ಬೈಕ್ ಸರ್ವೀಸ್ ವೇಳೆ ಗಮನದಲ್ಲಿಡಬೇಕಾದ ಅಂಶಗಳೇನು?

By Web Desk  |  First Published Oct 21, 2018, 11:51 AM IST

ಬೈಕ್ ಖರೀದಿಸಿದ ಬಹುತೇಕರು ಹೇಳೋದು ಒಂದೇ ಮಾತು ಸರ್ವೀಸ್ ಚೆನ್ನಾಗಿ ಮಾಡಿಲ್ಲ. ಹೀಗಾಗಿ ಬೈಕ್ ಈ ಸ್ಥಿತಿ ಬಂದಿದೆ. ಇದಕ್ಕಾಗಿಯೇ ಬೈಕ್ ಸರ್ವೀಸ್ ವೇಳೆ ನೀವು ಗಮನಿಸಬೇಕಾದ ಕೆಲ ಅಂಶಗಳ ಮಾಹಿತಿ ಇಲ್ಲಿದೆ. 


ಬೆಂಗಳೂರು(ಅ.21): ಬೈಕ್ ಖರೀದಿಸಿದರೆ ಸಾಲದು, ಅದನ್ನ ಅಷ್ಟೇ ಉತ್ತಮವಾಗಿ ನೋಡಿಕೊಂಡರೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಅದರಲ್ಲೂ ಅವಧಿಯೊಳಗೆ ಬೈಕ್ ಸರ್ವೀಸ್ ಅಷ್ಟೇ ಮುಖ್ಯ. ಈ ಮೂಲಕ ನಿಮ್ಮ ಬೈಕ್‌ನ್ನ ಸಮಸ್ಯೆಗಳಿಂದ ಮುಕ್ತವಾಗಿಸಬಹುದು.

ಸರ್ವೀಸ್ ವೇಳೆ ಬೈಕ್ ಮಾಲೀಕರು ಹಾಗೂ ಸರ್ವೀಸ್ ಸ್ಟೇಶನ್ ಕೂಡ ಹಲವು ಅಂಶಗಳನ್ನ ಗಮನದಲ್ಲಿಡಬೇಕು. ಹೀಗೆ ಸರ್ವೀಸ್ ವೇಳೆ ಮುಖ್ಯವಾಗಿ ಗಮನಿಸಬೇಕಾದ ವಿಚಾರ ಇಲ್ಲಿದೆ.

Latest Videos

undefined

ಸ್ಪಾರ್ಕ್ ಪ್ಲಗ್: ಸ್ಪಾರ್ಕ್ ಪ್ಲಗ್ ಗಾತ್ರ ಸಣ್ಣದು, ಆದರೆ ಅಷ್ಟೇ ಮುಖ್ಯ. ಸ್ಪಾರ್ಕ್ ಪ್ಲಗ್ ಸ್ವಚ್ಚಗೊಳಿಸಬೇಕು. ಇಷ್ಟೇ ಅಲ್ಲ, ಸ್ಪಾರ್ಕ್ ಪ್ಲಗ್ ಕಂಡೀಷನ್ ಹೇಗಿದೆ ಅನ್ನೋದನ್ನೂ ಗಮನಿಸಬೇಕು

ಕಾರ್ಬೋರೇಟರ್ ಅಥವಾ ಥ್ರೋಟಲ್ ಬಾಡಿ:
ಬೈಕ್‌ನ ತೈಲ ಮಿಕ್ಸರ್. ಇದೇ ಕಾರ್ಬೋರೇಟರ್‌ನಿಂದ ಇಂಧನ ಇಂಜೆಕ್ಟ್ ಆಗುತ್ತೆ. ಇಂಧನದಲ್ಲಿನ ಕಸ ಅಥವಾ ಇನ್ಯಾವುದೇ ಕಲ್ಮಷಗಳು ಇಲ್ಲಿ ಶೇಖರವಾಗುತ್ತೆ. ಹೀಗಾಗಿ ಪ್ರತಿ ಸರ್ವೀಸ್ ವೇಳೆ ಇದನ್ನ ಸ್ವಚ್ಚಗೊಳಿಸಬೇಕು. ಅಥವಾ ಸ್ವಚ್ಚಗೊಳಿಸಿದ್ದಾರೆಂದು ಪರೀಕ್ಷಿಸಬೇಕು.

