ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ ಶೀಘ್ರ ಮಾರುಕಟ್ಟೆಗೆ

By Kannadaprabha News  |  First Published Jul 3, 2021, 9:39 AM IST
  • ಓಲಾ ಸಂಸ್ಥೆ ತನ್ನ ಎಲೆಕ್ಟಿಕ್‌ ಸ್ಕೂಟರ್‌ ಅನ್ನು ಅನಾವರಣಗೊಳಿಸಿದೆ
  •  ಸಿಇಒ ಭವಿಷ್‌ ಅಗವಾಲ್‌ ಅವರು ಸ್ಕೂಟರ್‌ ಅನ್ನು ಚಲಾಯಿಸುತ್ತಿರುವ ವಿಡಿಯೋ ಬಿಡುಗಡೆ
  • ಸ್ಕೂಟರ್‌ನ ದರ 1 ಲಕ್ಷ ರು.ನ ಆಸುಪಾಸು

ನವದೆಹಲಿ (ಜು.03): ಬೆಂಗಳೂರು ಮೂಲದ ಓಲಾ ಸಂಸ್ಥೆ ತನ್ನ ಎಲೆಕ್ಟಿಕ್‌ ಸ್ಕೂಟರ್‌ ಅನ್ನು ಅನಾವರಣಗೊಳಿಸಿದೆ. ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ನ ಬಿಡುಗಡೆಗೂ ಮುನ್ನ ಕಂಪನಿಯ ಸಿಇಒ ಭವಿಷ್‌ ಅಗವಾಲ್‌ ಅವರು ಸ್ಕೂಟರ್‌ ಅನ್ನು ಚಲಾಯಿಸುತ್ತಿರುವ ವಿಡಿಯೋವನ್ನು ಟ್ವೀಟ್‌ ಮಾಡಿದ್ದಾರೆ.

ತನ್ನ ಮೊದಲ ಎಲೆಕ್ಟಿಕ್‌ ಸ್ಕೂಟರ್‌ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ಓಲಾ ಸಿದ್ಧತೆ ಮಾಡಿಕೊಂಡಿದೆ. ಸ್ಕೂಟರ್‌ನ ದರ 1 ಲಕ್ಷ ರು.ನ ಆಸುಪಾಸಿನಲ್ಲಿರುವ ಸಾಧ್ಯತೆ ಇದೆ. ಓಲಾ ಎಲೆಕ್ಟ್ರಿಕ್‌ ಅಥರ್‌ ಎನರ್ಜಿಯ ಸ್ಕೂಟರ್‌ಗೆ ಸ್ಪರ್ಧೆ ಒಡ್ಡುವ ನಿರೀಕ್ಷೆ ಇದೆ.

Latest Videos

undefined

ಓಲಾ ಕ್ಯಾಬ್ ಗೊತ್ತಲ್ಲ, ಅದೇ ಕಂಪನಿಯಿಂದ ಎಲೆಕ್ಟ್ರಿಕ್ ಸ್ಕೂಟರ್ ಬರ್ತಾ ಇದೆ! ..

‘ನನ್ನ ಟ್ವೀಟ್‌ ಅನ್ನು ಓದುವ ವೇಗಕ್ಕಿಂತ ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ 0ರಿಂದ 60 ಕಿ.ಮೀ. ಹೆಚ್ಚು ವೇಗದಲ್ಲಿ ಚಲಿಸಲಿದೆ’ ಎಂದು ಹೇಳಿದ್ದಾರೆ.

 

Took this beauty for a spin! Goes 0-60 faster than you can read this tweet! Ready or not, a revolution is coming! https://t.co/ZryubLLo6X pic.twitter.com/wPsch79Djf

— Bhavish Aggarwal (@bhash)

ಸ್ಕೂಟರ್‌ನ ವಿಶೇಷತೆಗಳು:  ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ ಒಂದು ಬಾರಿ ಚಾರ್ಜ್ ಮಾಡಿದರೆ 150 ಕಿ.ಮೀ. ದೂರ ಚಲಿಸಬಹುದಾಗಿದೆ. ಗಂಟೆಗೆ ಗರಿಷ್ಠ 90 ಕಿ.ಮೀ. ವೇಗದಲ್ಲಿ ಸಾಗುವ ಸಾಮರ್ಥ್ಯವನ್ನು ಹೊಂದಿದೆ. ಸ್ಕೂಟರ್‌ ಚಾರ್ಜ್ ಮಾಡಲು ಪ್ರತ್ಯೇಕ ಚಾರ್ಜಿಂಗ್‌ ಪಾಯಿಂಟ್‌ ಅನ್ನು ಇನ್‌ಸ್ಟಾಲ್‌ ಮಾಡಬೇಕಾದ ಅಗತ್ಯವಿಲ್ಲ. ಮನೆಯಲ್ಲಿರುವ ಪ್ಲಗ್‌ ಪಿನ್‌ ಮೂಲಕವೇ ಸ್ಕೂಟರ್‌ ಅನ್ನು ಚಾರ್ಜ್ ಮಾಡಬಹುದಾಗಿದೆ.

click me!