ಬೆಂಗಳೂರಿಗೆ ಕಾದಿದೆ ಅಪಾಯ -ನಿಯಂತ್ರಿಸಬೇಕು ವಾಹನ!

By Web Desk  |  First Published Nov 8, 2018, 1:14 PM IST

ದೆಹಲಿ ನಗರ ಮಾಲಿನ್ಯದಿಂದ ತುಂಬಿಹೋಗಿದೆ. ಇದೀಗ ನಿಯಂತ್ರಿಸಲು ಸಾಧ್ಯವಾಗದೇ ಜನರು ಹೈರಾಣಾಗಿದ್ದಾರೆ. ಇದೇ ಪರಿಸ್ಥಿತಿ ಬೆಂಗಳೂರಿಗೆ ಅಪ್ಪಳಿಸೋ ಕಾಲ ದೂರವಿಲ್ಲ. ಅಷ್ಟಕ್ಕೂ ಬೆಂಗಳೂರಿಗೆ ಅಪಾಯ ಬಂದಿರುವುದು ಎಲ್ಲಿಂದ? ಇದಕ್ಕೆ ಪರಿಹಾರವೇನು? ಇಲ್ಲಿದೆ ಉತ್ತರ.


ಬೆಂಗಳೂರು(ನ.08): ಅತೀ ವೇಗದಲ್ಲಿ ಬೆಳೆಯುತ್ತಿರುವ  ನಗರಗಳಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಇಷ್ಟೇ ಅಲ್ಲ ಅಪಾಯ ಕೂಡ ದೂರದಲ್ಲಿಲ್ಲ. ಬೆಂಗಳೂರು ಪರಿಸ್ಥಿತಿ ಕೈಮೀರಿ ಹೋಗುತ್ತಿದೆ. ಜನಸಂಖ್ಯೆ ಜೊತೆಗೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ.  ಇಲ್ಲಿನ ಹಸಿರು ಕಣ್ಮರೆಯಾಗುತ್ತಿದೆ. 

ಹೆಚ್ಚಾಗುತ್ತಿರುವ ವಾಹನದಿಂದ ಬೆಂಗಳೂರು ರಸ್ತೆಗಳನ್ನ ಅಗಲೀಕರಣ ಪ್ರತಿ ದಿನ ನಡಡೆಯುತ್ತಿದೆ. ಪ್ರತಿ ದಿನ ಮರಗಳ ಮಾರಣಹೋಮ ನಡೆಯುತ್ತಿದೆ. ಮರಗಳಿಂದ ತುಂಬಿದ್ದ ಜಯನಗರ ಸೇರಿದಂತೆ ಹಲವು ಪ್ರದೇಶಗಳು ಈಗ ಬರಿದಾಗಿದೆ. ರಸ್ತೆಗಳು ಅಗಲವಾಗಿದೆ. ಇನ್ನು ಎಚ್ಚೆತ್ತುಕೊಳ್ಳದಿದ್ದರೆ ಮಾಲಿನ್ಯದಲ್ಲಿ ದೆಹಲಿಯನ್ನ ಹಿಂದಿಕ್ಕಿಲಿದೆ.

Latest Videos

undefined

ಬೆಂಗಳೂರಿನಲ್ಲಿ ಪ್ರತಿ ದಿನ ಸರಾಸರಿ 1,900 ವಾಹನಗಳು ನೋಂದಾವಣಿಯಾಗುತ್ತಿದೆ. 70 ಲಕ್ಷಕ್ಕೂ ಅಧಿಕ ಬೆಂಗಳೂರು ರಿಜಿಸ್ಟ್ರೇಶನ್‌ ವಾಹನಗಳು ಓಡಾತ್ತಿದೆ. ಇನ್ನು ಕರ್ನಾಟಕದ ಇತರ ಭಾಗದಲ್ಲಿ ರಿಜಿಸ್ಟ್ರೇಶನ್ ಆಗಿರೋ ವಾಹನಗಳು, ಇತರ ರಾಜ್ಯಗಳ ವಾಹನಗಳು ಸೇರಿದರೆ ಬೆಂಗಳೂರಿನಲ್ಲಿರೋ ವಾಹನಗಳ ಸಂಖ್ಯೆ ಬರೋಬ್ಬರಿ 1 ಕೋಟಿ ದಾಟಲಿದೆ. 

ಇದೀಗ ಈ ವಾಹನಗಳಿಗಾಗಿ ಬೆಂಗಳೂರಿನ ಮರಗಳನ್ನ ಕಡಿಯಲಾಗಿದೆ / ಕಡಿಯಲಾಗುತ್ತಿದೆ. ಈ ಮೂಲಕ ಮತ್ತಷ್ಟು ವಾಹನ ಓಡಾಟಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಇದೇ ಮಾಲಿನ್ಯಕ್ಕೆ ರಹದಾರಿಯಾಗುತ್ತಿದೆ.

ದೆಹಲಿಯಲ್ಲಿ 10 ವರ್ಷಕ್ಕಿಂತ ಹಳೆಯದಾದ ಡೀಸೆಲ್, 15 ವರ್ಷಕ್ಕಿಂತ  ಹಳೆಯದಾದ ಪೆಟ್ರೋಲ್ ವಾಹನಗಳಿಗೆ ನಿಷೇಧ ಹೇರಲಾಗಿದೆ. ಇನ್ನು ಖಾಸಗಿ  ವಾಹನಗಳಿಗೆ ನಿರ್ಬಂಧ ಹೇರಲು ಎಲ್ಲಾ ತಯಾರಿ ನಡೆದಿದೆ. ಇಷ್ಟಾದರೂ ದೆಹಲಿಯಲ್ಲಿ ಮಾಲಿನ್ಯ ಹತೋಟಿಗೆ ಬರುವ ಯಾವುದೇ ಭರವಸೆ ಇಲ್ಲ. ಯಾಕೆಂದರೆ ಪೈರಿಸ್ಥಿತಿ ಕೈಮೀರಿ ಹೋಗಿದೆ.

