ಶಿವಣ್ಣನ ಭೇಟಿ ಮಾಡಿದ ಗಣ್ಯರು, ಚಿತ್ರಲೋಕದ ಸಾಧಕರಿಗೆ ಚಿತ್ರವಾಣಿ ಪ್ರಶಸ್ತಿ
ಶಿವರಾಜ್ಕುಮಾರ್ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ರಾಜಕೀಯ ಗಣ್ಯರು ಭೇಟಿ ಕೊಟ್ಟಿದ್ದಾರೆ. ಹಾಗೂ, 2024ರ ಸಾಲಿನ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಧಾನ ಸಮಾರಂಭ ಅದ್ದೂರಿಯಾಗಿ ನೆರವೇರಿದೆ.
ಡಾ.ಶಿವರಾಜ್ಕುಮಾರ್ ಅಮೇರಿಕದ ಮಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ದೊಡ್ಡ ಅಗ್ನಿದಿವ್ಯ ಗೆದ್ದು ಬಂದ ಶಿವಣ್ಣನನ್ನ ಭೇಟಿ ಮಾಡಿ ಅಭಿನಂದಿಸ್ತಾ ಇದ್ದಾರೆ. ಇವತ್ತು ಶಿವರಾಜ್ಕುಮಾರ್ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ರಾಜಕೀಯ ಗಣ್ಯರು ಭೇಟಿ ಕೊಟ್ಟಿದ್ದಾರೆ. ಫಿಲ್ಮ್ ಚೇಂಬರ್ ಸದಸ್ಯರು, ಡಾಲಿ ಧನಂಜಯ್ ಸೇರಿದಂತೆ ಅನೇಕ ಚಿತ್ರಕರ್ಮಿಗಳು ಶಿವಣ್ಣನನ್ನ ಭೇಟಿ ಮಾಡಿ ಅಭಿನಂದಿಸಿದ್ದಾರೆ.
***
ಕನ್ನಡ ಚಿತ್ರರಂಗದ ಪ್ರಥಮ ಪಿ.ಆರ್.ಓ, ದಿವಂಗತ ಡಿ.ವಿ ಸುಧಿಂದ್ರ ತಮ್ಮ ಸಂಸ್ಥೆಗೆ 25 ವರ್ಷಗಳು ತುಂಬಿದ ಸಂಧರ್ಭದಲ್ಲಿ ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿಗಳನ್ನ ನೀಡುವ ಪರಿಪಾಠ ಆರಂಭಿಸಿದ್ರು. ಸದ್ಯ ಈ ಪ್ರಶಸ್ತಿಗೆ 24 ವರ್ಷಗಳು ತುಂಬಿದ್ದು 2024ರ ಸಾಲಿನ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಧಾನ ಸಮಾರಂಭ ಅದ್ದೂರಿಯಾಗಿ ನೆರವೇರಿದೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಗೀತ ರಚನೆಕಾರ ವಿ.ನಾಗೇಂದ್ರ ಪ್ರಸಾದ್ ಸೇರಿದಂತೆ 11 ವಿಭಾಗಗಳಲ್ಲಿ ಹಲವು ಸಾಧಕರು ಪ್ರಶಸ್ತಿ ಪಡೆದುಕೊಂಡಿದ್ದಾರೆ. ವೆಂಕಟೇಶ್, ವಾಸು, ಸುನೀಲ್ ಸುಧಿಂಧ್ರ ಸಾರಥ್ಯದಲ್ಲಿ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಧಾನ ಸಮಾರಂಭ ಯಶಸ್ವಿಯಾಗಿದ ನಡೆದಿದೆ.