿ ಹೇಳಿದ್ದಾರೆ. ಅದರಲ್ಲೊಂದು ಸ್ಟೋರಿ ಇಲ್ಲಿದೆ ನೋಡಿ..
ಡಾ ರಾಜ್‌ಕುಮಾರ್ ಹಾಗೂ ವಿಷ್ಣುವರ್ಧನ್ ರಿಜೆಕ್ಟ್ ಮಾಡಿದ್ದ ಕಥೆಯನ್ನು ನಾನು ಮಾಡಿದೆ. ಅದು ಅಭೂತಪೂರ್ವ ಯಶಸ್ಸನ್ನು ಕೂಡ ದಾಖಲಿಸಿತು. ಆ ಕಥೆಯನ್ನು ಡಾ ರಾಜ್‌ಕುಮಾರ್ ಹಾಗೂ ವಿಷ್ಣುವರ್ಧನ್ ಮಾತ್ರವಲ್ಲ, ಕನ್ನಡದ ಆ ಕಾಲದ ಬಹುತೇಕ ಎಲ್ಲಾ ಹೀರೋಗಳೂ ಕೂಡ ರಿಜೆಕ್ಟ್ ಮಾಡಿದ್ದಾರೆ. ಆದರೆ, ಆ ಕಥೆ ನನಗೆ ಯಾಕೋ ತುಂಬಾ ಇಷ್ಟವಾಯ್ತು. ನಾನು ನನ್ನ ಅಪ್ಪಾಜಿಗೆ ಹೇಳಿದೆ, ಆ ಕಥೆಯನ್ನು ನಾನು ಸಿನಿಮಾ ಮಾಡ್ತೀನಿ ಅಂದೆ. ಆದರೆ ನಮ್ಮ ಅಪ್ಪಾಜಿಗೆ ಅದು ಇಷ್ಟವಿರಲಿಲ್ಲ. ನಾನು ಆ ಸಿನಿಮಾ ಮಾಡದಿದ್ದರೆ ಮುಂದೆ ಯಾವತ್ತೂ ಸಿನಿಮಾನೇ ಮಾಡಲ್ಲ ಅಂದ್ಬಿಟ್ಟೆ.
ರಿಯಾಲಿಟಿ ಷೋಗಳಲ್ಲಿ ಕಾಮಿಡಿ ಹೆಸ್ರಲ್ಲಿ ಡಬಲ್ ಮೀನಿಂಗ್! ಅಸಮಾಧಾನ ಹೊರಹಾಕಿದ ರವಿಚಂದ್ರನ್ ಹೇಳಿದ್ದೇನು?
ಈ ಮಾತನ್ನು ಕೇಳಿ ಅಪ್ಪಾಜಿಗೆ ಅದೇನು ಅನ್ನಿಸಿತೋ ಏನೋ, ಸರಿ ಮಾಡು ಅಂದ್ಬಿಟ್ರು. ನಾನೇ ಆ ಕಥೆಗೆ 'ಚಕ್ರವ್ಯೂಹ' ಎಂದು ಹೆಸರಿಟ್ಟೆ. ಆ ಕಥೆಯನ್ನು ಸಾಕಷ್ಟು ಕಡೆ ನನಗೆ ಬೇಕಾದಂತೆ ಬದಲಾಯಿಸಿಕೊಂಡೆ. ಚಿತ್ರದ ನಿರ್ದೇಶಕರ ಬಳಿ ಮಾತನ್ನಾಡಿ ಹಲವು ದೃಶ್ಯಗಳನ್ನು ಹಾಗೆ, ಹೀಗೆ ಮಾಡಿಸಿಕೊಂಡೆ. ಬಿಡುಗಡೆ ಆದಾಗ ಜನರು 'ಚಕ್ರವ್ಯೂಹ' ಸಿನಿಮಾವನ್ನು ಇಷ್ಟಪಟ್ಟರು. ಆ ಸಿನಿಮಾದಿಂದ ಸಾಕಷ್ಟು ಸಾಲವನ್ನೂ ತೀರಿಸಿಕೊಂಡೆವು. ಅಪ್ಪಾಜಿ ಕೂಡ ನನ್ನ ನಿರ್ಧಾರ ಸರಿಯಾಗಿತ್ತು ಎಂದು ಖುಷಿಪಟ್ಟರು.
