1 ಲಕ್ಷ ಕಾರು ಮಾರಾಟ, ಹೊಸ ದಾಖಲೆ ಬರೆದ ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್!

By Chethan Kumar  |  First Published Nov 27, 2024, 11:30 PM IST

ಭಾರತದಲ್ಲಿ ಟೊಯೋಟಾ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಈ ಪೈಕಿ ಅರ್ಬನ್ ಕ್ರೂಸರ್ ಹೈರೈಡರ್ ಕಾರು ಹೊಸ ದಾಖಲೆ ಬರೆದಿದೆ. ಅತೀ ಕಡಿಮೆ ಸಮಯದಲ್ಲಿ 1 ಲಕ್ಷ ಕಾರುಗಳು ಮಾರಾಟಗೊಂಡಿದೆ. 


ಬೆಂಗಳೂರು(ನ.27) ಟೊಯೋಟಾ ಕಾರುಗಳ ಪೈಕಿ ಅರ್ಬನ್ ಕ್ರೂಸರ್ ಹೈರೈಡರ್ ಕಾರು ಇದೀಗ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಕಡಿಮೆ ಸಮಯದಲ್ಲಿ 1 ಲಕ್ಷ ಕಾರುಗಳು ಮಾರಾಟಗೊಂಡ ಸಾಧನೆ ಮಾಡಿದೆ. ಹೈಬ್ರಿಡ್ ತಂತ್ರಜ್ಞಾನದ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ ಅನ್ನೋದಕ್ಕೆ  ಹೈರೈಡರ್ ಕಾರು ಸಾಕ್ಷಿಯಾಗಿದೆ. 2022ರ ಜುಲೈನಲ್ಲಿ ಅರ್ಬನ್ ಕ್ರೂಸರ್ ಹೈರೈಡರ್ ಕಾರು ಬಿಡುಗಡೆಯಾಗಿತ್ತು. ಟೊಯೋಟಾದ ವಿಶ್ವ ದರ್ಜೆಯ ಹೈಬ್ರಿಡ್ ತಂತ್ರಜ್ಞಾನ, ಅಪೂರ್ವ ವಿನ್ಯಾಸ, ಪ್ರೀಮಿಯಂ ಸೌಕರ್ಯ ಮತ್ತು ಅಸಾಧಾರಣ ಕಾರ್ಯಕ್ಷಮತೆ ಹೊಂದಿರುವ ಕಾರು ಇದಾಗಿದೆ.  ಸೆಲ್ಫ್ ಚಾರ್ಜಿಂಗ್ ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟ್ರಿಕ್ , ನಿಯೋ ಡ್ರೈವ್ ಮತ್ತು ಸಿ ಎನ್ ಜಿ ಪವರ್ ಎಂಬ ಮೂರು ಪವರ್‌ಟ್ರೇನ್‌ಗಳಲ್ಲಿ ಈ ಕಾರು ಲಭ್ಯವಿದೆ. 

