ಫ್ಯಾಷನ್ ಜಗತ್ತಿನಲ್ಲಿ ಹಳೆಯ ಟ್ರೆಂಡ್‌ಗಳು ಮರುಕಳಿಸುತ್ತವೆ. ಸೀರೆ ಉಡಲು ಕಷ್ಟಪಡುವವರಿಗಾಗಿ ಇದೀಗ ಹೊಸ ಬಗೆಯ ರೆಡಿಮೇಡ್ ಸೀರೆ ಬಂದಿದ್ದು, ಇದರಲ್ಲಿ ಬ್ಲೌಸ್ ಕೂಡ ಸೀರೆಗೆ ಅಂಟಿಕೊಂಡೇ ಇರುತ್ತದೆ. ಈ ವಿನೂತನ ವಿನ್ಯಾಸದ ಸೀರೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಫ್ಯಾಷನ್ ಕಾಲಕ್ಕೆ ತಕ್ಕಂತೆ ಬದಲಾಗುತ್ತದೆ. ಇವತ್ತಿರುವ ಫ್ಯಾಷನ್ ನಾಳೆ ಇರುವುದಿಲ್ಲ, ಹಾಗಂತ ಮುಂದ್ಯಾವತ್ತೊ ಅದು ಮರುಕಳಿಸದೇ ಇರುವುದಿಲ್ಲ, ಹಳೆಯ 70-80ರ ದಶಕದ ಫ್ಯಾಷನ್‌ಗಳು ಮತ್ತೆ ಮರುಕಳಿಸಿ ಈ ತಲೆಮಾರಿನ ಯುವಕ ಯುವತಿಯರಲ್ಲಿ ಹೊಸದಾದ ಟ್ರೆಂಡ್ ಸೃಷ್ಟಿಸುತ್ತದೆ. ಆದರೆ ಈ ಫ್ಯಾಷನ್ ಕಾಲಕ್ಕೆ ತಕ್ಕಂತೆ ಹೊಸ ಅನುಕೂಲವನ್ನು ಸೃಷ್ಟಿಸುತ್ತದೆ. ಅದೇ ರೀತಿ ಇಲ್ಲೊಂದು ಹೊಸ ವಿಧಾನದ ರೆಡಿಮೆಡ್ ಸೀರೆ ಬಂದಿದ್ದು ಹೆಂಗೆಳೆಯರನ್ನು ಸೆಳೆಯುತ್ತಿದೆ.
ಸೀರೆ ಉಡೋದು ಕಷ್ಟ ಅನ್ನೋರಿಗೆ ಬೆಸ್ಟ್ ಆಯ್ಕೆ ಇದು…
ಸೀರೆ ಎಲ್ಲರನ್ನು ಸರ್ವಕಾಲಕ್ಕೂ ಸೆಳೆಯುವ ವಸ್ತ್ರ. ಅಜ್ಜಿ, ಅಮ್ಮ, ಮುತ್ತಜ್ಜಿ ಮಗಳು, ಸೊಸೆ ಹೀಗೆ ಒಂದು ಸೀರೆಯನ್ನು ಇಡೀ ಕುಟುಂಬದವರು ಉಡಬಹುದು ಆದರೆ ಅಭ್ಯಾಸವಿಲ್ಲದವರು ಇದನ್ನು ಉಡುವುದು ಬಲು ಕಷ್ಟದ ಕೆಲಸ ಸೀರೆಯುಡುವುದೇ ಒಂದು ಕಲೆ. ಆದರೆ ಈ ಕಲೆ ಎಲ್ಲರಿಗೂ ಒಲಿಯುವುದಿಲ್ಲ, ಇದೇ ಕಾರಣಕ್ಕೆ ಈಗ ಸೀರೆಯನ್ನು ಸುಲಭವಾಗಿ ಉಡುವುದಕ್ಕೆ ರೆಡಿಮೇಡ್ ಸೀರೆಗಳು ಬಂದಿವೆ. ಬೇರೆ ಧಿರಿಸುಗಳನ್ನು ಧರಿಸಿದಂತೆ ನಿಮ್ಮ ದೇಹದ ಅಳತೆಗೆ ತಕ್ಕಂತೆ ರೆಡಿಯಾಗಿರುವ ಈ ಸೀರೆಯನ್ನು ನೀವು ಜಸ್ಟ್ ಧರಿಸಿದರೆ ಆಯ್ತು.. ಆದರೆ ಬ್ಲೌಸ್ ಪ್ರತ್ಯೇಕವಾಗಿರುತ್ತದೆ. ಆದರೆ ಟೈಲರ್‌ಗಳು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಮಹಿಳೆಯರಿಗೆ ದೇಹದ ಅಳತೆಗೆ ತಕ್ಕಂತೆ ರೆಡಿಮೇಡ್ ಸೀರೆಯನ್ನು ಹೊಲಿಸಿ ಕೊಡುತ್ತಾರೆ. ಧರಿಸಿದರೆ ಈ ಸೀರೆ ಸಹಜವಾಗಿ ಸೀರೆಯುಟ್ಟಂತೆಯೇ ಕಾಣುತ್ತದೆ. ಇದಕ್ಕೆ ಪ್ರತ್ಯೇಕವಾಗಿ ಬ್ಲೌಸ್ ಇರುತ್ತದೆ.
