ಗ್ರಾಹಕರೇ ಗಮನಿಸಿ: ವಾಟ್ಸ್‌ ಆ್ಯಪ್‌ನಲ್ಲಿಯೂ ಬೆಸ್ಕಾಂಗೆ ವಿದ್ಯುತ್ ಸಮಸ್ಯೆ ಬಗ್ಗೆ ದೂರು ನೀಡಿ

By Kannadaprabha NewsFirst Published May 8, 2024, 8:42 AM IST
Highlights

ಮಳೆಗಾಲದಲ್ಲಿ ಹೆಚ್ಚುತ್ತಿರುವ ವಿದ್ಯುತ್‌ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಬೆಸ್ಕಾಂ ತನ್ನ ವ್ಯಾಪ್ತಿಯ ಎಂಟೂ ಜಿಲ್ಲೆಗಳಲ್ಲಿ ಗ್ರಾಹಕರಿಂದ ದೂರುಗಳನ್ನು ಸ್ವೀಕರಿಸಲು ಸಹಾಯವಾಣಿಗೆ ಪರ್ಯಾಯವಾಗಿ ಎಂಟು ಪ್ರತ್ಯೇಕ ವಾಟ್ಸ್‌ ಆ್ಯಪ್‌ ಸಂಖ್ಯೆಗಳನ್ನು ನೀಡಿದೆ. 

ಬೆಂಗಳೂರು (ಮೇ.08): ಮಳೆಗಾಲದಲ್ಲಿ ಹೆಚ್ಚುತ್ತಿರುವ ವಿದ್ಯುತ್‌ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಬೆಸ್ಕಾಂ ತನ್ನ ವ್ಯಾಪ್ತಿಯ ಎಂಟೂ ಜಿಲ್ಲೆಗಳಲ್ಲಿ ಗ್ರಾಹಕರಿಂದ ದೂರುಗಳನ್ನು ಸ್ವೀಕರಿಸಲು ಸಹಾಯವಾಣಿಗೆ ಪರ್ಯಾಯವಾಗಿ ಎಂಟು ಪ್ರತ್ಯೇಕ ವಾಟ್ಸ್‌ ಆ್ಯಪ್‌ ಸಂಖ್ಯೆಗಳನ್ನು ನೀಡಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳಿಂದ ಸುರಿದ ಗಾಳಿ- ಮಳೆಗೆ ವಿದ್ಯುತ್ ಕಂಬಗಳು ಮುರಿದು, ವಿದ್ಯುತ್ ಮೂಲ ಸೌಕರ್ಯಗಳು ಹಾನಿಗೊಳಗಾಗಿವೆ. ಹೀಗಾಗಿ ಬೆಸ್ಕಾಂ ಸಹಾಯವಾಣಿ 1912ಗೆ ದೂರುಗಳು ಹರಿದು ಬಂದಿದ್ದು, ಕರೆಗಳ ಒತ್ತಡದಿಂದಾಗಿ ಗ್ರಾಹಕರಿಗೆ ಸಹಾಯವಾಣಿ ಸಂಪರ್ಕ ಸಾಧ್ಯವಾಗುತ್ತಿಲ್ಲ. 

ಹಾಗಾಗಿ ಮಳೆಗಾಲದಲ್ಲಿ ಗ್ರಾಹಕರ ವಿದ್ಯುತ್ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಬೆಸ್ಕಾಂ ವ್ಯಾಪ್ತಿಯ ಎಂಟು ಜಿಲ್ಲೆಗಳ ಗ್ರಾಹಕರಿಗೆ ಪರ್ಯಾಯ ವಾಟ್ಸ್ ಆ್ಯಪ್ ಸಂಖ್ಯೆಗಳನ್ನು ನೀಡಲಾಗಿದೆ. ವಾಟ್ಸ್‌ ಆ್ಯಪ್‌ ಸಂಖ್ಯೆಗಳಿಗೆ ಗ್ರಾಹಕರು ವಿದ್ಯುತ್‌ ಸಂಬಂಧಿತ ಸಮಸ್ಯೆ ಕುರಿತು ಸಂದೇಶ ಹಾಗೂ ಫೋಟೋಗಳನ್ನು ತಮ್ಮ ವಿಳಾಸದೊಂದಿಗೆ ಕಳುಹಿಸಿ ಪರಿಹಾರ ಪಡೆಯಬಹುದು ಎಂದು ಬೆಸ್ಕಾಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಮತ ಪ್ರಮಾಣ ಘೋಷಣೆಯಲ್ಲಿ ವ್ಯತ್ಯಾಸ: ಮಲ್ಲಿಕಾರ್ಜುನ ಖರ್ಗೆ ಆಕ್ಷೇಪ

ಜಿಲ್ಲಾವಾರು ವಾಟ್ಸ್ ಆಪ್ ಸಂಖ್ಯೆಗಳು: ಬೆಂಗಳೂರು ಪೂರ್ವ- 82778 84013, ಬೆಂಗಳೂರು ಪಶ್ಚಿಮ- 82778 84012, ಬೆಂಗಳೂರು ಉತ್ತರ- 82778 84014, ಬೆಂಗಳೂರು ದಕ್ಷಿಣ- 82778 84011, ಕೋಲಾರ- 82778 84015, ಚಿಕ್ಕಬಳ್ಳಾಪುರ- 82778 84016, ಬೆಂಗಳೂರು ಗ್ರಾಮಾಂತರ- 82778 84017, ರಾಮನಗರ- 82778 84018, ತುಮಕೂರು- 82778 84019, ಚಿತ್ರದುರ್ಗ- 82778 84020 ಹಾಗೂ ದಾವಣಗೆರೆ- 82778 84021. ಸುರಕ್ಷತೆ ಸಂಬಂಧಿಸಿದ ದೂರುಗಳಿಗೆ ವಾಟ್ಸ್ ಆ್ಯಪ್ ಸಂಖ್ಯೆ - 94831 91212, 94831 91222 ಮತ್ತು ಬೆಸ್ಕಾಂ ಸಾಮಾನ್ಯ ವಾಟ್ಸ್‌ ಆ್ಯಪ್ ಸಂಖ್ಯೆ- 94498 44640.

click me!