ಅರ್ಬನ್ ಕ್ರೂಸರ್ ಹೈರೈಡರ್‌ 1.5-ಲೀಟರ್ ಎಂಜಿನ್ ಹೊಂದಿದೆ.  ಟೊಯೊಟಾ ಹೈಬ್ರಿಡ್ ಸಿಸ್ಟಮ್ ಹಾಗೂ ಇ-ಡ್ರೈವ್ ಟ್ರಾನ್ಸ್‌ ಮಿಷನ್ ಹೊಂದಿದೆ.ಈ ಕಾರು 85 KWHನಷ್ಟು ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹೈರೈಡರ್‌ನ ಹೈಬ್ರಿಡ್ ವ್ಯವಸ್ಥೆ ಮುಖ್ಯ ವಿಚಾರ ಏನಂದರೆ ನೀವು ಚಾರ್ಜಿಂಗ್ ಹಾಕಬೇಕಿಲ್ಲ. ವಾಹನ ಚಾಲನೆ ವೇಳೆ ಸ್ವಯಂ ಚಾರ್ಜ್ ಆಗಿ ಹೆಚ್ಚಿನ ಮೈಲೇಜ್ ನೀಡಲು ಸಹಾಯ ಮಾಡುತ್ತದೆ.  ಅತ್ಯಾಧುನಿಕ ಹೈಬ್ರಿಡ್ ವ್ಯವಸ್ಥೆಯಿಂದ ಗ್ರಾಹಕರು ಆರಾಮದಾಯಕವಾಗಿ, ನಿಶ್ಶಬ್ದವಾಗಿ ಡ್ರೈವ್ ಮಾಡಲು ಸಾಧ್ಯವಿದೆ. ತ್ವರಿತ ಕಾರ್ಯನಿರ್ವಹಣೆ, ನಿಶ್ಶಬ್ದ ಕಾರ್ಯಾಚರಣೆ ಮತ್ತು ಅತ್ಯುತ್ತಮ ಚಾಲನಾ ಅನುಭವವನ್ನು ಒದಗಿಸುವ ಈ ವಾಹನವು ಪರಿಸರ ಪ್ರಜ್ಞೆ ಹೊಂದಿರುವ ಗ್ರಾಹಕರಿಗೆ ಸೂಕ್ತವಾಗಿದೆ. ವಿಶೇಷವಾಗಿ ವೈವಿಧ್ಯಮಯತೆ ಮತ್ತು ಪವರ್ ಬಯಸುವ ಗ್ರಾಹಕರು ನಿಯೋ ಡ್ರೈವ್ ಪವರ್‌ ಟ್ರೇನ್ ಅನ್ನು ಇಷ್ಟ ಪಡುತ್ತಾರೆ. ಈ ವಾಹನವು  ಆಲ್-ವೀಲ್ ಡ್ರೈವ್ (ಎಡಬ್ಲ್ಯೂಡಿ) ಆಯ್ಕೆಯಲ್ಲಿ ಲಭ್ಯವಿದೆ. ನಗರ ಪ್ರಯಾಣ ಮತ್ತು ಕ್ಲಿಷ್ಟಕರ ರಸ್ತೆ ಎರಡೂ ಪರಿಸ್ಥಿತಿಗಳಲ್ಲಿ ಉತ್ತಮ ಚಾಲನಾ ಅನುಭವ ನೀಡುತ್ತದೆ.

Latest Videos

undefined

1 ಲಕ್ಷ ರೂ ಆಫರ್, ಟೊಯೋಟಾ ಗ್ಲಾಂಜಾ, ಟೈಸರ್ ಸೇರಿ ಟೊಯೋಟಾ ಕಾರಿಗೆ ವರ್ಷಾಂತ್ಯದ ಡಿಸ್ಕೌಂಟ್!

ಅರ್ಬನ್ ಕ್ರೂಸರ್ ಹೈರೈಡರ್ ಅನ್ನು ಅಸಾಧಾರಣ ಅನುಭವವನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. ಅನುಕೂಲತೆ ಮತ್ತು ಕಾರ್ಯಕ್ಷಮತೆ ಎರಡನ್ನೂ ಒದಗಿಸವು ಹಲವಾರು ಫೀಚರ್‌ಗಳಿವೆ. ಅತ್ಯುತ್ತಮ ಇಂಧನ ದಕ್ಷತೆ ಹೊಂದಿದೆ. ಸುಸ್ಥಿರ ಸಾರಿಗೆ ವ್ಯವಸ್ಥೆ ಕಡೆಗೆ ಟಿಕೆಎಂ ಹೊಂದಿರುವ ಬದ್ಧತೆಗೆ ಪೂರಕವಾಗಿ ಮೂಡಿ ಬಂದಿರುವ ಎಸ್‌ಯುವಿ ವಿಭಾಗದಲ್ಲಿಯೇ ಅತ್ಯುತ್ತಮ ಮೈಲೇಜ್ ನೀಡುತ್ತದೆ. ಸೆಲ್ಫ್ ಚಾರ್ಜಿಂಗ್ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್ ವೇರಿಯೆಂಟ್ ನಲ್ಲಿ 27.97 ಕಿಮೀ ಮೈಲೇಜ್ ನೀಡಲಿದೆ. ನಿಯೋಡ್ರೈವ್ (ಎಂಟಿ) ವೇರಿಯೆಂಟ್ ನಲ್ಲಿ 21.12 ಕಿಮೀ ಮೈಲೇಜ್ ಹಾಗೂ ಸಿ ಎನ್ ಜಿ ಮೋಡ್ ನಲ್ಲಿ  26.6 ಕಿಮೀ/ ಕೆಜಿ ಮೈಲೇಜ್ ನೀಡಲಿದೆ ಎಂದು ಕಂಪನಿ ಹೇಳಿದೆ.
 

click me!