ಗಂಧದ ಗುಡಿ ಕರ್ನಾಟಕದ ಜನತೆಗೆ 'ಅಪ್ಪು' ನೀಡಿದ ಸಂದೇಶ: ರಿಷಬ್‌, ರಕ್ಷಿತ್‌

ಪುನೀತ್ ರಾಜ್ ಕುಮಾರ್ ಕನಸಿನ ಗಂಧದ ಗುಡಿ ಸಿನಿಮಾ ರಿಲೀಸ್ ಆಗಿದ್ದು, ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಸಿನಿಮಾ ನೋಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
 

First Published Oct 28, 2022, 4:24 PM IST | Last Updated Oct 28, 2022, 4:24 PM IST

ಸಿನಿಮಾದಲ್ಲಿ ಎಲ್ಲರೂ ಹೀರೋ ಆಗುತ್ತಾರೆ. ಆದರೆ ನಿಜ ಜೀವನದಲ್ಲಿ ಒಬ್ಬ ವಿಶ್ವಮಾನವ ಅಪ್ಪು ಸರ್‌ ಎಂದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದರು. ಜರ್ನಿಯಲ್ಲಿ ಏನು ಸಂದೇಶ ಕೊಡಬೇಕು ಎಂದು ಅಂದುಕೊಂಡಿದ್ದರು, ಲೈಫಲ್ಲಿ ಏನನ್ನು ಅನುಭವಿಸಬೇಕು ಎಂದು ಅಂದುಕೊಂಡಿದ್ದರು ಅದನ್ನ ಸಿನಿಮಾದಲ್ಲಿ ಅದ್ಭತವಾಗಿ ಅನುಭವಿಸಿದ್ದಾರೆ ಎಂದರು. ಇನ್ನು ರಕ್ಷಿತ್ ಶೆಟ್ಟಿ ಮಾತನಾಡಿ, ಅಪ್ಪು ಹೋಗುವಕ್ಕಿಂತ ಮೊದಲು ಕನ್ನಡ ನಾಡಿನ ಜನತೆಗೆ ಒಳ್ಳೆಯ ಸಿನಿಮಾವನ್ನು ಕೊಟ್ಟಿದ್ದಾರೆ. ಕರ್ನಾಟಕದ ವನ ಸಂಪತ್ತು, ಸಮುದ್ರದಲ್ಲಿ ಇರುವ ಜೀವ ಅವುಗಳ ಎಲ್ಲದರ ಪಕ್ಕ ಕೂತು ಸಿನಿಮಾ ನೋಡಿದ ಹಾಗೆ ಆಗುತ್ತದೆ. ಸಿನಿಮಾ ಹಂತ ಹಂತವಾಗಿ ನಮ್ಮನ್ನು ಒಳಗಡೆ ಕರೆದುಕೊಂಡು ಹೋಗುತ್ತದೆ. ಕೊನೆಯ 40 ನಿಮಿಷ ನಾವು ಅವರ ಜತೆ ಇದ್ದ ಹಾಗೆ ನಮಗೆ ಅನಿಸುತ್ತದೆ. ಈ ಸಿನಿಮಾದ ಕೊನೆಯಲ್ಲಿ ತುಂಬಾ ಒಳ್ಳೆ ಸಂದೇಶವಿದೆ ಎಂದರು.

ಅಮೆರಿಕದಲ್ಲಿ ಹಿಂದೂ ಹತ್ಯಾಕಾಂಡ ಸ್ಮಾರಕ, ಟ್ರಂಪ್ ಘೋಷಣೆಗೆ ಭಾರತದಲ್ಲಿ ವಿಪಕ್ಷಗಳು ಕೆಂಡ!