Bengaluru: ಡಿವಿಜಿ ರಸ್ತೆಯ ಎಲ್ಲ ಅಂಗಡಿ-ಮುಂಗಟ್ಟುಗಳನ್ನು ಕ್ಲೋಸ್‌ ಮಾಡಿ: ಬಿಬಿಎಂಪಿ ಖಡಕ್‌ ನೋಟಿಸ್

By Sathish Kumar KHFirst Published Jan 7, 2023, 4:56 PM IST
Highlights

ನಗರದ ಪ್ರತಿಷ್ಠಿತ ಏರಿಯಾಗೆ ಬಿಬಿಎಂಪಿ ನೊಟೀಸ್ ಜಾರಿಗೊಳಿಸಿದೆ. ಗ್ರಾಹಕರ ಹಾಟ್ ಸ್ಪಾಟ್ ಆಗಿರುವ ಡಿವಿಜಿ ರಸ್ತೆಗೆ ಕಂಟಕವಾಗಿದೆ. ಈಗ ಇಲ್ಲಿರುವ ಎಲ್ಲ ಅಂಗಡಿ ಮುಂಗಟ್ಟು, ಮತ್ತು ಉದ್ಯಮಗಳನ್ನು ಕ್ಲೋಸ್ ಮಾಡುವಂತೆ ಬಿಬಿಎಂಪಿ ನೋಡಿಸ್ ಜಾರಿಗೊಳಿಸಿದೆ.

ಬೆಂಗಳೂರು (ಜ.07): ನಗರದ ಪ್ರತಿಷ್ಠಿತ ಏರಿಯಾಗೆ ಬಿಬಿಎಂಪಿ ನೊಟೀಸ್ ಜಾರಿಗೊಳಿಸಿದೆ. ಗ್ರಾಹಕರ ಹಾಟ್ ಸ್ಪಾಟ್ ಆಗಿರುವ ಡಿವಿಜಿ ರಸ್ತೆಗೆ ಕಂಟಕವಾಗಿದೆ. ಈಗ 40 ಅಡಿಗಿಂತ ಕಡಿಮೆ ವಿಸ್ತೀರ್ಣವನ್ನು ಹೊಂದಿರುವ ಡಿವಿಜಿ ರಸ್ತೆಯಲ್ಲಿ ಉದ್ಯಮ ನಡೆಸಲಾಗುತ್ತಿದೆ. ಈ ಪ್ರದೇಶ ವ್ಯಾಪಾರ ಮತ್ತು ಉದ್ಯಮಗಳನ್ನು ನಡೆಸಲು ಕಾನೂನಿನಲ್ಲಿ ಅವಕಾಶವಿಲ್ಲ. ಒಂದು ವಾರದೊಳಗೆ ಎಲ್ಲ ಉದ್ಯಮಗಳನ್ನು ಮುಚ್ಚುವಂತೆ ಬಿಬಿಎಂಪಿ ಅಧಿಕಾರಿಗಳು ನೋಟಿಸ್‌ ಜಾರಿ ಮಾಡಿದ್ದಾರೆ. 

ಬಿಬಿಎಂಪಿ ವಿ.ವಿ.ಪುರಂ ಉಪ ವಿಭಾಗ ವ್ಯಾಪ್ತಿಯ ಡಿವಿಜಿ ರಸ್ತೆಯಲ್ಲಿರುವ ಸುಮಾರು 200 ಕ್ಕೂ ಹೆಚ್ಚು ಮಳಿಗೆಗಳಿಗೆ ನೋಟೀಸ್ ಜಾರಿಗೊಳಿಸಲಾಗಿದೆ. ಈಗ ಉದ್ಯಮಗಳನ್ನು ನಡೆಸುತ್ತಿರುವ ಪ್ರದೇಶ ಕಮರ್ಷಿಯಲ್ ಏರಿಯಾ ಅಲ್ಲ. ಇದು ವಸತಿ ಪ್ರದೇಶವಾಗಿದ್ದು, ಉದ್ಯಮ ನಡೆಸಲು ಅವಕಾಶವಿಲ್ಲ. ಉದ್ದಿಮೆಗಳನ್ನು ನಡೆಸುತ್ತಿರುವ ಮಳಿಗೆಗಳ ಮುಂಭಾಗದ ರಸ್ತೆ 40 ಅಡಿಗಿಂತ ಕಡಿಮೆ ಇದೆ. ಈ ರೀತಿಯ ವಸತಿ ವಲಯದಲ್ಲಿ ವಾಣಿಜ್ಯ ಚಟುವಟಿಕೆ ನಡೆಸಬಾರದು. ಇದು ಉಚ್ಛ ನ್ಯಾಯಾಲಯದ 2008ರ ಆದೇಶದ ಪ್ರಕಾರ ಕಾನೂನುಬಾಹಿರವಾಗಿದೆ ಎಂದು ನೋಟಿಸ್‌ ನಲ್ಲಿ ಎಚ್ಚರಿಕೆ ನೀಡಿದ್ದಾರೆ. 

