Asianet Suvarna News Asianet Suvarna News

ಬಿಎಂಟಿಸಿ ಪ್ರಯಾಣಿಕರಿಗೆ ಕಹಿಸುದ್ದಿ, ದಶಕಗಳ ವೋಲ್ವೋ ಬಸ್‌ ದರ್ಬಾರ್‌ಗೆ ಬ್ರೇಕ್?

Sep 15, 2021, 11:50 AM IST

ಬೆಂಗಳೂರು(ಸೆ.15) ಬೆಂಗಳೂರಿನಲ್ಲಿ ಇನ್ಮುಂದೆ ಓಲ್ವೋ ಬಸ್‌ಗಳು ಇನ್ಮುಂದೆ ಕಾಣುವುದಿಲ್ವಾ? ಹೌದು ದಶಕಗಳ ದರ್ಬಾರ್‌ಗೆ ಅಂತ್ಯ ಹಾಡಲು ಓಲ್ವೋ ಬಸ್‌ಗಳು ಸಜ್ಜಾಗಿವೆ. ಲಾಕ್‌ಡೌನ್‌ ಇಂತಹುದ್ದೊಂದು ನಿರ್ಧಾರ ಕೈಗೊಳ್ಳಲು ಪ್ರೇರೇಪಿಸಿದೆ

ಬಿಎಂಟಿಸಿ ವೋಲ್ವೋ ಬಸ್‌ ಸೇವೆ ಸ್ಥಗಿತಗೊಳಿಸಲು ನಿರ್ಧರಿಸಿದೆ. ಬಿಎಂಟಿಸಿಯ ಒಟ್ಟು 750 ವೋಲ್ವೋ ಬಸ್‌ಗಳಲ್ಲಿ ಸದ್ಯ ಕೇವಲ 70 ಬಸ್‌ಗಳು ಮಾತ್ರ ಓಡಾಡುತ್ತಿವೆ. 

ಲಾಕ್‌ಡೌನ್‌ನಿಂದಾಗಿ ಬಿಎಂಟಿಸಿ ಪಾಳಿಗೆ ಚಿನ್ನದ ಮೊಟ್ಟೆಯಂತಿದ್ದ ವೋಲ್ವೋ ಬಸ್‌ಗಳು ನಿಂತಲ್ಲೇ ನಿಂತಿದ್ದವು. ಆದರೀಗ ಈ ಬಸ್‌ಗಳು ಒಂದೆಡೆ ತುಕ್ಕು ಹಿಡಿದಿದ್ದರೆ, ಮತ್ತೊಂದೆಡೆ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿವೆ. ಹೀಗಾಗಿ ಇವುಗಳನ್ನು ಸ್ಥಗಿತಗೊಳಿಸಲು ಆಡಳಿತ ಮಂಡಳಿ ನಿರ್ಧರಿಸಿದೆ.