Asianet Suvarna News Asianet Suvarna News

'ಜಸ್ಟ್ ಪಾಸ್'ಗೆ ಜೈ ಎಂದು ಜೈಕಾರ ಹಾಕಿದ ಜನ..! ಸ್ಯಾಂಡಲ್‌ವುಡ್ ಸ್ಟಾರ್ಸ್‌ಗೂ ಇಷ್ಟ ಆಯ್ತು ಸಿನಿಮಾ..!

ಕಿರಿಕ್ ಪಾರ್ಟಿ ಸಿನಿಮಾ ಸ್ಟುಡೆಂಟ್ಸ್ಗೆ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಿಸಿತ್ತು. ಈ ಸಿನಿಮಾ ಕೂಡ ಗೆದ್ದು ಬಿಡ್ತು. ಈಗ ಅಂತದ್ದೇ ಸಿನಿಮಾ ಒಂದು ಕನ್ನಡದಲ್ಲಿ ತೆರೆ ಕಂಡು ಸಕ್ಸಸ್ ಆಗುತ್ತಿದೆ. ಆದ್ರೆ ಇದು ಕಿರಿಕ್ ಹುಡುಗರ ಕಥೆ ಅಲ್ಲ ಜೆಸ್ಟ್ ಪಾಸ್ ಹುಡುಗರ ಸ್ಟೋರಿ.
 

ಜಸ್ಟ್ ಪಾಸ್ ಸಿನಿಮಾ ಇದೇ ಶುಕ್ರವಾರ ಕನ್ನಡದಲ್ಲಿ 100ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿತ್ತು. ಇದೀಗ ಈ ಸಿನಿಮಾ ನೋಡಿದ ಕನ್ನಡ ಚಿತ್ರರಂಗದ ಸೆಲೆಬ್ರೆಟಿಗಳು 'ಜೆಸ್ಟ್ ಪಾಸ್'(Just Pass movie) ಹುಡುಗರಿಗೆ ಫಸ್ಟ್ ಕ್ಲಾಸ್ ಮಾರ್ಕ್ಸ್ ಕೊಟ್ಟಿದ್ದಾರೆ. ಜಸ್ಟ್ ಪಾಸ್ ಆದವರಿಗೆಂದೇ ಒಂದು ಕಾಲೇಜು, ದೇವರಂಥಹಾ ಪ್ರಿನ್ಸಿಪಲ್, ಒಬ್ಬ ಸುಂದರಿ ಲೆಕ್ಚರರ್, ಒಬ್ಬ ಜೊಳ್ಳು ಮೇಷ್ಟ್ರು ಕೆಲವು ಶಿಸ್ತಿನ ಮೇಷ್ಟ್ರುಗಳು ಅಪ್ಪಟ ತರ್ಲೆ ವಿದ್ಯಾರ್ಥಿಗಳು(Students) ಇವರ ಮಧ್ಯೆ ಒಂದು ದುರ್ಘಟನೆ ನಡೆಯುತ್ತೆ. ಆ ಘಟನೆ ಕಾಲೇಜಿನಲ್ಲಿರುವ ಎಲ್ಲರ ಮೇಲೂ ಹೇಗೆ ಪರಿಣಾಮ ಬೀರುತ್ತದೆ. ತರ್ಲೆ ಹುಡುಗರನ್ನು ಹೇಗೆ ಸರಿ ದಾರಿಗೆ ತರುತ್ತದೆ ಅನ್ನೋ ಸಿನಿಮಾವೇ ‘ಜಸ್ಟ್ ಪಾಸ್’ ಕೆ.ವಿ.ಶಶಿಧರ್ ನಿರ್ಮಿಸಿರೋ ಕೆ.ಎಂ.ರಘು ನಿರ್ದೇಶನದ ಈ ಸಿನಿಮಾದಲ್ಲಿ ಶ್ರೀ ನಾಯಕನಾಗಿದ್ದು ಪ್ರಣತಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ರಂಗಾಯಣರಘು ಸಾಧುಕೋಕಿಲ ಸುಚೇಂದ್ರ ಪ್ರಸಾದ್, ಪ್ರಕಾಶ್ ತುಮ್ಮಿನಾಡು, ದೀಪಕ್ ರೈ, ಗೋವಿಂದೇಗೌಡ, ದಾನಪ್ಪ ತಾರಾಬಳಗದಲ್ಲಿದ್ದು ಪ್ರೇಕ್ಷಕರ ಮನಸ್ಸು ಗೆಲ್ಲುವಲ್ಲಿ ಸಕ್ಸಸ್ ಆಗಿದ್ದಾರೆ.

ಇದನ್ನೂ ವೀಕ್ಷಿಸಿ:  O Nalla Song: ಸೋಷಿಯಲ್ ಮೀಡಿಯಾ ಟ್ರೆಂಡ್ ಉಪ್ಪಿಯ ಓ ನಲ್ಲ..! 25 ವರ್ಷಗಳ ಹಿಂದಿನ ಸಾಂಗ್ ಫುಲ್ ವೈರಲ್..!

Video Top Stories