
ಭಾಗ್ಯಲಕ್ಷ್ಮಿ ಎಂದರೆ ಸಾಕು, ಕಲರ್ಸ್ ಕನ್ನಡದ ಸೀರಿಯಲ್ ಪ್ರೇಮಿಗಳಿಗೆ ಸ್ವಾವಲಂಬಿ ಹೆಣ್ಣೊಬ್ಬಳು ಕಣ್ಮುಂದೆ ಬರುತ್ತಾಳೆ. ಹಲವು ಹೆಣ್ಣುಮಕ್ಕಳಿಗೆ ಮಾದರಿ ಎಂದೇ ಬಿಂಬಿತವಾಗಿರೋ ಮಹಿಳೆ ಈಕೆ. ಈಗ ಈಕೆ ಡೋಲಾಯಮಯ ಸ್ಥಿತಿಯಲ್ಲಿಯೂ ಮತ್ತೆ ಚಿಗುರಿದ್ದಾಳೆ. ಎಷ್ಟೆಲ್ಲಾ ಸಾಧನೆ ಮಾಡಿದರೂ ಜೋಕರ್ ಆಗಿ ಕೆಲಸ ಮಾಡುವ ಸ್ಥಿತಿಗೆ ಬಂದು ತಲುಪಿದ್ದರೂ, ಆ ಕೆಲಸವನ್ನೂ ಶ್ರದ್ಧೆಯಿಂದ ಮಾಡಿದವಳು ಭಾಗ್ಯ. ಆದರೆ, ಆಕೆಯನ್ನು ಎಲ್ಲಿಯೂ ನೆಮ್ಮದಿಯಿಂದ ಇರಲು ಬಿಡಬಾರದು ಎಂದು ತಾಂಡವ್ ಶತ ಪ್ರಯತ್ನ ಮಾಡುತ್ತಿದ್ದಾನೆ. ಈಗ ಅಡುಗೆ ಮಾಡಿ ಎಲ್ಲೆಡೆ ವಿತರಣೆ ಮಾಡುವ ಕಾಯಕದಲ್ಲಿ ತೊಡಗಿದರೂ ಅದಕ್ಕೂ ಕಲ್ಲು ಹಾಕಲು ತಾಂಡವ್, ಶ್ರೇಷ್ಠಾ ಒಂದೆಡೆಯಾದರೆ, ಕನ್ನಿಕಾ ಮತ್ತೊಂದೆಡೆ ಹೊಂಚು ಹಾಕುತ್ತಲೇ ಇದ್ದಾರೆ. ಸಾಕು ಮಾಡ್ರಪ್ಪಾ ಗೋಳು ಎಂದು ವೀಕ್ಷಕರು ಪರಿಪರಿಯಾಗಿ ನೋವು ತೋಡಿಕೊಳ್ಳುತ್ತಿದ್ದಾರೆ. ಆ ರೀತಿಯ ಇದೆ ಸದ್ಯ ಭಾಗ್ಯಳ ಸ್ಥಿತಿ.
ಇಂತಿಪ್ಪ ಭಾಗ್ಯ ಅರ್ಥಾತ್ ಸುಷ್ಮಾ ಕೆ.ರಾವ್ ಸೀರಿಯಲ್ ಬಿಟ್ಟು ಹಿಮಾಲಯದತ್ತ ಮುಖ ಮಾಡಿದ್ದಾರೆ! ಹೌದು. ಈ ಕುರಿತು ಅವರೇ ಖುದ್ದು ವಿಡಿಯೋ ಒಂದರಲ್ಲಿ ಹೇಳಿದ್ದಾರೆ. ಮೌಂಟ್ ಎವರೆಸ್ಟ್‌ಗೆ ಹೋಗುವುದಾಗಿ ಅವರು ತಿಳಿಸಿದ್ದಾರೆ. ಅಲ್ಲಿ ಟ್ರೆಕ್ಕಿಂಗ್ ಮಾಡುವ ಆಸೆ ಹಲವು ವರ್ಷಗಳಿಂದ ಇತ್ತು. ಈ ಹಿನ್ನೆಲೆಯಲ್ಲಿ ಈಗ ಪ್ರಯಾಣ ಬೆಳೆಸಿರುವುದಾಗಿ ಹೇಳಿದ್ದಾರೆ. ಎವರೆಸ್ಟ್‌ಗೆ ಹೋಗುವುದಾಗಿ ಹೇಳಿದ್ದಷ್ಟನ್ನೇ ಕೇಳಿದ ಅಭಿಮಾನಿಗಳು ಶಾಕ್ ಆಗಿದ್ದಂತೂ ನಿಜ. ಸೀರಿಯಲ್ ಬಿಟ್ಟುಬಿಟ್ರಾ ಎಂದುಕೊಂಡವರೇ ಹಲವರು. ಆದರೆ ಫ್ಯಾನ್ಸ್ ಶಾಕ್ ಆಗುವ ಅಗತ್ಯವಿಲ್ಲ. ಏಕೆಂದರೆ ನಟಿ ಸುಷ್ಮಾ, ಕೆಲವು ದಿನಗಳ ಮಟ್ಟಿಗೆ ರಜೆ ಪಡೆದು ಚಾರಣಕ್ಕೆ ಹೊರಟಿದ್ದಾರೆ.