ಜ.15ರೊಳಗೆ 108 ವಾರ್ಡಲ್ಲಿ Namma Clinic ಆರಂಭ; ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌

ಉದ್ದಿಮೆ ಮುಚ್ಚಲು 7 ದಿನದ ಗಡುವು: ಪರಿಷ್ಕೃತ ಮಾಸ್ಟರ್ ಪ್ಲ್ಯಾನ್ 2015 ಮತ್ತು ಅದರಡಿ ರಚಿಸಲ್ಪಟ್ಟ ಝೋನಿಂಗ್ ರೆಗ್ಯುಲೇಷನ್ಸ್ ಉಲ್ಲಂಘನೆ ಆಗುತ್ತದೆ. ಸರ್ಕಾರದ 20-03-2015 ರ ಮಾರ್ಗಸೂಚಿ ಉಲ್ಲಂಘನೆ ಆಗುತ್ತಿದೆ. ನೊಟೀಸ್ ತಲುಪಿದ 7 ದಿನಗಳ ಒಳಗೆ ಉದ್ದಿಮೆ ಮುಚ್ಚಬೇಕು. ಈ ಬಗ್ಗೆ ಸೂಕ್ತ ಭಾವಚಿತ್ರದೊಂದಿಗೆ ಸಮಜಾಯಿಷಿ ನೀಡಬೇಕು. ಇಲ್ಲದಿದ್ದರೆ ಬಿಬಿಎಂಪಿ ಕಾಯ್ದೆ 2020 ಅಡಿ ಬಿಬಿಎಂಪಿಯಿಂದ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಆರೋಗ್ಯಾಧಿಕಾರಿಗಳು ಉದ್ಯಮ ಮಾಲೀಕರಿಗೆ ನೋಟೀಸ್ ಜಾರಿಗೊಳಿಸಿ ಶಾಕ್‌ ನೀಡಿದ್ದಾರೆ. ಇನ್ನು ನಗರದಲ್ಲಿ ಇಂತಹ ಉದ್ಯಮಿಗಳನ್ನು ಮುಚ್ಚಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಉದ್ಯಮಿಗಳಿಂದ ಭಾರಿ ವಿರೋಧ- ದಿಢೀರ್‌ ಸಭೆ: ಬಿಬಿಎಂಪಿ ಆರೋಗ್ಯ ಅಧಿಕಾರಿಗಳಿಂದ ನೋಟೀಸ್ ಜಾರಿಯಾದ ಬಳಿಕ ಉದ್ಯಮಗಳ ಮಾಲೀಕರು ಬಿಬಿಎಂಪಿ ನೋಟೀಸ್ ವಿರುದ್ಧ ಹಾಗೂ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲ ಆಗಿದ್ದಾರೆ. ಬಿಬಿಎಂಪಿ ಆದೇಶದ ವಿರುದ್ಧ ವಿಧಾನ ಪರಿಷತ್‌ ಸದಸ್ಯ ಶರವಣ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಳಿಗೆಗಳ ಮಾಲೀಕರ ಜೊತೆ ನಾಳೆ ಮಹತ್ವದ ಸಭೆ ನಡೆಸಲಾಗುವುದು. ನಂತರ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕಾನೂನು ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳುತ್ತೇವೆ ಎಂದಿ ಶಾಸಕ ಶರವಣ ಮಾಹಿತಿ ನೀಡಿದ್ದಾರೆ.

BBMP ಕೊಳವೆ ಬಾವಿ ಅಕ್ರಮದ ಕತೆ: 150 ಅಡಿ ಬೋರ್ ಕೊರೆದು; 700 ಅಡಿಗೆ ದಾಖಲೆ ಕೊಟ್ರು!

ಉದ್ಯಮ ಮಾಲೀಕರಿಗೆ ಆತಂಕ: ಇನ್ನು ಬೆಂಗಳೂರಿನ ಕೇಂದ್ರ ಭಾಗವಾಗಿರುವ ಡಿವಿಜಿ ರಸ್ತೆಯಲ್ಲಿ ಉದ್ಯಮ ನಡೆಸದಂತೆ ನೋಟಿಸ್ ಜಾರಿಗೊಳಿಸಿರುವ ಬಿಬಿಎಂಪಿ ಅಧಿಕಾರಿಗಳು, ಹೊರ ವಲಯದಲ್ಲಿಯೂ ವಸತಿ ಪ್ರದೇಶಗಳಲ್ಲಿ ಉದ್ಯಮ ನಡೆಸುವುದನ್ನು ಬಂದ್‌ ಮಾಡಲು ಮುಂದಾಗಿದೆ. ಹೀಗಾಗಿ, ಕೆ.ಆರ್.ಪುರ, ಮಹದೇವಪುರ, ಬೊಮ್ಮನಹಳ್ಳಿ, ರಾಜರಾಜೇಶ್ವರಿ ನಗರ, ಯಲಹಂಕ, ದಾಸರಹಳ್ಳಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ವಸತಿ ಪ್ರದೇಶಗಳಲ್ಲಿ ಉದ್ಯಮ ನಡೆಸುತ್ತಿರುವ ಮಾಲೀಕರಿಗೆ ಆತಕ ಶುರುವಾಗಿದೆ.

click me!