ಪ್ರತ್ಯೇಕವಾಗಿ ಬ್ಲೌಸ್ ಹೊಲಿಸುವ ಅಗತ್ಯವಿಲ್ಲ…
ಆದರೆ ಇಲ್ಲೊಂದು ಕಡೆ ಯುವತಿಯೊಬ್ಬಳ ವೀಡಿಯೋ ವೈರಲ್ ಆಗಿದೆ. ಈ ರೆಡಿಮೇಡ್ ಸೀರೆಗೆ ಬ್ಲೌಸ್‌ನ ಅಗತ್ಯವೇ ಇಲ್ಲ. ಬ್ಲೌಸ್ ಇಲ್ಲದೇ ಸೀರೆ ಹೇಗಾಗುತ್ತೆ ಅಂತೀರಾ ಟೈಲರೇ ತಯಾರಿಸಿದ ಈ ರೆಡಿಮೇಡ್ ಸೀರೆಯಲ್ಲಿ ಬ್ಲೌಸ್ ಸೀರೆಗೆ ಅಂಟಿಕೊಂಡೆ ಇದೆ. ಬ್ಲೌಸ್ ಹಾಗೂ ಸೀರೆಯನ್ನು ನೀವು ಪ್ರತ್ಯೇಕ ಪ್ರತ್ಯೇಕವಾಗಿ ಹಾಕಬೇಕಿಲ್ಲ.. ಯುವತಿಯೊಬ್ಬಳು ಈ ಸೀರೆಯನ್ನು ಸೊಗಸಾಗಿ ಉಟ್ಟು ತೋರಿಸಿದ್ದು, ಟ್ರೋಲ್ ಪೇಜ್‌ಗಳಲ್ಲಿ ಈ ವೀಡಿಯೋ ಭಾರಿ ವೈರಲ್ ಆಗ್ತಿದೆ.
ವೈರಲ್ ಆದ ವೀಡಿಯೋದಲ್ಲಿ ಕಾಣುವಂತೆ ಸೀರೆಯ ಒಂದು ತುದಿಗೆ ಹಾಗೂ ರವಿಕೆಯ ಒಂದು ಬದಿಗೆ ಲಾಡಿ(ದಾರ)ವನ್ನು ಕೂರಿಸಲಾಗಿದ್ದು, ಮೊದಲಿಗೆ ರವಿಕೆಯನ್ನು ಧರಿಸಿ, ಈ ದಾರಕ್ಕೂ ರವಿಕೆಗೂ ಸೇರಿಸಿ ಗಟ್ಟಿಯಾಗಿ ಬಿಗಿದು ಕಟ್ಟಬೇಕು. ಮುಂಭಾಗದ ನೆರಿಗೆಗಳನ್ನು ಮೊದಲೇ ಸ್ಟಿಚ್ ಮಾಡಲಾಗಿದ್ದು, ಅದು ಕೈಯಲ್ಲಿ ಜೋಡಿಸಿ ಇಸ್ತ್ರಿ ಮಾಡಿದಂತೆ ಮುಂಭಾಗದಲ್ಲಿ ಸೊಗಸಾಗಿ ಬಂದು ನಿಲ್ಲುತ್ತದೆ. ಇದಾದ ನಂತರ ಸೀರೆಯ ಸೆರಗಿನ ಭಾಗವನ್ನು ಸೊಂಟಕ್ಕೆ ಒಂದು ಸುತ್ತು ತಂದು ಸುತ್ತಿದರೆ ಸೊಗಸಾದ ಸೀರೆಯುಟ್ಟ ನಾರಿ ರೆಡಿ... ಯುವತಿಯೊಬ್ಬಳು ಈ ಸೀರೆಯನ್ನು ಸೊಗಸಾಗಿ ಉಟ್ಟು ತೋರಿಸಿದ್ದು, ವೀಡಿಯೋ ವೈರಲ್ ಆಗಿದೆ...