ನನ್ನ ಲೈಫ್ ಜರ್ನಿಯಲ್ಲಿ ನಾನು ಬಹಳಷ್ಟು ಸೋಲು-ಗೆಲವು ಎಲ್ಲವನ್ನೂ ನೋಡಿದ್ದೇನೆ. ಗೆದ್ದಾಗ ಹಿಗ್ಗಲಿಲ್ಲ, ಸೋತಾಗ ಕುಗ್ಗಲಿಲ್ಲ. ಅಗಿದ್ದು ಆಯಿತು, ಮುಂದೇನು ಮಾಡ್ಬೇಕು ಅನ್ನೋದಷ್ಟೇ ನನ್ನ ತಲೆಯಲ್ಲಿ ಓಡುವ ವಿಚಾರ. ಈಗಲೂ ಅಷ್ಟೇ, ನಾನು ಸೂಪರ್ ಹಿಟ್ ಚಿತ್ರವೊಂದನ್ನು ಮಾಡಬೇಕು. ಆ ಮೂಲಕ ಆಗಿರೋ ಸಾಲವನ್ನೆಲ್ಲಾ ತೀರಿಸಿಕೊಳ್ಳಬೇಕು, ಮಕ್ಕಳಿಗೆ ಒಂದಷ್ಟು ಆಸರೆಯಾಗುವಂತೆ ಏನಾದ್ರೂ ಮಾಡಬೇಕು. ನನಗೆ ನನ್ನ ಅಪ್ಪನಿಂದ ಸಾಕಷ್ಟು ಆಸ್ತಿಪಾಸ್ತಿ ಬಂತು. ಆದರೆ, ನನ್ನ ಮಕ್ಕಳಿಗೆ ನಾನು ಏನೂ ಮಾಡಲೇ ಇಲ್ಲ ಅನ್ನೋ ಕೊರಗು ನನ್ನನ್ನು ಕಾಡುತ್ತಿದೆ.
ದಿವ್ಯಾ ಭಾರತಿಯಂತೆ ಆಡಿದ್ದೇಕೆ ಶ್ರೀದೇವಿ..? ಗಾಯತ್ರಿ ಮಂತ್ರ ಪಠಿಸಿದ ಬಳಿಕ ಏನಾಯ್ತು?
ನನ್ನ ಸಾಕಷ್ಟು ಸಿನಿಮಾಗಳು ಗೆದ್ದಿವೆ, ಕೆಲವು ಸೋತಿವೆ, ಹಲವು ಚಿತ್ರಗಳು ಎವರೇಜ್ ಕಲೆಕ್ಷನ್ ಮಾಡಿವೆ. ನನ್ನ ಜೀವನ ಈಗ ಈ ಹಂತಕ್ಕೆ ಬಂದು ನಿಂತಿದೆ. ನನಗೆ ಯಾವುದರ ಬಗ್ಗೆಯೂ ರೀಗ್ರೆಟ್ ಇಲ್ಲ, ಹೆಮ್ಮೆಯೂ ಇಲ್ಲ. ಸೋಲಿನಿಂದ ಕಂಗೆಟ್ಟಿಲ್ಲ, ಮತ್ತೆ ಗೆಲ್ಲುತ್ತೇನೆ ಎಂಬ ಆತ್ಮವಿಶ್ವಾಸ ನನಗಿದೆ. ಸಿನಿಮಾ ಬಿಟ್ಟರೆ ನನಗೆ ಬೇರೆ ಗೊತ್ತಿಲ್ಲ. ಇಲ್ಲಿಯೇ ಕಳೆದುಕೊಂಡಿದ್ದೇನೆ, ಇಲ್ಲಿಯೇ ಗಳಿಸಿದ್ದೇನೆ. ನನ್ನ ಆಟ ಏನಿದ್ರೂ ಇಲ್ಲೇ ಮುಂದುವರೆಯಲಿದೆ..' ಎಂದಿದ್ದಾರೆ ಕನ್ನಡದ ಕ್ರೇಜಿ ಸ್ಟಾರ್ ರವಿಚಂದ್ರನ್.