1.5 ಕೋಟಿ ಮೊತ್ತದ ಐಷಾರಾಮಿ ಪೋರ್ಶೆ ಕಾರಲ್ಲಿ ಹುಲ್ಲು ಸಾಗಿಸಿದ ರೈತ ಮಹಿಳೆ: ವೀಡಿಯೋ ಸಖತ್ ವೈರಲ್

By Anusha Kb  |  First Published May 14, 2024, 4:22 PM IST

ಇಲ್ಲೊಬ್ಬರು ಕೃಷಿಕ ಮಹಿಳೆ ಐಷಾರಾಮಿ ಪೋರ್ಶೆ ಕಾರಲ್ಲಿ ದನಗಳಿಗೆ ಹುಲ್ಲು ಸಾಗಿಸುತ್ತಿದ್ದು, ಈಕೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.   ವೀಡಿಯೋ ನೋಡಿದ ನೆಟ್ಟಿಗರು ಶಾಕ್‌ಗೆ ಒಳಗಾಗಿದ್ದಾರೆ. 


ಸಾಮಾನ್ಯವಾಗಿ ಹೈನುಗಾರಿಕೆ ಅಥವಾ ಕೃಷಿಯಲ್ಲಿ ತೊಡಗಿರುವ ಶ್ರೀಮಂತ ಹಾಗೂ ಮಾಧ್ಯಮ ವರ್ಗದ ಜಮೀನ್ದಾರರ, ಅಥವಾ ಹಿಡುವಳಿದಾರರ ಮನೆಗಳಲ್ಲಿ ದನ ಕಾರುಗಳಿಗೆ ಮೇವು ಸಾಗಿಸುವುದಕ್ಕಾಗಿ ಜೀಪು ರಿಕ್ಷಾ, ಮಹೀಂದ್ರಾ ಮುಂತಾದ ರಫ್ & ಟಫ್ ಗಾಡಿಗಳನ್ನು ಬಳಸುವುದನ್ನು ನೀವು ನೋಡಿರಬಹುದು. ಆದರೆ ಇಲ್ಲೊಬ್ಬರು ಕೃಷಿಕ ಮಹಿಳೆ ಐಷಾರಾಮಿ ಪೋರ್ಶೇ ಕಾರಲ್ಲಿ ದನಗಳಿಗೆ ಹುಲ್ಲು ಸಾಗಿಸುತ್ತಿದ್ದು, ಈಕೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.   ವೀಡಿಯೋ ನೋಡಿದ ನೆಟ್ಟಿಗರು ಶಾಕ್‌ಗೆ ಒಳಗಾಗಿದ್ದಾರೆ. 

ರೈತ ಮಹಿಳೆಯೊಬ್ಬರು ಪೋರ್ಶೆ 718 ಬಾಕ್ಸಸ್ಟರ್ ಕಾರಿನಲ್ಲಿ  ಹುಲ್ಲು ಸಾಗಿಸುತ್ತಿದ್ದು, ಈ ಕಾರಿನ ಮೊತ್ತ 1.5 ಕೋಟಿ ರೂಪಾಯಿಗಳು. ಇಷ್ಟು ದುಬಾರಿ ಮೊತ್ತದ ಕಾರನ್ನು ಹುಲ್ಲು ಸಾಗಣೆಗೆ ಮಹಿಳೆಯೊಬ್ಬರು ಬಳಸುತ್ತಿರುವುದನ್ನು ನೋಡಿ ನೆಟ್ಟಿಗರು ಅಚ್ಚರಿಗೊಂಡಿದ್ದು, ಹಲವು ರೀತಿಯ ಕಾಮೆಂಟ್ ಮಾಡುತ್ತಿದ್ದಾರೆ.  

