Bangladesh video Goes viral: ಹುಡುಗಿ ನೋಡಲು ಬಂದ ವರನ ಕಡೆಯವರು ವಧುವಿನ ಬಣ್ಣವನ್ನು ಹೀಯಾಳಿಸಿ, ಮೇಕಪ್ ಉಜ್ಜಿ ನೋಡಿದ್ದಾರೆ ಇದರಿಂದ ಸಿಟ್ಟಿಗೆದ್ದ ವಧುವಿನ ಕಡೆಯವರು ಏನ್ ಮಾಡಿದ್ರು ನೋಡಿ, ವಧುವಿನ ಕಡೆಯ ಪ್ರತೀಕಾರದ ವೀಡಿಯೋ ಈಗ ಭಾರಿ ವೈರಲ್ ಆಗಿದೆ.

ಸಾಮಾನ್ಯವಾಗಿ ಮದುವೆಯ ಪ್ರಕ್ರಿಯೆ ಆರಂಭವಾದಾಗ ಗಂಡಿನ ಕಡೆಯವರು ಹೆಣ್ಣಿನ ಕಡೆಯವರನ್ನು ನೋಡುವುದಕ್ಕೆ ಹೋಗುತ್ತಾರೆ. ಇತ್ತೀಚೆಗೆಲ್ಲಾ ಮನೆಯ ಬದಲು ದೇಗುಲ ಅಥವಾ ಬೇರೆ ಯಾವುದಾದರೂ ಸ್ಥಳಗಳಲ್ಲಿ ನೋಡಿ ಗಂಡು ಹೆಣ್ಣಿಗೆ ಇಷ್ಟವಾದರಷ್ಟೇ ಮನೆಯವರೆಗೂ ಬರುತ್ತಾರೆ. ಇಲ್ಲದೇ ಹೋದರೆ ಅಲ್ಲಿಗೆ ಬಂದ್, ಆದರೆ ಹೀಗೆ ನೋಡಲು ಹೋದ ಸಂದರ್ಭದಲ್ಲೇ ಪರಸ್ಪರರನ್ನು ಹೀಯಾಳಿಸುವುದು ಬಹಳ ಕಡಿಮೆ. ಕೆಲವರು ಹೆಣ್ಣು ಮಕ್ಕಳನ್ನು ನಡೆದು ತೋರಿಸು ಹಾಡಿ ತೋರಿಸು ಕುಣಿದು ತೋರಿಸು ಅಂತೆಲ್ಲಾ ಹಿಂದಿನ ಕಾಲದಲ್ಲಿ ಹುಡುಗಿ ನೋಡಲು ಹೋಗುವವರು ಹೇಳುತ್ತಿದ್ದರು. ಆದರೆ ಕಾಲ ಬದಲಾಗಿದೆ. ಯಾರು ಕುಣಿಯಲು ಹೇಳಲ್ಲ, ಹೆಣ್ಣು ಮಕ್ಕಳು ಕುಣಿಯಲು ಹೇಳಿದವರನ್ನೇ ಕುಣಿಸುವ ಕಾಲವಿದು.

ಹುಡುಗಿಯ ಮೇಕಪ್, ಸೀರೆ ಬಿಚ್ಚಿ ನೋಡಿದ ಹುಡುಗನ ಕಡೆಯವರು:

ಈಗಿನ ಕಾಲದಲ್ಲಿ ಕುಣಿಯಲು ಹಾಡಲು ಹೇಳದಿದ್ದರೇನಂತೆ ಕಾಲಕ್ಕೆ ತಕ್ಕ ಕೋಲ ಎಂಬ ಗಾದೆ ಮಾತಿನಂತೆ ಕಿರುಕುಳದ ರೀತಿ ಬದಲಾಗಿದೆಯಷ್ಟೇ ಇಲ್ಲೊಂದು ಕಡೆ ಹೀಗೆ ಹುಡುಗಿ ನೋಡಲು ಬಂದವರು ಹುಡುಗಿಯ ಗುಣನಡತೆಯ ಬಗ್ಗೆ ಮೌಲ್ಯಮಾಪನ ಮಾಡುವ ಬದಲು ಆಕೆಯ ಬಣ್ಣದ ಬಗ್ಗೆ ಆಕ್ಷೇಪವೆತ್ತಿದ್ದಾರೆ. ಬರೀ ಇಷ್ಟೇ ಆಗಿದ್ದರೆ ಅದೇನು ದೊಡ್ಡ ಅನಾಹುತವಾಗುತ್ತಿರಲಿಲ್ಲ, ಆಕೆ ಹಾಕಿದ ಮೇಕಪನ್ನು ಕೈಯಲ್ಲಿ ಉಜ್ಜಿ ಉಜ್ಜಿ ನೋಡಿದ್ದಾರೆ. ಬರೀ ಇಷ್ಟೇ ಇಷ್ಟೇ ಆಕೆಯ ಸೀರೆಯನ್ನು ಕೂಡ ಅರೆಬರೆ ಬಿಚ್ಚಿ ಆಕೆಯ ಆಕಾರ ಹೇಗಿದೆ ಎಂದು ನೋಡಲು ಮುಂದಾಗಿದ್ದಾರೆ. ಬಹುಶಃ ಹೆಣ್ಣಿನ ಕಡೆಯವರು ಬಹಳ ಗಟ್ಟಿಯಾಗಿದ್ದವರೆನಿಸುತ್ತದೆ. ವರನ ಕಡೆಯವರ ಈ ವರ್ತನೆಯಿಂದ ಕೆಂಡಮಂಡಲವಾದ ಹೆಣ್ಣಿನ ಕಡೆಯವರು ಈ ಗಂಡಿನ ಕಡೆಯವರಿಗೆ ಸರಿಯಾಗಿ ಪಾಠ ಕಲಿಸಿದ್ದಾರೆ.

ವಧುವನ್ನು ಅಳೆಯಲು ಹೋಗಿ ಬೆತ್ತಲಾದ ವರ!

ತಮ್ಮ ಮನೆಯ ಹೆಣ್ಣಿಗೆ ಅವರು ಹೇಗೆ ಅವಮಾನ ಮಾಡಿದರೋ ಅದೇ ರೀತಿ ಹುಡುಗಿ ನೋಡಲು ಬಂದ ವರನಿಗೂ ಬಟ್ಟೆ ಬಿಚ್ಚಿಸಿ ಅವಮಾನ ಮಾಡಿದ್ದಾರೆ. ಮೊದಲಿಗೆ ಆ ವ್ಯಕ್ತಿಯ ಟೀಶರ್ಟ್‌ನ್ನು ಹುಡುಗಿ ಕಡೆಯವರು ಬಿಚ್ಚಿಸಿದ್ದಾರೆ. ಆತನ ದೇಹಾಕಾರ ಹೇಗಿದೆ ಎಂಬುದನ್ನು ಪರೀಕ್ಷಿಸಿದ್ದಾರೆ. ಬರೀ ಇಷ್ಟೇ ಅಲ್ಲ ಆತನ ಪ್ಯಾಂಟನ್ನು ಬಿಚ್ಚಿದ್ದಾರೆ ನಂತರ ಆತನ ಬಳಿ ಏನು ಇಲ್ಲ ಎಂದು ಹೇಳಿ ಎಲ್ಲರೆದುರು ಹಾಸ್ಯ ಮಾಡಿ ಹೀಯಾಳಿಸಿ ನಕ್ಕಿದ್ದಾರೆ. ಇದರಿಂದ ಮದುವೆ ಮುರಿದು ಬಿದ್ದಿದ್ದಲ್ಲದೇ ಅಲ್ಲಿ ದೊಡ್ಡ ಕೋಲಾಹಲ ಗದ್ದಲ ಸೃಷ್ಟಿಯಾಗಿದೆ. ಅಂದಹಾಗೆ ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಮಾಹಿತಿ ಇಲ್ಲ, ಕೆಲ ಮೂಲದ ಪ್ರಕಾರ ಇದು ಬಾಂಗ್ಲಾದೇಶದ ವೀಡಿಯೋ ಆಗಿದೆ ಮತ್ತೆ ಕೆಲವು ಇದು ಪಶ್ಚಿಮ ಬಂಗಾಳದಲ್ಲಿ ನಡೆದಿದೆ ಎಂದಿವೆ.. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್‌, ನೆಟ್ಟಿಗರಿಂದ ಸಮಾನತೆಯ ಮಾತು