ವೀಡಿಯೋ ನೋಡಿ ಮೆಚ್ಚಿದ ಹೆಂಗೆಳೆಯರು…
ವೀಡಿಯೋ ನೋಡಿದ ಅನೇಕರು, ಯುವತಿಯ ಈ ಹೊಸ ವಿನ್ಯಾಸಕ್ಕೆ ವಾವ್ ಎಂದಿದ್ದಾರೆ. ಎಲ್ಲಿಯೂ ಇದು ರೆಡಿಮೇಡ್, ಅಥವಾ ಹೊಲಿಸಿದಂತಹ ಸೀರೆ ಎಂಬುದು ನೋಡುವವರಿಗೆ ಗೊತ್ತಾಗುವುದೇ ಇಲ್ಲ, ಅಲ್ಲದೇ ರವಿಕೆಯ ಭಾಗಕ್ಕೆ ಕೊಂಡಿಯ ಬದಲು ಜಿಪ್ ಹಾಕಲಾಗಿದೆ. ವೀಡಿಯೋ ನೋಡಿದ ಅನೇಕರು ಹಲವು ಕಾಮೆಂಟ್ ಮಾಡಿದ್ದಾರೆ. ಈ ರೀತಿ ಸೀರೆಗೆ ಹೊಸ ಕಳೆ ನೀಡಿದ ಈ ಯುವತಿ ಒಳ್ಳೆಯ ಡಿಸೈನರ್ ಆಗಬಹುದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ... ಸದ್ಯ ಇವರೇ ಉಟ್ಟುಕೊಳ್ಳುತ್ತಿದ್ದಾರೆ, ಸೀರೆಯುಡುವುದಕ್ಕೂ ಮೆಷಿನ್ ಬಂದಿಲ್ಲವಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅನೇಕರು ಎಲ್ಲಿ ಸಿಗುತ್ತೆ ಈ ರೀತಿಯ ಸೀರೆ ಎಂದು ಕೇಳಿದ್ದಾರೆ. ಹಾಗೆಯೇ ಹೆಂಡ್ತಿ ಸೀರೆ ಉಟ್ಟು ರೆಡಿಯಾಗುವುದಕ್ಕೆ ಹೆಚ್ಚು ಹೊತ್ತು ತೆಗೆದುಕೊಳ್ಳುವುದು ಇದರಿಂದ ಕಡಿಮೆ ಆಗಬಹುದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅಂದಹಾಗೆ ಈ ಸೀರೆಯಲ್ಲಿ ಎಲ್ಲೂ ನಿಮ್ಮ ದೇಹ ತೋರಿಸುವುದಕ್ಕೆ ಆಗುವುದಿಲ್ಲ, ಏಕೆಂದರೆ ಇದರ ಬ್ಲೌಸ್ ಸೀರೆಗೆ ಅಂಟಿಕೊಂಡೆ ಸ್ಟಿಚ್ ಆಗಿದೆ. ಹೀಗೆ ಸೊಂಟ ಕಾಣಬೇಕು ಅನ್ನೋರಿಗೆ ಈ ಸೀರೆ ಸೂಟ್ ಆಗಲ್ಲ...
ಇದನ್ನೂ ಓದಿ: ಬಡ್ಡಿ ಜಾಸ್ತಿ ಏಕೆ ಎಂದು ಕೇಳಿದ ಯೋಧನಿಗೆ ಭಿಕ್ಷುಕ ಎಂದು ಅವಮಾನಿಸಿದ HDFC ಬ್ಯಾಂಕ್ ಮಹಿಳಾ ಉದ್ಯೋಗಿ
ಇದನ್ನೂ ಓದಿ: ಇಷ್ಟೊಂದು ಹೊಟ್ಟೆಉರಿನಾ... ಸೌಂದರ್ಯ ಸ್ಪರ್ಧೆಯಲ್ಲಿ ಕಿರೀಟ ತೊಡಿಸುವ ಬದಲು ಬೀಳಿಸಲು ಯತ್ನಿಸಿದ ಬ್ಯೂಟಿ
ಇದನ್ನೂ ಓದಿ: ಮ್ಯಾಟ್ರಿಮೋನಿಯಲ್ ಸೈಟಲ್ಲಿ ಬಂತು ಲಂಡನ್ ಯುವತಿಯ ಪ್ರಪೋಸಲ್: ಮದ್ವೆಯಾಗುವ ಕನಸಲ್ಲಿದ್ದ ಯುವಕನಿಗೆ ದೊಡ್ಡ ನಾಮ..
ಇದನ್ನೂ ಓದಿ: ಶಿಕ್ಷಕಿ ಹೊಡೆದ ಏಟಿಗೆ ಬಾಲಕಿಯ ತಲೆಬುರುಡೆಯೇ ಜಖಂ: ಸಿಟಿ ಸ್ಕ್ಯಾನ್ ಮಾಡಿಸಿದ ಪೋಷಕರಿಗೆ ಆಘಾತ..!
