500 KM ಮೈಲೇಜ್ ರೇಂಜ್; ಹೊಸ ಎಲೆಕ್ಟ್ರಿಕ್ ಕಾರು ಘೋಷಿಸಿದ ಹ್ಯುಂಡೈ!

By Suvarna NewsFirst Published Dec 3, 2020, 7:50 PM IST
Highlights

ಹ್ಯುಂಡೈ ಮೋಟಾರ್ ಹೊಚ್ಚ ಹೊಸ ಎಲೆಕ್ಟ್ರಿಕ್ ಕಾರು ಘೋಷಿಸಿದೆ. ನೂತನ ಕಾರು ಬರೋಬ್ಬರಿ 500 ಕಿ.ಮೀ ಮೈಲೇಜ್ ರೇಂಜ್ ನೀಡಲಿದೆ. ಅತ್ಯಾಧುನಿಕ BEV ತಂತ್ರಜ್ಞಾನ ಸೇರಿದಂತೆ ಹಲವು ವಿಶೇಷತಗಳು ಒಳಗೊಂಡಿದೆ. ನೂತನ ಕಾರಿನ ವಿವರ ಇಲ್ಲಿವೆ.

ಸೌತ್ ಕೊರಿಯಾ(ಡಿ.03): ಹ್ಯುಂಡೈ ಮೋಟಾರ್ ಇದೀಗ ಮತ್ತೊಂದು ಘೋಷಣೆ ಮಾಡಿದೆ. ಈಗಾಗಲೇ ಎಲೆಕ್ಟ್ರಿಕ್ ಕಾರು ವಿಭಾಗದಲ್ಲಿ ಹೊಸ ಅಧ್ಯಾಯ ಬರೆದಿರುವ ಹ್ಯುಂಡೈ ಇದೀಗ ಎರಡನೇ ಹೊಚ್ಚ ಹೊಸ ಎಲೆಕ್ಟ್ರಿಕ್ ಕಾರು ಬಿಡುಗಜೆ ಮಾಡಲು ಮುಂದಾಗಿದೆ. E-GMP ಎಲೆಕ್ಟ್ರಿಕ್ ಪ್ಲಾಟ್‌ಫಾರ್ಮ್ ಅಡಿ ನೂತನ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗಲಿದೆ ಎಂದು ಹ್ಯುಂಡೈ ಘೋಷಿಸಿದೆ.

250 ಟಾಟಾ ನೆಕ್ಸಾನ್ - ಹ್ಯುಂಡೋ ಕೋನಾ ಎಲೆಕ್ಟ್ರಿಕ್ ಕಾರು ಬುಕ್ ಮಾಡಿದ EESL

ವಿಶೇಷ ಅಂದರೆ ಒಂದು ಬಾರಿ ಚಾರ್ಜ್ ಮಾಡಿದರೆ ನೂತನ ಹ್ಯುಂಡೈ ಎಲೆಕ್ಟ್ರಿಕ್ ಕಾರು 500ಕ್ಕಿಂತ ಹೆಚ್ಚಿನ ಮೈಲೇಜ್ ನೀಡಲಿದೆ ಎಂದು ಹ್ಯುಂಡೈ ಹೇಳಿದೆ. ಈಗಾಗಲೇ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು 450 ಕಿ.ಮೀ ಮೈಲೇಜ್ ನೀಡುತ್ತಿದೆ. SUV ಎಲೆಕ್ಟ್ರಿಕ್ ಕಾರಿಗೆ ಭಾರತ ಸೇರಿದಂತೆ ವಿಶ್ವದಲ್ಲೇ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಒಂದು ಚಾರ್ಜ್‌ಗೆ 1,026 ಕಿ.ಮೀ ಮೈಲೇಜ್: ದಾಖಲೆ ಬರೆದ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು!

ನೂತನ ಹ್ಯುಂಡೈ ಎಲೆಕ್ಟ್ರಿಕ್ ಕಾರು BEV(ಬ್ಯಾಟರಿ ಎಲೆಕ್ಟ್ರಿಕ್ ವೆಹಿಕಲ್) ತಂತ್ರಜ್ಞಾನ ಹೊಂದಿದೆ. ಹೀಗಾಗಿ ಕೇವಲ 18 ನಿಮಿಷದಲ್ಲಿ ಶೇಕಡಾ 80 ರಷ್ಟು ಚಾರ್ಜ್ ಆಗಲಿದೆ. ಇದು ಸದ್ಯ ಮಾರುಕಟ್ಟೆಯಲ್ಲಿರುವ ಚಾರ್ಜಿಂಗ್ ತಂತ್ರಜ್ಞಾನಕ್ಕಿಂತ 4 ಪಟ್ಟು ವೇಗವಾಗಿದೆ. ಕೇವಲ 3.5 ಸೆಕೆಂಡ್‌ನಲ್ಲಿ 0-100 ಕಿ.ಮೀ ವೇಗ ತಲುಪಲಿದೆ. 

5 ನಿಮಿಷ ಚಾರ್ಜ್ ಮಾಡಿದರೆ 100 ಕಿ.ಮೀ ಮೈಲೇಜ್ ನೀಡುವ ಸಾಮರ್ಥ್ಯ ಹ್ಯುಂಡೈ ಘೋಷಿಸಿದ ನೂತನ ಕಾರಿನಲ್ಲಿದೆ. ಆದರೆ ಈ ಕಾರು SUV,ಸೆಡಾನ್  ಅಥವಾ ಹ್ಯಾಚ್‌ಬ್ಯಾಕ್ ಅನ್ನೋ ಕುರಿತು ಮಾಹಿತಿ ಬಹಿರಂಗವಾಗಲಿದೆ.

click me!