ಸುಷ್ಮಾರ ಭರತನಾಟ್ಯ ಮತ್ತೊಮ್ಮೆ ಕಣ್ತುಂಬಿಸಿಕೊಳ್ಳೋ 'ಭಾಗ್ಯ'! ಆರ್ಯಭಟ ಪ್ರಶಸ್ತಿ ನಟಿಯ ಲೈಫ್ ಸ್ಟೋರಿ ಇಲ್ಲಿದೆ...
ಇತ್ತೀಚಿಗೆ ಕುಂಭಮೇಳಕ್ಕೂ ಹೋಗಿ ಬಂದಿದ್ದರು ಸುಷ್ಮಾ. ಇನ್ನು ಚಾರಣ ಎಂದರೆ ಅದು ಒಂದೆರಡು ದಿನಗಳಲ್ಲಿ ಆಗುವ ಕೆಲಸವಲ್ಲ. ಆದ್ದರಿಂದ ದಿನ-ರಾತ್ರಿ ಶೂಟಿಂಗ್ ಮಾಡಿ ಕೆಲವು ಎಪಿಸೋಡ್‌ಗಳನ್ನು ಮುಗಿಸಿ ಬಂದಿರುವುದಾಗಿ ಸುಷ್ಮಾ ಹೇಳಿದ್ದಾರೆ. ಚಾರಣಕ್ಕೆ ಹೊರಡುವಾಗ ಹಲವಾರು ವಸ್ತುಗಳನ್ನು ತೆಗೆದುಕೊಂಡು ಹೋಗಬೇಕು. ಆದರೆ ಶೂಟಿಂಗ್ ಮಧ್ಯೆ ಬಿಡುವು ಸಿಗದ ಕಾರಣ, ಮನೆಯವರೇ ಎಲ್ಲಾ ಅರೇಂಜ್ ಮಾಡಿ ಕೊಟ್ಟಿದ್ದಾರೆ. ಏನೇನು ಇದೆ ಎಂದು ನೋಡುವುದಕ್ಕೂ ಟೈಮ್ ಇರಲಿಲ್ಲ. ಹಾಗೆಯೇ ಬಂದಿದ್ದೇನೆ ಎಂದಿದ್ದಾರೆ ನಟಿ. ಮೊದಲಿಗೆ ಕಠ್ಮಂಡುಗೆ ಹೋಗಿ ಅಲ್ಲಿಂದ ಎಲ್ಲೆಲ್ಲಿ ಹೋಗುತ್ತೇನೆ ಎನ್ನುವ ಮಾಹಿತಿ ನೀಡಿದ್ದಾರೆ ಅವರು.
ಇನ್ನು ಸುಷ್ಮಾ ಕುರಿತು ಹೇಳುವುದಾದರೆ, ಇವರು ಚಿಕ್ಕಮಗಳೂರಿನ ಕೊಪ್ಪದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ಹಿಂದಿಯಲ್ಲಿ ಪದವಿ ಪಡೆದಿದ್ದಾರೆ. ಭರತನಾಟ್ಯ ಮತ್ತು ಕೂಚುಪುಡಿ ಕಲಾವಿದೆ. ನೃತ್ಯಕ್ಕಾಗಿ 1997ರಲ್ಲಿ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. 2005ರಲ್ಲಿ ನಟನೆಗಾಗಿಯೂ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. ಇವರಿಗೆ ಈಗ 38 ವರ್ಷ ವಯಸ್ಸು. ಸುಷ್ಮಾ ರಾವ್ ಎಸ್.ನಾರಾಯಣ್ ನಿರ್ದೇಶನದ ಭಾಗಗೀರಥಿ ಧಾರಾವಾಹಿಯಲ್ಲಿ ಹೇಮಾ ಪ್ರಭಾತ್ ಅವರ ತಂಗಿಯ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ಯಾವ ಜನ್ಮದ ಮೈತ್ರಿ, ಗುಪ್ತಗಾಮಿನಿ, ಸೊಸೆ ತಂದ ಭಾಗ್ಯ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದರು.
ಅಯ್ಯಯ್ಯೋ... ಡಾನ್ಸ್ ಮಾಡ್ತಾ ಮಾಡ್ತಾ ಭಾಗ್ಯಳ ಅಮ್ಮಂಗೆ ಇದೇನಾಗೋಯ್ತು? ವಿಡಿಯೋಗೆ ಫ್ಯಾನ್ಸ್ ಶಾಕ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.