ಈ ವೀಡಿಯೋ ನೋಡಿದ ನೆಟ್ಟಿಗರು ಹಲವು ಕಾಮೆಂಟ್ ಮಾಡಿದ್ದಾರೆ. ಕೆಲವರು ಇದು ಎಲ್ಲಿ ನಡೆದಿದೆ ಎಂದು ಕೇಳಿದ್ದಾರೆ. ಹಾಗೆಯೇ ಒಳ್ಳೆಯ ವಿಚಾರ ಸಮಾನತೆ ಎಂದರೆ ಇದೇ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮಹಿಳಾ ಸಬಲೀಕರಣ ತುಂಬಾ ಅಗತ್ಯ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ನಿಜವಾದ ಸಮಾನತೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಹಾಗೆಯೇ ಕೆಲವರು ಇದು ಬಾಂಗ್ಲಾದೇಶದಲ್ಲಿ ನಡೆದ ಘಟನೆ ಭಾರತದ ವೀಡಿಯೋ ಇದಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಹೀಗೂ ನಡೆಯುತ್ತಾ ಎಂದು ಕೆಲವರು ಅಚ್ಚರಿಯಿಂದ ಪ್ರಶ್ನೆ ಮಾಡಿದ್ದಾರೆ. ಕೆಲವರು ಇದು ಓವರ್‌ ಆಗಿರುವ ಮೇಕಪ್‌ನ ಸೈಡ್ ಎಫೆಕ್ಟ್ ಎಂದಿದ್ದಾರೆ. ಎರಡೂ ಕಡೆಯವರು ಮಾಡಿರುವುದು ಸರಿಯಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಅದೇನೆ ಇರಲಿ ಮದುವೆ ಮಾಡಿ ನೋಡು ಒಂದು ಮನೆ ಕಟ್ಟಿ ನೋಡು ಎಂಬುದು ಒಂದು ಜನಪ್ರಿಯ ಗಾದೆ ಅಂದರೆ ಮದುವೆ ಮಾಡುವ ಕೆಲಸವೇ ಇರಲಿ ಮನೆ ಕಟ್ಟು ಕೆಲಸವೇ ಇರಲಿ ಬಲು ಕಷ್ಟದ ಕೆಲಸವೇ, ಅದರಲ್ಲೂ ಮದುವೆಯ ವಿಚಾರದಲ್ಲಿ ಬಂಧು ಬಳಗವನ್ನು ಒಟ್ಟುಗೂಡಿಸುವುದೇ ಒಂದು ಸವಾಲು ಇನ್ನು ಮದುವೆಯ ಮಾತುಕತೆಗಳಂತೂ ದೊಡ್ಡ ಸಾಹಸವೇ ಸರಿ ಹುಡುಗಿ ನೋಡಲು ಬರುವುದರಿಂದ ಹಿಡಿದು ಕತ್ತಿಗೆ ತಾಳಿ ಬಿಗಿಯುವವರೆಗೂ ಎಲ್ಲರನ್ನೂ ಸಮಾಧಾನಿಸಿಕೊಂಡು ಹೋಗುವುದೇ ಒಂದು ಸವಾಲು ಇದ್ಯಾವ ರಗಳೆಯೂ ಬೇಡ ಎಂದು ಪ್ರೇಮ ವಿವಾಹವಾದವರೆ ಪುಣ್ಯವಂತರು ಬಿಡಿ.

ಇದನ್ನೂ ಓದಿ: ಹೆಂಡ್ತಿ ತಂಗಿ ಹಿಂದೆ ಓಡಿದ ಗಂಡ, ಮಾರನೇ ದಿನವೇ ಆತನ ತಂಗಿಯ ಓಡಿಸಿಕೊಂಡು ಹೋದ ಬಾಮೈದ

ಇದನ್ನೂ ಓದಿ: ಎರಡೇ ಹೆರಿಗೆಯಲ್ಲಿ 7 ಮಕ್ಕಳು:ತ್ರಿವಳಿಯ ನಂತರ 4 ಮಕ್ಕಳಿಗೆ ಒಮ್ಮೆಗೆ ಜನ್ಮ ನೀಡಿದ ಗಾರೆ ಕೆಲಸ ಮಾಡ್ತಿದ್ದ ತಾಯಿ

View post on Instagram