Tap to resize

Latest Videos

undefined

ಹಣ ಬಾಕಿ: 1 ಕೋಟಿ ಮೊತ್ತದ ಐಷಾರಾಮಿ ಲಂಬೋರ್ಗಿನಿ ಗಲ್ಲಾರ್ಡೊ ಕಾರಿಗೆ ಬೆಂಕಿ

ndahiya2021 ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋ ವೈರಲ್ ಆಗಿದ್ದು,  ವೀಡಿಯೋದಲ್ಲಿ ರೈತ ಮಹಿಳೆ ಪೋರ್ಶೆ ಬಾಕ್ಸ್‌ಸ್ಟರ್ 718 ಗಾಡಿಯನ್ನು ಚಲಾಯಿಸುತ್ತಿದ್ದಾರೆ. ಕೆಂಪು ಬಣ್ಣದ ಪೋರ್ಶೆ ಬಾಕ್ಸ್‌ಸ್ಟರ್ 718 ಕಾರಿನ ಡ್ರೈವರ್ ಸೀಟಿನಿಂದ ಮಹಿಳೆ ಎದ್ದು ಬರುವುದರೊಂದಿಗೆ ಈ ವೀಡಿಯೋ ಆರಂಭವಾಗುತ್ತಿದ್ದು, ಬಳಿಕ ಈ ಮಹಿಳೆ ಹರ್ಯಾಣ ಭಾಷೆಯಲ್ಲಿ (motivational) ಸ್ಪೂರ್ತಿದಾಯಕವಾದ ಮಾತುಗಳನ್ನು ಆಡುತ್ತಾರೆ. ಅಲ್ಲದೇ ತಾವು ಐಷಾರಾಮಿ ಸ್ಪೋರ್ಟ್ಸ್‌  ಪೋರ್ಶೆ ಕಾರಿನಲ್ಲಿಯೂ ಹುಲ್ಲು ಸಾಗಣೆ ಮಾಡುತ್ತೇವೆ ಎಂದು ಹೇಳುವ ಆಕೆ ನಂತರ ತಮಾಷೆಯಾಗಿ ತರುಣನೊಬ್ಬನಿಗೆ ಹೊಡೆದು ಕಾರಿನಿಂದ ಹುಲ್ಲಿನ ಚೀಲವನ್ನು ಕೆಳಗಿಳಿಸುವಂತೆ ಹೇಳುತ್ತಾಳೆ. ಅದಾದ ನಂತರ ಕಾರಿನ ಹಿಂಭಾಗವನ್ನು ಮುಚ್ಚುತ್ತಾಳೆ. ಇದಾದ ನಂತರ ಅಲ್ಲಿಗೆ ಬಂದ ಮತ್ತೊಬ್ಬ ವ್ಯಕ್ತಿ ಕಾರಿನ ಹಿಂಭಾಗವನ್ನು ಸರಿಯಾಗಿ ಕ್ಲೋಸ್ ಮಾಡುತ್ತಾನೆ. 

ಈ ಪೇಜ್‌ನಲ್ಲಿ ದಿನವೂ ಈ ಮಹಿಳೆ ಪೋರ್ಶೆ ಕಾರನ್ನು ಬಳಸುತ್ತಿರುವಂತಹ ಹಲವು ವೀಡಿಯೋಗಳಿವೆ.  ಇವರೇ ಮಾಡಿದ ಮತ್ತೊಂದು ವೀಡಿಯೋದಲ್ಲಿ ತರುಣಿಯೊಬ್ಬಳು ಪೋರ್ಶೆ ಕಾರನ್ನು ಮನೆಗೆ ತಂದು  ತಾಯಿಯನ್ನು ಕುಳಿತುಕೊಳ್ಳುವಂತೆ ಹೇಳಿ ನಂತರ ಇದರ ಬೆಲೆ ಎರಡು ಕೋಟಿ ಎಂದು ಹೇಳುತ್ತಾಳೆ. ಈ ವೇಳೆ ಅವಳತ್ತ ಬೊಬ್ಬೆ ಹೊಡೆಯುವ ಅಮ್ಮ, ಈ ಹಣದಲ್ಲಿ ಒಂದು ಮನೆಯನ್ನೇ ನಾವು ಖರೀದಿಸಬಹುದಿತ್ತು ಎಂದು ಹೇಳುತ್ತಾಳೆ. ಬರೀ ಇಷ್ಟೇ ಅಲ್ಲ, ಈ ಪೋರ್ಶೆ ಗಾಡಿಯನ್ನು ಮನೆ ಹಿಂದೆ ನಿಲ್ಲಿಸಿದ ಮಹೀಂದ್ರಾ ಸ್ಕಾರ್ಪಿಯೋ ಗಾಡಿ ಜೊತೆ ಹೋಲಿಕೆ ಮಾಡಿದ ಆಕೆ ಇದಕ್ಕಿಂತ ಮಹೀಂದ್ರಾ ಸ್ಕಾರ್ಫಿಯೋವೇ ಪರವಾಗಿರಲಿಲ್ಲ ಎಂದೆಲ್ಲಾ ಹೇಳುತ್ತಾಳೆ. 