ಎಂಜಿನ್ ಆಯಿಲ್ ಲೆವೆಲ್:
ಪ್ರತಿ ಬೈಕ್ ಎಂಜಿನ್‌ಗೆ ಆಯಿಲ್ ಅಷ್ಟೇ ಮುಖ್ಯ. ನಿಗದಿತ ಪ್ರಮಾಣದಲ್ಲಿ ಆಯಿಲ್ ಇದೆಯೇ ಎಂದು ಪರೀಕ್ಷಿಸಬೇಕು. ನಿಗದಿತ ಕೀಲೋಮೀಟರ್ ಬಳಿಕ ಆಯಿಲ್ ಬದಲಾಯಿಸಬೇಕು. 

ಹೊಸ ಏರ್‌ಫಿಲ್ಟರ್ ಬಳಸಿ:
ಪ್ರತಿ ಸರ್ವೀಸ್ ವೇಳೆ ಹೊಸ ಏರ್‌ಫಿಲ್ಟರ್ ಬಳಸಿ. ಯಾಕೆಂದರೆ ಏರ್‌ಫಿಲ್ಟರ್ ಒಂದು ಬಾರಿ ಬಳಕೆ ಯೋಗ್ಯವಾಗಿದೆ. ಹೀಗಾಗಿ ಹಳೇ ಏರ್‌ಫಿಲ್ಟರ್ ಸ್ವಚ್ಚಗೊಳಿಸಿ ಮತ್ತೆ ಬಳಕೆ ಮಾಡುವುದರಿಂದ ಬೈಕ್ ಎಂಜಿನ್ ಮೇಲೆ ಪರಿಣಾಮ ಬೀರಲಿದೆ.

ಚೈನ್ ಕ್ಲೀನ್ ಹಾಗೂ ಲ್ಯೂಬ್ರಿಕೇಶನ್:
ಬಹುತೇಕ ಸರ್ವೀಸ್ ಸೆಂಟರ್‌ಗಳಲ್ಲಿ  ಚೈನ್ ಕ್ಲೀನ್ ಹಾಗೂ ಲ್ಯೂಬ್ರಿಕೇಶನ್ ಮಾಡಲು 5 ರಿಂದ 8 ನಿಮಿಷ ತೆಗೆದುಕೊಳ್ಳುತ್ತಾರೆ. ಆದರೆ ಇದು ತಪ್ಪು. ಮೊದಲು ಸಂಪೂರ್ಣ ಚೈನ್ ಕ್ಲೀನ್ ಮಾಡಬೇಕು. ಇದಕ್ಕೆ ಕನಿಷ್ಠ 30 ನಿಮಿಷ ಬೇಕಾಗುತ್ತೆ. ಇನ್ನು ಲ್ಯೂಬ್ರಿಕೇಶನ್‌ಗೆ ಕನಿಷ್ಟ 5ನಿಮಿಷ ಬೇಕಾಗುತ್ತೆ. 

ಸ್ವಿಚ್ ಹಾಗೂ ಲೈಟ್ ಚೆಕ್:
ಬೈಕ್ ಸ್ವಿಚ್‌ಗಳನ್ನ ಪರೀಕ್ಷಿಸಬೇಕು. ವೈಯರಿಂಗ್ ಡ್ಯಾಮೇಜ್ ಇದ್ದಲ್ಲಿ ಬದಲಾಯಿಸಬೇಕು.  ಇನ್ನು ಹೆಡ್ ಲೈಟ್, ಇಂಡಿಕೇಟರ್ ಸೇರಿದಂತೆ ಎಲ್ಲಾ ಲೈಟ್ ಹಾಗೂ ಬ್ಯಾಟರಿ ಪರೀಕ್ಷಿಸಬೇಕು.

ಲೀಕೇಜ್ ಪರೀಕ್ಷೆ:
ಬೈಕ್‌ ಸರ್ವೀಸ್ ಬಳಿಕ ಲೀಕೇಜ್ ಪರೀಕ್ಷಿಸಬೇಕು. ಆಯಿಲ್, ಪೆಟ್ರೋಲ್ ಲೀಕೇಜ್ ಪರೀಕ್ಷಿಸಿದರೆ ಬೈಕ್ ಸರ್ವೀಸ್ ಬಹುತೇಕ ಸಕ್ಸಸ್. 

click me!