ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ವಿಡಿಯೋ ವೈರಲ್ ಆಗ್ತಿರುತ್ತದೆ. ಈಗ ದೇಸಿ ವ್ಯಕ್ತಿಯ ಬ್ರಿಲಿಯಟ್ ಐಡಿಯಾ ಒಂದು ವೈರಲ್ ಆಗಿದೆ. ವ್ಯಕ್ತಿಯೊಬ್ಬ ಕಾರಿನ ಹಿಂದೆ ಕಬ್ಬಿನ ಜ್ಯೂಸ್ ಮಶಿನ್ ಅಳವಡಿಸಿ ಹುಬ್ಬೇರಿಸುವಂತೆ ಮಾಡಿದ್ದಾನೆ.
ಬೇಸಿಗೆ ಧಗಧಗಿಸ್ತಿದೆ. ಅಲ್ಲೊಂದು ಇಲ್ಲೊಂದು ಮಳೆಯಾಗ್ತಿರೋದು ಬಿಟ್ರೆ ಇಡೀ ದಿನ ಬಿಸಿ, ಸೆಕೆಯಲ್ಲೇ ಜನರು ಬೆಂದು ಹೋಗ್ತಾರೆ. ಜ್ಯೂಸ್, ಮಜ್ಜಿಗೆ ಅಂತ ತಣ್ಣನೆಯ ನೀರಿಗೆ ಈಗ ಎಲ್ಲಿಲ್ಲದ ಬೇಡಿಕೆ. ಅದ್ರಲ್ಲಿ ಕಬ್ಬಿನ ಜ್ಯೂಸ್ ಕೂಡ ಸೇರಿದೆ. ಜನರು ಈ ಸೆಕೆಯಲ್ಲಿ ಎಳನೀರಿನ ಜೊತೆ ಕಬ್ಬಿನ ಜ್ಯೂಸ್ ಕುಡಿಯಲು ಇಷ್ಟಪಡ್ತಾರೆ.
ಹಿಂದೆ ಮನೆ ಮನೆಗೆ ತಳ್ಳುವ ಗಾಡಿಯಲ್ಲಿ ತರಕಾರಿ, ಹಣ್ಣು ಬರ್ತಾ ಇತ್ತು. ಕೆಲ ಜನರು ಅಪ್ಗ್ರೇಡ್ ಆಗಿದ್ದಾರೆ. ಕಾರ್ ನಲ್ಲಿ ಅಥವಾ ಸಣ್ಣ ಗೂಡ್ಸ್ ಗಾಡಿಯಲ್ಲಿ ತರಕಾರಿ ಮಾರಾಟ ಮಾಡೋಕೆ ಶುರು ಮಾಡಿದ್ದಾರೆ. ಆರಂಭದಲ್ಲಿ ಅದೇ ವಿಚಿತ್ರ ಎನ್ನಿಸ್ತಿತ್ತು. ಈಗ ಕಾಮನ್ ಆಗಿದೆ. ಅದೇ ರೀತಿ ಕೆಲವರು ಕಾರ್ ನಲ್ಲಿಯೇ ಫಾಸ್ಟ್ ಫುಡ್ (Fast Food) ತಯಾರಿಸಿ ಮಾರಾಟ ಮಾಡ್ತಿದ್ದಾರೆ. ಐಷಾರಾಮಿ ಕಾರಿನಲ್ಲಿ ಪಾನಿಪುರಿ, ವಡಾ ಪಾವ್ ಸೇರಿದಂತೆ ಫಾಸ್ಟ್ ಫುಡ್ ಮಾರಾಟ ಮಾಡ್ತಿದ್ದ ವಿಡಿಯೋಗಳು ಸಾಮಾಜಿಕ ಜಾಲತಾಣ (Social Media) ದಲ್ಲಿ ವೈರಲ್ ಆಗ್ತಿರುತ್ತವೆ. ಆದ್ರೆ ಕಬ್ಬಿನ ಜ್ಯೂಸ್ ಮನೆ ಮನೆಗೆ ಬರೋದಿಲ್ಲ. ಮಷಿನ್ ಅಥವಾ ಯಂತ್ರ ಭಾರವಾಗಿರುವ ಕಾರಣ, ಕಬ್ಬಿನ ಜ್ಯೂಸ್ (Sugarcane Juice) ಮಾರುವ ವ್ಯಾಪಾರಸ್ಥರು ತಮ್ಮ ಮಾರಾಟದ ಜಾಗವನ್ನು ಫಿಕ್ಸ್ ಮಾಡ್ತಾರೆ. ನಮಗೆ ಬೇಕೆಂದ್ರೆ ಅಲ್ಲಿಗೆ ಹೋಗಿ ಜ್ಯೂಸ್ ಕುಡಿದು ಬರ್ಬೇಕು. ಆದ್ರೆ ಈ ವ್ಯಕ್ತಿ ಆ ಕೆಲಸವನ್ನೂ ಸರಳ ಮಾಡಿದ್ದಾರೆ.