ಬೈಕ್‌ಗೆ ಡಿಕ್ಕಿ ಹೊಡೆದು ಸ್ಪೋರ್ಟ್ಸ್ ಕಾರು ಪರಾರಿ: 20 ಅಡಿ ಎತ್ತರಕ್ಕೆ ಹಾರಿ ಬಿದ್ದ ಬೌನ್ಸರ್ ತಾರಕ್‌ ರಾಮ್ ಸಾವು

ಈ ವೇಳೆ ಮಗಳು ಕನಿಷ್ಠ ಕಾರಿನಲ್ಲಿ ಕೂರು ಎಂದು ತಾಯಿಗೆ ಮಗಳು ಹೇಳಿದಾಗ ಬಹಳ ಹೊತ್ತು ಮಗಳಿಗೆ ಬೈದ ಆಕೆ ಕೊನೆಗೆ ಕಾರಲ್ಲಿ ಕೂರುತ್ತಾರೆ. ಅಲ್ಲದೇ ಕಾರು ತುಂಬಾ ಕೆಳಮಟ್ಟದಲ್ಲಿದ್ದು, ಇದರಿಂದ ನನ್ನ ಬೆನ್ನು ನೋಯುತ್ತದೆ ಎಂದೆಲ್ಲಾ ಅಷ್ಟು ದುಬಾರಿ ಮೊತ್ತದ ಐಷಾರಾಮಿ ಕಾರಿನ ಬಗ್ಗೆ ಅಮ್ಮ ನಿರಂತರವಾಗಿ ದೂರಿದ್ದಾಳೆ. ಒಟ್ಟಿನಲ್ಲಿ ಈ ವೀಡಿಯೋ ಸಖತ್ ವೈರಲ್ ಆಗಿದ್ದು,  ಈ ಐಷಾರಾಮಿ ಸ್ಪೋರ್ಟ್ಸ್‌ ಕಾರಿನಲ್ಲಿ ಮಹಿಳೆ ಹುಲ್ಲು ಸಾಗಿಸುವುದನ್ನು ನೋಡಿ ಜನ ಮಾತ್ರ ಶಾಕ್‌ಗೆ ಒಳಗಾಗಿದ್ದಾರೆ.  ಒಂದು ಮಿಲಿಯನ್‌ಗೂ ಹೆಚ್ಚು ಜನ ಈ ವೀಡಿಯೋ ವೀಕ್ಷಿಸಿದ್ದಾರೆ. 

718 ಬಾಕ್ಸ್‌ಸ್ಟರ್ ಭಾರತದಲ್ಲಿನ ಅತ್ಯಂತ ಜನಪ್ರಿಯ ಪೋರ್ಷೆ ಸ್ಪೋರ್ಟ್ಸ್ ಕಾರುಗಳಲ್ಲಿ ಒಂದಾಗಿದೆ. ಈ ಕನ್ವರ್ಟಿಬಲ್ ಸ್ಪೋರ್ಟ್ಸ್ ಕಾರ್ 2.0 ಲೀಟರ್ ಟರ್ಬೋಚಾರ್ಜ್ಡ್ ಫೋರ್-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದೆ. ಈ ಎಂಜಿನ್ ಗರಿಷ್ಠ 298 bhp 380 Nm ಗರಿಷ್ಠ ಶಕ್ತಿಯನ್ನು ಉತ್ಪಾದಿಸುತ್ತದೆ. ಅಲ್ಲದೇ  ಕೇವಲ 4.7 ಸೆಕೆಂಡುಗಳಲ್ಲಿ ಗಂಟೆಗೆ 100 ಕಿಮೀ ವೇಗವನ್ನು ತಲುಪುತ್ತದೆ. ಇದರ ಗರಿಷ್ಠ ವೇಗವು ವಿದ್ಯುನ್ಮಾನವಾಗಿ ಗಂಟೆಗೆ 275 ಕಿಮೀಗೆ ಸೀಮಿತವಾಗಿದೆ

 
 
 
 
 
 
 
 
 
 
 
 
 
 
 

A post shared by @ndahiya2021

 

click me!