ಇದೀಗ ಈ ಪರಿಸ್ಥಿತಿ ಬೆಂಗಳೂರಿಗೆ ಬರುವ ದಿನ ದೂರವಿಲ್ಲ. ನಗರದ ಜನಸಂಖ್ಯೆ ನಿಯಂತ್ರಿಸುದು ಕಷ್ಟ. ಇನ್ನು ವಸತಿ ಯೋಜನೆಗಳನ್ನ ನಿಲ್ಲಿಸಲು ಸಾಧ್ಯವಿಲ್ಲ. ಆದರೆ ಕಾರ್ಖಾನೆ ಹಾಗೂ ವಾಹನಗಳಿಂದ ಉಂಟಾಗೋ ಮಾಲಿನ್ಯಕ್ಕೆ ಕಡಿವಾಣ ಹಾಕಲು ಸಾಧ್ಯವಿದೆ.

ಬೆಂಗಳೂರಿನಲ್ಲಿ ಮಾಲಿನ್ಯ ಕಡಿಮೆ ಮಾಡಲು ಹಲವು ಕ್ರಮಗಳನ್ನ ಕೈಗೊಳ್ಳಬೇಕಿದೆ. ಇದರಲ್ಲಿ ಕೆಲವನ್ನ ಇಲ್ಲಿ ಪಟ್ಟಿ ಮಾಡಲಾಗಿದೆ.

ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಹೆಚ್ಚು ಒತ್ತು ನೀಡಬೇಕು. ಮೆಟ್ರೋ, ಬಿಎಂಟಿಸಿ ಬಸ್ ಪ್ರಯಾಣ ಮಾಡಲು ಪ್ರೇರೇಪಿಸಬೇಕು.  ಸರಿಸುಮಾರು 6000 ಸಾವಿರ  ಬಸ್ಸುಗಳಿರುವ ಬಿಎಂಟಿಸಿ ಸಂಖ್ಯೆ ಹೆಚ್ಚಿಸಬೇಕು. ಎಲ್ಲಾ ಕಡೆಗಳಿಗೂ ಸಾರಿಗೆ  ವ್ಯವಸ್ಥೆ ತಲುಪಿಸಬೇಕು. ಇನ್ನು ಮೆಟ್ರೋ ಕಾಮಾರಿಗೆ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು.

30 ಕ್ಕಿಂತ ಹೆಚ್ಚಿನ ಉದ್ಯೋಗಿಗಳಿರುವ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ಸಾರಿಗೆ ವಾಹನ ವ್ಯವಸ್ಥೆ ಮಾಡಬೇಕು. 60ಕ್ಕಿಂತ  ಹೆಚ್ಚಿನ ಉದ್ಯೋಗಿಗಳಿರುವ ಕಂಪೆನಿಗಳು ಬಿಎಂಟಿಸಿ ಸಾರಿಗೆ ವಾಹನದ ಜೊತೆ ಒಪ್ಪಂದ ಮಾಡಿಕೊಳ್ಳಬೇಕು. ಹೊಸ ವಾಹನಗಳ ಖರೀದಿ ಹಾಗೂ ರಿಜಿಸ್ಟ್ರೇಶನ್ ನಿಯಮ ಬಿಗಿಗೊಳಿಸಬೇಕು. 

ಉದ್ಯೋಗಕ್ಕೆ ತೆರಳುವ ಉದ್ಯೋಗಿಗಳು ಸಾರಿಗೆ ವಾಹನದಲ್ಲೇ ಪ್ರಯಾಣಿಸಬೇಕು. ತುರ್ತು ಅವಶ್ಯಕತೆ ಹೊರತು ಪಡಿಸಿ ಇತರ ಎಲ್ಲಾ ಕಾರ್ಯಗಳಿಗೂ ನಗರದಲ್ಲಿ ಸಾರಿಗೆ ಸಂಪರ್ಕವನ್ನೇ ಬಳಸಬೇಕು. ಅದು ಉದ್ಯೋಗಿಯಾಗಿರಲಿ ಅಥವಾ ಕಂಪೆನಿ ನಿರ್ದೇಶಕರೇ ಆಗರಲಿ ನಿಯಮ ಪಾಲಿಸಲೇಬೇಕು. 

ಮೇಲೆ ಹೇಳಿರುವ ಬಹುತೇಕ ಕ್ರಮಗಳನ್ನ ಜಾರಿಗೆ  ತರಲು ಸರ್ಕಾರವಾಗಲಿ, ಅಥವಾ ಸಾರ್ವಜನಿಕರಾಗಲಿ ತಯಾರಿಲ್ಲ. ಸಾಧ್ಯವಿದ್ದರೂ ಇದನ್ನ ಯಾರು ಗಣನೆಗೆ ತೆಗೆದುಕೊಳ್ಳುವುದಿಲ್ಲ. ನನ್ನ ಬುಡಕ್ಕೆ ಬಂದಿಲ್ಲ ಎಂದುಕೊಂಡೆ ಬೆಂಗಳೂರು ನಿವಾಸಿಗಳು ಮುಂದೆ ಹೋಗಲಿದ್ದಾರೆ. ಕನಿಷ್ಠ  ಗಿಡಗಳನ್ನಾದರು ನೆಟ್ಟು ಬೆಂಗಳೂರನ್ನ ಮತ್ತೆ ಹಸಿರುಮಯವಾಗಿಸೋಣ.

click me!