undefined
4 ವರ್ಷದ ಹಿಂದೆ 2.5 ಕೋಟಿಗೆ ವಿರುಷ್ಕಾ ಖರೀದಿಸಿದ ಷೇರು ಬೆಲೆ ಈಗ 9 ಕೋಟಿ!
ಯಾವುದೇ ಒಂದು ಸುದ್ದಿಯನ್ನು ಅತಿ ಬೇಗ ಜನರಿಗೆ ಮುಟ್ಟಿಸುವ ಕೆಲಸವನ್ನು ಸಾಮಾಜಿಕ ಜಾಲತಾಣ ಮಾಡ್ತಿದೆ. ಈಗ ಸಾಮಾಜಿಕ ಜಾಲತಾಣದಲ್ಲಿಯೇ ವ್ಯಕ್ತಿಯ ಜ್ಯೂಸ್ ಮಾರಾಟದ ವಿಧಾನ ಸುದ್ದಿಯಾಗಿದೆ.
ಕಾರ್ ಗೆ ಕಬ್ಬಿನ ಜ್ಯೂಸ್ ಮಶಿನ್ ಫಿಕ್ಸ್ ಮಾಡಿದ ವ್ಯಕ್ತಿ : ಆತನ ಆಲೋಚನೆ ಭಿನ್ನವಾಗಿದೆ. ಕಾರಿನ ಹಿಂಭಾಗಕ್ಕೆ ಕಬ್ಬಿನ ಜ್ಯೂಸ್ ತಯಾರಿಸುವ ಮಶಿನ್ ಫಿಕ್ಸ್ ಮಾಡಿದ್ದಾನೆ. ಹಾಗಾಗಿ ಆತನ ಬಳಿಗೆ ನೀವು ಹೋಗ್ಬೇಕಾಗಿಲ್ಲ. ಮನೆ ಮನೆ ಬಳಿ ಬರುವ ವ್ಯಕ್ತಿ ನಿಮಗೆ ಕಬ್ಬಿನ ಜ್ಯೂಸ್ ನೀಡ್ತಾನೆ. ಆತನ ಈ ಜುಗಾಡ್ ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧಿಯಾಗಿದೆ.
ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. @ChapraZila ಹೆಸರಿನ ಖಾತೆಯಲ್ಲಿ ಕೇವಲ 15 ಸೆಕೆಂಡ್ ಗಳ ವಿಡಿಯೋ ಹಂಚಿಕೊಳ್ಳಲಾಗಿದೆ. ಭಾರತದಲ್ಲಿ ಎಲ್ಲವೂ ಸಾಧ್ಯ. ಕಾರಿಗೆ ಕಬ್ಬಿನ ಜ್ಯೂಸ್ ಮಶಿನ್ ಫಿಕ್ಸ್ ಮಾಡಿದ ವ್ಯಕ್ತಿ ಎಂದು ಶೀರ್ಷಿಕೆ ಹಾಕಲಾಗಿದೆ. ಈ ವಿಡಿಯೋವನ್ನು ಈವರೆಗೆ ಮೂವತ್ತು ಸಾವಿರಕ್ಕೂ ಹೆಚ್ಚು ಬಾರಿ ನೋಡಲಾಗಿದೆ. ಅನೇಕರು ಇದಕ್ಕೆ ಕಮೆಂಟ್ ಮಾಡಿದ್ದಾರೆ. ಎಂಥ ಅದ್ಭುತ ಐಡಿಯಾ ಮಾಡಿದ್ದೀರಿ ಎಂದು ಕಮೆಂಟ್ ಹಾಕಿದ್ದಾರೆ. ಒಳ್ಳೆ ಕೌಶಲ್ಯದ ಬುದ್ಧಿವಂತಿಕೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
26 ವರ್ಷದವನ ಮಗುವಿಗೆ ಅಮ್ಮನಾಗ್ತಿದ್ದಾಳೆ 63ರ ವೃದ್ಧೆ, ಸುದ್ದಿ ತಿಳಿಯುತ್ತಿದ್ದಂತೆ ಕುಣಿದಾಡಿದ ಅಜ್ಜಿ!
ಕಬ್ಬಿನ ಜ್ಯೂಸ್ ಮಾರಾಟ ಬ್ಯುಸಿನೆಸ್ : ಬೇಸಿಗೆಯಲ್ಲಿ ಅತಿ ಬೇಡಿಕೆ ಇರುವ ಜ್ಯೂಸ್ ನಲ್ಲಿ ಕಬ್ಬಿನ ಜ್ಯೂಸ್ ಸೇರಿದೆ. ಆದ್ರೆ ಬೇಸಿಗೆಯಲ್ಲಿ ಮಾತ್ರವಲ್ಲ ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಕಾರಣಕ್ಕೆ ಬೇರೆ ಋತುವಿನಲ್ಲಿ ಕೂಡ ಜನರು ಅದರ ಸೇವನೆ ಮಾಡ್ತಾರೆ. ಈಗ ಕಬ್ಬಿನ ಜ್ಯೂಸ್ ಮಶಿನ್ ಮೊದಲಿನಷ್ಟು ಭಾರವಾಗಿರೋದಿಲ್ಲ. ಹಾಗೆಯೇ ಕತ್ತರಿಸಿದ ಕಬ್ಬು ನಿಮಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಹೆಚ್ಚಿನ ಶ್ರಮವಿಲ್ಲದೆ ಆರಾಮವಾಗಿ ನೀವು ಕಬ್ಬಿನ ಜ್ಯೂಸ್ (Sugar Cane Juice) ತಯಾರಿಸಿ ಮಾರಾಟ ಮಾಡಬಹುದು. ಈ ವ್ಯಾಪಾರ ಶುರುಮಾಡಲು ನೀವು 50000 ರಿಂದ 60000 ರೂಪಾಯಿವರೆಗೆ ಖರ್ಚು ಮಾಡಬೇಕಾಗುತ್ತದೆ. ಒಂದು ಗ್ಲಾಸ್ ಗೆ ಇಪ್ಪತ್ತರಿಂದ ನಲವತ್ತು ರೂಪಾಯಿಯಂತೆ ದಿನಕ್ಕೆ ನೂರು ಗ್ಲಾಸ್ ಮಾರಾಟ ಮಾಡಿದ್ರೂ ಎರಡರಿಂದ ನಾಲ್ಕು ಸಾವಿರದವರೆಗೆ ನೀವು ನಿತ್ಯ ಸಂಪಾದನೆ ಮಾಡಬಹುದು.
भारत में कुछ भी संभव हैं कार में ही लगा दिया गन्ने का मशीन 😜😅 pic.twitter.com/hzc7a9hyvy
— छपरा जिला 🇮🇳 (@ChapraZila)